ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Narendra Modi: ವೆಲ್‌ಕಮ್‌... ಭೂಮಿ ನಿಮ್ಮನ್ನು ಮಿಸ್‌ ಮಾಡ್ಕೊಂಡಿತು; ಸುನಿತಾಗೆ ಪ್ರಧಾನಿ ಮೋದಿ ಹೃದಯಸ್ಪರ್ಶಿ ಸ್ವಾಗತ

PM Narendra Modi: ಬಾಹ್ಯಾಕಾಶದಿಂದ ಭೂಮಿಗೆ ಮರಳಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಅವರಿಗೆ ಪ್ರಧಾನಿ ಮೋದಿ ಭಾವನಾತ್ಮಕ ಸ್ವಾಗತ ಕೋರಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ ವೊಂದನ್ನು ಮಾಡಿ, ವೆಲ್‌ಕಮ್‌... ಭೂಮಿ ನಿಮ್ಮನ್ನು ಮಿಸ್‌ ಮಾಡ್ಕೊಂಡಿತು ಎಂದಿದ್ದರು.

ಸುನಿತಾ ವಿಲಿಯಮ್ಸ್‌ಗೆ ಪ್ರಧಾನಿ ಮೋದಿಯಿಂದ ಹೃದಯಸ್ಪರ್ಶಿ ಸ್ವಾಗತ

-

Rakshita Karkera Rakshita Karkera Mar 19, 2025 2:10 PM

ನವದೆಹಲಿ: ಬರೋಬ್ಬರಿ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಕಳೆದು ಇದೀಗ ಭೂಮಿಗೆ ಮರಳಿದ ಗಗನಯಾತ್ರಿ ಸುನಿತಾ ವಿಲಿಯಮ್ಸ್(Sunita Williams) ಮತ್ತು ಕ್ರೂ-9 ಗಗನಯಾತ್ರಿಗಳನ್ನು ಪ್ರಧಾನಿ ನರೇಂದ್ರ ಮೋದಿ(PM Narendra Modi) ಸ್ವಾಗತಿಸಿದ್ದಾರೆ. ಇಂದು ಮತ್ತೆ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡುವ ಮೂಲಕ ಸುನಿತಾ ಮತ್ತು ಅವರ ತಂಡಕ್ಕೆ ಪ್ರಧಾನಿ ಮೆಚ್ಚುಗೆಯ ಮಳೆಗರೆದಿದ್ದಾರೆ. "ಸ್ವಾಗತ, #Crew9! ಭೂಮಿ ನಿಮ್ಮನ್ನು ಬಹಳಷ್ಟು ಮಿಸ್ ಮಾಡಿಕೊಂಡಿತು ಎಂದು ಸುನಿತಾ ವಿಲಿಯಮ್ಸ್‌ ಜತೆಗಿನ ತಮ್ಮ ಫೊಟೋವನ್ನು ಶೇರ್‌ ಮಾಡುವ ಮೂಲಕ ಪೋಸ್ಟ್‌ ಮಾಡಿದ್ದಾರೆ.



ಅವರ ಈ ಸಾಧನೆ ಧೈರ್ಯ ಮತ್ತು ಅಪರಿಮಿತ ಮಾನವ ಚೈತನ್ಯದ ಪರೀಕ್ಷೆಯಾಗಿದೆ. ಸುನಿತಾ ವಿಲಿಯಮ್ಸ್ ಮತ್ತು #Crew9 ಗಗನಯಾತ್ರಿಗಳು ಮತ್ತೊಮ್ಮೆ ಪರಿಶ್ರಮ ಎಂದರೆ ಏನು ಎಂದು ನಮಗೆ ತೋರಿಸಿದ್ದಾರೆ. ಅವರ ಅಚಲ ದೃಢಸಂಕಲ್ಪವು ಲಕ್ಷಾಂತರ ಜನರಿಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತದೆ. ಬಾಹ್ಯಾಕಾಶ ಪರಿಶೋಧನೆಯು ಮಾನವ ಸಾಮರ್ಥ್ಯದ ಮಿತಿಗಳನ್ನು ಮೀರಿದ ಸಂಗತಿ. ಕನಸು ಕಾಣುವ ಧೈರ್ಯ ಮತ್ತು ಆ ಕನಸುಗಳನ್ನು ವಾಸ್ತವಕ್ಕೆ ತಿರುಗಿಸುವ ಧೈರ್ಯ ಹೊಂದಿರುವುದು ಕೆಲವೇ ಕೆಲವರಿಂದ ಮಾತ್ರ ಸಾಧ್ಯ. ಸುನಿತಾ ತಮ್ಮ ವೃತ್ತಿಜೀವನದುದ್ದಕ್ಕೂ ಈ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ಅವರ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳಲು ದಣಿವರಿಯಿಲ್ಲದೆ ಕೆಲಸ ಮಾಡಿದ ಎಲ್ಲರ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ ಎಂದು ಎಕ್ಸ್‌ನಲ್ಲಿ ಪ್ರಧಾನಿ ಪೋಸ್ಟ್‌ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Sunita Williams: 260 ದಿನಗಳ ಬಾಹ್ಯಾಕಾಶ ವಾಸದ ನಂತರ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್; 'ದೇವರ ಕೃಪೆ' ಎಂದ ಆರ್. ಮಾಧವನ್