ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunita Williams: 260 ದಿನಗಳ ಬಾಹ್ಯಾಕಾಶ ವಾಸದ ನಂತರ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್; 'ದೇವರ ಕೃಪೆ' ಎಂದ ಆರ್. ಮಾಧವನ್

ಬರೋಬ್ಬರಿ ಒಂಬತ್ತು ತಿಂಗಳುಗಳ ಬಾಹ್ಯಾಕಾಶ ವಾಸದ ನಂತರ ಭೂಮಿಗೆ ಸುರಕ್ಷಿತವಾಗಿ ಹಿಂದಿರುಗಿದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ಗೆ ನಟ ಆರ್. ಮಾಧವನ್ ಸಾಮಾಜಿಕ ಜಾಲತಾಣದ ಮೂಲಕ ಹೃದಯಸ್ಪರ್ಶಿ ಸಂದೇಶ ಒಂದನ್ನು ಕಳುಹಿಸಿದ್ದಾರೆ. ಸದ್ಯ ಅದು ಎಲ್ಲೆಡೆ ವೈರಲ್‌ ಆಗಿದೆ.

ಬಾಹ್ಯಾಕಾಶದಿಂದ ಮರಳಿದ ಸುನಿತಾಗೆ ಅಭಿನಂದನೆ ತಿಳಿಸಿದ ಆರ್. ಮಾಧವನ್

ಆರ್‌. ಮಾಧವನ್‌

Profile Vishakha Bhat Mar 19, 2025 1:08 PM

ಚೆನ್ನೈ: ಬರೋಬ್ಬರಿ ಒಂಬತ್ತು ತಿಂಗಳುಗಳ ಬಾಹ್ಯಾಕಾಶ ವಾಸದ ನಂತರ ಭೂಮಿಗೆ ಸುರಕ್ಷಿತವಾಗಿ ಹಿಂದಿರುಗಿದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ಗೆ (Sunita Williams) ನಟ ಆರ್. ಮಾಧವನ್ ಸಾಮಾಜಿಕ ಜಾಲತಾಣದ ಮೂಲಕ ಹೃದಯಸ್ಪರ್ಶಿ ಸಂದೇಶ ಒಂದನ್ನು ಕಳುಹಿಸಿದ್ದಾರೆ. ಕೇವಲ 8 ದಿನಗಳ ಕಾರ್ಯಾಚರಣೆಗೆಂದು ಬಾಹ್ಯಾಕಾಶಕ್ಕೆ ತೆರಳಿದ್ದ ಸುನಿತಾ ಮರಳಿದ್ದು ಬರೋಬ್ಬರಿ 9 ತಿಂಗಳ ನಂತರ. ಮಾರ್ಚ್ 19ರಂದು ಬೆಳಗಿನ ಜಾವ 3:27ಕ್ಕೆ ಫ್ಲೋರಿಡಾದ ಸಮೀಪ ಮೆಕ್ಸಿಕೋ ಕೊಲ್ಲಿಯಲ್ಲಿ ಯಶಸ್ವಿಯಾಗಿ ಕೆಳಗೆ ಇಳಿದಿದೆ. ಸದ್ಯ ಮಾಧವನ್‌ ಅವರು ಮಡಿದ ಪೋಸ್ಟ್‌ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್‌ ಮಾಡಿದ ನಟ ನಮ್ಮ ಪ್ರೀತಿಯ ಸುನಿತಾ ವಿಲಿಯಮ್ಸ್, ನೀವು ಮತ್ತೆ ಭೂಮಿಗೆ ಮರಳಿರುವುದು ತುಂಬಾ ಖುಷಿಯ ವಿಚಾರ. ಸುರಕ್ಷಿತವಾಗಿ ಹಿಂದಿರುಗಿ ನೀವು ನಗುತ್ತಿರುವುದನ್ನು ನೋಡಲು ಸಂತಸವಾಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.

260 ದಿನಗಳ ಬಳಿಕ ಭೂಮಿಗೆ ಮತ್ತೆ ಸುನಿತಾ ಹಾಗೂ ಮತ್ತೊಬ್ಬ ಗಗನಯಾತ್ರಿ ಇಬ್ಬರೂ ಸುರಕ್ಷಿತವಾಗಿ ಭೂಮಿಗೆ ಬಂದಿರುವುದನ್ನು ಮಾಧವನ್‌ ದೇವರ ಕೃಪೆ ಎಂದು ಹೇಳಿದ್ದಾರೆ. ಲಕ್ಷಾತಂರ ಜನರ ಪ್ರಾರ್ಥನೆ ಈಗ ಫಲಿಸಿದೆ. ನೀವು ಭೂಮಿಗೆ ಮರಳಿದ್ದೀರಿ, ನಿಮ್ಮ ಇಡೀ ತಂಡದ ಪರಿಶ್ರಮ ಫಲ ನೀಡಿದೆ. ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದು ಮಾಧವನ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸುನಿತಾ ಸುರಕ್ಷಿತವಾಗಿ ಭೂಮಿಗೆ ಮರಳಿದ್ದು ಸಂಪೂರ್ಣ ಜಗತ್ತೇ ಸಂಭ್ರಮಿಸುವ ಸಂದರ್ಭವಾಗಿದೆ. ಸುನಿತಾ ಬಾಹ್ಯಾಕಾಶ ನೌಕೆಯಿಂದ ಇಳಿಯುತ್ತಿದ್ದಂತೆಯೇ ನಗುತ್ತಾ ʼಥಂಬ್ಸ್‌ ಅಪ್‌ʼ ಮಾಡಿದ್ದಾರೆ. ಮಾಧವನ್‌ ಕೂಡ ಬಾಹ್ಯಾಕಾಶ ಸಂಶೋಧನೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ಈ ಹಿಂದೆ "ರಾಕೆಟ್ರಿ: ದಿ ನಂಬಿ ಎಫೆಕ್ಟ್" ಸಿನಿಮಾವನ್ನೂ ಮಾಡಿದ್ದರು.
ಆ ಸಿನಿಮಾದ ಮೂಲಕ ಭಾರತದ ಬಾಹ್ಯಾಕಾಶ ವಿಜ್ಞಾನಿ ನಂಬಿ ನಾರಾಯಣನ್‌ ಅವರ ಜೀವನವನ್ನು ಜನರ ಮುಂದಿಟ್ಟಿದ್ದರು.

ಮಾಧವನ್ ಅವರ ಹೃದಯಸ್ಪರ್ಶಿ ಸಂದೇಶವು ಅವರ ಅಭಿಮಾನಿಗಳಲ್ಲಿಯೂ ಪ್ರತಿಧ್ವನಿಸಿತು. ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿದ ಸುನಿತಾ ಅವರಿಗೆ ಅಭಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇದರೊಂದಿಗೆ, ಹಲವು ತಿಂಗಳ ಕಾಲ ಬಾಹ್ಯಾಕಾಶದಲ್ಲಿ ನೆಲೆಸಿದ್ದರೂ, ಸ್ವಲ್ಪವೂ ಧೃತಿಗೆಡದೆ ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಸುನೀತಾ ಅವರ ಧೈರ್ಯವನ್ನು ಮೆಚ್ಚಿಕೊಂಡು ಅವರಿಗೆ ಶಹಬ್ಬಾಸ್‌ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ:Sunita Williams: ಭಾರತಕ್ಕೆ ಬಂದ್ರೆ ಸಮೋಸ ಪಾರ್ಟಿ ಗ್ಯಾರಂಟಿ...! ಸುನಿತಾ ವಿಲಿಯಮ್ಸ್‌ ಕುಟುಂಬಸ್ಥರ ಸಂಭ್ರಮಾಚರಣೆ

ವೃತ್ತಿಪರ ರಂಗದಲ್ಲಿ, ಮಾಧವನ್ ಕೊನೆಯ ಬಾರಿಗೆ ಝೀ5ನ "ಹಿಸಾಬ್‌ ಬರಾಬರ್‌" ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ನಂತರ ಅವರು ಸಿದ್ಧಾರ್ಥ್ ಮತ್ತು ನಯನತಾರಾ ನಟನೆಯ "ಟೆಸ್ಟ್" ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.