ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನಿನ್ನ ಮುಖವನ್ನು ಆ್ಯಸಿಡ್‌ ಹಾಕಿ ಸುಟ್ಟು ಬಿಡುವೆ; ಬಿಜೆಪಿ ಶಾಸಕನಿಗೆ ಬಹಿರಂಗವಾಗಿಯೇ ಬೆದರಿಕೆ ಹಾಕಿದ ಟಿಎಂಸಿ ನಾಯಕ

ಪಶ್ಚಿಮ ಬಂಗಾಳದ ಬಿಜೆಪಿ ಶಾಸಕರೊಬ್ಬರ ಬಾಯಿಗೆ ಆಸಿಡ್ ಸುರಿಯುವುದಾಗಿ ಟಿಎಂಸಿ ನಾಯಕ ರಹೀಮ್ ಬಕ್ಷಿ ಹೇಳಿದ್ದಾರೆ. ಇದು ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಬಕ್ಷಿ ಮಾಲ್ಡಾ ಜಿಲ್ಲೆಯ ಟಿಎಂಸಿ ಅಧ್ಯಕ್ಷರಾಗಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಬಕ್ಷಿ, ಬಿಜೆಪಿ ಶಾಸಕ ಶಂಕರ್ ಘೋಷ್ ಅವರ ಹೆಸರನ್ನು ಉಲ್ಲೇಖಿಸದೆ ವಾಗ್ದಾಳಿ ನಡೆಸಿದರು.

ಬಿಜೆಪಿ ಶಾಸಕನಿಗೆ ಬಹಿರಂಗವಾಗಿಯೇ ಬೆದರಿಕೆ ಹಾಕಿದ ಟಿಎಂಸಿ ನಾಯಕ

-

Vishakha Bhat Vishakha Bhat Sep 7, 2025 3:43 PM

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ಶಾಸಕರೊಬ್ಬರ ಬಾಯಿಗೆ ಆಸಿಡ್ (Viral Video) ಸುರಿಯುವುದಾಗಿ ಟಿಎಂಸಿ ನಾಯಕ ರಹೀಮ್ ಬಕ್ಷಿ ಹೇಳಿದ್ದಾರೆ. ಇದು ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಬಕ್ಷಿ ಮಾಲ್ಡಾ ಜಿಲ್ಲೆಯ ಟಿಎಂಸಿ ಅಧ್ಯಕ್ಷರಾಗಿದ್ದು, ದೇಶದ ಇತರ ಭಾಗಗಳಲ್ಲಿ ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಶನಿವಾರ ನಡೆದ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಬಕ್ಷಿ, ಬಿಜೆಪಿ ಶಾಸಕ ಶಂಕರ್ ಘೋಷ್ ಅವರ ಹೆಸರನ್ನು ಉಲ್ಲೇಖಿಸದೆ ವಾಗ್ದಾಳಿ ನಡೆಸಿದರು. ವಿಧಾನಸಭೆಯಲ್ಲಿ ಅವರು ರಾಜ್ಯದಿಂದ ವಲಸೆ ಬಂದ ಕಾರ್ಮಿಕರನ್ನು "ರೋಹಿಂಗ್ಯರು" ಅಥವಾ "ಬಾಂಗ್ಲಾದೇಶಿಗಳು" ಎಂದು ಕರೆದರು ಎಂದು ವಾಗ್ದಾಳಿ ನಡೆಸಿದರು. "ಹೊರಗೆ ಕೆಲಸ ಮಾಡುವ ಬಂಗಾಳದ 30 ಲಕ್ಷ ವಲಸೆ ಕಾರ್ಮಿಕರು ಬಂಗಾಳಿಗಳಲ್ಲ... ಅವರು ರೋಹಿಂಗ್ಯರು, ಅವರು ಬಾಂಗ್ಲಾದೇಶಿಗಳು ಎಂದು ನಾಚಿಕೆಯಿಲ್ಲದೆ ಆತ ಹೇಳುತ್ತಾನೆ. ಆತನಿಂದ ಮತ್ತೊಂದು ಮಾತು ಬಂದರೆ, ನಾನು ಆತನ ಬಾಯಲ್ಲಿ ಆಸಿಡ್‌ ಹಾಕಿ ಸುಟ್ಟು ಬಿಡುತ್ತೇನೆ. ಇದು ಪಶ್ಚಿಮ ಬಂಗಾಳ ಎಂದು ನೀವು ತಿಳಿದುಕೊಳ್ಳಬೇಕು. ನಾವು ಬಂಗಾಳಿಗಳು ನಿಮಗೆ ಮಾತನಾಡಲು ಸ್ಥಳ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.



ಜಿಲ್ಲೆಯಲ್ಲಿ ಬಿಜೆಪಿ ಧ್ವಜಗಳನ್ನು ಹರಿದು ಪಕ್ಷವನ್ನು ಬಹಿಷ್ಕರಿಸುವಂತೆ ಅವರು ಜನರಲ್ಲಿ ಮನವಿ ಮಾಡಿದರು. ಅವರ ಹೇಳಿಕೆಗೆ ಟಿಎಂಸಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು, ಇಂತಹ ಬೆದರಿಕೆಗಳು ಟಿಎಂಸಿ ರಾಜಕೀಯದ ಪ್ರತಿಬಿಂಬವಾಗಿದೆ ಎಂದು ಹೇಳಿದೆ. ಇದೇ ವ್ಯಕ್ತಿ ಕೆಲವು ವರ್ಷಗಳ ಹಿಂದೆ ಬಿಜೆಪಿ, ಸಿಪಿಐ(ಎಂ) ಮತ್ತು ಕಾಂಗ್ರೆಸ್ ಕಾರ್ಯಕರ್ತರ ಕೈಕಾಲುಗಳನ್ನು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದ. ಟಿಎಂಸಿಗೆ ಈ ರೀತಿಯ ಹಿಂಸಾತ್ಮಕ ಹೇಳಿಕೆ ಹೊಸತಲ್ಲ. ಅದು ಅವರ ರಾಜಕೀಯ ಸಂಸ್ಕೃತಿ. ಮತ್ತು ಅಕ್ರಮ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳು ಮಮತಾ ಬ್ಯಾನರ್ಜಿಯವರ ಮತ ಬ್ಯಾಂಕ್‌ಗಳು ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Corruption case: ಗರ್ಭಿಣಿಯರ ಆರೋಗ್ಯ ತಪಾಸಣೆಗೆ ಲಂಚ ಕೇಳಿದ ಲ್ಯಾಬ್ ಟೆಕ್ನಿಷಿಯನ್; ವಿಡಿಯೋ ವೈರಲ್‌

ಇದು ತೃಣಮೂಲ ಕಾಂಗ್ರೆಸ್‌ನ ಸಂಸ್ಕೃತಿ. ಜನರನ್ನು ಬೆದರಿಸುವುದು ಅವರ ಕೆಲಸ. ಮಾಲ್ಡಾದಲ್ಲಿ ಈಗ ಇಂತಹ ಹೇಳಿಕೆಗಳು ನಿರಂತರವಾಗಿ ನಡೆಯುತ್ತಿವೆ. ಟಿಎಂಸಿ ಜಿಲ್ಲಾಧ್ಯಕ್ಷರು ಸುದ್ದಿಯಲ್ಲಿರಲು ಆಗಾಗ್ಗೆ ಇಂತಹ ವಿಷಯಗಳನ್ನು ಹೇಳುತ್ತಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಸೋಲುತ್ತದೆ ಎಂದು ಈ ರೀತಿಯ ಹೇಳಿಕೆ ಬರುತ್ತಿವೆ ಎಂದು ಬಿಜೆಪಿ ಬಿಜೆಪಿ ಸಂಸದ ಖಗೆನ್ ಮುರ್ಮು ಹೇಳಿದ್ದಾರೆ.