Viral News: ಮಹಿಳೆಯನ್ನು ವಿವಸ್ತ್ರಗೊಳಿಸಿ, ಮರಕ್ಕೆ ಕಟ್ಟಿ ಥಳಿತ! ವೈರಲ್ ವಿಡಿಯೊ ಇಲ್ಲಿದೆ
Woman stripped, tied to a tree: ಹೆಣ್ಣಿಗೆ ಹೆಣ್ಣೇ ಶತ್ರು ಎಂಬಂತೆ ಈ ಮಹಿಳೆಯರು ಅದನ್ನು ಪ್ರೂವ್ ಮಾಡಿದ್ದಾರೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬಳನ್ನು ವಿವಸ್ತ್ರಗೊಳಿಸಿ, ಮರಕ್ಕೆ ಕಟ್ಟಿ ಹಾಕಿ ಆಕೆಗೆ ಇತರ ನಾಲ್ವರು ಮಹಿಳೆಯರು ಥಳಿಸಿರುವ ಆಘಾತಕಾರಿ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ.

-

ಕಡಲೂರು: ಮಹಿಳೆಯೊಬ್ಬಳನ್ನು (woman) ವಿವಸ್ತ್ರಗೊಳಿಸಿ, ಮರಕ್ಕೆ ಕಟ್ಟಿ ಹಾಕಿ ಆಕೆಗೆ ಇತರ ನಾಲ್ವರು ಮಹಿಳೆಯರು ಥಳಿಸಿರುವ ಆಘಾತಕಾರಿ ಘಟನೆ ತಮಿಳುನಾಡಿನ (Tamil Nadu) ಕಡಲೂರು ಜಿಲ್ಲೆಯಲ್ಲಿ ನಡೆದಿದೆ. ಈ ಕ್ರೂರ ಕೃತ್ಯದ ದೃಶ್ಯವನ್ನು ಚಿತ್ರೀಕರಿಸಲಾಗಿದ್ದು, ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.
ವರದಿಯ ಪ್ರಕಾರ, ಭೂ ವಿವಾದದಿಂದಾಗಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಡಿಯೊದಲ್ಲಿ ನಾಲ್ವರು ಮಹಿಳೆಯರು ಸೇರಿ ಮಹಿಳೆಯನ್ನು ಕಟ್ಟಿ ಹಾಕಿ ನಂತರ ಆಕೆಯ ಸೀರೆಯಿಂದಲೇ ಮನಬಂದಂತೆ ಥಳಿಸಿದ್ದಾರೆ. ಆರೋಪಿ ಮಹಿಳೆಯರು ಮೊದಲು ಆಕೆಯನ್ನು ಥಳಿಸಿ, ನಂತರ ಸಂತ್ರಸ್ತೆಯ ರವಿಕೆಯನ್ನು ಹರಿದು ಮತ್ತಷ್ಟು ಅವಮಾನಿಸಿದ್ದಾರೆ. ಸಂತ್ರಸ್ತೆಯನ್ನು ಕೋಲಿನಿಂದ ಹೊಡೆದು, ಆಕೆಯ ಮೇಲೆ ಹಲವಾರು ನಿಂದನೀಯ ಮತ್ತು ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎನ್ನಲಾಗಿದೆ.
ಆರೋಪಿಗಳಲ್ಲಿ ಒಬ್ಬಾಕೆಯನ್ನು ಪೊಲೀಸರು ಬಂಧಿಸಿದ್ದು, ಉಳಿದ ಮೂವರು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮೇಲ್ನೋಟಕ್ಕೆ ಭೂ ಸಮಸ್ಯೆಯೇ ಕೃತ್ಯಕ್ಕೆ ಕಾರಣವೆಂದು ತೋರುತ್ತದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಪಕ್ಕದಲ್ಲಿ ಕುಳಿತ ಮಹಿಳೆಯ ಬ್ಲೌಸ್ ಒಳಗೆ ಇಣುಕಿ ನೋಡಿದ ಕಾಮುಕ! ಈ ವಿಡಿಯೊ ನೋಡಿ
ಯುಪಿಯಲ್ಲಿ ಮಹಿಳೆಯನ್ನು ಹೊಡೆದು ಹತ್ಯೆ
ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, 40 ವರ್ಷದ ಮಹಿಳೆಯನ್ನು ಕೋಲು ಮತ್ತು ರಾಡ್‌ಗಳಿಂದ ಹೊಡೆದು ಹತ್ಯೆ ಮಾಡಿರುವ ಆತಂಕಕಾರಿ ಘಟನೆ ಉತ್ತರ ಪ್ರದೇಶದ ಹಾರ್ದೋಯ್‌ನಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಆಟದ ಸಮಯದಲ್ಲಿ ಮಕ್ಕಳ ನಡುವೆ ಜಗಳ ನಡೆದು ಪರಿಸ್ಥಿತಿ ಉಲ್ಬಣಗೊಂಡಿದೆ. ಮಕ್ಕಳ ಜಗಳಕ್ಕೆ ಎಂಟ್ರಿಯಾದ ಪೋಷಕರು ಇನ್ನೊಂದು ಗುಂಪಿನ ಮೇಲೆ ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ.
ಮನೆಯಲ್ಲಿದ್ದ ಮಹಿಳೆಯ ಮೇಲೆ ದಾಳಿ ನಡೆಸಿದ್ದು, ಆಕೆ ತೀವ್ರವಾಗಿ ಗಾಯಗೊಂಡ ಪರಿಣಾಮ ಮೃತಪಟ್ಟಿದ್ದಾಳೆ. ಮೃತಳನ್ನು ರೆಹಮಾನಿ ಅಲಿಯಾ ಎಂದು ಗುರುತಿಸಲಾಗಿದೆ. ಹಲ್ಲೆ ನಡೆಸಿದವರನ್ನು ನೆರೆಮನೆಯವರಾದ ಮುಸಾಫರ್, ಶೇರ್ ಅಲಿ, ನಸೀಮ್ ಮತ್ತು ಅಪ್ರಾಪ್ತ ವಯಸ್ಕ ಎಂದು ಆಕೆಯ ಪತಿ ರಜಾಕ್ ಹೆಸರಿಸಿದ್ದಾನೆ ಎನ್ನಲಾಗಿದೆ.
ಆಲಿಯಾಳನ್ನು ತೀವ್ರವಾಗಿ ಥಳಿಸಿದ್ದಾರೆ. ಆಕೆಯ ಕಿರುಚಾಟ ಕೇಳಿ ನೆರೆಮನೆಯವರು ಓಡಿಬಂದಿದ್ದಾರೆ. ಆದರೆ ಆ ಹೊತ್ತಿಗೆ ಮನಬಂದಂತೆ ಥಳಿಸಿದ್ದ ಆರೋಪಿಗಳು ಎಸ್ಕೇಪ್ ಆಗಿದ್ದರು. ಅಸ್ಸಾಂನಲ್ಲೂ ಇತ್ತೀಚೆಗೆ ಇಂತಹದ್ದೇ ಪ್ರತ್ಯೇಕ ಘಟನೆ ನಡೆದಿತ್ತು. ಗ್ರಾಮದ ಮನೆಗಳಲ್ಲಿ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಿ ಮಹಿಳೆಯೊಬ್ಬಳಿಗೆ ಥಳಿಸಲಾಗಿತ್ತು. ಆಕೆಯ ಕೂದಲು ಕತ್ತರಿಸಿ, ಚಪ್ಪಲಿ ಹಾರ ಹಾಕಿ ಗ್ರಾಮದಾದ್ಯಂತ ಮೆರವಣಿಗೆ ಮಾಡಲಾಗಿತ್ತು. ಪ್ರಕರಣ ತಿಳಿಯುತ್ತಲೇ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡರು.
ಇದನ್ನೂ ಓದಿ: Viral Video: ಅಯ್ಯೋ ಬಿಟ್ಟು ಬಿಡಿ ಎಂದು ಬೇಡಿದರೂ ಬಿಡದ ಪಾಪಿಗಳು; 101 ಸೆಕೆಂಡ್‌ನಲ್ಲಿ 26 ಬಾರಿ ವಿದ್ಯಾರ್ಥಿಗೆ ಕಪಾಳ ಮೋಕ್ಷ