Narendra Modi: "ನಮ್ಮದೇ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆಯಾಗಲಿದೆ"; ಭಾರತದ ಮಹತ್ವಾಕಾಂಕ್ಷೆಗಳನ್ನು ವಿವರಿಸಿದ ಮೋದಿ
ಶನಿವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ರಾಷ್ಟ್ರೀಯ ಬಾಹ್ಯಾಕಾಶ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಭಾರತ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವತ್ತ ಕೆಲಸ ಮಾಡುತ್ತಿದೆ ಎಂದು ಘೋಷಿಸಿದರು. ಇಂದು ಭಾರತವು ಸೆಮಿ-ಕ್ರಯೋಜೆನಿಕ್ ಎಂಜಿನ್‌ಗಳು ಮತ್ತು ಎಲೆಕ್ಟ್ರಿಕ್ ಪ್ರೊಪಲ್ಷನ್‌ನಂತಹ ಅದ್ಭುತ ತಂತ್ರಜ್ಞಾನಗಳಲ್ಲಿ ವೇಗವಾಗಿ ಮುಂದುವರಿಯುತ್ತಿದೆ.


ನವದೆಹಲಿ: ಶನಿವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ರಾಷ್ಟ್ರೀಯ ಬಾಹ್ಯಾಕಾಶ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಭಾರತ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವತ್ತ ಕೆಲಸ ಮಾಡುತ್ತಿದೆ ಎಂದು ಘೋಷಿಸಿದರು. ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ಯಾನದ ಯಶಸ್ಸನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು, ದೇಶವು ಶೀಘ್ರದಲ್ಲೇ ಗಗನಯಾತ್ರಿಗಳ ಗುಂಪನ್ನು ನಿರ್ಮಿಸಲಿದೆ ಎಂದು ಘೋಷಿಸಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Isro) ಬಹುನಿರೀಕ್ಷಿತ ಭಾರತೀಯ ಅಂತರಿಕ್ಷ ನಿಲ್ದಾಣ (BAS) ಮಾಡ್ಯೂಲ್‌ನ ಮಾದರಿಯನ್ನು ಅನಾವರಣಗೊಳಿದ ಬಳಿಕ ಪ್ರಧಾನಿಯಿಂದ ಈ ಹೇಳಿಕೆ ಬಂದಿದೆ.
ಇಂದು ಭಾರತವು ಸೆಮಿ-ಕ್ರಯೋಜೆನಿಕ್ ಎಂಜಿನ್‌ಗಳು ಮತ್ತು ಎಲೆಕ್ಟ್ರಿಕ್ ಪ್ರೊಪಲ್ಷನ್‌ನಂತಹ ಅದ್ಭುತ ತಂತ್ರಜ್ಞಾನಗಳಲ್ಲಿ ವೇಗವಾಗಿ ಮುಂದುವರಿಯುತ್ತಿದೆ. ಶೀಘ್ರದಲ್ಲೇ, ನಮ್ಮೆಲ್ಲ ವಿಜ್ಞಾನಿಗಳ ಕಠಿಣ ಪರಿಶ್ರಮದಿಂದ, ಭಾರತವು ಗಗನಯಾನದೊಂದಿಗೆ ಮೇಲೇರಲಿದೆ ಮತ್ತು ಮುಂಬರುವ ದಿನಗಳಲ್ಲಿ, ಭಾರತವು ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲಿದೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 3 ದಿನಗಳ ಹಿಂದೆ ನಾನು ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಭೇಟಿಯಾದೆ. ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಪ್ರತಿಯೊಬ್ಬ ಭಾರತೀಯನಲ್ಲೂ ಹೆಮ್ಮೆ ತುಂಬಿದರು. ಅವರು ನನಗೆ ತ್ರಿವರ್ಣ ಧ್ವಜವನ್ನು ತೋರಿಸುತ್ತಿದ್ದ ಕ್ಷಣ, ಅನುಭವ ಪದಗಳಿಗೆ ಮೀರಿದ್ದು ಎಂದು ಅವರು ಹೇಳಿದರು.
ಗ್ರೂಪ್ ಕ್ಯಾಪ್ಟನ್ ಶುಭಾಂಶು ಅವರೊಂದಿಗಿನ ನನ್ನ ಚರ್ಚೆಯಲ್ಲಿ, ನವ ಭಾರತದ ಯುವಕರ ಅಪಾರ ಧೈರ್ಯ ಮತ್ತು ಅನಂತ ಕನಸುಗಳನ್ನು ನಾನು ನೋಡಿದ್ದೇನೆ. ಈ ಕನಸುಗಳನ್ನು ಮುಂದಕ್ಕೆ ಕೊಂಡೊಯ್ಯಲು, ನಾವು ಭಾರತದ ಗಗನಯಾತ್ರಿಗಳ ಗುಂಪನ್ನು ಸಹ ಸಿದ್ಧಪಡಿಸಲಿದ್ದೇವೆ. ಇಂದು ಬಾಹ್ಯಾಕಾಶ ದಿನದಂದು, ಭಾರತದ ಕನಸುಗಳಿಗೆ ರೆಕ್ಕೆಗಳನ್ನು ನೀಡಲು ಈ ಗಗನಯಾತ್ರಿಗಳ ಗುಂಪಿಗೆ ಸೇರಲು ನಾನು ನನ್ನ ಯುವ ಸ್ನೇಹಿತರನ್ನು ಆಹ್ವಾನಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Narendra Modi: ಆ.29 ರಿಂದ ಸೆ.1 ರ ವರೆಗೆ ಜಪಾನ್, ಚೀನಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ; ಮಹತ್ವದ ಚರ್ಚೆ ಸಾಧ್ಯತೆ
ಭಾರತವು ಬಾಹ್ಯಾಕಾಶ ವಲಯದ ಮಹತ್ವಾಕಾಂಕ್ಷೆಯ ಯೋಜನೆಗಳ ಭಾಗವಾಗಿ 2035 ರ ವೇಳೆಗೆ ಭಾರತೀಯ ಅಂತರಿಕ್ಷ ನಿಲ್ದಾಣದ ಐದು ಮಾಡ್ಯೂಲ್‌ಗಳನ್ನು ಸ್ಥಾಪಿಸಲು ಯೋಜಿಸಿದೆ. ಕಕ್ಷೀಯ ಪ್ರಯೋಗಾಲಯಗಳನ್ನು ನಿರ್ವಹಿಸುವ ರಾಷ್ಟ್ರಗಳ ವಿಶೇಷ ಗುಂಪಿಗೆ ಸೇರುವ ಭಾರತದ ದಿಟ್ಟ ಹೆಜ್ಜೆಯನ್ನು ಬಿಎಎಸ್ ಪ್ರತಿನಿಧಿಸುತ್ತದೆ. BAS-01 ಮಾಡ್ಯೂಲ್ 10 ಟನ್ ತೂಕವಿರುತ್ತದೆ ಮತ್ತು ಭೂಮಿಯಿಂದ 450 ಕಿ.ಮೀ ಎತ್ತರದಲ್ಲಿ ಕಡಿಮೆ ಭೂಮಿಯ ಕಕ್ಷೆಯಲ್ಲಿ ಇರಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಇದು ಪರಿಸರ ನಿಯಂತ್ರಣ ಮತ್ತು ಜೀವ ಬೆಂಬಲ ವ್ಯವಸ್ಥೆ (ECLSS), ಭಾರತ್ ಡಾಕಿಂಗ್ ವ್ಯವಸ್ಥೆ, ಭಾರತ್ ಬರ್ತಿಂಗ್ ಮೆಕ್ಯಾನಿಸಂ ಮತ್ತು ಸ್ವಯಂಚಾಲಿತ ಹ್ಯಾಚ್ ವ್ಯವಸ್ಥೆ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನ ಹೊಂದಿದೆ.