ನಿರ್ಜನ ಮಾರ್ಗದಲ್ಲಿ ಸ್ಕೂಟರ್ ಚಲಾಯಿಸಿದನಾ ರ‍್ಯಾಪಿಡೋ ಸವಾರ? ದ್ವಿಚಕ್ರ ವಾಹನದಿಂದ ಜಿಗಿದ ಮಹಿಳೆಗೆ ಗಾಯ
woman jumps off scooter: ರ‍್ಯಾಪಿಡೋ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ದ್ವಿಚಕ್ರ ವಾಹನದಿಂದ ಜಿಗಿದ ಪರಿಣಾಮ ಗಾಯಗೊಂಡ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ವಿಶ್ವವಿದ್ಯಾಲಯದ ಕಡೆಗೆ ಪರಿಚಯವಿಲ್ಲದ ಮತ್ತು ನಿರ್ಜನ ಮಾರ್ಗದ ಮೂಲಕ ದ್ವಿಚಕ್ರ ವಾಹನವನ್ನು ಚಲಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.
ದ್ವಿಚಕ್ರ ವಾಹನದಿಂದ ಹಾರಿದ ಮಹಿಳೆಗೆ ಗಾಯ -
ದೆಹಲಿ, ಆ.14: ರ‍್ಯಾಪಿಡೋ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ದ್ವಿಚಕ್ರ ವಾಹನದಿಂದ ಜಿಗಿದ ಪರಿಣಾಮ ಗಾಯಗೊಂಡ ಘಟನೆ ರಾಷ್ಟ್ರ ರಾಜಧಾನಿ ದೆಹಲಿ (Delhi) ಯಲ್ಲಿ ನಡೆದಿದೆ. ರ‍್ಯಾಪಿಡೋ ಸ್ಕೂಟರ್ ಸವಾರ (Rapido rider), ವಿಶ್ವವಿದ್ಯಾಲಯದ ಕಡೆಗೆ ಪರಿಚಯವಿಲ್ಲದ ಮತ್ತು ನಿರ್ಜನ ಮಾರ್ಗದ ಮೂಲಕ ದ್ವಿಚಕ್ರ ವಾಹನವನ್ನು ಚಲಾಯಿಸಿದ್ದಾನೆ. ಪದೇ ಪದೇ ವಿನಂತಿಸಿದರೂ ನಿಲ್ಲಿಸಲು ನಿರಾಕರಿಸಿದ್ದರಿಂದ ಆಕೆ ಬಲವಂತವಾಗಿ ಅದರಿಂದ ಜಿಗಿಯಬೇಕಾಯಿತು ಎಂದು ಆರೋಪಿಸಿದ್ದಾರೆ. ಇದರಿಂದ ಅವರಿಗೆ ಗಾಯಗಳಾಗಿವೆ. ಈ ಘಟನೆಯು ಪ್ರಯಾಣಿಕರ ಸುರಕ್ಷತೆ ಮತ್ತು ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್‌ಗಳ ಪ್ರತಿಕ್ರಿಯೆಯ ಬಗ್ಗೆ ಹೊಸ ಕಳವಳಗಳನ್ನು ಹುಟ್ಟುಹಾಕಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಈ ಬಗ್ಗೆ ಹಂಚಿಕೊಂಡ ಆಯೇಷಾ ಶ್ರೀವಾಸ್ತವ್, ಅವರು ತಮ್ಮ ಕಚೇರಿಗೆ ಪ್ರಯಾಣಿಸಲು ರ್ಯಾಪಿಡೋ ಬೈಕನ್ನು ಬುಕ್ ಮಾಡಿದ್ದರು. ಸವಾರಿಯ ಸಮಯದಲ್ಲಿ, ಚಾಲಕ ನಿರ್ಜನ ಮಾರ್ಗದ ಮೂಲಕ ಚಲಾಯಿಸಿದ್ದನ್ನು ಅವರು ಗಮನಿಸಿದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಆ ರಸ್ತೆಯು ವಿಶ್ವವಿದ್ಯಾಲಯಕ್ಕೆ ನೇರ ಮಾರ್ಗ ಎಂದು ಚಾಲಕ ಆಕೆಗೆ ಹೇಳಿದ್ದ ಎನ್ನಲಾಗಿದೆ. ಆದರೆ, ಏನೋ ಸರಿಯಿಲ್ಲ ಎಂದೆನಿಸಿದ ಶ್ರೀವಾಸ್ತವ್, ಬೇರೆ ಮಾರ್ಗವನ್ನು ತೆಗೆದುಕೊಳ್ಳಲು ಅಥವಾ ಸ್ಕೂಟರ್ ನಿಲ್ಲಿಸುವಂತೆ ಕೇಳಿದ್ದಾರೆ. ತಾನು ಪದೇ ಪದೇ ವಿನಂತಿಸಿದರೂ ರೈಡರ್ ಯಾವುದೇ ಮಾರ್ಗವನ್ನು ತೆಗೆದುಕೊಳ್ಳಲು ನಿರಾಕರಿಸಿದನು ಎಂದು ಮಹಿಳೆ ಆರೋಪಿಸಿದ್ದಾರೆ.
ನಂತರ ಆಯೇಷಾ ಚಾಲಕನನ್ನು ನಿಲ್ಲಿಸಲು ಪ್ರಯತ್ನಿಸುತ್ತಾ ಅವನನ್ನು ಹೊಡೆಯಲು ಮುಂದಾದರು. ಆದರೆ ಅದು ಕೂಡ ವಿಫಲವಾಯಿತು. ಬೇರೆ ದಾರಿಯಿಲ್ಲದೆ, ತನ್ನ ಸುರಕ್ಷತೆಗಾಗಿ ಚಲಿಸುತ್ತಿದ್ದ ಸ್ಕೂಟರ್‌ನಿಂದ ಜಿಗಿದಿದ್ದಾರೆ. ಇದರಿಂದಾಗಿ ಆಕೆಯ ಕೈಗಳು, ಕಾಲುಗಳು ಮತ್ತು ತಲೆಗೆ ಗಾಯಗಳಾಗಿದ್ದು, ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ.
Bike taxi: ರಾಜ್ಯದಲ್ಲಿ ಓಲಾ, ಊಬರ್, ರಾಪಿಡೋ ಬೈಕ್ ಟ್ಯಾಕ್ಸಿ ಜೂನ್ 16ರಿಂದ ಬಂದ್, ಹೈಕೋರ್ಟ್ ನಿಲುವು ಅಚಲ
ಈ ಬಗ್ಗೆ ರ‍್ಯಾಪಿಡೋದಲ್ಲಿ ಅವರು ವರದಿ ಮಾಡಿದ್ದಾರೆ. ಆದರೆ, ತಮ್ಮ ದೂರಿಗೆ ರ‍್ಯಾಪಿಡೋ ನೀಡಿದ ಆರಂಭಿಕ ಪ್ರತಿಕ್ರಿಯೆಯನ್ನು ಶ್ರೀವಾಸ್ತವ್ ಟೀಕಿಸಿದ್ದಾರೆ. ಗ್ರಾಹಕ ಬೆಂಬಲದಿಂದ ಸಕಾಲಿಕ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಅವರು ಹೇಳಿದರು. ಇದರಿಂದಾಗಿ ಅವರು ಈ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ಗಮನ ಸೆಳೆಯಿತು. ನಂತರ ರ‍್ಯಾಪಿಡೋ ಪ್ರತಿಕ್ರಿಯಿಸಿದ್ದು, ಕಂಪನಿಯು ಚಾಲಕನನ್ನು ತನ್ನ ಪ್ಲಾಟ್‌ಫಾರ್ಮ್‌ನಿಂದ ಶಾಶ್ವತವಾಗಿ ಅಮಾನತುಗೊಳಿಸಿದೆ ಮತ್ತು ಕಾನೂನು ಕ್ರಮ ಕೈಗೊಳ್ಳಲು ಶ್ರೀವಾಸ್ತವ್ ಅವರೊಂದಿಗೆ ಅವರ ವಿವರಗಳನ್ನು ಹಂಚಿಕೊಂಡಿದೆ ಎಂದು ಹೇಳಿದೆ. ಆಕೆಗೆ ಅಗತ್ಯವಿರುವ ಯಾವುದೇ ಕಾನೂನು ಅಥವಾ ವೈದ್ಯಕೀಯ ಸಹಾಯವನ್ನು ನೀಡುವುದಾಗಿ ಮತ್ತು ಹೆಚ್ಚಿನ ಸಹಾಯಕ್ಕಾಗಿ ಲಭ್ಯವಿರುತ್ತದೆ ಎಂದು ರ‍್ಯಾಪಿಡೋ ಹೇಳಿದೆ.
ಈ ಘಟನೆಯು ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿಗಳನ್ನು ಬಳಸುವಾಗ ಮಹಿಳೆಯರ ಸುರಕ್ಷತೆ ಮತ್ತು ಪ್ರಯಾಣಿಕರ ದೂರುಗಳಿಗೆ ತ್ವರಿತ ಪ್ರತಿಕ್ರಿಯೆಗಳ ಅಗತ್ಯತೆಯ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.