ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Zubeen Garg: ಗಾಯಕ ಜುಬೀನ್‌ ಗಾರ್ಗ್‌ ಸಾವು; ಕೊಲೆ ನಡೆದ ಬಗ್ಗೆ ಪುರಾವೆ ಇಲ್ಲ ಎಂದ ಸಿಂಗಾಪುರ ಪೊಲೀಸ್

ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಮೃತಪಟ್ಟ ಅಸ್ಸಾಂನ ಖ್ಯಾತ ಗಾಯಕ ಜುಬೀನ್ ಗಾರ್ಗ್ (52) ಅವರ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಸಿಂಗಾಪುರ ಪೊಲೀಸರು ಒಂದು ಶಾಕಿಂಗ್ ಮಾಹಿತಿ ಹೊರ ಹಾಕಿದ್ದಾರೆ. ಅಪರಾಧ ನಡೆದಿರುವ ಬಗ್ಗೆ ಇಲ್ಲಿಯವರೆಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದು ಹೇಳಿರುವ ಅಧಿಕಾರಿಗಳು ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಎಂದಿದ್ದಾರೆ.

ಗಾಯಕ ಜುಬೀನ್ ಗರ್ಗ್ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಜುಬೀನ್ ಗಾರ್ಗ್ -

Profile Sushmitha Jain Oct 17, 2025 7:29 PM

ನವದೆಹಲಿ: ಖ್ಯಾತ ಗಾಯಕ ಜುಬೀನ್ ಗಾರ್ಗ್ (Zubeen Garg) ನಿಗೂಢ ಸಾವಿನ ಒಂದು ತಿಂಗಳ ಬಳಿಕ ಸಿಂಗಾಪುರದ (Singapore) ಪೊಲೀಸರು, "ಅಪರಾಧ ನಡೆದಿರುವ ಬಗ್ಗೆ ಇಲ್ಲಿಯವರೆಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ," ಎಂದು ತಿಳಿಸಿದ್ದಾರೆ. ಸುಖಾ ಸುಮ್ಮನೆ ಖ್ಯಾತ ಗಾಯಕನ ಸಾವಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೂಹ ಮತ್ತು ಸುಳ್ಳು ಮಾಹಿತಿಯನ್ನು ಹರಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಈಶಾನ್ಯ ಉತ್ಸವದಲ್ಲಿ ಪ್ರದರ್ಶನ ನೀಡಲು ಸಿಂಗಾಪೂರಕ್ಕೆ ತೆರಳಿದ್ದ ಸಂದರ್ಭ, ಸ್ಕೂಬಾ ಡೈವಿಂಗ್‌ಗೆ ವೇಳೆ ಸಮುದ್ರದಲ್ಲಿ ಮುಳುಗಿ ಗಾರ್ಗ್‌ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಘಟನೆಯಿಂದ ಭಾರತ, ವಿಶೇಷವಾಗಿ ಅವರ ಹುಟ್ಟೂರು ಅಸ್ಸಾಂನಲ್ಲಿ ಶೋಕದ ಛಾಯೆ ಆವರಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಈವೆಂಟ್ ಆಯೋಜಕ ಶ್ಯಾಮ್‌ಕನು ಮಹಂತ, ಮ್ಯಾನೇಜರ್ ಸಿದ್ಧಾರ್ಥ್ ಶರ್ಮಾ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಅಲ್ಲದೇ ಎಪಿಎಸ್ ಅಧಿಕಾರಿ ಸಂದೀಪನ್ ಗಾರ್ಗ್ ಮತ್ತು ನಂದೇಶ್ವರ ಬೋರಾ ಸೇರಿದಂತೆ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಈ ಸುದ್ದಿಯನ್ನು ಓದಿ:Viral News: 15ನೇ ವಯಸ್ಸಿನಲ್ಲಿ ಆಟಿಕೆಗಳೊಂದಿಗೆ ಕೋಣೆಯಲ್ಲಿ ಲಾಕ್; 42ನೇ ವಯಸ್ಸಿನಲ್ಲಿ ಮಹಿಳೆಯ ರಕ್ಷಣೆ

"ಈ ಪ್ರಕರಣವನ್ನು ಸಿಂಗಾಪುರದ ಕೊರೋನರ್ಸ್ ಆ್ಯಕ್ಟ್ ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದ್ದು, ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಅಪರಾಧ ನಡೆದ ಬಗ್ಗೆ ಸಾಕ್ಷ್ಯ ಸಿಕ್ಕಿಲ್ಲ" ಪೊಲೀಸರು ತಿಳಿಸಿದ್ದಾರೆ. ಅಲ್ಲದೆ “ಎಸ್‌ಪಿಎಫ್ (Singapore Police Force) ಈ ಪ್ರಕರಣವನ್ನು ಸಮಗ್ರ ಹಾಗೂ ವೃತ್ತಿಪರ ರೀತಿಯಲ್ಲಿ ತನಿಖೆ ನಡೆಸಲು ಬದ್ಧವಾಗಿದ್ದು, ಇದಕ್ಕೆ ಸಮಯದ ಅವಶ್ಯಕತೆ ಇದೆ. ದಯವಿಟ್ಟು ತನಿಖೆ ಮುಗಿಯುವವರೆಗೂ ಊಹಾಪೂಹ ಅಥವಾ ವದಂತಿಗಳನ್ನು ಜನರು ನಂಬಬಾರದು ಮತ್ತು ಶಾಂತಿ ಕಾಪಾಡಬೇಕು" ಎಂದು ಮನವಿ ಮಾಡಿದ್ದಾರೆ.

ತನಿಖೆ ಪೂರ್ಣಗೊಂಡ ನಂತರ ಸಿಂಗಾಪುರದ ರಾಜ್ಯ ಕೋರನರ್‌ಗೆ ವರದಿಯನ್ನು ಸಲ್ಲಿಸಲಾಗುವುದು. ಅಲ್ಲಿನ ಅಧಿಕಾರಿಗಳು ಪೊಲೀಸ್ ವರದಿಗಳ ದೃಢೀಕರಣ ಅವಶ್ಯಕತೆ ಇದೆಯೇ ಎಂಬುವುದನ್ನು ತೀರ್ಮಾನಿಸುತ್ತಾರೆ. ಬಳಿಕ ಆ ವರದಿಯನ್ನು ಸಾರ್ವಜನಿಕಗೊಳಿಸಲಾಗುವುದು ಎಂದು ಸಿಂಗಾಪುರ ಪೊಲೀಸರು ಹೇಳಿದ್ದಾರೆ. ಭಾರತದ ಮನವಿಯಂತೆ ಸಿಂಗಾಪುರ ಪೊಲೀಸರು ಅಕ್ಟೋಬರ್ 1ರಂದು ಗಾಯಕನ ಮರಣೋತ್ತರ ಪರೀಕ್ಷೆ ಹಾಗೂ ಪ್ರಾಥಮಿಕ ತನಿಖಾ ವರದಿಯನ್ನು ಹಂಚಿಕೊಂಡಿದ್ದರು.

ಇನ್ನೊಂದೆಡೆ, ಬಂಧಿನತಾಗಿರುವ ಗಾರ್ಗ್ ಅವರ ಬ್ಯಾಂಡ್‌ಮೇಟ್ ಶೇಖರ್ ಜ್ಯೋತಿ ಗೋಸ್ವಾಮಿ, ಸ್ಫೋಟಕ ಹೇಳಿಕೆ ನೀಡಿದ್ದಾರೆ. "ಗಾಯಕನ ಮ್ಯಾನೇಜರ್ ಮತ್ತು ಕಾರ್ಯಕ್ರಮ ಆಯೋಜಕರೇ ಜುಬೀನ್‌ಗೆ ವಿಷ ನೀಡಿದ್ದಾರೆ ಮತ್ತು ಮೊದಲೇ ಇದಕ್ಕೆ ಪ್ಲಾನ್ ಮಾಡಿ ವಿದೇಶಿ ಸ್ಥಳ ಆಯ್ಕೆ ಮಾಡಿದ್ದರು" ಎಂದು ಅವರು ಆರೋಪಿಸಿದ್ದಾರೆ.

ಮೂರು ತಿಂಗಳೊಳಗೆ ಈ ಪ್ರಕರಣದ ಚಾರ್ಜ್‌ಶೀಟ್ ಸಲ್ಲಿಸಲಾಗುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಜುಬೀನ್ ಗಾರ್ಗ್ ಸಾವಿನ ಬಗ್ಗೆ, ಅವರ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಗಾಯಕನ ಸಾವಿಗೆ ನ್ಯಾಯ ಒದಗಿಸುವಂತೆ ದೇಶದಾದ್ಯಂತ ಕೂಗು ಕೇಳಿಬರುತ್ತಿದೆ.