Harsh Sanghavi: ಗುಜರಾತ್ ಉಪಮುಖ್ಯಮಂತ್ರಿಯಾಗಿ ಹರ್ಷ ಸಾಂಘವಿ ಪ್ರಮಾಣ ವಚನ
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಸಂಪುಟ ವಿಸ್ತರಣೆಯ ಬಳಿಕ ಗಾಂಧಿನಗರದ ಮಹಾತ್ಮ ಮಂದಿರ ಸಮಾವೇಶ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಗೃಹ ಸಚಿವ ಹರ್ಷ ಸಾಂಘವಿ ಶುಕ್ರವಾರ ರಾಜ್ಯದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

-

ಗಾಂಧಿನಗರ: ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Chief Minister Bhupendra Patel) ತಮ್ಮ ಸಂಪುಟ ವಿಸ್ತರಣೆ ಮಾಡಿದ್ದು, ಗುಜರಾತ್ ಗೃಹ ಸಚಿವ ಹರ್ಷ ಸಾಂಘವಿ (Gujarat Home Minister Harsh Sanghavi) ರಾಜ್ಯದ ಉಪಮುಖ್ಯಮಂತ್ರಿಯಾಗಿ (Gujarat Deputy Chief Minister) ಪ್ರಮಾಣ ವಚನ ಸ್ವೀಕರಿಸಿದರು. ಶುಕ್ರವಾರ ಗಾಂಧಿನಗರದ ಮಹಾತ್ಮ ಮಂದಿರ ಸಮಾವೇಶ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಹರ್ಷ ಸಾಂಘವಿ ಹಾಗೂ ಸಂಪುಟದ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಸಂಪುಟ ವಿಸ್ತರಣೆಗೆ ಒಂದು ದಿನ ಮೊದಲು ಮುಖ್ಯಮಂತ್ರಿ ಪಟೇಲ್ ಹೊರತುಪಡಿಸಿ ಉಳಿದ ಎಲ್ಲ 16 ಸಚಿವರು ರಾಜೀನಾಮೆಗಳನ್ನು ಸಲ್ಲಿಸಿದ್ದಾರೆ.
ಹರ್ಷ ಸಾಂಘವಿ ಅವರೊಂದಿಗೆ ಸಂಪುಟದ ನೂತನ ಸದಸ್ಯರಾಗಿರುವ ಸ್ವರೂಪ್ಜಿ ಠಾಕೂರ್, ಪ್ರವೀಣ್ ಕುಮಾರ್ ಮಾಲಿ, ರುಷಿಕೇಶ್ ಪಟೇಲ್, ದರ್ಶನ ವಾಘೇಲಾ, ಕುನ್ವರ್ಜಿ ಬವಾಲಿಯಾ, ರಿವಾಬಾ ಜಡೇಜಾ, ಅರ್ಜುನ್ ಮೋಧ್ವಾಡಿಯಾ, ಪರ್ಶೋತ್ತಮ್ ಸೋಲಂಕಿ, ಜಿತೇಂದ್ರ ವಾಘಾನಿ, ಪ್ರಫುಲ್ ಪನ್ಶೇರಿಯಾ ಮತ್ತು ಕನುಭಾಯಿ ದೇಸಾಯಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
#WATCH | Gandhinagar | Harsh Sanghavi takes oath as Deputy Chief Minister of Gujarat pic.twitter.com/rJ5fYP4utC
— ANI (@ANI) October 17, 2025
ಯಾರು ಹರ್ಷ ಸಾಂಘವಿ?
ರಾಜ್ಯ ರಾಜಕೀಯದಲ್ಲಿ ಉತ್ತುಂಗಕ್ಕೇರುವ ನಾಯಕರಲ್ಲಿ ಒಬ್ಬರಾದ ಹರ್ಷ ಸಂಘವಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ವಿಶ್ವಾಸಾರ್ಹ ವ್ಯಕ್ತಿಯಾಗಿದ್ದಾರೆ. ಇವರು ಕೇವಲ 40ನೇ ವಯಸ್ಸಿನಲ್ಲಿ ರಾಜ್ಯದ ಗೃಹ ಖಾತೆಯನ್ನು ನಿರ್ವಹಿಸಿದ್ದಾರೆ. ಈ ಹುದ್ದೆಯನ್ನು ಹಿಂದೆ ಅಮಿತ್ ಶಾ ಮತ್ತು ಪ್ರದೀಪ್ ಸಿನ್ಹ್ ಜಡೇಜಾ ಅವರಂತಹ ಪಕ್ಷದ ಪ್ರಮುಖರು ಹೊಂದಿದ್ದರು.
ಯೋಜಿತ ಸಂಪುಟ ವಿಸ್ತರಣೆಗೆ ಒಂದು ದಿನ ಮೊದಲು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೊರತುಪಡಿಸಿ ಎಲ್ಲ 16 ಸಚಿವರು ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದ್ದು ಇದನ್ನು ಪಕ್ಷವು ಅಂಗೀಕರಿಸಿದೆ.
ಇದನ್ನೂ ಓದಿ: ಆರ್‌ಎಸ್‌ಎಸ್ ಕಚೇರಿಗೆ ಮುತ್ತಿಗೆ; ಪ್ರತಿಭಟನಾಕಾರರ ವಿರುದ್ಧ ಎಫ್‍ಐಆರ್ ದಾಖಲಿಸಲು ಸುನೀಲ್ ಕುಮಾರ್ ಒತ್ತಾಯ
ರಾಜ್ಯಪಾಲ ಆಚಾರ್ಯ ದೇವವ್ರತ್ ಅವರನ್ನು ಶುಕ್ರವಾರ ಬೆಳಗ್ಗೆ ಭೇಟಿ ಮಾಡಿದ ಮುಖ್ಯಮಂತ್ರಿ ಪಟೇಲ್ ತಮ್ಮ ಹೊಸ ಸಂಪುಟ ಸದಸ್ಯರ ಪ್ರಮಾಣವಚನ ಸಮಾರಂಭವನ್ನು ನಡೆಸಲು ಅನುಮತಿ ಕೋರಿದರು. ಬಳಿಕ ಗಾಂಧಿನಗರದ ರಾಜಭವನದಲ್ಲಿ ನಡೆದ ಸಭೆಯಲ್ಲಿ ಗುಜರಾತ್ ಸಂಪುಟದ ಪ್ರಸ್ತುತ ಸ್ಥಿತಿಯ ಬಗ್ಗೆಯೂ ಅವರು ರಾಜ್ಯಪಾಲರಿಗೆ ಮಾಹಿತಿ ನೀಡಿದರು.
ಭೂಪೇಂದ್ರ ಪಟೇಲ್ ಶುಕ್ರವಾರ ತಮ್ಮ ಸಂಪುಟವನ್ನು ವಿಸ್ತರಿಸಲಿರುವುದಾಗಿ ರಾಜ್ಯ ಸರ್ಕಾರ ಈ ಮೊದಲೇ ಘೋಷಿಸಿತ್ತು. ಗುಜರಾತ್‌ನಲ್ಲಿನ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಪಟೇಲ್ ಸೇರಿದಂತೆ 17 ಸದಸ್ಯರಿದ್ದರು. ಅವರಲ್ಲಿ ಎಂಟು ಮಂದಿ ಕ್ಯಾಬಿನೆಟ್ ದರ್ಜೆಯ ಮಂತ್ರಿಗಳಾಗಿದ್ದರೆ, ಇತರರು ರಾಜ್ಯ ಸಚಿವರಾಗಿದ್ದರು. ಗುಜರಾತ್ ವಿಧಾನ ಸಭೆಯು ಒಟ್ಟು 182 ಸದಸ್ಯ ಬಲವನ್ನು ಹೊಂದಿದೆ.
ಇದನ್ನೂ ಓದಿ: Basanagouda Patil Yatnal: ಸರ್ಕಾರಿ ಜಾಗಗಳಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸಿ: ಸಿಎಂಗೆ ಶಾಸಕ ಯತ್ನಾಳ್ ಪತ್ರ
ಈ ತಿಂಗಳ ಆರಂಭದಲ್ಲಷ್ಟೇ ರಾಜ್ಯ ಸಚಿವ ಜಗದೀಶ್ ವಿಶ್ವಕರ್ಮ ರಾಜ್ಯ ಬಿಜೆಪಿ ಘಟಕದ ಹೊಸ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.