ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Readers Colony: ವಿದ್ಯುತ್ ದರ ಏರಿಕೆ ಶಾಕ್

ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳು(ಎಸ್ಕಾಂಗಳು) ನಷ್ಟದ ಭೀತಿಯಿಂದ ಪ್ರಸ್ತಾಪನೆ ಸಲ್ಲಿಸಿರುವುದು ವಿಪರ್ಯಾಸವೇ ಸರಿ. ನಷ್ಟಕ್ಕೆ ಸರಿಯಾದ ಕಾರಣವನ್ನು ಹುಡುಕುವುದರ ಬದಲು ರಾಜ್ಯದ ಜನತೆಯ ಜೇಬಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಕೈ ಹಾಕಿ ದರ ಏರಿಕೆಗೆ ಆದೇಶ ನೀಡಿರುವುದು ಅನಗತ್ಯ ಬೆಳವಣಿಗೆ.

Readers Colony: ವಿದ್ಯುತ್ ದರ ಏರಿಕೆ ಶಾಕ್

-

Profile
Ashok Nayak Apr 20, 2026 3:27 PM

ಓದುಗರ ಓಣಿ

ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಬಿರು ಬೇಸಿಗೆಯಲ್ಲಿ ಗೃಹಬಳಕೆಯ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಶಾಕ್ ಎದುರಿಸುವಂತಾಗಿದ್ದು, ಜನತೆಯಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದ್ದು ತಮ್ಮ ತಮ್ಮ ಸರ್ಕಾರದ ನಡೆಗೆ ಶಾಪ ಆಕುತ್ತಿರುವುದು ಸರ್ವೇಸಾಮಾನ್ಯವಾಗಿದೆ.

ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳು(ಎಸ್ಕಾಂಗಳು) ನಷ್ಟದ ಭೀತಿಯಿಂದ ಪ್ರಸ್ತಾಪನೆ ಸಲ್ಲಿಸಿರುವುದು ವಿಪರ್ಯಾಸವೇ ಸರಿ. ನಷ್ಟಕ್ಕೆ ಸರಿಯಾದ ಕಾರಣವನ್ನು ಹುಡುಕುವುದರ ಬದಲು ರಾಜ್ಯದ ಜನತೆಯ ಜೇಬಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಕೈ ಹಾಕಿ ದರ ಏರಿಕೆಗೆ ಆದೇಶ ನೀಡಿರುವುದು ಅನಗತ್ಯ ಬೆಳವಣಿಗೆ. ಇನ್ನೂ ಕಾಲ ಮಿಂಚಿಲ್ಲ ದರ ಏರಿಕೆಯನ್ನು ಹಿಂಪಡೆದು ಜನತೆಗೆ ಅನುಕೂಲ ಮಾಡುವುದು ಸೂಕ್ತ.

-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು

ಅತಿರೇಕದ ಅಭಿಮಾನ ಏಕೆ?

ಇತ್ತೀಚಿನ ದಿನಗಳಲ್ಲಿ ಕೆಲವರ ಅಭಿಮಾನ ತೀರಾ ಅಸಹ್ಯ ಹುಟ್ಟಿಸುವ ಮತ್ತು ಅಮೂಲ್ಯ ವಸ್ತುಗಳ ವ್ಯರ್ಥಕ್ಕೆ ಕಾರಣವಾಗುತ್ತಿದೆ. ಶ್ರೀಮಂತ ರಾಜಕಾರಣಿಗಳಿಗೆ, ಸಿನಿಮಾ ನಟನಟಿಯರಿಗೆ ಹಣ್ಣುಗಳು, ಬೆಲ್ಲ, ಕೊಬ್ಬರಿ, ಕಬ್ಬು, ಹೀಗೆ ಅಮೂಲ್ಯ ಅಹಾರ ಪದಾರ್ಥಗಳಿಂದ ತಯಾರಿಸಿದ ಬೃಹದಾಕಾರದ ಹಾರವನ್ನು ಕ್ರೇನ್ ಜೆಸಿಬಿ ಯಂತ್ರದ ಮೂಲಕ, ಅಪಾಯಕಾರಿ ರೀತಿಯಲ್ಲಿ ಹಾಕಿ, ನಂತರ ಕಿತ್ತು ಬೀಳಿಸಿ ತುಳಿದು ಹಾಳು ಮಾಡುವ ಹುಚ್ಚಾಟ ಹೆಚ್ಚಾಗಿದೆ. ಈಗ ಕನ್ನಡಿಗನೊಬ್ಬ ತಮಿಳು ನಟ ರಾಜಕಾರಣಿ ವಿಜಯ್ ರವರಿಗೆ ಬೆಳ್ಳಿಯ ಕಿರೀಟ ಮತ್ತು ಚಪ್ಪಲಿ ತಯಾರಿಸಿದ್ದು, ಸಮರ್ಪಿಸಲು ಹೋಗುತ್ತಿದ್ದಾನೆ.

ಇದನ್ನೂ ಓದಿ: Readers Colony: ಇವರಿಗೇಕೆ ಭಾರತ ರತ್ನವಿಲ್ಲ?

ಕೆಲವು ಹುಚ್ಚು ಅಭಿಮಾನಿಗಳು ವಿಪರೀತ ಅಂಧಾಭಿಮಾನದಿಂದ ರಾಜಕಾರಣಿಗಳ ಸಿನಿಮಾನಟರ ವೈಯಕ್ತಿಕ ದ್ವೇಷದ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿzರೆ. ಹೀಗಾದಾಗ ಈ ಜೈಲು ಪಾಲಾದ ಕುರುಡು ಅಭಿಮಾನಿಗಳ ಕುಟುಂಬದ ಸ್ಥಿತಿಯೇನು..? ಈ ಹುಚ್ಚು ಮೋಹದ ಅತಿರೇಕದ ಅಭಿಮಾನ ಏತಕ್ಕಾಗಿ ಬೇಕಿದೆ...?

-ಎಸ್.ಎನ್.ರಮೇಶ್, ಸಾತನೂರು, ಮಂಡ್ಯ

ಪ್ಲಾಸ್ಟಿಕ್‌ನಿಂದ ಕ್ಯಾನ್ಸರ್?

ಒಂದೆರಡು ದಶಕಗಳ ಹಿಂದೆ ಕ್ಯಾನ್ಸರ್ ಎಂಬ ಖಾಯಿಲೆಯನ್ನು ಅಂದು ಇಂದು ಎಂದು ಕೇಳುತ್ತಿದ್ದೆವು. ಅಷ್ಟು ಅಪರೂಪವಾಗಿತ್ತು ಅರ್ಬುದ ರೋಗ. ಆದರೆ, ಇತ್ತೀಚೆಗಿನ ವರ್ಷಗಳಲ್ಲಿ ನಮ್ಮ ಬಂಧು ಬಳಗದ ಸಮೀಪವರ್ತಿಗಳ ಆ ಕುರಿತು ಕೇಳಲ್ಪಡುತ್ತಿದ್ದೇವೆ. ಕ್ಯಾನ್ಸರ್ ಬರಲು ಪ್ಲಾಸ್ಟಿಕ್ ಉಪಯೋಗವೇ ಕಾರಣ ಎಂದು ಕೆಲವರು ವ್ಯಾಖ್ಯಾನಿಸುತ್ತಾರೆ. ಅದರಲ್ಲೂ ಸಹ ತೆಳು ಹಾಳೆಯ ಮೇಲೆ ಇಡ್ಲಿ ಮಾಡುವುದು, ಬಿಸಿಬಿಸಿ ಪದಾರ್ಥಗಳನ್ನು ಪ್ಯಾಕ್ ಮಾಡುವುದು ಮೂಲ ಕಾರಣ. ಇದೇ ನಿಜವಾದಲ್ಲಿ ಸರ್ಕಾರ ಕೂಡಲೇ ಪ್ಲಾಸ್ಟಿಕ್ ಬಳಕೆಯನ್ನು ತಡೆ ಹಿಡಿಯಬೇಕಿದೆ. ಇಲ್ಲವಾದರೆ, ಕ್ಯಾನ್ಸರ್ ಪ್ರತಿಯೊಬ್ಬರಿಗೂ ಅಡರುವ ಸಂಭವ ಇದೆ. ಯಾವುದೇ ಒತ್ತಡಕ್ಕೂ ಬಗ್ಗದೆ ತೆಳುವಾದ ಪ್ಲಾಸ್ಟಿಕ್ ನಿಷೇಧ ಮಾಡಲಿ. ಇಲ್ಲವಾದರೆ ಭವಿಷ್ಯದಲ್ಲಿ ಘೋರದಿನಗಳು ಎದುರಾದೀತು.

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಖಾಲಿ ಹುದ್ದೆಗಳನ್ನು ಸರಕಾರ

ಶೀಘ್ರ ಭರ್ತಿ ಮಾಡಲಿ ಸರಕಾರದ ಹಲವು ಇಲಾಖೆಗಳಲ್ಲಿ ಉದ್ಯೋಗಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡುವ ಮನಸ್ಸು ಮಾಡುತ್ತಿಲ್ಲ. ಏಕೆಂದರೆ ಈಗಾಗಲೇ ಒಪ್ಪಂದದ ಮೇರೆಗೆ ಕೆಲವರನ್ನು ನೇಮಕ ಮಾಡಿಕೊಂಡಿರುತ್ತಾರೆ. ಹಾಗೆಯೇ ಹೆಚ್ಚುವರಿ ಹುದ್ದೆಗಳನ್ನು ನಿರ್ವಹಿಸುವಂತೆ ಕಾಯಂ ಅಧಿಕಾರಿಗಳಿಗೆ ಹೇಳಿರುತ್ತಾರೆ. ಇದರಿಂದ ಉದ್ಯೋಗ ಸಮಸ್ಯೆ ಬಗೆಹರಿಯಲು ಸಾಧ್ಯವೇ? ಒಳ ಮೀಸಲಾತಿಯ ಸಮಸ್ಯೆಗಳು ಬಗೆಹರಿದರೆ ಅಧಿಸೂಚನೆ ಹೊರಡಿಸುತ್ತಾರೆಯೇ? ಹಿಂದುಳಿದ ವರ್ಗಗಳ ಜಾತಿ ಗಣತಿ ವರದಿ ಆಧಾರದ ಮೇಲೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಾರೆಯೇ?ವಯೋಮಿತಿ ಮೀರುತ್ತಿರುವ ನಿರುದ್ಯೋಗಿಗಳಿಗೆ ವಯಸ್ಸಿನ ಸಡಿಲಿಕೆ ಮಾಡುತ್ತಾರೆಯೇ? ಮುಂದಿನ ಹೊಸ ಸರ್ಕಾರ ಬರುವವರಿಗೆ ಕಾಯಬೇಕೆ ಎಂಬ ಹಲವು ಗೊಂದಲಗಳ ಮಧ್ಯೆ ನಿರುದ್ಯೋಗಿಗಳು ಮೂಕರಾಗಿದ್ದಾರೆ.

-ರಾಜೇಂದ್ರಕುಮಾರ್ ಮುದ್ನಾಳ್, ಯಾದಗಿರಿ.