Readers Colony: ಸಂವಿಧಾನಕ್ಕೆ ಅಪಚಾರ
ಭಾರತ ಸಂವಿಧಾನದ 164(1) ನೇ ವಿಧಿ ಅತ್ಯಂತ ಸ್ಪಷ್ಟವಾಗಿದೆ. ರಾಜ್ಯಪಾಲರು ಮುಖ್ಯಮಂತ್ರಿ ಯನ್ನು ನೇಮಿಸುತ್ತಾರೆ ಮತ್ತು ಮುಖ್ಯಮಂತ್ರಿಯ ಸಲಹೆಯ ಮೇರೆಗೆ ಸಚಿವರನ್ನು ನೇಮಿಸಲಾಗು ತ್ತದೆ. ಅಂದರೆ ಸಂಪುಟ ರಚನೆ, ಸಚಿವರ ಆಯ್ಕೆ, ಖಾತೆ ಹಂಚಿಕೆ ಸಂಪೂರ್ಣವಾಗಿ ಮುಖ್ಯಮಂತ್ರಿಯ ಸಂವಿಧಾನಾತ್ಮಕ ಹಕ್ಕು ಮತ್ತು ಹೊಣೆಗಾರಿಕೆ. ಆದರೆ ಕರ್ನಾಟಕದಲ್ಲಿ ನಡೆದಿರುವುದು ಇದಕ್ಕೆ ತದ್ವಿರುದ್ಧ, ಸಂವಿಧಾನ ವಿರೋಧಿ ಬೆಳವಣಿಗೆ.
-
ಓದುಗರ ಓಣಿ
ಭಾರತ ಸಂವಿಧಾನದ 164(1) ನೇ ವಿಧಿ ಅತ್ಯಂತ ಸ್ಪಷ್ಟವಾಗಿದೆ. ರಾಜ್ಯಪಾಲರು ಮುಖ್ಯಮಂತ್ರಿ ಯನ್ನು ನೇಮಿಸುತ್ತಾರೆ ಮತ್ತು ಮುಖ್ಯಮಂತ್ರಿಯ ಸಲಹೆಯ ಮೇರೆಗೆ ಸಚಿವರನ್ನು ನೇಮಿಸಲಾಗು ತ್ತದೆ. ಅಂದರೆ ಸಂಪುಟ ರಚನೆ, ಸಚಿವರ ಆಯ್ಕೆ, ಖಾತೆ ಹಂಚಿಕೆ ಸಂಪೂರ್ಣವಾಗಿ ಮುಖ್ಯಮಂತ್ರಿ ಯ ಸಂವಿಧಾನಾತ್ಮಕ ಹಕ್ಕು ಮತ್ತು ಹೊಣೆಗಾರಿಕೆ. ಆದರೆ ಕರ್ನಾಟಕದಲ್ಲಿ ನಡೆದಿರುವುದು ಇದಕ್ಕೆ ತದ್ವಿರುದ್ಧ, ಸಂವಿಧಾನ ವಿರೋಧಿ ಬೆಳವಣಿಗೆ.
ಇತ್ತೀಚೆಗೆ ಪ್ರಮಾಣ ವಚನ ಸ್ವೀಕರಿಸಿದ 19 ಶಾಸಕರ ಪಟ್ಟಿ ಮುಖ್ಯಮಂತ್ರಿಯವರ ಶಿಫಾರಸಿನಿಂದ ಬಂದಿದ್ದಲ್ಲ. ಬದಲಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಹಿಯೊಂದಿಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಲೆಟರ್ ಹೆಡ್‌ನಲ್ಲಿ ಸಿದ್ಧವಾಗಿ ದೆಹಲಿಯಿಂದ ಬಂದಿದೆ. ಈ ಕ್ರಮ ಮುಖ್ಯಮಂತ್ರಿ ಯನ್ನು ಕೇವಲ ರಬ್ಬರ್ ಸ್ಟಾಂಪ್ ಮಾಡಿದೆ.
ಪಕ್ಷದ ಹೈಕಮಾಂಡ್ ಮುಂದೆ ಜನಾದೇಶ ಪಡೆದ ನಾಯಕನನ್ನು ಕೈಗೊಂಬೆಯಾಗಿಸಿದೆ. ಸರಕಾರ ಸಂವಿಧಾನದಂತೆ ನಡೆಯಬೇಕೋ ಅಥವಾ ಪಕ್ಷದ ಕಚೇರಿಯ ಲೆಟರ್ ಹೆಡ್‌ನಂತೆ ನಡೆಯಬೇಕೋ ಎಂಬ ಪ್ರಶ್ನೆ ಈಗ ಜನರ ಮುಂದಿದೆ.
ಇದನ್ನೂ ಓದಿ: Readers Colony: ನೀಟ್ ಸುಧಾರಣೆ ನಿರೀಕ್ಷೆ
- ಎನ್ ಸದಾಶಿವ ರೆಡ್ಡಿ, ಬೆಂಗಳೂರು
ಸಿಗದ ಮಹಿಳಾ ಪ್ರಾತಿನಿಧ್ಯ
ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಕಾರಗಳು ಹಲವು ಯೋಜನೆಗಳನ್ನು ರೂಪಿಸುತ್ತವೆ. ರಾಜಕೀಯ ಪಕ್ಷಗಳು ಮಹಿಳೆಯರ ಮತ ಪಡೆಯಲು ವಿಶೇಷ ಪ್ರಯತ್ನಗಳನ್ನು ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯುವ ಪುರುಷರಿಗೆ ಮಹಿಳೆಯರು ಮತ ಬ್ಯಾಂಕ್ ತರಹ ಮಾತ್ರ ಕಾಣುತ್ತಾರೆಯೇ? ಇದಕ್ಕೆ ಪುಷ್ಟಿ ಮೊನ್ನೆ ನಡೆದ ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಒಂದೇ ಒಂದು ಸ್ಥಾನವನ್ನು ಮಹಿಳೆಯರಿಗೆ ನೀಡದಿರುವುದು. ಇದು ಸಮಾಜದ ಅರ್ಧ ಭಾಗದಷ್ಟಿರುವ ಮಹಿಳೆಯರಿಗೆ ರಾಜಕಾರಣದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬುದರ ಕಟ್ಟು ವಾಸ್ತವ. ಸರಕಾರ ರಚನೆ ಯಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವುದು ಅವರಿಗೆ ಮಾಡುವ ಉಪಕಾರವಾಗಿರದೆ ಅವರಿಗೂ ಹಕ್ಕು ನೀಡುವ ಒಂದು ಅವಕಾಶ. ಅಧಿಕಾರದ ಸ್ಥಾನಗಳಲ್ಲಿ ಮಹಿಳೆಯರಿಗೆ ಸರಿಯಾದ ಪ್ರಾತಿನಿಧ್ಯ ಸಿಕ್ಕಾಗ ಮಾತ್ರ ಮಹಿಳೆಯರ ಸಬಲೀಕರಣ ನಿಜ ಅರ್ಥದಲ್ಲಿ ಸಾಕಾರಗೊಂಡಂತೆ ಆಗುತ್ತದೆ.
- ಉದಯ ಮ ಯಂಡಿಗೇರಿ, ಧಾರವಾಡ
ಬೇನಾಮಿ ನಿವೇಶನಗಳು
ಮೈಸೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಅಭಿವೃದ್ಧಿ ಪ್ರಾಽಕಾರ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಅಭಿವೃದ್ಧಿ ಪ್ರಾಧಿಕಾರ, ಸಂಘ ಸಂಸ್ಥೆಗಳ, ಖಾಸಗಿ ಸೊಸೈಟಿಗಳ ಮತ್ತು ನೌಕರರ ಸಂಘ ಸಂಸ್ಥೆಗಳಿಂದ ಪಡೆದ ನಿವೇಶನಗಳಲ್ಲಿ, ತೆಗೆದುಕೊಂಡ ಐದು ವರ್ಷಗಳ ಒಳಗೆ ಮನೆ ಕಟ್ಟದೇ ಹೋದರೆ, ಅಂತಹ ನಿವೇಶನಗಳನ್ನು ಸರಕಾರ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸರಕಾರ ಈ ಆದೇಶ ಮಾಡಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೆ ಇದೊಂದು ಐತಿಹಾಸಿಕ ಕ್ರಮ ಆಗುತ್ತದೆ. ಇಂತಹ ನಿವೇಶನಗಳನ್ನು ಗುರ್ತಿಸಿ, ವಾಪಸ್ ಪಡೆದು ಅರ್ಹರಿಗೆ ನೀಡಿ. ಐದು ವರ್ಷ ಒಳಗೆ ಕಡ್ಡಾಯವಾಗಿ ಮನೆ ಕಟ್ಟುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು.
- ಬೂಕನಕೆರೆ ವಿಜೇಂದ್ರ, ಮೈಸೂರು