ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Readers Colony: ವಿಷ ವೃಕ್ಷಕ್ಕೆ ಚಿಕಿತ್ಸೆ ಅಗತ್ಯವಿದೆ

ಸಹಜವಾಗಿ ಅದರ ನಡೆಯು, ‘ಆಯಾ ದೇವಾನುದೇವತೆಯ ಭಕ್ತಕುಲವನ್ನು ತರವೆಂದು-ತಮವೆಂದು ವರ್ಗೀಕರಿಸುವ ಕ್ರಿಯೆ’ ಎಂಬ ಕಾಂಡವನ್ನು ಬೆಳೆಸಿತು. ಅಷ್ಟೇ ಸಹಜವಾಗಿ, ಕಾಂಡ, ಎಲೆ, ಹೂ, ಹಣ್ಣುಗಳೆಂಬ ಜನಕೋಟಿಯು, ಬಗೆಬಗೆಯ ಮೌಢ್ಯಗಳನ್ನೂ ಭಿನ್ನ(ತೆಯ) ಭಾವನೆ ಗಳನ್ನೂ ತುಂಬಿಕೊಂಡಿತು. ದಾರ್ಶನಿಕರ ತತ್ತ್ವಗಳು ಈ ಎಲ್ಲ ಹಂತಗಳಲ್ಲಿಯೂ ಗೈರು ಹಾಜರಾಗಿದ್ದು, ಪ್ರಕ್ಷಿಪ್ತ ನುಡಿಗಳೇ ವೃಕ್ಷಕ್ಕೆ ನೀರು, ಗೊಬ್ಬರಗಳಾಗಿ ಮೆರೆದವು.

Readers Colony: ವಿಷ ವೃಕ್ಷಕ್ಕೆ ಚಿಕಿತ್ಸೆ ಅಗತ್ಯವಿದೆ

-

Profile
Ashok Nayak Jul 16, 2026 10:33 AM

ಓದುಗರ ಓಣಿ

ಟಿ.ಎನ್.ವಾಸುದೇವ ಮೂರ್ತಿ ಅವರ ‘ಧರ್ಮಜಿಜ್ಞಾಸೆ’ (ವಿಶ್ವವಾಣಿ, ಜು.15) ಸಾಧಾರವಾಗಿದ್ದು, ಒಪ್ಪತಕ್ಕ ವಿಚಾರಗಳನ್ನು ಹೊಂದಿದೆ. ‘ಧರ್ಮದ ಮೂಲದ್ರವ್ಯವನ್ನು ಹೊಂದಿರುವ ವೃಕ್ಷ’ವೆಂದು ಮತಧರ್ಮವನ್ನು ಪರಿಗಣಿಸಿ ಪ್ರಸ್ತುತ ಸ್ಥಿತಿಯನ್ನು ವಿಶ್ಲೇಷಿಸುತ್ತೇನೆ. ‘ದೇವಾನುದೇವತೆಗಳನ್ನು ಸೃಷ್ಟಿಸಿ ಅವರ ಮಧ್ಯೆ ತರತಮ ಭೇದವನ್ನು ಹುಟ್ಟುಹಾಕಿದ ಕ್ರಿಯೆ’ ಎಂಬ ಬೇರು ಕಾಲದ ನೆಲದಲ್ಲಿ ಭದ್ರವಾಗಿ ಕೂತಿತು.

ಸಹಜವಾಗಿ ಅದರ ನಡೆಯು, ‘ಆಯಾ ದೇವಾನುದೇವತೆಯ ಭಕ್ತಕುಲವನ್ನು ತರವೆಂದು-ತಮವೆಂದು ವರ್ಗೀಕರಿಸುವ ಕ್ರಿಯೆ’ ಎಂಬ ಕಾಂಡವನ್ನು ಬೆಳೆಸಿತು. ಅಷ್ಟೇ ಸಹಜವಾಗಿ, ಕಾಂಡ, ಎಲೆ, ಹೂ, ಹಣ್ಣುಗಳೆಂಬ ಜನಕೋಟಿಯು, ಬಗೆಬಗೆಯ ಮೌಢ್ಯಗಳನ್ನೂ ಭಿನ್ನ(ತೆಯ) ಭಾವನೆ ಗಳನ್ನೂ ತುಂಬಿಕೊಂಡಿತು. ದಾರ್ಶನಿಕರ ತತ್ತ್ವಗಳು ಈ ಎಲ್ಲ ಹಂತಗಳಲ್ಲಿಯೂ ಗೈರು ಹಾಜರಾಗಿದ್ದು, ಪ್ರಕ್ಷಿಪ್ತ ನುಡಿಗಳೇ ವೃಕ್ಷಕ್ಕೆ ನೀರು, ಗೊಬ್ಬರಗಳಾಗಿ ಮೆರೆದವು. ಇದೆಲ್ಲದರ ಪರಿಣಾಮ, ಇಂದು ವೃಕ್ಷದ ಹೂವು, ಹಣ್ಣು, ಎಲೆಗಳು ವಿಷಪೂರಿತವಾಗುತ್ತಿವೆ. ಈ ವಿಷ(ಮ) ಸ್ಥಿತಿಯು ಸರಿಹೋಗ ಬೇಕೆಂದರೆ, ವೃಕ್ಷಕ್ಕೆ ಬೇರುಮಟ್ಟದಿಂದ ಚಿಕಿತ್ಸೆ ಆಗಬೇಕು. ದಾರ್ಶನಿಕ ನೆಂಬ ವೈದ್ಯನು ವಿಚಾರವೆಂಬ ಔಷಧವನ್ನು ಇಂದು ಬೇರಿಗೆ ಪ್ರಯೋಗಿಸಬೇಕಾಗಿದೆ.

- ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ಇದನ್ನೂ ಓದಿ: Readers Colony: ಮೋಡ ಬಿತ್ತನೆ ಮಾಡಿ

ಮೆಟೋ ಸಾಲದ ಉರುಳು

ನಾರಾಯಣ ಯಾಜಿ ಅವರ ‘ನಮ್ಮ ಮೆಟ್ರೋಗೆ ವಿವೇಚನೆರಹಿತ ಡಾಲರ್ ಸಾಲದ ಉರುಳು’ ಲೇಖನದಲ್ಲಿ ಅರ್ಥಶಾಸ್ತ್ರದ ಸಾಮಾನ್ಯ ತತ್ವವನ್ನು ಅತ್ಯಂತ ಸರಳವಾಗಿ ವಿವರಿಸಿದ್ದಾರೆ. ಅತಿಯಾದ ಅವಲಂಬನೆ ಯಾವ ಕಾಲಕ್ಕೂ ಒಳಿತಲ್ಲ ಮತ್ತು ಅದಕ್ಕೆ ಅನ್ಯ ಮಾರ್ಗದ ಹುಡುಕಾಟ ವೂ ಇರಲೇಬೇಕು ಎಂಬ ವಾಸ್ತವದ ಚಿತ್ರಣ ಮಾಡಿಸಿದೆ.

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಹುಟ್ಟಿದ ಮೆಟ್ರೋಗೆ ಸಂಪನ್ಮೂಲದ ಕೊರತೆಯೇ ಅತಿಯಾದ ಸಾಲಕ್ಕೆ ಕೊಂಡೊಯ್ದಿ ದ್ದೂ ತಿಳಿದ ವಿಷಯ. 2021ರ ಪಡೆದ 50 ಕೋಟಿ ಯುಎಸ್ ಡಾಲರ್ ಸಾಲವೇ ಇಂದು ನುಂಗಲಾ ರದ ತುತ್ತಾಗಿದೆ. ಸದ್ಯ 118 ಕೋಟಿ ರೂ. ಸಾಲದ ಕಂತು ಮರುಪಾವತಿಸಬೇಕಾಗಿದೆ. ಅಂದು ಸಾಲ ಪಡೆವಾಗ, ಆರ್ಥಿಕ ತಜ್ಞರ ಸಲಹೆ ಪಡೆದಿದ್ದರೆ ಇಂದು ಈ ರೀತಿ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬು ದನ್ನೂ ವಿವರಿಸಿದ್ದಾರೆ.

ಹೆಡ್ಜಿಂಗ್ ಪದ್ಧತಿ ಅನುಕರಿಸಿದ್ದರೆ, ನಮ್ಮ ರೂಪಾಯಿ ಮೌಲ್ಯ ಕುಸಿದರೂ, ಒಂದು ನಿರ್ದಿಷ್ಟ ಮೊತ್ತಕ್ಕೆ ಡಾಲರ್- ರೂಪಾಯಿ ಲಾಕ್ ಮಾಡಿಕೊಳ್ಳಬಹುದಿತ್ತು. ಆದರೆ ಯಾವ ನಿರ್ದೇಶನವನ್ನೂ ಪಾಲಿಸದೆ ಈಗ ಪೇಚಿಗೆ ಸಿಲುಕಿರುವುದು. ಯಾಜಿ ಅವರು ಸೂಚಿಸಿದ ಮಾರ್ಗ, ‘ಕರೆನ್ಸಿ ಸ್ವಾಪ್ ಒಪ್ಪಂದ’. ಅದರ ಜತೆ ‘ಮಸಾಲಾ ಬಾಂಡ್’ ಪಡೆಯುವುದು, ಅದರಂತೆ ತೀರಿಸುತ್ತ ಸಾಗುವುದು. ಎಲ್ಲಿಯ ತನಕ ನಮ್ಮ ಆಡಳಿತ ನಡೆಸುವವರು ತಮ್ಮ ಅಭಿಪ್ರಾಯ ಬದಲಿಸುವುದಿಲ್ಲವೊ, ಅಲ್ಲಿಯ ತನಕ ಯಾವ ಸಲಹೆ- ಸೂಚನೆಗಳೂ ಕೆಲಸಕ್ಕೇ ಬಾರವು.

- ಶಂಕರನಾರಾಯಣ ಭಟ, ಹೊನ್ನಾವರ