Readers Colony: ಸಂವಿಧಾನದ ಜತೆ ಚೆಲ್ಲಾಟ
ರಾಜೇಂದ್ರ ಪ್ರಸಾದ್, ಹರೇಂದ್ರ ಕುಮಾರ್ ಮುಖರ್ಜಿ, ಬೆನೆಗಲ್ ನರಸಿಂಗ ರಾವ್, ಅಂಬೇಡ್ಕರ್ ಮೊದ ಲಾದ ಮಹಾಮಹಿಮರು ರಚಿಸಿದ ನಮ್ಮ ಸಂವಿಧಾನವನ್ನು, ತಮ್ಮ ಸ್ವಾರ್ಥಕ್ಕಾಗಿ ಮನ ಬಂದಂತೆ ಬದಲಾಯಿಸಿ, ತುರ್ತು ಪರಿಸ್ಥಿತಿಯನ್ನು ಹೇರಿದ ಇಂದಿರಾರ ಕ್ರಮವನ್ನು ಮತ್ತು ಅದರ ಕರಾಳ ಪರಿಣಾಮವನ್ನು ಅತ್ಯಂತ ವಿವರವಾಗಿ ಪ್ರಸ್ತುತಪಡಿಸಿದ್ದಾರೆ ಗುರುರಾಜ ಗಂಟಿಹೊಳೆ (ಜುಲೈ 3). ಈ ದೇಶ ಮತ್ತು ಸಂವಿಧಾನವನ್ನು ತಮ್ಮ ಕುಟುಂಬದ ಆಸ್ತಿಯೇನೋ ಎಂಬಂತೆ ಧಾರ್ಷ್ಟ್ಯದಿಂದ ಅಹಂಕಾರದಿಂದ ನಡೆಸಿಕೊಂಡಿದ್ದರು ಇಂದಿರಾ ಗಾಂಧಿ


ಓದುಗರ ಓಣಿ
ರಾಜೇಂದ್ರ ಪ್ರಸಾದ್, ಹರೇಂದ್ರ ಕುಮಾರ್ ಮುಖರ್ಜಿ, ಬೆನೆಗಲ್ ನರಸಿಂಗ ರಾವ್, ಅಂಬೇಡ್ಕರ್ ಮೊದಲಾದ ಮಹಾಮಹಿಮರು ರಚಿಸಿದ ನಮ್ಮ ಸಂವಿಧಾನವನ್ನು, ತಮ್ಮ ಸ್ವಾರ್ಥಕ್ಕಾಗಿ ಮನ ಬಂದಂತೆ ಬದಲಾಯಿಸಿ, ತುರ್ತು ಪರಿಸ್ಥಿತಿಯನ್ನು ಹೇರಿದ ಇಂದಿರಾರ ಕ್ರಮವನ್ನು ಮತ್ತು ಅದರ ಕರಾಳ ಪರಿಣಾಮವನ್ನು ಅತ್ಯಂತ ವಿವರವಾಗಿ ಪ್ರಸ್ತುತಪಡಿಸಿದ್ದಾರೆ ಗುರುರಾಜ ಗಂಟಿಹೊಳೆ (ಜುಲೈ 3). ಈ ದೇಶ ಮತ್ತು ಸಂವಿಧಾನವನ್ನು ತಮ್ಮ ಕುಟುಂಬದ ಆಸ್ತಿಯೇನೋ ಎಂಬಂತೆ ಧಾರ್ಷ್ಟ್ಯದಿಂದ ಅಹಂಕಾರದಿಂದ ನಡೆಸಿಕೊಂಡಿದ್ದರು ಇಂದಿರಾ ಗಾಂಧಿ. ಆದರೆ, ನರೇಂದ್ರ ಮೋದಿಯವರೇ ಸಂವಿಧಾನವನ್ನು ಬದಲಾಯಿಸಲು ಹೊರಟಿದ್ದಾರೆ ಎಂದು ಸುಳ್ಳೇ ಆರೋಪ ಹೊರಿಸಿ, ಅದೇ ಕಾಂಗ್ರೆಸ್‌ನ ರಾಹುಲ್ ಗಾಂಧಿಯವರು ಸಂವಿಧಾನದ ಪ್ರತಿಯನ್ನು ತೋರಿಸುತ್ತಾ ಪ್ರಲಾಪಿಸುತ್ತಿರುವುದು ವಿಪರ್ಯಾಸ!
- ಆಮೇಯ್ ಚಂದ್ರಶೇಖರ್, ಬೆಂಗಳೂರು
ಸಕಾಲಿಕ ಲೇಖನ
ಶಶಿಧರ ಹಾಲಾಡಿ ಅವರ ‘ಶಶಾಂಕಣ’ ಅಂಕಣ ಬರಹವು (ಜುಲೈ ೪) ಸಕಾಲಿಕವಾಗಿದ್ದು ಉಪಯುಕ್ತ ಸಲಹೆ-ಸೂಚನೆಗಳನ್ನು ಒಳಗೊಂಡಿದೆ. ವೈದ್ಯವಿಜ್ಞಾನವು ಭೌತ ವಿಜ್ಞಾನದಂತೆ ಒಂದು ಪರಿಪೂರ್ಣ ವಿಜ್ಞಾನವಲ್ಲ. ಅದು ಪರೀಕ್ಷೆಗೆ ಒಳಪಡಿಸಲು ಅಥವಾ ನಿರಾಕರಿಸಲು ಸಾಧ್ಯವಾಗದ ಸಿದ್ಧಾಂತ. ಧೂಮಪಾನವು ಕ್ಯಾನ್ಸರ್ ಮುಂತಾದ ರೋಗಗಳಿಗೆ ಕಾರಣ ಎಂದು ವೈದ್ಯ ವಿಜ್ಞಾನವು ಹೇಳುತ್ತದೆ. ಆದರೆ ಕೆಲ ಧೂಮ ಪಾನಿಗಳು 80 ವರ್ಷದವರೆಗೂ ಗಟ್ಟಿಯಾಗಿ ಇರುವು ದನ್ನು ಸಾಕಷ್ಟು ಕಡೆ ಕಾಣಬಹುದು.
ಇದನ್ನೂ ಓದಿ: R T Vittalmurthy Column: ಮೋದಿಯವರಿಗೆ ತಲುಪಿದೆಯಾ ಸೀಕ್ರೆಟ್ ರಿಪೋರ್ಟು ?
ಯಾವುದೇ ದುಶ್ಚಟವಿಲ್ಲದ ತರುಣರು ಕಾಯಿಲೆ ಅಥವಾ ಹೃದಯಾಘಾತದಿಂದ ಸಾಯುವುದು ಸಹ ಅಪರೂಪವೇನಲ್ಲ. ಆದಾಗ್ಯೂ ಉತ್ತಮ ಜಿವನಶೈಲಿಯ ಆಯ್ಕೆಯು ನಮ್ಮನ್ನು ಬಹುತೇಕ ಕಾಪಾಡುತ್ತದೆ. ಉಳಿದಂತೆ ದೈವೇಚ್ಛೆ!
- ಲಕ್ಷ್ಮಣ್ ಗೊರ್ಲಕಟ್ಟೆ, ಮೈಸೂರು
ಅಭಾವ ಎಂಬ ಭ್ರಮೆ
ಸಮಯದ ಅಭಾವವು ಕೇವಲ ಒಂದು ಕಲ್ಪನೆ ಎಂಬುದನ್ನು ನವೀನ್ ಸಾಗರ್ ಅವರ ‘ಸಾಲು ತಿಲ್ಲವೇ.. ಸಾಲುತಿಲ್ಲವೇ..’ ಅಂಕಣಬರಹವು (ಜುಲೈ ೫) ಮನಮುಟ್ಟುವಂತೆ ವಿವರಿಸುತ್ತದೆ. ಅ ಚ್ಠಿoqs ಞZ eZo ಠಿಜಿಞಛಿ ಟ್ಟ ಛಿqಛ್ಟಿqsಠಿeಜ್ಞಿಜ ಎಂಬ ನುಡಿಗಟ್ಟಿನಂತೆ, ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಒಂದು ಕಲೆಯಾಗಿದ್ದು, ಇದರ ಮೂಲಕ ಜೀವನದಲ್ಲಿ ಹೆಚ್ಚು ಸಾಧಿಸಬಹುದು. ವಾಸ್ತವವಾಗಿ ಸಮಯದ ಕೊರತೆಗಿಂತ ಹೆಚ್ಚಾಗಿ ಇದು ನಮ್ಮ ಮನಸ್ಸಿನ ಒಂದು ಸ್ಥಿತಿ. ಡಿಜಿಟಲ್ ಯುಗದಲ್ಲಿ ಸಮಯ ಸಾಲದು ಎಂಬ ಹಳಹಳಿಕೆ ಸಾಮಾನ್ಯವಾಗಿದ್ದರೂ, ನಾವು ಯಾವುದಕ್ಕೆ ಪ್ರಾಮುಖ್ಯ ನೀಡುತ್ತೇವೆಯೋ ಅದಕ್ಕೆ ಸಮಯವನ್ನು ಹುಡುಕಿಯೇ ಹುಡುಕು ತ್ತೇವೆ ಎಂಬ ಸತ್ಯವನ್ನು ಈ ಲೇಖನವು ಎತ್ತಿ ತೋರಿಸುತ್ತದೆ.
ಅಂತಿಮವಾಗಿ, ಸಮಯದ ಕೊರತೆಯು ಹೆಚ್ಚಾಗಿ ನಮ್ಮ ಮನಸ್ಸಿನ ಸೃಷ್ಟಿ ಎಂಬುದನ್ನು ಈ ಬರಹ ಸ್ಪಷ್ಟಪಡಿಸುತ್ತದೆ. ನಮ್ಮ ಸಮಯವನ್ನು ಹೆಚ್ಚು ಜಾಗೃತವಾಗಿ ನಿರ್ವಹಿಸಲು ಕಲಿತರೆ, ‘ಸಾಲು ತಿಲ್ಲವೇ’ ಎಂಬ ಅಳಲನ್ನು ನಿಲ್ಲಿಸಿ, ಜೀವನವನ್ನು ಹೆಚ್ಚು ಅರ್ಥಪೂರ್ಣವಾಗಿ ಅನುಭವಿಸ ಬಹುದು. ಇದು ಕೇವಲ ಸಮಯವನ್ನು ಉಳಿಸುವುದರ ಬಗ್ಗೆ ಅಲ್ಲ, ಬದಲಿಗೆ ಜೀವನವನ್ನು ಸಂಪೂರ್ಣವಾಗಿ ಬದುಕುವುದರ ಬಗ್ಗೆ.
- ಹೊಸ್ಮನೆ ಮುತ್ತು, ಬೆಂಗಳೂರು
ಎಚ್ಚರಗೊಳಿಸುವ ಬರಹ
ಕುಂಟುನೆಪ ಹೇಳುವವರಿಗೆ ಇಂಜೆಕ್ಷನ್ ರೀತಿಯಲ್ಲಿದೆ ‘ಪದ ಸಾಗರ’ ಅಂಕಣ (ಜುಲೈ ೫). ಇದರಲ್ಲಿ ಉಲ್ಲೇಖಿಸಿರುವಂತೆ, ಒಂದು ಪತ್ರಿಕೆಯನ್ನು ನಡೆಸುವುದೇ ದೊಡ್ಡ ಸಾಹಸ. ಹಾಗಿರುವಾಗ ಮತ್ತೆರಡು ಪತ್ರಿಕೆಗಳು, ಕ್ಲಬ್ ಹೌಸ್, ಡಿಜಿಟಲ್ ಮಾಧ್ಯಮಗಳನ್ನು ನಿಭಾಯಿಸುತ್ತಿರುವ ವಿಶ್ವೇಶ್ವರ ಭಟ್ಟರ ಕ್ರಿಯಾಶೀಲತೆಗೆ, ದಣಿವರಿಯದ ಚಟುವಟಿಕೆಗೆ ನನ್ನದೊಂದು ನಮನ. ಇಂಥವರು ನಮ್ಮ ನಡುವೆ ಸಾಕಷ್ಟಿದ್ದಾರೆ, ನಾವು ಗಮನಿಸಬೇಕಷ್ಟೇ. ಒಟ್ಟಾರೆಯಾಗಿ ಈ ಬರಹ ನಮ್ಮನ್ನು ಎಚ್ಚರ ಗೊಳಿಸುವಂತಿದೆ.
- ಬಿ.ಎಸ್. ಮೋಹನ್ ಕುಮಾರ್, ಬೆಂಗಳೂರು