ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಾದು ನೋಡೋಣ...

ಕೇವಲ ಒಂದು ಮತದಿಂದ ಅಂಗೀಕಾರಗೊಂಡ One Big Beautiful Bill ಹೆಸರಿನ ಅಮೆರಿಕದ ವಿಧೇಯಕವು ಭಾರತೀಯರ ಪಾಲಿಗೆ ದೊಡ್ಡ ಹೊಡೆತವೇ ಆಗಿದೆ. ಇನ್ನು ಮುಂದೆ, ಭಾರತೀಯರು ಅಮೆರಿಕದಲ್ಲಿ ದುಡಿದ ಹಣವನ್ನು ಭಾರತಕ್ಕೆ ಕಳುಹಿಸಿದರೆ ಶೇ.3.5ರಷ್ಟು ತೆರಿಗೆ ಅನ್ವಯವಾ ಗುತ್ತದೆ. ಇದು ಎಚ್೧ ಬಿ, ಎಲ್ ೧, ಎ- ೧ ಗ್ರೀನ್ ಕಾರ್ಡ್ ಹೊಂದಿದವರಿಗೂ ಅನ್ವಯ.

ಕಾದು ನೋಡೋಣ...

Profile Ashok Nayak Jul 5, 2025 8:09 PM

ಓದುಗರ ಓಣಿ

ನಾವೆಲ್ಲರೂ ‘ಪ್ರತಿಭಾ ಪಲಾಯನ’ದ ಕುರಿತಾದ ಮಾತುಗಳನ್ನು ಲಾಗಾಯ್ತಿನಿಂದ ಕೇಳುತ್ತಲೇ ಬಂದಿದ್ದೇವೆ. ಅವುಗಳಲ್ಲಿ ಹೆಚ್ಚಿನವು, ನಮ್ಮ ದೇಶದ ಪ್ರತಿಭೆಗಳು ಅಮೆರಿಕಕ್ಕೆ ತೆರಳಿ, ಅಲ್ಲೇ ಶಿಕ್ಷಣ ವನ್ನು ಮುಂದುವರಿಸಿ ತರುವಾಯ ಉದ್ಯೋಗವನ್ನು ಕಂಡುಕೊಂಡು, ಅಮೆರಿಕದವರಾಗಿಯೇ ಇದ್ದುಬಿಡುವುದರ ಕುರಿತಾದದ್ದು. ಅಮೆರಿಕ ಎಂದರೆ ಸಂಪದ್ಭರಿತ ನಾಡು ಎಂಬ ಕಲ್ಪನೆಯಿಂದಲೇ ಇಂಥವರು ಹೆಚ್ಚು ಆಕರ್ಷಿತರಾಗುವುದು. ಈಗಿತ್ತಲಂತೂ ಬಹುತೇಕರು ತಮ್ಮ ಮಗ, ಮಗಳು, ಅಳಿಯ, ಸಂಬಂಧಿಕರು ಅಮೆರಿಕದಲ್ಲೇ ಬಹಳ ವರ್ಷಗಳಿಂದ ಇದ್ದಾರೆ ಎಂದು ಹೇಳುವುದನ್ನು ಕೇಳುತ್ತೇವೆ. ಇಂಥವರಿಗೆಲ್ಲ ಅಮೆರಿಕ ಅಧ್ಯಕ್ಷರು ಶಾಕ್ ಕೊಟ್ಟಂತಿದೆ!

ಕೇವಲ ಒಂದು ಮತದಿಂದ ಅಂಗೀಕಾರಗೊಂಡ One Big Beautiful Bill ಹೆಸರಿನ ಅಮೆರಿಕದ ವಿಧೇಯಕವು ಭಾರತೀಯರ ಪಾಲಿಗೆ ದೊಡ್ಡ ಹೊಡೆತವೇ ಆಗಿದೆ. ಇನ್ನು ಮುಂದೆ, ಭಾರತೀಯರು ಅಮೆರಿಕದಲ್ಲಿ ದುಡಿದ ಹಣವನ್ನು ಭಾರತಕ್ಕೆ ಕಳುಹಿಸಿದರೆ ಶೇ.3.5ರಷ್ಟು ತೆರಿಗೆ ಅನ್ವಯವಾ ಗುತ್ತದೆ. ಇದು ಎಚ್೧ ಬಿ, ಎಲ್ ೧, ಎ- ೧ ಗ್ರೀನ್ ಕಾರ್ಡ್ ಹೊಂದಿದವರಿಗೂ ಅನ್ವಯ.

ಇದನ್ನೂ ಓದಿ: Roopa Gururaj Column: ನಳ ನೀಲರ ಸ್ಪರ್ಶದಿಂದ ತೇಲಿದ ರಾಮಸೇತುವಿನ ಕಲ್ಲುಗಳು

ಇಷ್ಟೇ ಅಲ್ಲ, ಇನ್ನು ಮುಂದೆ ಹೆಂಡತಿ-ಮಕ್ಕಳನ್ನಷ್ಟೇ ಅಮೆರಿಕಕ್ಕೆ ಕರೆತರಬಹುದು, ಕುಟುಂಬದ ಇತರೆ ಸದಸ್ಯರು ಗಳಿಗೆ ಅವಕಾಶವೇ ಇಲ್ಲ. ಇದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ಟ್ರಂಪ್ ಅವರು ಎರಡನೇ ಅವಽಗೆ ಅಮೆರಿಕದ ಅಧ್ಯಕ್ಷ ಪದವಿಗೆ ಏರಿದಾಗಿನಿಂದ ಏನೇನೋ ಹೊಸತನ್ನು ತರಲು ಯತ್ನಿಸುತ್ತಿದ್ದಾರೆ.

ಭಾರತಕ್ಕೆ ಅನನುಕೂಲವಾಗಬೇಕೆಂಬುದೇ ಅವುಗಳ ಹಿಂದಿರುವ ಉದ್ದೇಶ ಎಂಬುದೂ ಸ್ಪಷ್ಟ. ಅದ್ಯಾಕೋ ಗೊತ್ತಿಲ್ಲ, ಭಾರತದ ಇಂದಿನ ಬೆಳವಣಿಗೆ, ಅಭಿವೃದ್ಧಿ, ಆಡಳಿತ ವೈಖರಿ ಮುಂತಾದ ವನ್ನು ಟ್ರಂಪ್ ಅವರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಅಷ್ಟೇ ಅಲ್ಲ, ಅವರ ಮಾತುಗಳಿಗೂ ಭಾರತ ಅಷ್ಟೊಂದು ಮಹತ್ವ ಕೊಡುತ್ತಿಲ್ಲ. ಅವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅಥವಾ ಸ್ಥಾನ ಕಾಪಾಡಿ ಕೊಳ್ಳಲು ಇನ್ನಿಲ್ಲದ ಹೇಳಿಕೆ, ಸಲಹೆಗಳನ್ನು ನೀಡುತ್ತಿದ್ದರೂ ಅವ್ಯಾವುದಕ್ಕೂ ಭಾರತ ಅಷ್ಟೊಂದು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಇದು ಟ್ರಂಪ್ ಕೆರಳುವುದಕ್ಕೆ ಕಾರಣವಾಗಿದ್ದಿರಲೂಬಹುದು. ಹೀಗಾಗಿ, ಹೇಗಾದರೂ ಮಾಡಿ ಭಾರತವನ್ನು ಹಣಿಯಬೇಕು ಎಂಬ ಒಂದಶಂಶದ ಕಾರ್ಯಕ್ರಮವನ್ನು ಅವರು ಇಟ್ಟುಕೊಂಡಂತೆ ಕಾಣುತ್ತದೆ. ಇದಕ್ಕಾಗಿ ಅವರು ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ ಎಂಬುದು ನಿರ್ವಿ ವಾದ. ಜತೆಗೆ, ತಮ್ಮ ದೇಶದ ಹಣವು ಸಾಧ್ಯವಾದಷ್ಟರ ಮಟ್ಟಿಗೆ ತಮ್ಮಲ್ಲೇ ಉಳಿದು ದೇಶದ ಪ್ರಗತಿಗೆ ಸಹಾಯವಾಗಲಿ ಎಂಬ ಧೋರಣೆ ಇದ್ದಿರಲೂಬಹುದು ಹಾಗೂ ತಮ್ಮ ಹಣವು ಬೇರೆಯವರ ಅನುಕೂಲಕ್ಕೆ ಏಕೆ ವಿನಿಯೋಗವಾಗಬೇಕು? ಎಂಬ ಸಣ್ಣತನವೂ ಅಲ್ಲಿ ಅಡಗಿರಬಹುದು.

ಒಟ್ಟಿನಲ್ಲಿ, ಟ್ರಂಪ್ ಅವರ ಈಗಿನ ಅವತಾರವು ಭಾರತಕ್ಕೆ ಎಂತೆಂಥ ಕಷ್ಟಗಳನ್ನು ತಂದೊಡ್ಡೀತು ಎಂಬುದನ್ನು ಊಹಿಸುವುದೂ ಕಷ್ಟ. ಆದರೆ, ಅಂಥ ಎಲ್ಲ ಸವಾಲುಗಳನ್ನೂ ಚಾಣಾಕ್ಷತೆಯಿಂದ ನಿಭಾಯಿ ಸಲು ಭಾರತವು ಶಕ್ಯವಾಗಿದೆ ಎಂಬುದನ್ನೂ ಮರೆಯಬಾರದು. ಈ ಹಿಂದೆಯೂ ಟ್ರಂಪ್ ಹಲವು ಪ್ರಯೋಗಗಳನ್ನು ಮಾಡಿ ಸೋತಿದ್ದಾರೆ; ಈಗ ಈ ಮಸೂದೆಯನ್ನು ಭಾರತವು ಅದೆಷ್ಟು ಸಕ್ಷಮವಾಗಿ ಎದುರಿಸೀತು ಎಂಬುದನ್ನು ಕಾದುನೋಡೋಣ...

- ಶಂಕರನಾರಾಯಣ ಭಟ್, ಮಾಡಗೇರಿ