ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಓದುಗರ ಓಣಿ: ನೆಲ ಡೊಂಕು ಅಂದರಂತೆ!

ನಾವು ಮೊದಲೆರಡು ಪಂದ್ಯಗಳಿಗೆ ಬ್ಯಾಟಿಂಗ್ ಪಿಚ್ ಸಿದ್ಧಪಡಿಸಲು ಕೇಳಿದ್ದೆವು, ಆದರೆ ಬ್ಯಾಟಿಂಗ್‌ಗೆ ಸವಾಲೊಡ್ಡುವಂಥ ಪಿಚ್ ಸಿದ್ಧಪಡಿಸಿದ್ದಾರೆ. ಹೀಗಾಗಿ ತವರಿನಂಗಳದ ಲಾಭ ನಮಗೆ ಸಿಗಲಿಲ್ಲ’ ಎಂದಿದ್ದಾರೆ ಆರ್ ಸಿಬಿ ತಂಡದ ಮೆಂಟರ್ ದಿನೇಶ್ ಕಾರ್ತಿಕ್. ಇದು, ‘ಕುಣಿಯೋಕೆ ಬರದವರು ನೆಲ ಡೊಂಕು ಅಂದರಂತೆ’ ಎಂಬ ಮಾತನ್ನು ನೆನಪಿಸುತ್ತದೆ.

ಓದುಗರ ಓಣಿ: ನೆಲ ಡೊಂಕು ಅಂದರಂತೆ!

Profile Ashok Nayak Apr 14, 2025 1:35 PM

ನಾವು ಮೊದಲೆರಡು ಪಂದ್ಯಗಳಿಗೆ ಬ್ಯಾಟಿಂಗ್ ಪಿಚ್ ಸಿದ್ಧಪಡಿಸಲು ಕೇಳಿದ್ದೆವು, ಆದರೆ ಬ್ಯಾಟಿಂಗ್‌ಗೆ ಸವಾಲೊಡ್ಡುವಂಥ ಪಿಚ್ ಸಿದ್ಧಪಡಿಸಿದ್ದಾರೆ. ಹೀಗಾಗಿ ತವರಿನಂಗಳದ ಲಾಭ ನಮಗೆ ಸಿಗಲಿಲ್ಲ’ ಎಂದಿದ್ದಾರೆ ಆರ್ ಸಿಬಿ ತಂಡದ ಮೆಂಟರ್ ದಿನೇಶ್ ಕಾರ್ತಿಕ್. ಇದು, ‘ಕುಣಿಯೋಕೆ ಬರದವರು ನೆಲ ಡೊಂಕು ಅಂದರಂತೆ’ ಎಂಬ ಮಾತನ್ನು ನೆನಪಿಸುತ್ತದೆ. ಆರ್‌ಸಿಬಿ ತಂಡವು ತವರಿನಲ್ಲಿ ಗುಜರಾತ್ ಮತ್ತು ಡೆಲ್ಲಿ ತಂಡಗಳ ಜತೆಗೆ ಆಡಿದ 2 ಪಂದ್ಯಗಳಲ್ಲಿ ಸೋತಿದೆ. ಅದ್ಭುತವಾಗಿ ಆಡಿ ಜಯಗಳಿಸಿದ ಆ ಎರಡು ತಂಡಗಳಿಗೆ ಪ್ರತ್ಯೇಕ ಪಿಚ್ ಸಿದ್ಧಪಡಿಸಿರಲಿಲ್ಲ. ಅದರಲ್ಲೇ ಅವು ಆಡಿ ಗೆದ್ದಿರುವಾಗ ಆರ್‌ಸಿಬಿ ತಂಡಕ್ಕೆ ಆಗಲಿಲ್ಲವೇಕೆ? ಅದರಲ್ಲೂ, ಡೆಲ್ಲಿ ತಂಡದ ಆಟಗಾರ ನಮ್ಮ ಕನ್ನಡಿಗ ಕೆ.ಎಲ್.ರಾಹುಲ್ ಔಟಾಗದೆ 93 ರನ್ ಗಳಿಸಿದ್ದು ಗಮನಾರ್ಹ. ಹಾಗಾಗಿ ದಿನೇಶ್ ಕಾರ್ತಿಕ್ ಹೀಗೆ ಹೇಳಿಕೆ ನೀಡಿದ್ದು ತರವಲ್ಲ. ‘ಆಟವೆಂದರೆ ಸೋಲು ಮತ್ತು ಗೆಲುವು ಇರುವಂಥದ್ದೇ. ನಮ್ಮ ತಂಡ ಚೆನ್ನಾಗಿ ಆಡಲಿಲ್ಲ, ಮುಂದಿನ ಪಂದ್ಯಗಳಲ್ಲಿ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಗೆಲ್ಲುತ್ತೇವೆ’ ಎಂದು ಹೇಳಿದ್ದರೆ ಅವರ ಕುರಿತಾದ ಗೌರವ ಹೆಚ್ಚುತ್ತಿತ್ತು.

ಇದನ್ನೂ ಓದಿ: Cricket in Chikkaballapur: ಬಿಸಿಸಿ ವತಿಯಿಂದ ಬೇಸಿಗೆ ಕ್ರಿಕೆಟ್ ಪಂದ್ಯಾವಳಿಗಳು

- ಪತ್ತಂಗಿ ಎಸ್.ಮುರಳಿ, ಬೆಂಗಳೂರು

ಅಣ್ಣಾಮಲೈ

ಮಾದರಿಯಾಗಲಿ ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯದೆ ಸ್ವಂತಿಕೆ ಉಳಿಸಿಕೊಂಡ ಅಣ್ಣಾ ಮಲೈ, ಇಲಾಖೆಯ ನೀತಿ ನಿಯಮಗಳಿಗೆ ಅನುಸಾರವಾಗಿ ಒಬ್ಬ ಅಧಿಕಾರಿಯಾಗಿ ಕೆಲಸ ಮಾಡಿದ ವರು. ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆಯಿಂದ ಹಗಲಿರುಳೂ ದುಡಿದು ಜನಮೆಚ್ಚುಗೆ ಗಳಿಸಿದವರು, ಅಧಿಕಾರಿಗಳಿಗೆ ಒಂದು ಮಾದರಿಯಾದವರು. ಇಂದಿನ ರಾಜಕೀಯದಲ್ಲಿನ ಅಧಿಕಾರದಾಹ, ಲಂಚ ಇವುಗಳನ್ನು ನಿಯಂತ್ರಿಸಬೇಕು, ಆಡಳಿತವು ಪ್ರಜಾಪ್ರಭುತ್ವದ ಆಶಯಕ್ಕೆ ಅನುಗುಣವಾಗಿ ರಬೇಕೆಂಬ ಉದ್ದೇಶದಿಂದ ರಾಜಕೀಯಕ್ಕೆ ಧುಮುಕಿದವರು. ತಮಿಳುನಾಡಿನಲ್ಲಿ ಅಸ್ತಿತ್ವವೇ ಇಲ್ಲದ ಬಿಜೆಪಿಯು ಅಲ್ಲಿ ಬೆಳೆಯಲು ಭದ್ರಬುನಾದಿ ಹಾಕಿದವರು. ಕೆಲ ಕಾಲದಲ್ಲೇ ಅಲ್ಲಿನ ಜನರ ಮನ ಗೆದ್ದು ರಾಜಕೀಯ ವಲಯದಲ್ಲಿ ಮುಂಚೂಣಿಯಲ್ಲಿ ಮಿಂಚಿದವರು. ಇಷ್ಟಾಗಿಯೂ ‘ನಾನೇ ದೊಡ್ಡವ’ ಎಂಬ ಅಹಂ ಅನ್ನು ಅವರು ಬೆಳೆಸಿಕೊಳ್ಳಲಿಲ್ಲ.

ಆದರೀಗ, ತಮಿಳುನಾಡಿನಲ್ಲಿ ಎಐಎಡಿಎಂಕೆ ಜತೆಗಿನ ಮೈತ್ರಿಯು ಅನಿವಾರ್ಯವಾಗಿರುವುದನ್ನು ಅವರು ಅರ್ಥ ಮಾಡಿಕೊಂಡು, ಪಕ್ಷದ ಹಿತದೃಷ್ಟಿಯಿಂದ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ್ದು ಒಂದು ಅಪರೂಪದ ಪ್ರಸಂಗ. ತಮ್ಮಿಂದಲೇ ಪಕ್ಷ ಎಂಬ ಭ್ರಮೆ ಇವರಿಗಿಲ್ಲ ಎಂಬುದಕ್ಕೆ ಇದು ಸಾಕ್ಷಿ. ದೇಶದ ಇತರೆಡೆಗಳ ರಾಜಕಾರಣಿಗಳಂತೆ, ಸ್ಥಾನ/ಅಧಿಕಾರ ಸಿಗದಿದ್ದಾಗ ಇನ್ನೊಂದು ಪಕ್ಷ ಸ್ಥಾಪಿಸಿ ಅಧಿಕಾರಕ್ಕೆ ಬರಲು ತವಕಿಸುವ ಅವಕಾಶವಾದಿಯಾಗಲಿಲ್ಲ ಅಣ್ಣಾಮಲೈ. ಅವರ ಸೇವೆ-ಸಾಧನೆ-ತ್ಯಾಗವನ್ನು ಮನದುಂಬಿ ಹೊಗಳಿರುವ ಹೈಕಮಾಂಡ್, ಅವರಿಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಕೊಟ್ಟು ರಾಷ್ಟ್ರದ ಪ್ರಮುಖ ರಾಜಕಾರಣಿಯಾಗಿ ಮಿಂಚಲು ವೇದಿಕೆ ಕಲ್ಪಿಸಲಿ ಎನ್ನುವುದೇ ಸಹೃದಯಿಗಳ ನಿರೀಕ್ಷೆ ಮತ್ತು ಆಶಯ.

- ಸತ್ಯಬೋಧ, ಬೆಂಗಳೂರು