ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Readers Colony: ಲೇಖನ ಚೆನ್ನಾಗಿದೆ

ಗೋಪಾಡಿ ಶ್ರೀನಿವಾಸ ರಾವ್ ಅವರ ಕುರಿತಾಗಿ ಕೇಶವ ಪ್ರಸಾದ್ ಅವರು ಬರೆದ ಪರಿಚಯಾತ್ಮಕ ಲೇಖನ (ಡಿ.12) ಚೆನ್ನಾಗಿ ಮೂಡಿಬಂದಿದೆ. ನಮ್ಮ ಕರ್ನಾಟಕದ ಹೋಟೆಲ್ ಉದ್ಯಮವು ಇಡೀ ಜಗತ್ತನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಉಡುಪಿ ಹೋಟೆಲ್, ಅಡಿಗಾಸ್, ಮಯ್ಯಾ, ಕಾಮತ್, ಎಂಟಿಆರ್, ಶಾನಭಾಗ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

Readers Colony: ಲೇಖನ ಚೆನ್ನಾಗಿದೆ

-

Ashok Nayak
Ashok Nayak Dec 13, 2025 10:28 AM

ಗೋಪಾಡಿ ಶ್ರೀನಿವಾಸ ರಾವ್ ಅವರ ಕುರಿತಾಗಿ ಕೇಶವ ಪ್ರಸಾದ್ ಅವರು ಬರೆದ ಪರಿಚಯಾತ್ಮಕ ಲೇಖನ (ಡಿ.12) ಚೆನ್ನಾಗಿ ಮೂಡಿ ಬಂದಿದೆ. ನಮ್ಮ ಕರ್ನಾಟಕದ ಹೋಟೆಲ್ ಉದ್ಯಮವು ಇಡೀ ಜಗತ್ತನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಉಡುಪಿ ಹೋಟೆಲ್, ಅಡಿಗಾಸ್, ಮಯ್ಯಾ, ಕಾಮತ್, ಎಂಟಿಆರ್, ಶಾನಭಾಗ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಉದ್ಯಮಿಗಳ ಸಾಲಿಗೆ ಗೋಪಾಡಿ ಶ್ರೀನಿವಾಸ ರಾವ್ ಅವರು ಕೂಡ ಸೇರಿರುವುದು ಹೆಮ್ಮೆಯ ಸಂಗತಿ. ಸ್ವಚ್ಛತೆ, ಸಮಯ ಪರಿಪಾಲನೆಗೆ ಅವರು ನೀಡುವ ಆದ್ಯತೆಯು ಶ್ಲಾಘನೀಯ. ಇವರ ಉದ್ಯಮ ಸಾಮ್ರಾಜ್ಯವು ಕರ್ನಾ ಟಕದ ಉಳಿದ ಭಾಗಗಳಿಗೆ ಮಾತ್ರವಲ್ಲದೆ, ದೇಶ-ವಿದೇಶಗಳಿಗೆ ಹಬ್ಬಲಿ ಅಂತ ಹಾರೈಸುವೆ. ಉತ್ತಮ ಲೇಖನವನ್ನು ಪ್ರಸ್ತುತಪಡಿಸಿದ್ದಕ್ಕೆ ಅಭಿನಂದನೆಗಳು.

- ನಾರಾಯಣ ಕಡಿವಾಳ್, ಬೆಂಗಳೂರು

ಮಿಷಲಿನ್ ರೇಟಿಂಗ್

ರೆಸ್ಟೋರೆಂಟ್‌ಗಳ ಕಾರ್ಯದಕ್ಷತೆಯನ್ನು ಪ್ರಾಮಾಣಿಕವಾಗಿ ಪರಾಮರ್ಶಿಸಿ ರೇಟಿಂಗ್ ನೀಡುವ ಮಿಷಲಿನ್ ಕಂಪನಿಯ ಬಗ್ಗೆ ಶಿಶಿರ್ ಹೆಗಡೆಯವರು ‘ಶಿಶಿರಕಾಲ’ ಅಂಕಣದಲ್ಲಿ (ಡಿ.೧೨) ಒಳ್ಳೆಯ ಮಾಹಿತಿ ನೀಡಿದ್ದಾರೆ. ಮಿಷಲಿನ್ ಕಂಪನಿಯು ಭಾರತದಲ್ಲಿ ಟೈರುಗಳನ್ನು ಯಥೇಚ್ಛವಾಗಿ ಮಾರಾಟ ಮಾಡುತ್ತಿದ್ದರೂ, ರೆಸ್ಟೋರೆಂಟ್'ಗಳ ರೇಟಿಂಗ್ ವ್ಯವಸ್ಥೆಯನ್ನು ಇನ್ನೂ ಇಲ್ಲಿ ತರದಿರು ವುದಕ್ಕೆ ‘ಪ್ರಾಮಾಣಿಕ ಇನ್ಸ್‌ಪೆಕ್ಟರ್ ಸಿಗುವುದಿಲ್ಲ’ ಎಂದು ಯಾರೋ ಕಿವಿ ಊದಿರಬೇಕು ಎಂದು ಅಂಕಣಕಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ನಿಜ ಇದ್ದರೂ ಇರಬಹುದು.

ಇದನ್ನೂ ಓದಿ: Readers Colony: ಜನ ಪ್ರತಿನಿಧಿಗಳು ಎಲ್ಲಿ?

ಪ್ರಾಮಾಣಿಕತೆ ಎನ್ನುವುದು ನಮ್ಮ ದೇಶದಲ್ಲಿ ಬಹುತೇಕ ಕಡೆ ನಿಧಾನವಾಗಿ ಮರೆಯಾಗುತ್ತಿದೆ. ಇವತ್ತು ಜನರಲ್ಲಿ ಹೆಚ್ಚುತ್ತಿರುವ ಅನಾರೋಗ್ಯಕ್ಕೆ ಕಲಬೆರಕೆ ಆಹಾರವೂ ಒಂದು ಕಾರಣ ಅಂತ ಗೊತ್ತಿದ್ದರೂ, ಸಂಬಂಧಪಟ್ಟವರು ಈ ವಿಚಾರದಲ್ಲಿ ಕ್ರಮ ಕೈಗೊಳ್ಳದೆಯೇ ದಿವ್ಯಮೌನಕ್ಕೆ ಜಾರಿರು ವುದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ಮಿಷಲಿನ್ ಕಂಪನಿಯ ಪ್ರಾಮಾಣಿಕ ರೇಟಿಂಗ್ ವ್ಯವಸ್ಥೆ ಅಭಿನಂದನಾರ್ಹ.

- ರಾಘವೇಂದ್ರ ಜೋಯಿಸ್, ಮೈಸೂರು

ಹೂರಣ ಬೊಂಬಾಟ್..

ಇಂದಿನ ‘ಶಿಶಿರಕಾಲ’ ಅಂಕಣದಲ್ಲಿ (ಡಿ.12) ಏನಿರಬಹುದು ಎಂಬ ಕುತೂಹಲವಿತ್ತು; ಮುಖಪುಟ ದಲ್ಲಿ ಶೀರ್ಷಿಕೆ ನೋಡಿದಾಗಲೇ ಆಶ್ಚರ್ಯ! ಎಲ್ಲಿಯ ಟೈರ್ ಕಂಪನಿ, ಎಲ್ಲಿಯ ರೆಸ್ಟೋರೆಂಟ್?!

ಅಂಕಣದ ಒಳಗಿನ ಹೂರಣ ಮಾಹಿತಿಪೂರ್ಣವಾಗಿದೆ. ಎಲ್ಲಾ ಪ್ರಶಸ್ತಿ-ಪ್ರಮಾಣಪತ್ರಗಳು ಬಿಕರಿ ಗಿರುವಾಗ ‘ಮಿಷಲಿನ್ ಸ್ಟಾರ್ ರೇಟಿಂಗ್’ ವಿಶೇಷವಾಗಿದೆ. ಯಾವುದೋ ಲಾಬಿಗೆ ಸಿಲುಕಿ ಕೊಡ ಲ್ಪಡುವ ಪ್ರಶಸ್ತಿಗಿಂತ ಪ್ರಾಮಾಣಿಕವಾಗಿ ಪರಿಶೀಲಿಸಿ ಕೊಡುವ ಇಂಥ ರೇಟಿಂಗ್‌ಗಳು ಸರ್ವಮಾನ್ಯ ಎನಿಸಿಕೊಳ್ಳುತ್ತವೆ. ನೂರು ವರ್ಷವಾದರೂ ಅವಕ್ಕೆ ಅಳಿವಿಲ್ಲ.

ಈಗೆಲ್ಲಾ ರೀಲ್ಸ್ ಜಮಾನ. ರೆಸ್ಟೋರೆಂಟ್‌ನವರೇ ‘ಸೋಷಿಯಲ್ ಮೀಡಿಯಾ ಇನ್'ಫ್ಲ್ಯೂಯೆನ್ಸರ್‌ ಗಳನ್ನು’ ಕರೆಸಿ ಪ್ರಚಾರ ಮಾಡ್ತಿದ್ದಾರೆ. ಮೊದಮೊದಲು, ರೀಲ್ಸ್ ಮಾಡೋರೇ ಚೆನ್ನಾಗಿರೋ ರೆಸ್ಟೋ ರೆಂಟ್‌ನ ಹುಡುಕ್ಕೊಂಡ್ ಹೋಗಿ ಕಂಟೆಂಟ್ ಮಾಡ್ತಾ ಇದ್ರು. ಈಗ ದುಡ್ಡಿಗಾಗಿ ಪ್ರಚಾರ ಶುರು ಹಚ್ಕೊಂಡಿದ್ದಾರೆ. ಸಿಹಿಕಹಿ ಚಂದ್ರುರವರು ತಮ್ಮ ‘ಬೊಂಬಾಟ್ ಭೋಜನ’ ವತಿಯಿಂದ ಕೊಡುವ ಪ್ರಮಾಣಪತ್ರ ತಕ್ಕಮಟ್ಟಿಗೆ ವಿಶ್ವಾಸಾರ್ಹ ಎನ್ನಲಡ್ಡಿಯಿಲ್ಲ.

- ವೆಂಕಟೇಶ್ ಎಂ.ಕೆ., ಬೆಂಗಳೂರು