Readers Colony: ಬೆಂಗಳೂರಿನ ಅಂದಗೆಡಿಸುವವರು
ಬೆಂಗಳೂರು ಉದ್ಯಾನ ನಗರಿಯಂತೆ. ಇಲ್ಲಿ ರಸ್ತೆ ಬದಿ ಕಸ ಸುರಿಯುವವರು, ಖಾಲಿ ಸೈಟ್‌ನಲ್ಲಿ ಮನೆ ಕಟ್ಟಡದ ಕಸ ಹಾಕುವವರಿಗೆ ನಮ್ಮ ಊರು, ನಮ್ಮ ಬಡಾವಣೆ ಸ್ವಚ್ಛವಾಗಿ ಇರಬೇಕು ಎಂಬ ಪರಿಜ್ಞಾನವೇ ಇಲ್ಲ. ಯುವಜನ ರಾತ್ರಿ ಕುಡಿದು ಬಾಟಲ್ ಗಳನ್ನು ರಸ್ತೆ ಬದಿ ಸುರಿಯು ತ್ತಾರೆ. ಮಕ್ಕಳ ಡೈಪರ್ ರಸ್ತೆ ಬದಿ ಹಾಕ್ತಾರೆ. ನಾಯಿಗಳ ಸಂಖ್ಯೆ ಇದರಿಂದಲೇ ಜಾಸ್ತಿ.
-
ಓದುಗರ ಓಣಿ
ಮೊನ್ನೆ ಸಂಜೆ ರಸ್ತೆ ಬದಿ ನಡೆದುಕೊಂಡು ಬರುತ್ತಿದ್ದೆ. ಅಲ್ಲಿಯೇ ಲೈಟ್ ಕಂಬಕ್ಕೆ ಕಟ್ಟಿದ್ದ ಬ್ಯಾನರ್ ತಲೆಗೆ ತಾಗಿ ತಲೆಯಲ್ಲಿ ಪೂರಿ ಬಂತು. ಬ್ಯಾನರ್ ಕಟ್ಟುವ ಈ ಕೆಟ್ಟ ಅಭ್ಯಾಸ ನಮ್ಮ ಜನಕ್ಕೆ ಹೇಗೆ ಬಂತೋ. ಯಾರು ಸತ್ತರೂ ಬ್ಯಾನರ್, ಹುಟ್ಟಿದ ಹಬ್ಬಕ್ಕೆ ಬ್ಯಾನರ್, ಕಾರ್ಯಕ್ರಮಗಳಿಗೆ ಬ್ಯಾನರ್. ರಸ್ತೆ ಬದಿ ತೂಗು ಹಾಕಲು ಜಾಗ ಸಿಕ್ಕ ಬ್ಯಾನರ್‌ಗಳೇ. ಅದನ್ನು ಆಮೇಲೆ ತೆಗೆಯುವ ಬಾಬ್ತು ಇಲ್ಲವೇ ಇಲ್ಲ.
ಎಲ್ಲವನ್ನೂ ಬಿಬಿಎಂಪಿ ಅವರೇ ಮಾಡಬೇಕು ಎಂದು ಸುಮ್ಮನಿರುತ್ತಾರೆ. ಪಾಪ ಬಿಬಿಎಂಪಿ ನೌಕರರು ಎಷ್ಟಂತ ಸ್ವಚ್ಛ ಮಾಡಬೇಕು? ಅವರೂ ನಮ್ಮಂತೆ ಮನುಷ್ಯರಲ್ಲವೇ? ಪ್ರತಿ ಯೊಬ್ಬ ನಾಗರಿಕನೂ ಅವನ ಜವಾಬ್ದಾರಿ ಅರಿತು ನಡೆದರೆ ಕಸದ ರಾಶಿ, ಬ್ಯಾನರ್ ಗಳಿಗೆ ಮುಕ್ತಿ ಸಿಗುತ್ತೆ.
ಬೆಂಗಳೂರು ಉದ್ಯಾನ ನಗರಿಯಂತೆ. ಇಲ್ಲಿ ರಸ್ತೆ ಬದಿ ಕಸ ಸುರಿಯುವವರು, ಖಾಲಿ ಸೈಟ್ ನಲ್ಲಿ ಮನೆ ಕಟ್ಟಡದ ಕಸ ಹಾಕುವವರಿಗೆ ನಮ್ಮ ಊರು, ನಮ್ಮ ಬಡಾವಣೆ ಸ್ವಚ್ಛವಾಗಿ ಇರಬೇಕು ಎಂಬ ಪರಿಜ್ಞಾನವೇ ಇಲ್ಲ. ಯುವಜನ ರಾತ್ರಿ ಕುಡಿದು ಬಾಟಲ್'ಗಳನ್ನು ರಸ್ತೆ ಬದಿ ಸುರಿಯುತ್ತಾರೆ. ಮಕ್ಕಳ ಡೈಪರ್ ರಸ್ತೆ ಬದಿ ಹಾಕ್ತಾರೆ.
ಇದನ್ನೂ ಓದಿ: Readers Colony: ದತ್ತು ತೆಗೆದುಕೊಳ್ಳುವ ಪ್ರಕ್ರಿಯೆಯಾಗಲಿ
ನಾಯಿಗಳ ಸಂಖ್ಯೆ ಇದರಿಂದಲೇ ಜಾಸ್ತಿ. ಅವು ಗಲೀಜು ತಂದು ಮನೆ ಮುಂದೆ ಹಾಕುತ್ತವೆ. ಮಳೆ ಬಂದರಂತೂ ಚರಂಡಿಗಳೆ ಕಸದಿಂದ ತುಂಬಿ ನೀರು ಹೋಗಲು ಜಾಗವೇ ಇಲ್ಲ. ಎಲ್ಲ ನೀರೂ ರಸ್ತೆಗೆ. ಓಡಾಡಲು ಕಷ್ಟ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಕೆಂಗೇರಿಗೆ ತಲುಪಲು ಹೊಸ ರಸ್ತೆ ಇದೆ. ಅದರ ಬದಿಯಲ್ಲಿ ಪಾದಚಾರಿ ಮಾರ್ಗಕ್ಕೆ ಹಾಗೂ ವಾಹನ ನಿಲುಗಡೆಗೂ ಜಾಗವಿದೆ. ಆದರೆ ಆ ಜಾಗವೆ ಕಟ್ಟಡದ ಕಸದ ರಾಶಿಯಿಂದ ತುಂಬಿ ಹೋಗಿದೆ. ವಿದೇಶಗಳಲ್ಲಿರುವಂತೆ ಕಸ ಹಾಕುವವರಿಗೆ ಕಠಿಣ ಶಿಕ್ಷೆ ವಿಽಸುವುದರಿಂದ ಈ ಸಮಸ್ಯೆ ಕಡಿಮೆ ಆಗಬಹುದು.
- ಸುಜಯ ಆರ್ ಕೊಣ್ಣೂರು
ಬಿಯರ್ ಮತ್ತು ಗಲ್ಫ್ ಯುದ್ಧ
ಮೇ ೩೧ರ ‘ಅಂತರಂಗ ಸುದ್ದಿ’, ಈ ಹಿಂದೆ ಹರಿದಾಡಿದ ‘ಕಳ್ಳರೂ ದೇಶದ ಆರ್ಥಿಕತೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಾರೆ’ ಸಂದೇಶವನ್ನು ನೆನಪಿಸಿತು. ಎಲ್ಲಿಯ ಅಮೆರಿಕಾ - ಇರಾನ್ ಯುದ್ಧ, ಇನ್ನೆಲ್ಲಿಯ ಬಿಯರ್ ಪ್ಯಾಕೇಜಿಂಗ್ ಅಂತ ಅನಿಸಿದರೂ ಇದೇ ಅನಿವಾ ರ್ಯತೆ ಸಂಶೋಧನೆಗೆ ಮೂಲ ಎಂಬ ತತ್ವವನ್ನೂ ಸಾರಿದಂತಿದೆ.
ಬಾಟಲ್ ತಯಾರಿಸಲು ಬೇಕಾಗುವ ತೈಲ, ಮುಂದೆ ಅವುಗಳ ಸಾಗಾಣಿಕೆಯಲ್ಲಿ ಬೇಕಾಗುವ ಇಂಧನಗಳ ಅವಶ್ಯಕತೆಯೇ ಗಾಜಿನ ಬಾಟಲ್ ಬದಲು ಅತಿ ಹಗುರವಾದ ಟಿನ್ ಬಳಕೆಯ ವಿಷಯ ನಿಜಕ್ಕೂ ಆಸಕ್ತಿಕರ. ನಮ್ಮ ಆರ್ಥಕತೆಗೆ ಏನೇನೆಲ್ಲ ಪೂರಕವಾಗಿರುತ್ತದೆ ಎಂಬುದೂ ಬಹು ಮುಖ್ಯ. ಇನ್ನು ಮುಂದೆ ಈ ಟಿನ್‌ನ ಹೊಸತನ ಬಂದು ಅದೇ ಹೆಚ್ಚು ಬೇಡಿಕೆಯಲ್ಲಿ ಬಂದರೂ ಆಶ್ಚರ್ಯವಿಲ್ಲ. ಸದ್ಯ ಟಿನ್ ಅಷ್ಟು ಆಕರ್ಷಕವೂ ಅಲ್ಲ, ಅಷ್ಟೇ ಅಲ್ಲ ಬಾಟಲ್‌ಗಳಿಗಿರುವ ಚಾರ್ಮ್ ಇದಕ್ಕಿಲ್ಲ. ಹೀಗಾಗಿ ಬೇಡಿಕೆಯೂ ಕಡಿಮೆ. ಇಲ್ಲೇ ಇನ್ನೂ ಹೆಚ್ಚು ಸಂಶೋಧನೆ ನಡೆದು ಹೊಸ ಆವಿಷ್ಕಾರ ಬಂದರೂ ಬಂದೀತೆ? ಒಂದಂತೂ ಸ್ಪಷ್ಟ. ಎಷ್ಟೇ ಕೆಡುಕು ಎನ್ನುವುದರಲ್ಲೂ ಏನಾದರೂ ಒಂದಿಷ್ಟು ಒಳಿತೂ ಇರುತ್ತದೆ. ಒಂದು ವೇಳೆ ಅಮೆರಿಕಾ- ಇರಾನ್ ಯುದ್ಧ ಸಂಭವಿಸದೇ ಹೋಗಿದ್ದರೆ, ಹೆಚ್ಚು ಭಾರದ ಬಾಟಲ್‌ಗಳ ಉಪಯೋಗವೇ ಹೆಚ್ಚಾಗಿ, ಅನವಶ್ಯಕ ಇಂಧನ ಖರ್ಚಾಗುತ್ತಿತ್ತು ಮತ್ತು ಪರಿಸರದ ಮೇಲೂ ಹೆಚ್ಚು ಪರಿಣಾಮ ಬೀರುತ್ತಿತ್ತು.
- ಶಂಕರನಾರಾಯಣ ಭಟ, ಹೊನ್ನಾವರ
ವಿಜಯ್ ನಡೆ ಮಾದರಿ
ನಮ್ಮ ಪಕ್ಕದ ರಾಜ್ಯದ, ತಮಿಳು ನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು, ರಾಜ್ಯದ ಎಲ್ಲ ಖಾಸಗಿ ಶಾಲೆಗಳ ಪ್ರವೇಶಕ್ಕಾಗಿ ಸರಕಾರ ನಿಗದಿಪಡಿಸಿರುವ ಶುಲ್ಕವನ್ನು ಶಾಲೆಯ ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು ಮತ್ತು ಹೆಚ್ಚಿನ ಶುಲ್ಕವನ್ನು ಪಡೆಯಬಾರದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿ, ಒಂದು ವೇಳೆ ಹೆಚ್ಚಿನ ಶುಲ್ಕವನ್ನು ಪಡೆದರೆ ಆ ಶಾಲೆಯ ಮಾನ್ಯತೆಯನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪೋಷಕರಿಂದ ಗುಪ್ತ ಪ್ರವೇಶ ಶುಲ್ಕವನ್ನು ರಸೀದಿ ನೀಡದೇ ಬಲವಂತವಾಗಿ ವಸೂಲು ಮಾಡದಂತೆ ಸರಕಾರ ಆದೇಶ ಹೊರಡಿಸಿದೆ.
ನಮ್ಮ ರಾಜ್ಯದ ಮುಂದಿನ ಮುಖ್ಯಮಂತ್ರಿ ನಮ್ಮಲ್ಲೂ ಇಂತಹ ಕಟ್ಟುನಿಟ್ಟಿನ ಆದೇಶ ಜಾರಿಗೊಳಿಸಲಿ. ನಮ್ಮ ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು ತಮ್ಮ ಮನಸೋ ಇಚ್ಛೆ ಪ್ರವೇಶ ಶುಲ್ಕವನ್ನು ವಸೂಲಿ ಮಾಡುತ್ತಿವೆ.
- ಬೂಕನಕೆರೆ ವಿಜೇಂದ್ರ, ಮೈಸೂರು