Readers Colony: ಮುಖ್ಯ ರಸ್ತೆಗೆ ಕಾಯಕಲ್ಪ ಬೇಕಾಗಿದೆ!
ಅತಿ ಹೆಚ್ಚಿನ ವಿವಿಧ ಇಲಾಖೆಗಳ ಸರಕಾರಿ ಅಧಿಕಾರಿಗಳು, ರಾಜಕೀಯ ನಾಯಕರು, ಸುಶಿಕ್ಷಿತರು, ಖಾಸಗಿ ಕಂಪನಿಗಳ ನೌಕರರು ವಾಸ ಮಾಡುವಂತಹ ಪಟ್ಟಣದ ಪ್ರಮುಖ ಬಡಾವಣೆಯೆ ಕೆಎಚ್‌ಬಿ ಕಾಲೋನಿ ಆಗಿದ್ದು, ಗಮನಾರ್ಹ ಸಂಗತಿ ಏನೆಂದರೆ, ನಂಜನಗೂಡು ಪಟ್ಟಣದ ಭಾಗಶಃ ಜನಸಂಖ್ಯೆ ಈ ಭಾಗದ ಇದ್ದು ಹೌಸಿಂಗ್ ಬೋರ್ಡ್ ರಚನೆ ಆದ ನಂತರ ಇದರ ಅಕ್ಕ-ಪಕ್ಕ ಸರಿ ಸುಮಾರು 15-20ಕ್ಕೂ ಹೆಚ್ಚು ಲೇಔಟ್ʼಗಳು ಇವತ್ತಿನವರೆಗೆ ನಿರ್ಮಾಣಗೊಂಡಿವೆ.
-
ಓದುಗರ ಓಣಿ
ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ತಾಲೂಕು ಮಟ್ಟದಲ್ಲಿ (ಕೆಎಚ್‌ಬಿ) ಕಾಲೋನಿ. ಕರ್ನಾಟಕ ಗೃಹ ಮಂಡಳಿ ಇಂದ ಮನೆಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡಿದ್ದು, ನಂಜನಗೂಡಿನ ಮೊದಲು. ಬಹುಶ ಎಲ್ಲ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೂ ಇದೇ ನಿದರ್ಶನ. ಇದಾದ ನಂತರವೇ ರಾಜ್ಯದ ವಿವಿಧ ತಾಲೂಕು, ಜಿಲ್ಲಾ ಕೇಂದ್ರಗಳಿಗೂ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ ಕಾಲೋನಿ ನಿರ್ಮಾಣ) ನಡೆದದ್ದು, ಇಷ್ಟೆಲ್ಲಾ ಇತಿಹಾಸ ಇರುವಂತಹ ನಂಜನಗೂಡಿನ ಹೌಸಿಂಗ್ ಬೋರ್ಡ್ ಕಾಲೋನಿಗೆ ಸಂಪರ್ಕ ಕೊಂಡಿಯಾಗಿರುವ ಮುಖ್ಯ ರಸ್ತೆಗೆ ಅನಿವಾರ್ಯತೆಯ ಕಾಯಕಲ್ಪ ಬೇಕಾಗಿದೆ.
ವಾರ್ಡ್ ನಂಬರ್ 21, 22 ಹಾಗೂ 23 ಸಂಬಂಧಿಸಿದಂತೆ ನಂಜನಗೂಡಿನ ಗ್ರಾಮಾಂತರ ಪೊಲೀಸ್ ಠಾಣೆ ಎದುರುಗಡೆಯ ಮುಖ್ಯ ರಸ್ತೆ ಇದಾಗಿದ್ದು, ತೀರಾ ಅಧೋಗತಿಯಲ್ಲಿದ್ದು, ವಾಹನ ಸಂಚಾರ ಬಳಕೆಗೆ ಹಾಗೂ ಪಾದಚಾರಿಗಳ ನಡೆದುಕೊಂಡು ಹೋಗುವುದಕ್ಕೂ ಯೋಗ್ಯವಲ್ಲದಂತಾಗಿದೆ.
ಇದನ್ನೂ ಓದಿ: Readers Colony: ಹಿಂದಿ ಇರಲಿ, ಹೇರಿಕೆ ವಿರೋಧಿಸೋಣ
ಬೈಕ್‌ನಲ್ಲಿ ಹೋಗುವಾಗ ಕೆಲವರು ಬಿದ್ದು ಗಾಯ ಮಾಡಿಕೊಂಡಿರುವ ಉದಾಹರಣೆಗಳು ಇವೆ. ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಬಾರಿ ಈ ವಾರ್ಡ್‌ಗಳನ್ನು ಪ್ರತಿನಿಧಿಸಿದ ಸದಸ್ಯರು ರಸ್ತೆಯ ದುರಸ್ತಿ ಕಾರ್ಯ ಅಥವಾ ಮರು ಡಾಂಬರಿಕರಣ ಸಂಬಂಧಿಸಿದಂತೆ ಸಾಕಷ್ಟು ಮನವಿ ಪತ್ರಗಳನ್ನು ಈ ಹಿಂದಿನ ಅವಧಿಗಳಲ್ಲಿ ಶಾಸಕರಾಗಿದ್ದ ಕಳಲೆ ಕೇಶವಮೂರ್ತಿ ಅನಂತರ ಹರ್ಷವರ್ಧನ್ ಅವರ ಕಾಲಾವಧಿಯಲ್ಲಿ ಈಗ ಪ್ರಸ್ತುತ ಶಾಸಕರಾಗಿರುವ ದರ್ಶನ್ ಧ್ರುವನಾರಾ ಯಣ್ ಅವರಿಗೂ ಮನವಿ ಸಲ್ಲಿಸಲಾಗಿದ್ದರು. ಯಾವುದೇ ಉಪಯೋಗಕ್ಕೆ ಬಾರದೆ ಪರಿಸ್ಥಿತಿ ಹೇಳತೀರದಾಗಿದೆ.
ಸದ್ಯ, ನಗರಸಭಾ ಸದಸ್ಯರ ಅವಧಿ ಮುಕ್ತಾಯವಾಗಿದ್ದು ಮತ್ತೆ ವಾರ್ಡ್ ಚುನಾವಣೆ ನಡೆದು ಸದಸ್ಯರ ಆಯ್ಕೆ ಆದ ನಂತರವಾದರೂ ಈ ರಸ್ತೆ ಅಭಿವೃದ್ಧಿ ಕಾಣಬೇಕಾಗಿದೆ.!
ಅತಿ ಹೆಚ್ಚಿನ ವಿವಿಧ ಇಲಾಖೆಗಳ ಸರಕಾರಿ ಅಧಿಕಾರಿಗಳು, ರಾಜಕೀಯ ನಾಯಕರು, ಸುಶಿಕ್ಷಿತರು, ಖಾಸಗಿ ಕಂಪನಿಗಳ ನೌಕರರು ವಾಸ ಮಾಡುವಂತಹ ಪಟ್ಟಣದ ಪ್ರಮುಖ ಬಡಾವಣೆಯೆ ಕೆಎಚ್‌ಬಿ ಕಾಲೋನಿ ಆಗಿದ್ದು, ಗಮನಾರ್ಹ ಸಂಗತಿ ಏನೆಂದರೆ, ನಂಜನಗೂಡು ಪಟ್ಟಣದ ಭಾಗಶಃ ಜನಸಂಖ್ಯೆ ಈ ಭಾಗದ ಇದ್ದು ಹೌಸಿಂಗ್ ಬೋರ್ಡ್ ರಚನೆ ಆದ ನಂತರ ಇದರ ಅಕ್ಕ-ಪಕ್ಕ ಸರಿ ಸುಮಾರು 15-20ಕ್ಕೂ ಹೆಚ್ಚು ಲೇಔಟ್ʼಗಳು ಇವತ್ತಿನವರೆಗೆ ನಿರ್ಮಾಣಗೊಂಡಿವೆ. ಆದ್ದರಿಂದ ಪಟ್ಟಣದ ಜನಸಂಖ್ಯೆಯ ಅರ್ಧಭಾಗ ಈ ವ್ಯಾಪ್ತಿಯಲ್ಲಿ ಕಂಡು ಬರುತ್ತದೆ.
ಕಳೆದ ಹತ್ತಾರು ವರ್ಷಗಳಿಂದ ರಸ್ತೆ ಸುಗಮ ಸಂಚಾರಕ್ಕೆ ಅನಾನುಕೂಲವಾಗಿದ್ದರು ಸರಿಪಡಿಸಲು ಯಾರು ಮುಂದೆ ಬಾರದಿದ್ದು ಅತ್ಯಂತ ವಿಷಾದನೀಯ. ಇನ್ನಾದರೂ, ಶಾಸಕ ದರ್ಶನ ಧ್ರುವ ನಾರಾಯಣ ವಾಸ್ತವತೆಯನ್ನು ಅರಿತು ಈ ಮುಖ್ಯ ರಸ್ತೆ ಸರಿಪಡಿಸಲು ಅಗತ್ಯವಾಗಿ ಮುಂದಾಗ ಬೇಕಿದೆ.
- ಅನಿಲ್ ಕುಮಾರ್, ನಂಜನಗೂಡು.
ಜನಗಣತಿ ನಿಖರ ಹಾಗೂ ಪಾರದರ್ಶಕವಾಗಿರಲಿ...
ಭಾರತದ ಜನಗಣತಿ ಕಾಯ್ದೆ 1948ರ ಪ್ರಕಾರ ಈ ಬಾರಿಯ ಜನಗಣತಿ 2027ರ ಕಾರ್ಯವು ಎರಡು ಹಂತಗಳಲ್ಲಿ ನಡೆಯುತ್ತಿದ್ದು, ಈ ಜನಗಣತಿಯು ಭಾರತದ ಮೊದಲ ಡಿಜಿಟಲ್ ಜನಗಣತಿ ಯಾಗಿರುವುದು ವಿಶೇಷವಾಗಿದೆ. ಗಣತಿದಾರರು ತಮ್ಮ ಸ್ವಂತ ಮೊಬೈಲ್ ಫೋನ್ ಬಳಸಿ ಮೊಬೈಲ್ App ನಿಂದ ಕುಟುಂಬಗಳಿಂದ ಡಿಜಿಟಲ್ ರೂಪದಲ್ಲಿ ಮಾಹಿತಿಗಳನ್ನು ಸಂಗ್ರಹಿಸಲು ಪ್ರೋತ್ಸಾಹಿಸ ಲಾಗುತ್ತಿದೆ. ಅಲ್ಲದೆ ಏಪ್ರಿಲ್ ಒಂದರಿಂದ ಏಪ್ರಿಲ್ 15 ರವರೆಗೆ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಲಾಗಿದ್ದು, ಸರಳವಾದ ಹಂತಗಳನ್ನು ಅನುಸರಿಸುವ ಮೂಲಕ 15 ರಿಂದ 20 ನಿಮಿಷಗಳಲ್ಲಿ ತಮ್ಮ ಮನೆಯ ಸ್ವಂತ ಗಣತಿಯನ್ನು ಮಾಡಿಕೊಂಡು ಸ್ವಯಂ ಗಣತಿಯ ಗುರುತಿನ ಸಂಖ್ಯೆ ಪಡೆದುಕೊಂಡು ಇದೇ ಏಪ್ರಿಲ್ 16 ರಿಂದ ಮೇ 15ರವರೆಗೆ ಗಣತಿದಾರರು ಮನೆಗೆ ಭೇಟಿ ನೀಡಿದಾಗ ವಿಶೇಷ ಸಂಖ್ಯೆ ನೀಡಿ ಗಣಿತಿದಾರರ ಗಣತಿ ಕಾರ್ಯವನ್ನು ಸರಳಗೊಳಿಸಿ ಯಶಸ್ವಿಗೊಳಿಸಲು ಎಲ್ಲರೂ ನೆರವಾಗಬೇಕಿದೆ.
ಈ ಜನಗಣತಿಯಲ್ಲಿ ಸಂಗ್ರಹಿಸುವ ಮಾಹಿತಿ, ಹೆಸರು, ಗುರುತು ಗೌಪ್ಯವಾಗಿ ಇರಿಸಲಾಗುತ್ತದೆ ಹಾಗೂ ಯಾವುದೇ ತೆರಿಗೆ ಅಥವಾ ಪರಿಶೋಧನೆ ಉದ್ದೇಶಕ್ಕೆ ದತ್ತಾಂಶವನ್ನು ಬಳಸಿಕೊಳ್ಳುವುದಿಲ್ಲ. ಇದು ಸುರಕ್ಷಿತವಾಗಿರುತ್ತದೆ ಎಂದು ಈಗಾಗಲೇ ಸರಕಾರ ಸ್ಪಷ್ಟಪಡಿಸಿದ್ದು, ಹೀಗಾಗಿ ಗಣತಿದಾರರು ತಮ್ಮ ಮನೆಗೆ ಬಂದಾಗ ಮಾಹಿತಿದಾರರು ಯಾವುದೇ ಅಳುಕಿಲ್ಲದೆ, ಸಂಶಯಪಡದೇ ಗಣತಿದಾರರು ಕೇಳುವ 35 ಸರಳ ಪ್ರಶ್ನೆಗಳಿಗೆಲ್ಲ ಅತ್ಯಂತ ಪಾರದರ್ಶಕ ಹಾಗೂ ವಾಸ್ತವಾಂಶದೊಂದಿಗೆ ಮಾಹಿತಿ ನೀಡಿ ನಮ್ಮ ಮನೆ ಬಾಗಿಲಿಗೆ ಬರುವ ಗಣಿತಿದಾರರು, ಮೇಲ್ವಿಚಾರಕರು ಮತ್ತು ಇತರೆ ಕಾರ್ಯ ಕರ್ತರನ್ನು ಸಂತೋಷದಿಂದ ಸ್ವಾಗತಿಸಬೇಕಿದೆ. ಏಕೆಂದರೆ ನಾವು ನೀಡುವ ಮಾಹಿತಿಯು ರಾಷ್ಟ್ರದ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಅಗತ್ಯ ಮಾಹಿತಿಗಳನ್ನು ಪೂರೈಸುತ್ತದೆ. ಇದಲ್ಲದೇ ಗಣತಿದಾರರು ಕೂಡ ಮನೆಗಣತಿಯಲ್ಲಿ ನೀಡಲಾದ ಪ್ರಶ್ನೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಶ್ನೆಗಳನ್ನು ಕುಟುಂಬದ ಮಾಹಿತಿದಾರರಿಗೆ ಕೇಳಿ, ಕಿರಿಕಿರಿಗೊಳಿಸದೆ ಮಾಹಿತಿದಾರರು ಒದಗಿಸಿದ ಸರಿಯಾದ ಮಾಹಿತಿಯನ್ನು ದಾಖಲಿಸಿಕೊಂಡು ಈ ಬಾರಿಯ ಜನಗಣತಿಯನ್ನು ಯಶಸ್ವಿಗೊಳಿಸುವುದು ಅಗತ್ಯವಾಗಿದೆ.
ಹರಳಹಳ್ಳಿಪುಟ್ಟರಾಜು, ಪಾಂಡವಪುರ.
ಸರಳ ಸಜ್ಜನಿಕೆಯ ಮೂರ್ತಿ ಎಸ್.ಆರ್. ರಾಮಸ್ವಾಮಿ
ಮರೆಯಲಾಗದ ಮುತ್ತು ಎಸ್.ಆರ್.ರಾಮಸ್ವಾಮಿ ಅವರ ವ್ಯಕ್ತಿತ್ವ ಬದುಕು, ಬರವಣಿಗೆ ಜೀವನ ಶೈಲಿ, ನಾನು ಡಿವಿಜಿ ಅವರನ್ನು ನೋಡಿಲ್ಲ ಆದರೆ ಸದಾ ಡಿವಿಜಿ ಹಾಕಿಕೊಟ್ಟ ಆದರ್ಶದ ಬದುಕು ಸವೆಸಿದ ಮಹಾತ್ಮ ಎಸ್.ಆರ್.ಆರ್ ನಾನು ಅನೇಕ ಭಾರಿ ಜೀವಂತವಾಗಿ ಆದರ್ಶ ತೆಗೆದುಕೊಳ್ಳಲು ನಿಮಗೆ ಎಸ್.ಆರ್.ರಾಮಸ್ವಾಮಿ ಅವರಲ್ಲಿ ಇದೆ ನೋಡಿ ಎಂದು ಹೇಳುತ್ತಿದ್ದೆ. ಉತ್ಥಾನ ಮಾಸ ಪತ್ರಿಕೆ ನನಗೆ ಕಸ್ತೂರಿ ಮಾಸ ಪತ್ರಿಕೆಯಷ್ಟೇ ಇಷ್ಟ ಅವರ ಸಂಪಾದಕೀಯ ಅತ್ಯುತ್ತಮ ಬರವಣಿಗೆ ನನ್ನನ್ನು ಚುಂಬಕದಂತೆ ಆಕರ್ಷಿಸುತ್ತಿತ್ತು ಬದುಕಿದರೆ ಹಾಗೆ ಬದುಕಬೇಕು ಎನ್ನುವ ಮತ್ಸರ ನನಗೆ ಇದ್ದೇ ಇತ್ತು. ನನ್ನ ಬದುಕಿನಲ್ಲಿ ಆದರ್ಶದ ಮೇರು ಶಿಖರಗಳಲ್ಲಿ ಅವರು ಸಹ ಒಬ್ಬರು. ಅವರಿಗೆ ಭಾವ ಪೂರ್ಣ ಶ್ರದ್ದಾಂಜಲಿ.
-ಎಂ. ಪರಮೇಶ್ವರ. ಮದ್ದಿಹಳ್ಳಿ, ಹಿರಿಯೂರು ತಾಲ್ಲೂಕು