ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Readers Colony: ಧ್ಯಾನದ ಹಾದಿ

ಶಿಶಿರ ಹೆಗಡೆ ಅವರ ‘ತಲೆಹರಟೆ’ ಐದು ಕಂತುಗಳ ಪಯಣ ಧ್ಯಾನದ ಹೈವೇಗೆ ತಂದು ಹಾದಿ ತೋರಿಸಿದೆ. ನಡೆದು ಸಾಗುವುದು ನಮ್ಮ ಜವಾಬ್ದಾರಿ. ಮನಸ್ಸಿನ ಅಂತರಂಗದೊಳಗಿನ ಸಿಂಹಾವ ಲೋಕನ ಅದ್ಭುತ ಲೋಕದ ದರ್ಶನ ಮಾಡಿಸಿತು. ಒಟ್ಟಾರೆಯಾಗಿ ಕಂತಿನಿಂದ ಕಂತಿನವರೆಗೆ ಆಸಕ್ತಿಯನ್ನು ಉದ್ದಿಪನ ಗೊಳಿಸುತ್ತಾ ಮುಕ್ತಾಯಗೊಂಡಿದೆ. ಹಾರ್ದಿಕ ಅಭಿನಂದನೆಗಳು. ಇನ್ನೊಂದು ಸರಣಿಗೆ ಅಣಿಯಾಗಿ ದ್ದೇವೆ.

Readers Colony: ಧ್ಯಾನದ ಹಾದಿ

-

Profile
Ashok Nayak Jul 11, 2026 10:51 AM

ಓದುಗರ ಓಣಿ

ಶಿಶಿರ ಹೆಗಡೆ ಅವರ ‘ತಲೆಹರಟೆ’ ಐದು ಕಂತುಗಳ ಪಯಣ ಧ್ಯಾನದ ಹೈವೇಗೆ ತಂದು ಹಾದಿ ತೋರಿಸಿದೆ. ನಡೆದು ಸಾಗುವುದು ನಮ್ಮ ಜವಾಬ್ದಾರಿ. ಮನಸ್ಸಿನ ಅಂತರಂಗದೊಳಗಿನ ಸಿಂಹಾವ ಲೋಕನ ಅದ್ಭುತ ಲೋಕದ ದರ್ಶನ ಮಾಡಿಸಿತು. ಒಟ್ಟಾರೆಯಾಗಿ ಕಂತಿನಿಂದ ಕಂತಿನವರೆಗೆ ಆಸಕ್ತಿಯನ್ನು ಉದ್ದಿಪನ ಗೊಳಿಸುತ್ತಾ ಮುಕ್ತಾಯಗೊಂಡಿದೆ. ಹಾರ್ದಿಕ ಅಭಿನಂದನೆಗಳು. ಇನ್ನೊಂದು ಸರಣಿಗೆ ಅಣಿಯಾಗಿದ್ದೇವೆ.

- ನಾರಾಯಣ ಕಡಿವಾಳ್, ಇಮೈಲ್ ಮೂಲಕ

ವಾಹನಗಳ ದುರುಪಯೋಗ

ಶಾಸಕರ ಭವನದಲ್ಲಿ ಜನಪ್ರತಿನಿಧಿಗಳ ಆಪ್ತ ಸಹಾಯಕರು ಮತ್ತು ಕಾರ್ಯಕರ್ತರು ಸರಕಾರಿ ವಾಹನಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು, ಸಾರ್ವಜನಿಕ ಧನದಲ್ಲಿ ಮೋಜು ಮಾಡುವುದು ಘೋರ ಅಪಚಾರ. ವಾಹನಗಳು ಜನಸೇವೆಯ ಬದಲು ಇವರ ಐಷಾರಾಮಕ್ಕೆ ಬಳಕೆಯಾಗುತ್ತಿರುವುದು ನಾಚಿಕೆಗೇಡು. ಇದಕ್ಕೆ ಲಗಾಮು ಹಾಕಲು ಪ್ರತಿ ಕಿಲೋಮೀಟರ್‌ಗೆ 8 ರಿಂದ 12 ರೂಪಾಯಿ ದಂಡನಾತ್ಮಕ ಶುಲ್ಕ ವಿಧಿಸಿ ಅದನ್ನು ನೇರವಾಗಿ ಶಾಸಕರ ವೇತನ ಅಥವಾ ಪಿಂಚಣಿಯಿಂದ ಕಡಿತಗೊಳಿಸುವ ತೀರ್ಮಾನ ಸ್ವಾಗತಾರ್ಹವಾದರೂ, ವ್ಯವಸ್ಥೆಯ ನೈತಿಕ ಅಧಃಪತನಕ್ಕೆ ಇದು ಸಾಕ್ಷಿಯಾಗಿದೆ. ತೆರಿಗೆದಾರರ ಹಣದಲ್ಲಿ ಮೋಜು ಮಾಡುವ ಇಂತಹ ಲೂಟಿ ಕೋರರ ವಿರುದ್ಧ ಇನ್ನೂ ಕಠಿಣ ಕಾನೂನು ಕ್ರಮದ ಅಗತ್ಯವಿದೆ.

ಇದನ್ನೂ ಓದಿ: Readers Colony: ಮೂಲ ಮರೆಯದ ಹವ್ಯಕರು

- ಡಾ.ವಿಜಯಕುಮಾರ್ ಎಚ್.ಕೆ., ರಾಯಚೂರು

ಇತರರಿಗೆ ಮಾದರಿ

ಇತ್ತೀಚೆಗೆ ಸಾಮಾನ್ಯವಾಗಿ ಸಚಿವರು ವಿಪಕ್ಷ ನಾಯಕರನ್ನು ಟೀಕಿಸುವುದೇ ತಮ್ಮ ಮುಖ್ಯ ಕರ್ತವ್ಯ ಎನ್ನುವಂತಿದ್ದು, ತಮ್ಮ ಇಲಾಖೆಯ ಕಾಂii ಪ್ರಗತಿಯ ಬಗ್ಗೆ ಮಾತಾಡುವುದು ಕಡಿಮೆ. ಆದರೆ ಇದಕ್ಕೆ ಅಪವಾದವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರು ಬೆಂಗಳೂರಿನ ಬೀದಿ ಮಾರಾಟಗಾರರಿಂದ ಆಕ್ರಮಿತವಾಗಿ ಸಾರ್ವಜನಿಕರ ಓಡಾಟಕ್ಕೆ ಅಡಚಣೆಯಾಗಿದ್ದ ಪುಟ್ ಪಾತುಗಳ ತೆರವಿನ ಕಾರ್ಯವನ್ನು ಖುದ್ದು ಮೇಲ್ವಿಚಾರಣೆಯಲ್ಲಿ ಕೈಗೊಂಡಿರುವುದು ಶ್ಲಾಘನೀಯ. ಸಚಿವರುಗಳೇ ಹೀಗೆ ನಡೆದರೆ ಎಸಿ ಆಫೀಸುಗಳಲ್ಲಿ ಬೆಚ್ಚಗೆ ಕುಳಿತಿರುವ ಅಧಿಕಾರಿಗಳೂ ಓಡೋಡಿ ಬರುತ್ತಾರೆ. ಇದು ಅಧಿಕಾರ ನಡೆಸುವ ಪರಿ.

- ಸತ್ಯಬೋಧ, ಹೊಸಕೆರೆಹಳ್ಳಿ

ಅನಗತ್ಯ ಬ್ಯಾಂಕ್ ಓಡಾಟ

ಗ್ರಾಹಕರು ತಾವು ಹೊಂದಿರುವ ಬ್ಯಾಂಕ್‌ನಿಂದ, ಬೇರೆಯವರ ಹೆಸರಲ್ಲಿ ಅಥವಾ ಕಂಪನಿಗಳಿಗೆ ರೂ. ಐದು ಲಕ್ಷಕ್ಕಿಂತ ಹೆಚ್ಚಿನ ಹಣಕ್ಕೆ ಚೆಕ್ ಅನ್ನು ನೀಡಿದರೆ, ಗ್ರಾಹಕರು ತಾವು ಅಕೌಂಟ್ ಹೊಂದಿರುವ ಬ್ಯಾಂಕ್‌ಗೆ ಹೋಗಿ, ನನ್ನ ಖಾತೆಯಿಂದ ಹಣ ನೀಡಬಹುದು ಎಂದು ಪಿಪಿಎಸ್ (ಪಾಸಿಟಿವ್ ಪೇ ಸ್ಲಿಪ್) ಅನ್ನು ನೀಡ ಬೇಕು. ಇಲ್ಲದಿದ್ದರೆ ಬ್ಯಾಂಕ್‌ನವರು ಚೆಕ್ ಅನ್ನು ಆನರ್ ಮಾಡುವುದಿಲ್ಲ. ಇದು ಬ್ಯಾಂಕ್ ಅಧಿಕಾರಿಗಳು ತೆಗೆದುಕೊಂಡಿರುವ ಅವೈeನಿಕ ನಿರ್ಧಾರ. ಯಾವುದೇ ಗ್ರಾಹಕರು ಸಹ ರೂ. ಐದು ಲಕ್ಷಕ್ಕಿಂತ ಹೆಚ್ಚಿನ ಹಣಕ್ಕೆ ಚೆಕ್ ಅನ್ನು ಕಾಟಾಚಾರಕ್ಕೆ ನೀಡುವುದಿಲ್ಲ. ಗ್ರಾಹಕರು ಮತ್ತೆ ಬ್ಯಾಂಕ್‌ಗೆ ಹೋಗಿ ಪಿಪಿಎಸ್ ನೀಡಬೇಕು ಎನ್ನುವುದು ಗ್ರಾಹಕರ ಹಕ್ಕನ್ನು ಕಿತ್ತುಕೊಂಡಂತೆ. ಗ್ರಾಹಕರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ನಡೆಸುತ್ತಿರುವ ದಬ್ಬಾಳಿಕೆ. ಹಿರಿಯ ನಾಗರಿಕರಿಗೆ ಇದೊಂದು ದೊಡ್ಡ ಸಮಸ್ಯೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.

- ಬೂಕನಕೆರೆ ವಿಜೇಂದ್ರ, ಮೈಸೂರು