ಪ್ರಧಾನಿ ನರೇಂದ್ರ ಮೋದಿ ತಂಗಿದ್ದ ಹೋಟೆಲ್‌ಗೆ ನುಗ್ಗಿದ ಪ್ರತಿಭಟನಾಕಾರ; ಭಾರತ ವಿರೋಧಿ ಘೋಷಣೆ
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಲಸೆ ವಿರೋಧಿ ಪ್ರತಿಭಟನಾಕಾರನೊಬ್ಬ ಮೆಲ್ಬೋರ್ನ್ ನಲ್ಲಿ ಅವರು ತಂಗಿದ್ದ ಹೋಟೆಲ್ ಗೆ ನುಗ್ಗಿರುವ ಘಟನೆ ನಡೆದಿದೆ. ಆತ ಮತ್ತೆ ಮರುದಿನ ಡಯಾಸ್ಪೊರಾ ಕಾರ್ಯಕ್ರಮದಲ್ಲೂ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದ್ದು ಪೊಲೀಸರು ಆತನನ್ನು ಹಿಡಿದು ಹೊರಗೆಳೆದುಕೊಂಡು ಹೋದರು ಎನ್ನಲಾಗಿದೆ.
ಸಂಗ್ರಹ ಚಿತ್ರ -
ಮೆಲ್ಬೋರ್ನ್: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ವಿರುದ್ಧ ಆಸ್ಟ್ರೇಲಿಯಾದಲ್ಲಿ (Australia) ಪ್ರತಿಭಟನೆ ನಡೆದಿದೆ. ವಲಸೆ ವಿರೋಧಿ ಪ್ರತಿಭಟನಾಕಾರನೊಬ್ಬ ಪ್ರಧಾನಿ ಮೋದಿ ಮೆಲ್ಬೋರ್ನ್ (Melbourne)ನಲ್ಲಿ ತಂಗಿದ್ದ ಹೋಟೆಲ್ ಗೆ ನುಗ್ಗಿದ್ದು ಮರುದಿನ ಮತ್ತೆ ಡಯಾಸ್ಪೊರಾ ಕಾರ್ಯಕ್ರಮದಲ್ಲಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದಾನೆ. ಪೊಲೀಸರು ಆತನನ್ನು ಹಿಡಿದು ಕಾರ್ಯಕ್ರಮದಿಂದ ಹೊರಗೆಳೆದುಕೊಂಡು ಹೋದರು. ಪ್ರತಿಭಟನಾಕಾರನನ್ನು ಹ್ಯೂಗೋ ಲೆನ್ನನ್ ಎಂದು ಗುರುತಿಸಲಾಗಿದೆ. ಈ ದೇಶ ಆಸ್ಟ್ರೇಲಿಯನ್ನರಿಗೆ ಇಲ್ಲಿಗೆ ಭಾರತೀಯರು ಬೇಡ ಎಂದು ಘೋಷಣೆಗಳನ್ನು ಕೂಗುತ್ತಿದ್ದನು ಎನ್ನಲಾಗಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಲಪಂಥೀಯ ವಲಸಿಗ ವಿರೋಧಿ ಕಾರ್ಯಕರ್ತ ಹ್ಯೂಗೋ ಲೆನ್ನನ್ ಪ್ರತಿಭಟನೆ ನಡೆಸಿದ್ದು, ಅವರು ಮೆಲ್ಬೋರ್ನ್ ತಂಗಿದ್ದ ಹೋಟೆಲ್‌ನ ಭದ್ರತೆಯನ್ನು ಉಲ್ಲಂಘಿಸಿ ಒಳಗೆ ನುಗ್ಗಿದ್ದಾನೆ. ಪ್ರಧಾನಿ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಆಸ್ಟ್ರೇಲಿಯಾಕ್ಕೆ ಆಗಮಿಸಿದ್ದು, ಅವರು ಅಲ್ಲಿಗೆ ಬಂದಿಳಿದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ. ಮರುದಿನ ಮತ್ತೆ ಆತ ಡಯಾಸ್ಪೊರಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದನು.
ಇರಾನ್ ಮಾಜಿ ಸುಪ್ರೀಂ ನಾಯಕ ಅಲಿ ಖಮೇನಿ ಅಂತ್ಯಸಂಸ್ಕಾರ ಪೂರ್ಣ; ಮೊಜ್ತಬಾ ಗೈರು
ಮೆಲ್ಬೋರ್ನ್‌ನ ಮಾರ್ವೆಲ್ ಕ್ರೀಡಾಂಗಣದಲ್ಲಿ ಗುರುವಾರ ಭಾರತೀಯ ವಲಸಿಗರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದಾಗ ಅದಕ್ಕೆ ಅಡ್ಡಿ ಪಡಿಸಲು ಯತ್ನಿಸಿದ್ದನು. ಆದರೆ ಕಾರ್ಯಕ್ರಮದಲ್ಲಿ ನುಡಿಸುತ್ತಿದ್ದ ಸಂಗೀತದ ಕಾರಣದಿಂದ ಯಾರಿಗೂ ಆತನ ಘೋಷಣೆಗಳು ಕೇಳಲಿಲ್ಲ.
ಆಸ್ಪಿಲ್ ಎಂಬ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮ ಖಾತೆ ಹೊಂದಿರುವ ಹ್ಯೂಗೋ ಲೆನ್ನನ್ ಇದು ಆಸ್ಟ್ರೇಲಿಯಾ ಇಲ್ಲಿಗೆ ಭಾರತೀಯರು ಬೇಡ. ಇಲ್ಲಿಗೆ ವಲಸಿಗರು ಬೇಡ. ಈ ದೇಶ ಆಸ್ಟ್ರೇಲಿಯನ್ನರಿಗೆ ಎಂದು ಘೋಷಣೆ ಕೂಗುತ್ತಿದ್ದನು. ಕೂಡಲೇ ಪೊಲೀಸರು ಆತನನ್ನು ಬಾಲ್ಕನಿಯಿಂದ ಎಳೆದುಕೊಂಡುಹೊರಗೆ ಕರೆದುಕೊಂಡು ಹೋದರು.
ಪ್ರಧಾನಿ ಮೋದಿ ಅವರು ತಂಗಿದ್ದ ಹೋಟೆಲ್ ಬಗ್ಗೆ ಹೇಗೆ ತಿಳಿಯಿತು ಎಂದು ಪೊಲೀಸರು ಆತನನ್ನು ಪ್ರಶ್ನಿಸಿದ್ದು ಇದಕ್ಕೆ ಉತ್ತರಿಸಲು ಆತ ನಿರಾಕರಿಸಿದ್ದನು ಎನ್ನಲಾಗಿದೆ. ಈ ಕುರಿತು ಆಸ್ಟ್ರೇಲಿಯಾ ಮೂಲದ ಪತ್ರಿಕೆ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿತ್ತು. ಇದರಿಂದ ಕೆಲವು ಬಲಪಂಥೀಯರು ಮೋದಿ ಅವರ ಭೇಟಿಯ ಸಮಯದಲ್ಲಿ ನಗರದಾದ್ಯಂತ ಅವರ ಚಲನವಲನಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು ಎನ್ನಲಾಗಿದೆ.
ಘಟನೆ ಕುರಿತು ಮಾಹಿತಿ ನೀಡಿರುವ ವಿಕ್ಟೋರಿಯಾ ಪೊಲೀಸರ ವಕ್ತಾರರು, ಆತನನ್ನು ಬಂಧಿಸಲಾಗಿಲ್ಲ. ಆದರೆ ಸ್ಥಳದಿಂದ ಬೇರೆಡೆಗೆ ಕರೆದುಕೊಂಡು ಹೋಗಲಾಗಿದೆ. ಲೆನ್ನನ್ ಒಬ್ಬ ನವ ನಾಜಿ ಸಹವರ್ತಿ. ಶ್ರೀಮಂತ ಕುಟುಂಬದಿಂದ ಬಂದವನು. ತೀವ್ರ ಬಲಪಂಥೀಯನಾಗಿ ಗುರುತಿಸಿಕೊಂಡಿದ್ದಾನೆ. ಕಳೆದ ವರ್ಷ ಸಾವಿರಾರು ಸಮಾನ ಮನಸ್ಕ ವಲಸೆ ವಿರೋಧಿ ಪ್ರತಿಭಟನಾಕಾರರರಲ್ಲಿ ಒಬ್ಬನಾಗಿ ಗುರುತಿಸಿಕೊಂಡಿದ್ದನು ಎಂದು ಹೇಳಿದರು.
"ಸಾಯಲೂ ಸಿದ್ಧ"; ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುವ ನಿರ್ಧಾರ ಪ್ರಕಟಿಸಿದ ಶೇಖ್ ಹಸೀನಾ
ಪ್ರಧಾನಿ ಮೋದಿ ಅವರು ಗುರುವಾರ ಮೆಲ್ಬೋರ್ನ್‌ನ ಮಾರ್ವೆಲ್ ಕ್ರೀಡಾಂಗದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಸಂವಾದ ನಡೆಸಿದರು.