ಮಾರ್ಚ್ 18 ರಿಂದ ಜೆಎಸ್‌ಡಬ್ಲ್ಯು ಇಂಡಿಯನ್ ಓಪನ್ ಸ್ಕ್ವಾಷ್!
ಮುಂಬೈನ ಸಿಸಿಐ ಬ್ರಬೋರ್ನ್ ಸ್ಟೇಡಿಯಂನಲ್ಲಿ ಮಾರ್ಚ್ 18 ರಂದು ಎರಡನೇ ಆವೃತ್ತಿಯ ಜೆಎಸ್‌ಡಬ್ಲ್ಯು ಇಂಡಿಯನ್ ಓಪನ್ ಆರಂಭವಾಗಲಿದ್ದು, ಐದು ದಿನಗಳ ಕಾಲ ಉನ್ನತ ಮಟ್ಟದ ಸ್ಕ್ವಾಷ್ ಪಂದ್ಯಗಳಿಗೆ ವೇದಿಕೆ ಸಿದ್ಧವಾಗಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಸ್ಕ್ವಾಷ್ ಪದಾರ್ಪಣೆ ಮಾಡುತ್ತಿರುವುದರಿಂದ ಭಾರತದಲ್ಲಿ ಈ ಕ್ರೀಡೆಗೆ ಉತ್ತಮ ಪರಿಸರ ಸೃಷ್ಟಿಸುವುದು ಇದರ ಹಿಂದಿನ ಉದ್ದೇಶವಾಗಿದೆ.