ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಏಷ್ಯನ್ ಪ್ಯಾರಾ ಗೇಮ್ಸ್; ಒಂದೇ ದಿನ ದಾಖಲೆಯ 24 ಪದಕಗಳೊಂದಿಗೆ ಭಾರತ ಮಿಂಚು

Asian Para Games Day 2 Highlights: ನಿಶಾದ್ ಕುಮಾರ್‌ ಪುರುಷರ ಹೈ ಜಂಪ್ (T47) ವಿಭಾಗದ ಫೈನಲ್‌ನಲ್ಲಿ 2.04 ಮೀಟರ್‌ಗಳಷ್ಟು ಎತ್ತರಕ್ಕೆ ಜಿಗಿಯುವ ಮೂಲಕ ಕ್ರೀಡಾಕೂಟದ ದಾಖಲೆಯನ್ನು ನಿರ್ಮಿಸಿ, ತಮ್ಮ ಎರಡನೇ ಚಿನ್ನದ ಪದಕವನ್ನು ಗೆದ್ದುಕೊಂಡರು. ಸೋಮವಾರ ಪುರುಷರ ಲಾಂಗ್ ಜಂಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಒಂದೇ ದಿನ ದಾಖಲೆಯ 24 ಪದಕಗಳೊಂದಿಗೆ ಭಾರತ ಮಿಂಚು

Asian Para Games 2026 -

Abhilash BC
Abhilash BC Oct 20, 2026 6:11 PM

ನಗೋಯಾ, ಅ.20: ಏಷ್ಯನ್ ಪ್ಯಾರಾ ಕ್ರೀಡಾಕೂಟದ ಎರಡನೇ ದಿನ ಭಾರತಕ್ಕೆ ದಾಖಲೆಯ ದಿನವಾಯಿತು. ಅಥ್ಲೆಟಿಕ್ಸ್, ಪ್ಯಾರಾ ಟೇಬಲ್ ಟೆನ್ನಿಸ್, ಶೂಟಿಂಗ್, ಪವರ್‌ಲಿಫ್ಟಿಂಗ್ ಮತ್ತು ಈಜು ವಿಭಾಗಗಳಲ್ಲಿ ಭಾರತ ಒಟ್ಟು 24 ಪದಕಗಳನ್ನು ಗೆದ್ದುಕೊಂಡಿತು.

ಮಹಿಳೆಯರ 400 ಮೀಟರ್‌ T20 ವಿಭಾಗದಲ್ಲಿ ದೀಪ್ತಿ ಜೀವಂಜಿ ಅವರು ಗೆದ್ದ ಚಿನ್ನದ ಪದಕ, ಪುರುಷರ ಡಿಸ್ಕಸ್ ಥ್ರೋ (F51/F52/F53) ವಿಭಾಗದಲ್ಲಿ ಪ್ರಣವ್ ಸೂರ್ಮಾ ಮತ್ತು ರಾಮ್ ರತನ್ ಸಿಂಗ್ ಅವರು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದು, ಮತ್ತು ಪುರುಷರ ಹೈ ಜಂಪ್ T47 ವಿಭಾಗದಲ್ಲಿ ನಿಶಾದ್ ಕುಮಾರ್ ಅವರು ಕ್ರೀಡಾಕೂಟದ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಪಡೆದಿದ್ದು ಈ ಕೂಟದ ಪ್ರಮುಖ ಆಕರ್ಷಣೆಗಳಾಗಿದ್ದವು. ಇವುಗಳಲ್ಲದೆ, ಮಹಿಳೆಯರ 200 ಮೀಟರ್‌ T12 ವಿಭಾಗದಲ್ಲಿ ಸಿಮ್ರಾನ್ ಚಿನ್ನದ ಪದಕವನ್ನು ಹಾಗೂ ತೇಜಲ್ಬೆನ್ ದಾಮೋರ್ ಕಂಚಿನ ಪದಕವನ್ನು ಗೆದ್ದುಕೊಂಡರು.

ಏಷ್ಯನ್ ಪ್ಯಾರಾ ಗೇಮ್ಸ್‌; ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದ ಸಿಮ್ರಾನ್; ತೇಜಲ್ಬೆನ್ ಕಂಚಿಗೆ ತೃಪ್ತಿ

ಪುರುಷರ ಡಿಸ್ಕಸ್ ಥ್ರೋ (F43/F44/F62/F64) ವಿಭಾಗದಲ್ಲಿ ಭಾರತವು ಪದಕ ಪಟ್ಟಿಯ ಅಗ್ರ ಮೂರು ಸ್ಥಾನಗಳನ್ನು ತನ್ನದಾಗಿಸಿಕೊಂಡಿತು. ಇದರಲ್ಲಿ ದೆನ್ವೆಂದರ್ ಕುಮಾರ್ ಚಿನ್ನ, ರಾಕೇಶ್ ಬೆಳ್ಳಿ ಮತ್ತು ಪ್ರದೀಪ್ ಕುಮಾರ್ ಕಂಚಿನ ಪದಕಗಳನ್ನು ಗೆದ್ದರು. ಇತರೆ ಗಮನಾರ್ಹ ಸಾಧನೆಗಳಲ್ಲಿ ಪ್ರೀತಿ ಪಾಲ್, ಮನೀಶ್ ನರ್ವಾಲ್ ಮತ್ತು ಪವರ್‌ಲಿಫ್ಟರ್ ಅಶೋಕ್ ಕುಮಾರ್ ಮಲಿಕ್ ಅವರು ಬೆಳ್ಳಿ ಪದಕಗಳನ್ನು ಪಡೆದರೆ, ಹೊಕಾಟೊ ಹೊಟೊಝೆ, ಪ್ರವೀಣ್ ಶರ್ಮಾ, ಆಯುಷ್ ವರ್ಮಾ, ನಿರಂಜನ್ ಮುಕುಂದನ್ ಹಾಗೂ ಪ್ಯಾರಾ ಟೇಬಲ್ ಟೆನ್ನಿಸ್ ಮತ್ತು ಶೂಟಿಂಗ್ ಕ್ರೀಡೆಗಳ ಹಲವು ಕ್ರೀಡಾಪಟುಗಳು ಕಂಚಿನ ಪದಕಗಳನ್ನು ಗೆದ್ದುಕೊಂಡರು.

ಪದಕಗಳ ಈ ಭರ್ಜರಿ ಗಳಿಕೆಯು ಭಾರತಕ್ಕೆ ಒಂದು ಐತಿಹಾಸಿಕ ದಿನವಾಯಿತು ಕ್ರೀಡಾಪಟುಗಳು ವಿವಿಧ ಕ್ರೀಡಾ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು.

ನಿಶಾದ್ ಅವಳಿ ಸ್ವರ್ಣ ಸಾಧನೆ

ನಿಶಾದ್ ಕುಮಾರ್‌ ಪುರುಷರ ಹೈ ಜಂಪ್ (T47) ವಿಭಾಗದ ಫೈನಲ್‌ನಲ್ಲಿ 2.04 ಮೀಟರ್‌ಗಳಷ್ಟು ಎತ್ತರಕ್ಕೆ ಜಿಗಿಯುವ ಮೂಲಕ ಕ್ರೀಡಾಕೂಟದ ದಾಖಲೆಯನ್ನು ನಿರ್ಮಿಸಿ, ತಮ್ಮ ಎರಡನೇ ಚಿನ್ನದ ಪದಕವನ್ನು ಗೆದ್ದುಕೊಂಡರು. ಸೋಮವಾರ ಪುರುಷರ ಲಾಂಗ್ ಜಂಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.