ಏಷ್ಯನ್ ಪ್ಯಾರಾ ಗೇಮ್ಸ್; ಮಂಗಳವಾರವೂ ಮುಂದುವರಿದ ಭಾರತದ ಪದಕ ಬೇಟೆ
Asian Para Games 2026: ಕ್ಲಾಸ್ 4-5ರ ಸೆಮಿಫೈನಲ್‌ನಲ್ಲಿ ಭಾವಿನಾ ಅವರು ಚೀನಾದ ಝಾಂಗ್ ಬಿಯಾನ್ ವಿರುದ್ಧ 7-11, 5-11, 7-11 ಅಂತರದಲ್ಲಿ ಸೋತರು. ಕ್ಲಾಸ್ 3ರ ಸೆಮಿಫೈನಲ್‌ನಲ್ಲಿ ಸೋನಲ್‌ಬೆನ್ ಅವರು ದಕ್ಷಿಣ ಕೊರಿಯಾದ ಜಿಯು ಯೂನ್ ವಿರುದ್ಧ 7-11, 5-11, 6-11 ಅಂತರದಲ್ಲಿ ಪರಾಭವಗೊಂಡರು.
Deepthi Jeevanji -
ನಗೋಯಾ, ಅ.20: ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ ಮಂಗಳವಾರವೂ ಭಾರತದ ಪ್ಯಾರಾ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದೆ. ಭಾರತದ ದೀಪ್ತಿ ಜೀವಂಜಿಯವರು ಮಹಿಳೆಯರ 400 ಮೀಟರ್ ಟಿ20 (T20) ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡರು. 23 ವರ್ಷ ವಯಸ್ಸಿನ ಇವರು 56.36 ಸೆಕೆಂಡುಗಳ ಸಮಯವನ್ನು ದಾಖಲಿಸುವ ಮೂಲಕ ಹೊಸ ಗೇಮ್ಸ್ ದಾಖಲೆಯನ್ನು ನಿರ್ಮಿಸಿದರು.
ತೆಲಂಗಾಣದ ದೀಪ್ತಿ, ಜಪಾನ್‌ನ ನೀನಾ ಕನ್ನೊ ಅವರಿಗಿಂತ ಮುಂದಿದ್ದು ಅಗ್ರಸ್ಥಾನ ಪಡೆದರು. ಕನ್ನೊ 58.92 ಸೆಕೆಂಡುಗಳೊಂದಿಗೆ ಬೆಳ್ಳಿ ಪದಕ ಗೆದ್ದರು. ಕನ್ನೊ ಅವರ ದೇಶದವರೇ ಆದ ಅಕಾನೆ ಕಾಟೊ, 1 ನಿಮಿಷ 0.26 ಸೆಕೆಂಡುಗಳ ಸಮಯದೊಂದಿಗೆ ಕಂಚಿನ ಪದಕವನ್ನು ಪಡೆದರು.
ದೀಪ್ತಿ ತಮ್ಮ ಸಾಧನೆಗಳ ಪಟ್ಟಿಗೆ ಮತ್ತೊಂದು ಪದಕವನ್ನು ಸೇರಿಸಿಕೊಂಡಿದ್ದಾರೆ. ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ದೀಪ್ತಿ 2024ರ ಪ್ಯಾರಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ ಮತ್ತು ಅದೇ ವಿಭಾಗದಲ್ಲಿ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನೂ ಪಡೆದಿದ್ದಾರೆ.
ಇದಕ್ಕೂ ಮುನ್ನ ನಡೆದಿದ್ದ ಮಹಿಳಾ ಸಿಂಗಲ್ಸ್ ಟೇಬಲ್ ಟೆನ್ನಿಸ್ ವಿಭಾಗದಲ್ಲಿ ಭಾರತದ ಭಾವಿನಾ ಪಟೇಲ್ ಮತ್ತು ಸೋನಲ್ಬೆನ್ ಪಟೇಲ್ ಅವರು ಕಂಚಿನ ಪದಕಗಳನ್ನು ಗೆದ್ದುಕೊಂಡರು. ಇಬ್ಬರೂ ಆಟಗಾರ್ತಿಯರು ತಮ್ಮ ಸೆಮಿಫೈನಲ್ ಪಂದ್ಯಗಳಲ್ಲಿ ಸೋತರೂ, ಪದಕ ವೇದಿಕೆಯನ್ನು ಏರುವಲ್ಲಿ ಯಶಸ್ವಿಯಾದರು.
WPL 2027 Auction: ಹರಾಜಿನಲ್ಲಿ ಭಾಗವಹಿಸಲಿರುವ 146 ಆಟಗಾರ್ತಿಯರ ಪಟ್ಟಿ, ಮೂಲ ಬೆಲೆ ವಿವರ!
ಕ್ಲಾಸ್ 4-5ರ ಸೆಮಿಫೈನಲ್‌ನಲ್ಲಿ ಭಾವಿನಾ ಅವರು ಚೀನಾದ ಝಾಂಗ್ ಬಿಯಾನ್ ವಿರುದ್ಧ 7-11, 5-11, 7-11 ಅಂತರದಲ್ಲಿ ಸೋತರು. ಕ್ಲಾಸ್ 3ರ ಸೆಮಿಫೈನಲ್‌ನಲ್ಲಿ ಸೋನಲ್‌ಬೆನ್ ಅವರು ದಕ್ಷಿಣ ಕೊರಿಯಾದ ಜಿಯು ಯೂನ್ ವಿರುದ್ಧ 7-11, 5-11, 6-11 ಅಂತರದಲ್ಲಿ ಪರಾಭವಗೊಂಡರು.
ಬೆಳ್ಳಿ ಗೆದ್ದ ಮನೀಶ್ ನರ್ವಾಲ್
ಪುರುಷರ P1 - 10 ಮೀಟರ್ ಏರ್ ಪಿಸ್ತೂಲ್ SH1 ವಿಭಾಗದಲ್ಲಿ, ಎರಡು ಬಾರಿ ಪ್ಯಾರಾಲಿಂಪಿಕ್ ಪದಕ ವಿಜೇತರಾದ ಮನೀಶ್ ನರ್ವಾಲ್ ಬೆಳ್ಳಿ ಪದಕವನ್ನು ಗೆದ್ದುಕೊಂಡರು. ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದಿರುವ ನರ್ವಾಲ್, ಫೈನಲ್‌ನಲ್ಲಿ ಒಟ್ಟು 224.2 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು. ಈ ಪದಕದೊಂದಿಗೆ, ಮನೀಶ್ 2028ರ ಲಾಸ್ ಏಂಜಲೀಸ್ ಪ್ಯಾರಾಲಿಂಪಿಕ್ಸ್‌ಗೆ ಅಹರ್ತೆ ಪಡೆದರು. ಪ್ರಸ್ತುತ ವಿಶ್ವ ದಾಖಲೆ ಹೊಂದಿರುವ ದಕ್ಷಿಣ ಕೊರಿಯಾದ ಜೋ ಜಿಯೊಂಗ್‌ಡು, ಒಟ್ಟು 233.7 ಅಂಕಗಳೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡರು.
ಜಾವೆಲಿನ್‌ನಲ್ಲಿ ಅವಳಿ ಪದಕ
ಪುರುಷರ ಜಾವೆಲಿನ್ ಎಸೆತದ (F53/54 ವಿಭಾಗ) ಸ್ಪರ್ಧೆಯಲ್ಲಿ, ಭಾರತದ ಪ್ರದೀಪ್ ಕುಮಾರ್ ಮತ್ತು ಆಯುಷ್ ವರ್ಮಾ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದುಕೊಂಡರು. F54 ವಿಭಾಗದಲ್ಲಿ ಸ್ಪರ್ಧಿಸಿದ ಪ್ರದೀಪ್, 27.45 ಮೀಟರ್‌ಗಳ ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಎರಡನೇ ಸ್ಥಾನ ಪಡೆದರು. ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಅವರು ಸತತವಾಗಿ ಗೆದ್ದ ಎರಡನೇ ಬೆಳ್ಳಿ ಪದಕ ಇದಾಗಿದೆ. F53 ವಿಭಾಗದಲ್ಲಿ ಸ್ಪರ್ಧಿಸುವ ಆಯುಷ್, 17.88 ಮೀಟರ್‌ಗಳಷ್ಟು ದೂರಕ್ಕೆ ಎಸೆಯುವ ಮೂಲಕ ಕಂಚಿನ ಪದಕವನ್ನು ಗೆದ್ದುಕೊಂಡರು.