ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೆನ್‌ಪಿನ್ ಬೌಲಿಂಗ್ ಟೂರ್ನಿಯಲ್ಲಿ ಆಕಾಶ್ ಅಶೋಕ್ ಕುಮಾರ್‌ಗೆ ಪ್ರಶಸ್ತಿ

ಫೈನಲ್‌ನ ಮೊದಲ ಗೇಮ್‌ನಲ್ಲೇ ಆಕಾಶ್ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಅವರು 205 ಪಿನ್‌ಗಳನ್ನು ಗಳಿಸಿದರೆ, ಆಂಟನಿ 160 ಪಿನ್‌ಗಳಿಗೆ ಸೀಮಿತರಾದರು. ಇದರಿಂದ ಆಕಾಶ್‌ಗೆ 45 ಪಿನ್‌ಗಳ ಮಹತ್ವದ ಮುನ್ನಡೆ ದೊರೆಯಿತು. ಎರಡನೇ ಗೇಮ್‌ನಲ್ಲಿಯೂ ತಮ್ಮ ಸ್ಥಿರ ಪ್ರದರ್ಶನವನ್ನು ಮುಂದುವರಿಸಿದ ಆಕಾಶ್ 201 ಪಿನ್‌ಗಳನ್ನು ಗಳಿಸಿದರು.

ಟೆನ್‌ಪಿನ್ ಬೌಲಿಂಗ್ ಟೂರ್ನಿಯಲ್ಲಿ ಆಕಾಶ್ ಅಶೋಕ್ ಕುಮಾರ್‌ಗೆ ಪ್ರಶಸ್ತಿ

-

Profile
Ashok Nayak Oct 28, 2026 6:37 PM

ಬೆಂಗಳೂರು: ಜೇನಯನಗರದ ಕಾಸ್ಮೋಪಾಲಿಟನ್ ಕ್ಲಬ್‌ನ ಅಮೀಬಾ ಬೌಲಿಂಗ್ ಸೆಂಟರ್‌ನಲ್ಲಿ ಮುಕ್ತಾಯಗೊಂಡ 2ನೇ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೆನ್‌ಪಿನ್ ಬೌಲಿಂಗ್ ಟೂರ್ನಿಯಲ್ಲಿ ಆಕಾಶ್ ಅಶೋಕ್ ಕುಮಾರ್ ಸತತ ಎರಡನೇ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ.

ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಆಕಾಶ್, ಮೂರನೇ ಶ್ರೇಯಾಂಕದ ಆಂಟನಿ ಆರ್ ಅವರನ್ನು ಎರಡು ಗೇಮ್‌ಗಳ ಒಟ್ಟು ಪಿನ್‌ಫಾಲ್‌ನಲ್ಲಿ 406–339 ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಆಕಾಶ್ 67 ಪಿನ್‌ಗಳ ಭರ್ಜರಿ ಮುನ್ನಡೆಯೊಂದಿಗೆ ಜಯ ಸಾಧಿಸಿದರು.

ಫೈನಲ್‌ನ ಮೊದಲ ಗೇಮ್‌ನಲ್ಲೇ ಆಕಾಶ್ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಅವರು 205 ಪಿನ್‌ಗಳನ್ನು ಗಳಿಸಿದರೆ, ಆಂಟನಿ 160 ಪಿನ್‌ಗಳಿಗೆ ಸೀಮಿತರಾದರು. ಇದರಿಂದ ಆಕಾಶ್‌ಗೆ 45 ಪಿನ್‌ಗಳ ಮಹತ್ವದ ಮುನ್ನಡೆ ದೊರೆಯಿತು. ಎರಡನೇ ಗೇಮ್‌ನಲ್ಲಿಯೂ ತಮ್ಮ ಸ್ಥಿರ ಪ್ರದರ್ಶನವನ್ನು ಮುಂದುವರಿಸಿದ ಆಕಾಶ್ 201 ಪಿನ್‌ಗಳನ್ನು ಗಳಿಸಿದರು. ಆಂಟನಿ 179 ಪಿನ್‌ಗಳನ್ನು ದಾಖಲಿಸಿದರು. ಎರಡೂ ಗೇಮ್‌ಗಳಲ್ಲಿ ಆಕಾಶ್ ತೋರಿದ ಸ್ಥಿರ ಆಟ ಮತ್ತು ಒತ್ತಡದ ಸಂದರ್ಭದಲ್ಲಿನ ಸಂಯಮ ಅವರಿಗೆ ಸುಲಭ ಜಯ ತಂದು ಕೊಟ್ಟಿತು. ಈ ಮೂಲಕ ಅವರು ಸತತ ಎರಡನೇ ಟೂರ್ನಿಯ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದರು.

ಇದನ್ನೂ ಓದಿ: LIC All-India Sports : ಬೆಂಗಳೂರಿನಲ್ಲಿ ಎಲ್‌ಐಸಿ ಅಖಿಲ ಭಾರತ ಕ್ರೀಡಾಕೂಟಕ್ಕೆ ಚಾಲನೆ

ಇದಕ್ಕೂ ಮುನ್ನ ನಡೆದ ನಾಕೌಟ್ ಹಂತದ ಮೊದಲ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಆಕಾಶ್, ನಾಲ್ಕನೇ ಶ್ರೇಯಾಂಕದ ಸತೀಶ್ ಎ.ವಿ. ಅವರನ್ನು 417–312 ಅಂಕಗಳಿಂದ ಸೋಲಿಸಿದರು. 105 ಪಿನ್‌ಗಳ ಅಂತರದ ಈ ಗೆಲುವಿನೊಂದಿಗೆ ಆಕಾಶ್ ಫೈನಲ್‌ಗೆ ಪ್ರವೇಶಿಸಿದರು.

ಎರಡನೇ ನಾಕೌಟ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಆಂಟನಿ ಆರ್ ಅವರು ವಿಜಯ್ ಪಂಜಾಬಿ ಅವರನ್ನು 326–276 ಅಂಕಗಳಿಂದ ಮಣಿಸಿದರು. 50 ಪಿನ್‌ಗಳ ಅಂತರದ ಗೆಲುವಿನೊಂದಿಗೆ ಆಂಟನಿ ಫೈನಲ್‌ನಲ್ಲಿ ಆಕಾಶ್ ಅವರನ್ನು ಎದುರಿಸುವ ಅರ್ಹತೆ ಪಡೆದರು.

ವಿಶೇಷ ಪ್ರಶಸ್ತಿಗಳು

* 6 ಗೇಮ್‌ಗಳ ಬ್ಲಾಕ್‌ನಲ್ಲಿ ಗರಿಷ್ಠ ಸರಾಸರಿ: ಆಕಾಶ್ ಅಶೋಕ್ ಕುಮಾರ್ – 192.90

* 18 ಗೇಮ್‌ಗಳಲ್ಲಿ ಗರಿಷ್ಠ ಸರಾಸರಿ: ಆಕಾಶ್ ಅಶೋಕ್ ಕುಮಾರ್ – 185.00

* 225ಕ್ಕಿಂತ ಹೆಚ್ಚು ಸ್ಕೋರ್ ದಾಖಲಿಸಿದ ಗರಿಷ್ಠ ಸಂಖ್ಯೆ: ಅಲೆನ್ ರಿಚರ್ಡ್ಸ್ – 2 ಬಾರಿ

* ಮಹಿಳೆಯರ 12 ಗೇಮ್‌ಗಳಲ್ಲಿ ಗರಿಷ್ಠ ಸರಾಸರಿ: ಪ್ರೀಮಲ್ ಜೆ. – 161.67

ಅಂತಿಮ ಫಲಿತಾಂಶ

  1. ಆಕಾಶ್ ಅಶೋಕ್ ಕುಮಾರ್ – ಪ್ರಥಮ ಸ್ಥಾನ (ವಿಜೇತ)
  2. ಆಂಟನಿ ಆರ್ – ದ್ವಿತೀಯ ಸ್ಥಾನ (ರನ್ನರ್-ಅಪ್)
  3. ಸತೀಶ್ ಎ.ವಿ. – ತೃತೀಯ ಸ್ಥಾನ
  4. ವಿಜಯ್ ಪಂಜಾಬಿ – ನಾಲ್ಕನೇ ಸ್ಥಾನ