ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

'ಹ್ಯಾಲೋವೀನ್' ಫೀವರ್: ಇಕೋವರ್ಲ್ಡ್‌ನಲ್ಲಿ ನಡೆಯಲಿದೆ ನ್ಯೂಯಾರ್ಕ್ ಶೈಲಿಯ ಬೃಹತ್ 'ಭಯಾನಕ' ಸಂಭ್ರಮ!

ಹ್ಯಾಲೋವೀನ್ ಎಂದರೆ ಕೇವಲ ಪಬ್ ಅಥವಾ ನೈಟ್‌ಕ್ಲಬ್‌ಗಳ ನಾಲ್ಕು ಗೋಡೆಗಳ ನಡುವಿನ ಪಾರ್ಟಿಗಳಿಗೆ ಮಾತ್ರ ಸೀಮಿತ ಎಂಬ ಮಾತಿದೆ. ಆದರೆ ಈ ಬಾರಿ ಇದಕ್ಕೆ ಭಿನ್ನವಾಗಿ, ಕುಟುಂಬ ಸಮೇತ ಮುಕ್ತವಾಗಿ ತೆರೆದ ಜಾಗದಲ್ಲಿ ಎಂಜಾಯ್ ಮಾಡಬಹುದಾದ 'ಫಾರ್‌ಅವೇ ಹ್ಯಾಲೋವೀನ್ ಲ್ಯಾಂಡ್' ಎಂಬ ಬೃಹತ್ ಓಪನ್-ಏರ್ ಉತ್ಸವ ಬೆಂಗಳೂರಿನಲ್ಲಿ ಆಯೋಜನೆ ಯಾಗಿದೆ.

ಇಕೋವರ್ಲ್ಡ್‌ನಲ್ಲಿ ನಡೆಯಲಿದೆ ನ್ಯೂಯಾರ್ಕ್ ಶೈಲಿಯ ಬೃಹತ್ 'ಭಯಾನಕ' ಸಂಭ್ರಮ!

-

Profile
Ashok Nayak Nov 1, 2026 10:18 AM

ಬೆಂಗಳೂರು: ಹ್ಯಾಲೋವೀನ್ ಎಂದರೆ ಕೇವಲ ಪಬ್ ಅಥವಾ ನೈಟ್‌ಕ್ಲಬ್‌ಗಳ ನಾಲ್ಕು ಗೋಡೆಗಳ ನಡುವಿನ ಪಾರ್ಟಿಗಳಿಗೆ ಮಾತ್ರ ಸೀಮಿತ ಎಂಬ ಮಾತಿದೆ. ಆದರೆ ಈ ಬಾರಿ ಇದಕ್ಕೆ ಭಿನ್ನವಾಗಿ, ಕುಟುಂಬ ಸಮೇತ ಮುಕ್ತವಾಗಿ ತೆರೆದ ಜಾಗದಲ್ಲಿ ಎಂಜಾಯ್ ಮಾಡಬಹುದಾದ 'ಫಾರ್‌ಅವೇ ಹ್ಯಾಲೋವೀನ್ ಲ್ಯಾಂಡ್' ಎಂಬ ಬೃಹತ್ ಓಪನ್-ಏರ್ ಉತ್ಸವ ಬೆಂಗಳೂರಿನಲ್ಲಿ ಆಯೋಜನೆ ಯಾಗಿದೆ.

'ದಿ ಬೇ ಅಟ್ ಇಕೋವರ್ಲ್ಡ್‌'ನಲ್ಲಿ ನಡೆಯಲಿರುವ ಈ ವಿಭಿನ್ನ ಉತ್ಸವದಲ್ಲಿ ಸುಮಾರು 5,000ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ.

ಏನೇನಿರಲಿದೆ ಪ್ರಮುಖ ಆಕರ್ಷಣೆ?

* ನ್ಯೂಯಾರ್ಕ್ ಶೈಲಿಯ ಹ್ಯಾಲೋವೀನ್ ಪರೇಡ್: ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನ್ಯೂಯಾರ್ಕ್ ಮಾದರಿಯ ಹ್ಯಾಲೋವೀನ್ ಪರೇಡ್ ಆಯೋಜಿಸಲಾಗುತ್ತಿದೆ. ಪಾಪ್ ಸಾಮ್ರಾಟ ಮೈಕಲ್ ಜಾಕ್ಸನ್‌ನ ಫೇಮಸ್ 'ಥ್ರಿಲ್ಲರ್' ಹಾಡಿನ ಬೀಟ್‌ಗಳಿಗೆ ತಕ್ಕಂತೆ ಈ ಪರೇಡ್ ಸಾಗಲಿದ್ದು, ನೆರೆದವರನ್ನು ರಂಜಿಸಲಿದೆ.

ಇದನ್ನೂ ಓದಿ: Bangalore News: ಕಾನೂನು ಬಾಹಿರವಾಗಿ ಮದರಸಾಗೆ ನೀಡಿರುವ ಐದು ಲಕ್ಷ ರೂ. ಅನುದಾನ ವಾಪಸ್ ಪಡೆಯುವಂತೆ ಎರಡನೇ ಬಾರಿಗೆ ಹೈ ಕೋರ್ಟ್ ಆದೇಶ

* ಮೈಝುಮ್ ಎನಿಸುವ ಮ್ಯೂಸಿಕಲ್ ಶೋ: 'ಕ್ರಿಯೇಚರ್ಸ್ ಆಫ್ ದಿ ಫಾರ್ಗಾಟನ್ ಫಾರೆಸ್ಟ್' ಹೆಸರಿನಲ್ಲಿ ಮೂನ್‌ಲೈಟ್ ಮ್ಯೂಸಿಕಲ್ ಶೋ ಇರಲಿದೆ. ಕೇವಲ ವೇದಿಕೆಯ ಮೇಲಷ್ಟೇ ಅಲ್ಲದೆ, ಪ್ರೇಕ್ಷಕರ ಸುತ್ತಮುತ್ತಲೇ ಬಂದು ಕಲಾವಿದರು ಭಯಾನಕ ಪಾತ್ರಗಳಿಗೆ ಜೀವ ತುಂಬಲಿದ್ದಾರೆ.

* ಭೂತಗಳೊಂದಿಗೆ ಭೇಟಿ-ಫೋಟೋಶೂಟ್: ಹ್ಯಾಲೋವೀನ್ ಎಂದರೆ ಅಲ್ಲಿ ಭೂತ-ಪ್ರೇತಗಳು ಇರಲೇಬೇಕು! ಇಲ್ಲಿ ಗೇಟ್ ಕಾಯುವ ಗ್ರಿಮ್‌ ರೀಪರ್‌, ಡ್ರಾಕುಲಾ, ಹಾಂಟೆಡ್‌ ಡಾಲ್‌ ಮತ್ತು ಎವಿಲ್‌ ವಿಚ್‌ ವೇಷಧಾರಿಗಳನ್ನು ಭೇಟಿಯಾಗುವ ಅವಕಾಶವಿದೆ. ಇವರೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳಲು ವಿಶೇಷ ಸೆಟ್ ಮತ್ತು ಪ್ರಾಪ್‌ಗಳನ್ನು ಹಾಕಲಾಗಿದೆ.

* ಡಿಜೆ ಮ್ಯೂಸಿಕ್ & ನೈಟ್ ಮಾರ್ಕೆಟ್: ಮನರಂಜನೆಯನ್ನು ಮತ್ತಷ್ಟು ಹೆಚ್ಚಿಸಲು ಖ್ಯಾತ ಡಿಜೆ ನ್ಯಾಶ್ ಅವರಿಂದ ಲೈವ್ ಡಿಜೆ ಮ್ಯೂಸಿಕ್ ಇರಲಿದೆ. ಇದರ ಜೊತೆಗೆ 'ನೈಟ್ ಫ್ಲೀ ಮಾರ್ಕೆಟ್' ಹಾಗೂ ನಾನಾ ಬಗೆಯ ರುಚಿಕರ ಫುಡ್ ಸ್ಟಾಲ್‌ಗಳು ಇರಲಿವೆ. ಬಿಎಲ್‌ಆರ್‌ ಬ್ರೀವಿಂಗ್‌ ಕೊ. ಪಾನೀಯಗಳ ವ್ಯವಸ್ಥೆ ಮಾಡಲಿದೆ.

ಕಾರ್ಯಕ್ರಮಕ್ಕೆ ಬರುವವರು ತಮಗಿಷ್ಟವಾದ ವಿಭಿನ್ನ ಹ್ಯಾಲೋವೀನ್ ವೇಷಭೂಷಣಗಳನ್ನು ಧರಿಸಿ ಬಂದು ಈ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ.

ಒಟ್ಟಿನಲ್ಲಿ, ಪಬ್‌ಗಳ ಗದ್ದಲದಿಂದ ದೂರವಿರಲು ಬಯಸುವವರು, ತಮ್ಮ ಕುಟುಂಬ ಹಾಗೂ ಮಕ್ಕಳೊಂದಿಗೆ ಸೇರಿ ಹ್ಯಾಲೋವೀನ್ ಆಚರಿಸಲು ಇದೊಂದು ಹೇಳಿಮಾಡಿದ ವೇದಿಕೆಯಾಗಿದೆ.