Valentines Day 2024: ಇವತ್ತು ಕಿಸ್ ಡೇ- ನಲ್ಮೆಯ ಸಂಗಾತಿಗೆ ಚುಂಬಿಸುವ ಮುನ್ನ ಇದನ್ನು ತಿಳಿಯಿರಿ
ವ್ಯಾಲೆಂಟೈನ್ ವಾರದ ಕೊನೆಯ ದಿನ ಕಿಸ್ ಡೇ. ಎರಡು ಹೃದಯಗಳು ಬೆಸೆದು ಜನ್ಮ ಜನ್ಮಾಂತರದ ಅನುಬಂಧಕ್ಕೆ ಸಾಕ್ಷಿಯಾಗುವ ದಿನವನ್ನು ಕಿಸ್ ಡೇ ಎಂದು ಆಚರಿಸಲಾಗುತ್ತದೆ. ವ್ಯಾಲೆಂಟೈನ್ ಡೇ ದಿನದ ಮುಂಗಡ ದಿನ ಈ ದಿನವನ್ನು ಸೆಲೆಬ್ರೆಟ್ ಮಾಡಲಿದ್ದು, ಈ ಮುತ್ತುಗಳು ಸಂಬಂಧವನ್ನು ಗಟ್ಟಿಸಲು ಸಹಾಯ ಮಾಡುತ್ತದೆ, ಹಾಗೆಯೇ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ.
![ಕಿಸ್ ಡೇ; ಈ ದಿನ ಯಾಕೆ ಸೆಲೆಬ್ರೇಟ್ ಮಾಡುತ್ತಾರೆ..?](https://cdn-vishwavani-prod.hindverse.com/media/original_images/WhatsApp_Image_2025-02-13_at_11.35.41_2.jpeg)
ಸಾಂದರ್ಭಿಕ ಚಿತ್ರ
![Profile](https://vishwavani.news/static/img/user.png)
ಇಂದು ವ್ಯಾಲೆಂಟೈನ್ ವಾರದ ಕೊನೆಯ ದಿನವಾಗಿದ್ದು, ಕಿಸ್ ಡೇ ವ್ಯಾಲೆಂಟೈನ್ಸ್ ವೀಕ್‌ನ ಅತ್ಯಂತ ರೋಮ್ಯಾಂಟಿಕ್ ದಿನಗಳಲ್ಲಿ ಒಂದಾಗಿದೆ, ವ್ಯಾಲೆಂಟೈನ್ ಡೇ ದಿನದ ಮುಂಗಡ ದಿನ ಈ ದಿನವನ್ನು ಸೆಲೆಬ್ರೆಟ್ ಮಾಡಲಿದ್ದು, ಈ ಮುತ್ತುಗಳು ಸಂಬಂಧವನ್ನು ಗಟ್ಟಿಸಲು ಸಹಾಯ ಮಾಡುತ್ತದೆ, ಹಾಗೆಯೇ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಪ್ರೀತಿ ಎಂಬ ಎರಡಕ್ಷರದಲ್ಲಿ ತುಂಬಾ ಶಕ್ತಿ ಇದೆ. ಪ್ರೀತಿ ಇಲ್ಲದೆ ಜೀವನವೇ ಇಲ್ಲ. ಪ್ರತಿಯೊಬ್ಬರ ಬದುಕಿಗೆ ಪ್ರೀತಿ ಬೇಕೇ ಬೇಕು. ಪ್ರೀತಿ ಇಲ್ಲದ ಜೀವನವನ್ನು ನಾವ್ಯಾರೂ ಕೂಡ ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಪ್ರೀತಿ ಇದ್ದಲ್ಲಿ ಮಾತ್ರ ಸಂತೋಷ, ಸ್ನೇಹ, ನೆಮ್ಮದಿ, ಖುಷಿ ಇರಲು ಸಾಧ್ಯ. ಅಂದಹಾಗೆ ಪ್ರೀತಿ ಬಗ್ಗೆ ಈಗ್ಯಾಕೆ ಮಾತು ಬಂತು ಅಂದರೆ ನಾಳೆ ಪ್ರೇಮಿಗಳ ದಿನವಾಗಿದ್ದು, ಅದರ ಮುಂಚಿನ ದಿನವಾದು ಇಂದು ಕಿಸ್ ಡೇ ಎಂದು ಆಚರಿಸಲಾಗುತ್ತದೆ.
ಹೌದು ಪ್ರೀತಿಯಲ್ಲಿರುವವರು ಈ ದಿನದಂದು ಚುಂಬನದ ಮೂಲಕ ತಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತಾರೆ. ಇದರ ಮೂಲಕ ತಮ್ಮ ಸಂಗಾತಿಗೆ ಪ್ರೀತಿಯನ್ನು ತೋರಿಸುತ್ತಾರೆ. ಯಾರನ್ನಾದರೂ ಪ್ರೀತಿಸುವಂತವರು ನೀವಾಗಿದ್ದರೆ, ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕಾಯುತ್ತಿದ್ದರೆ ಈ ದಿನ ಉತ್ತಮ ಸಮಯ.
ಕಿಸ್ ಎನ್ನುವುದು ನಿಮ್ಮ ಪ್ರೀತಿಪಾತ್ರರಿಗೆ ನೀವು ಎಷ್ಟು ಪ್ರೀತಿಸುತ್ತಿದ್ದೀರಿ ಎಂಬುದನ್ನು ತಿಳಿಸುತ್ತದೆ. ಕಿಸ್ ಡೇ ಜನರು ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ಸಮಯವನ್ನು ಕಳೆಯಲು ಮತ್ತು ತಮ್ಮ ಪ್ರೀತಿಪಾತ್ರರ ಜೊತೆ ಚುಂಬನದೊಂದಿಗೆ ಒಂದು ಕ್ಷಣ ಕಳೆಯಲು ಪ್ರೇರೇಪಿಸುತ್ತದೆ.
ಇದು ಪ್ರೇಮಿಗಳು ಸಂತೋಷಪಡುವ, ಪ್ರೇಮವನ್ನು ಆಚರಿಸುವ, ಪ್ರೀತಿಯನ್ನು ವ್ಯಕ್ತಪಡಿಸುವ ತಿಂಗಳು. ಈ ಪ್ರೀತಿಯ ತಿಂಗಳಲ್ಲಿ ಬರುವ ಪ್ರೇಮಿಗಳ ದಿನಕ್ಕಾಗಿ ಪ್ರೇಮ ಜೀವಗಳು ಕಾತುರದಿಂದ ಕಾಯುತ್ತವೆ. ಅದಾಗಲೇ ಪ್ರೇಮಿಗಳ ವಾರ ಆರಂಭವಾಗಿದ್ದು ಇಂದು ಅಂದರೆ ಫೆಬ್ರವರಿ 13 ರಂದು ಪ್ರಪಂಚದಾದ್ಯಂತ 'ಕಿಸ್ ಡೇ' ಆಚರಿಸಲಾಗುತ್ತದೆ. ಪ್ರೀತಿಯನ್ನು ವ್ಯಕ್ತಪಡಿಸಲು ಕಿಸ್ ಅಥವಾ ಚುಂಬನ ಒಂದು ಉತ್ತಮ ಮಾರ್ಗವಾಗಿದೆ.
ಕಿಸ್ ಡೇ ಪಾಶ್ಚಾತ್ಯ ಸಂಸ್ಕೃತಿಯಾದರೂ ಈ ದಿನವನ್ನು 20 ನೇ ಶತಮಾನದಿಂದಲ್ಲೆ ಆಚರಿಸಲಾಗುತ್ತಿದ್ದು, ಮೊದಲು ಕಿಸ್ ಡೇ ಪ್ರಾರಂಭವಾಗಿದ್ದು ಇಂಗ್ಲೆಂಡ್ನಲ್ಲಿ. ಹೀಗಾಗಿ ಪ್ರೀತಿಯಲ್ಲಿ ಇರುವವರು ತಮ್ಮ ಸಂಗಾತಿಗಳಿಗೆ ಇಂದು ಕಿಸ್ ನೀಡುವ ಮೂಲಕ ತಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಾರೆ. ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಇರುವ ನಾನಾ ಮಾರ್ಗಗಳಲ್ಲಿ ಇದು ಕೂಡ ಒಂದಾಗಿದ್ದು, ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕಾಯುತ್ತಿದ್ದರೆ ಈ ದಿನ ನಿಮಗೆ ಸುದಿನವಾಗಿದೆ.
ಈ ಸುದ್ದಿಯನ್ನೂ ಓದಿ: Valentine’s Day Fashion 2025: ಹೀಗಿರಲಿ ನಿಮ್ಮ ವ್ಯಾಲೆಂಟೇನ್ಸ್ ಡೇ ಫ್ಯಾಷನ್ ಸ್ಟೇಟ್‌ಮೆಂಟ್ಸ್
ಬಿಸಿ-ಬಿಸಿ ಅಪ್ಪುಗೆಯ ಜೊತೆ ಮುತ್ತಿನ ಮಳೆಗೈದರೆ, ನಿಮ್ಮ ಸಂಗಾತಿ ಮನದಲ್ಲಿ ಜಗ ಮರೆಯುವ ಆಸೆ ಮನದ ಮೂಲೆಯಲ್ಲಿ ಪುಟಿದೇಳುತ್ತಿರುತ್ತದೆ. ಪ್ರೀತಿಯ ಮ್ಯಾಜಿಕ್ ಚುಂಬನದಲ್ಲಿ ಅಡಗಿದ್ದು, ಪ್ರೇಮಿ/ಸಂಗಾತಿ ಕೋಪಿಸಿಕೊಂಡಾಗ ಬಿಗಿದಪ್ಪಿ ಚುಂಬಿಸಿ ನೋಡಿ ಅವರು ಆ ಚುಂಬನದಲ್ಲಿ ಕೋಪವೆಲ್ಲಾ ಮರೆತು ಚಾಕೋಲೇಟ್ ರೀತಿ ಕರಗಿ ಹೋಗುತ್ತಾರೆ.
ಇನ್ನು ಮುತ್ತು ನಿಮ್ಮ ಪ್ರೀತಿಪಾತ್ರರಿಗೆ ನೀವು ಎಷ್ಟು ಪ್ರೀತಿಸುತ್ತಿದ್ದೀರಿ ಎಂಬುದನ್ನು ತಿಳಿಸುತ್ತದೆ. ಕಿಸ್ ಡೇ ಜನರು ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ಸಮಯವನ್ನು ಕಳೆಯಲು ಮತ್ತು ತಮ್ಮ ಪ್ರೀತಿಪಾತ್ರರ ಜೊತೆ ಚುಂಬನದೊಂದಿಗೆ ಒಂದು ಕ್ಷಣ ಕಳೆಯಲು ಪ್ರೇರೇಪಿಸುತ್ತದೆ. ಅಲ್ಲದೇ ಈ ದಿನ ಪ್ರಣಯದಿಂದ ಕೂಡಿರಲಿದ್ದು, ಪ್ರೀತಿಯನ್ನು ವ್ಯಕ್ತಪಡಿಸಲು, ಪರಸ್ಪರ ಹತ್ತಿರವಾಗಲು ಪ್ರೇಮಿಗಳು ಈ ದಿನ ಪರಸ್ಪರ ಚುಂಬಿಸುತ್ತಾರೆ.