ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Udho Udho Shri Renuka Yellamma: 1000 ಸಂಚಿಕೆ ಪೂರೈಸಿದ ಖುಷಿಯಲ್ಲಿ ʻಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ; ಕೇಕ್‌ ಕತ್ತರಿಸಿ ಸಂಭ್ರಮಿಸಿದ ಸೀರಿಯಲ್‌ ತಂಡ

Kannada Serial: ʻಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಅಪ್ಪಟ ಕನ್ನಡ ಮಣ್ಣಿನ ಪೌರಾಣಿಕ ಕಥಾವಸ್ತುವನ್ನಿಟ್ಟುಕೊಂಡು ಶುರುವಾಗಿತ್ತು. ಈ ಧಾರಾವಾಹಿ ಆರಂಭದಿಂದಲೂ ಕಿರುತೆರೆಯಲ್ಲಿ ಹೊಸ ಸಂಚಲನವನ್ನು ಮೂಡಿಸುತ್ತಿದೆ. ವಿಭಿನ್ನ ಪ್ರಯೋಗ, ಪೌರಾಣಿಕ ಹಿನ್ನೆಲೆಯ ಜೊತೆಗಿನ ಈ ಜರ್ನಿ ಇಂದು 1000 ಸಂಚಿಕೆಗಳ ದಾಖಲೆಗೆ ಸಾಕ್ಷಿಯಾಗಿದೆ. . ಪೌರಾಣಿಕ ಕಥಾಹಂದರ ಹೊಂದಿರೋ ಉಧೋ ಉಧೋ ಶ್ರೀ ರೇಣುಕಾ-ಯಲ್ಲಮ್ಮರ ಕಥೆಯು ಇಂದು ದೇಶದ ಬೇರೆ ಬೇರೆ ಭಾಗಗಳಲ್ಲಿರುವ ಕನ್ನಡಿಗರ ಮನ ಗೆದ್ದಿದೆ.

1000 ಸಂಚಿಕೆ ಪೂರೈಸಿದ ಖುಷಿಯಲ್ಲಿ ʻಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ'

ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ -

Yashaswi Devadiga
Yashaswi Devadiga Nov 27, 2025 8:56 PM

ಸ್ಟಾರ್ ವಾಹಿನಿಯಲ್ಲಿ (Star Suvarna Serial) ಪ್ರಸಾರವಾಗುತ್ತಿರುವ "ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ" (udho udho shri renuka yellamma) ಧಾರಾವಾಹಿ ಪ್ರೇಕ್ಷಕರ ಮನಗೆದ್ದು ಯಶಸ್ಸಿನಿಂದ ಸಾಗುತ್ತಿದೆ. ಅಪ್ಪಟ ಕನ್ನಡ ಮಣ್ಣಿನ ಪೌರಾಣಿಕ ಕಥಾವಸ್ತುವನ್ನಿಟ್ಟುಕೊಂಡು ಶುರುವಾದ ಈ ಧಾರಾವಾಹಿ (Serial) ಆರಂಭದಿಂದಲೂ ಕಿರುತೆರೆಯಲ್ಲಿ ಹೊಸ ಸಂಚಲನವನ್ನು ಮೂಡಿಸುತ್ತಿದೆ. ವಿಭಿನ್ನ ಪ್ರಯೋಗ, ಪೌರಾಣಿಕ ಹಿನ್ನೆಲೆಯ ಜೊತೆಗಿನ ಈ ಜರ್ನಿ ಇಂದು 1000 ಸಂಚಿಕೆಗಳ ದಾಖಲೆಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: Kannada Serial TRP: ಕುಸಿದ ಅಣ್ಣಯ್ಯ ಧಾರಾವಾಹಿ ಟಿಆರ್​ಪಿ: ನಂಬರ್ 1 ಧಾರಾವಾಹಿ ಇದುವೇ ನೋಡಿ

ಸ್ಟಾರ್‌ ಸುವರ್ಣದ ಹೆಮ್ಮೆಯ ಕಥೆ

ಸ್ಟಾರ್‌ ಸುವರ್ಣದ ಹೆಮ್ಮೆಯ ಕಥೆ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ. ಕಥೆಯೊಂದು ಜನರ ಮನ ಮುಟ್ಬೇಕು ಅಂದ್ರೆ ಅದರಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಛಾಪು ಇರಬೇಕು. ಕರುನಾಡ ಸಂಸ್ಕೃತಿ ಹಾಸು ಹೊಕ್ಕಾಗಿರೋ ಕಥೆಯನ್ನು ಆಯ್ಕೆ ಮಾಡುವಾಗ ನಮ್ಮ ನೆಲದ ಕಥೆಯನ್ನ ಪ್ರತಿಯೊಬ್ಬ ಕನ್ನಡಿಗನೂ ಅರಿಯಬೇಕು ಎಂಬುದು ತಂಡದ ಉದ್ದೇಶ

ಪೌರಾಣಿಕ ಕಥಾಹಂದರ ಹೊಂದಿರೋ ಉಧೋ ಉಧೋ ಶ್ರೀ ರೇಣುಕಾ-ಯಲ್ಲಮ್ಮರ ಕಥೆಯು ಇಂದು ದೇಶದ ಬೇರೆ ಬೇರೆ ಭಾಗಗಳಲ್ಲಿರುವ ಕನ್ನಡಿಗರ ಮನ ಗೆದ್ದಿದೆ.

ಧಾರಾವಾಹಿ ಪ್ರೋಮೋ

ಪ್ರತಿ ನಿತ್ಯ ನಮ್ಮ ರೇಣುಕಾ - ಯಲ್ಲಮ್ಮರ ಬಗೆಗಿನ ಕಥೆಯ ಬಗ್ಗೆ ಮೆಸೇಜುಗಳು, ಫೀಡ್‌ಬ್ಯಾಕ್‌ಗಳು ಬಂದಾಗ ಈ ಪಯಣದ ಬಗ್ಗೆ ಖುಷಿಯಾಗುತ್ತದೆ ಎಂದು ತಂಡ ಹೇಳಿಕೊಂಡಿದೆ.

ಕಥೆ ಪ್ರಾರಂಭ ಹೇಗೆ?

ಶತಮಾನಗಳ ಹಿಂದೆ ಒಮ್ಮೆ ಸುದರ್ಶನ ಚಕ್ರವು ಅಹಂಕಾರದಿಂದ ಮೆರೆದಾಗ, ಭೂಲೋಕದಲ್ಲಿ ಮಾನವನ ರೂಪದಲ್ಲಿ ಜನ್ಮ ತಾಳುವಂತೆ ಭಗವಂತ ಶ್ರೀ ವಿಷ್ಣುವು ಶಾಪ ನೀಡುತ್ತಾನೆ, ಅಷ್ಟೇ ಅಲ್ಲದೆ ನನ್ನಿಂದಾನೇ ನಿನ್ನ ಅಂತ್ಯವಾಗುವುದು ಎಂದು ಹೇಳುತ್ತಾನೆ. ಅಲ್ಲಿಂದ ಈ ಧಾರಾವಾಹಿಯ ಕಥೆ ಪ್ರಾರಂಭವಾಗಿತ್ತು. ಬೃಹತ್‌ ನಿರ್ಮಾಣ ಸಂಸ್ಥೆಯಾದ ನಂದಿ ಪ್ರೋಡಕ್ಷನ್ ಈ ಧಾರಾವಾಹಿ ನಿರ್ಮಾಣ ಮಾಡಿದೆ.

ಇದನ್ನೂ ಓದಿ: Amruthadhare Serial: ಗೌತಮ್ - ಭೂಮಿ ಒಂದು ಮಾಡೋಕೆ ಮಿಂಚು - ಆಕಾಶ್ ಒಂದಾದ್ರು! ಇನ್ನು ಬರೀ ಒಲವ ಅಮೃತಧಾರೆ

"ಪರಶುರಾಮನ ಅಧ್ಯಾಯ" ಕೂಡ ಚೆನ್ನಾಗಿ ಮೂಡಿ ಬಂದಿತ್ತು. ಜೀವನ ಮೌಲ್ಯ ಮತ್ತು ಮನರಂಜನೆ ಎರಡನ್ನೂ ಸಂಯೋಜಿಸಿ, ವಿಶೇಷ ಅನುಭವಗಳನ್ನು ನೀಡಲು ಮತ್ತೆ ತಂಡ ಸಜ್ಜಾಗುತ್ತಿದೆ. ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಪ್ರತಿದಿನ ರಾತ್ರಿ 9:00 ಗಂಟೆಗೆ ಸ್ಟಾರ್‌ ಸುವರ್ಣದಲ್ಲಿ ಪ್ರಸಾರ ಕಾಣುತ್ತಿದೆ.