Photos: ಕೊಯಮತ್ತೂರಿನಲ್ಲಿ ಸರಳವಾಗಿ ನಡೆದ ಸಮಂತಾ - ರಾಜ್ ನಿಡಿಮೋರು ಕಲ್ಯಾಣ; ಈ 2ನೇ ಮದುವೆಯ ಕಲರ್‌ಫುಲ್ ಫೋಟೋಗಳು ಇಲ್ಲಿವೆ ನೋಡಿ
Samantha Ruth Prabhu Raj Nidimoru Marriage: 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸೀರೀಸ್ ನಿರ್ದೇಶಕ ರಾಜ್ ನಿಡಿಮೋರು ಜೊತೆಗೆ ಸಮಂತಾ ರುತ್ ಪ್ರಭು ಅವರು ಸದ್ದಿಲ್ಲದೇ ಮದುವೆಯಾಗಿದ್ದಾರೆ. ಕೊಯಮತ್ತೂರಿನ ಇಶಾ ಯೋಗ ಫೌಂಡೇಶನ್‌ನಲ್ಲಿರುವ ಲಿಂಗ ಭೈರವಿ ದೇವಿ ಟೆಂಪಲ್‌ನಲ್ಲಿ ಈ ಮದುವೆ ನಡೆದಿದ್ದು, ಮದುವೆಯ ಫೋಟೋಗಳು ವೈರಲ್ ಆಗಿವೆ. ʻದಿ ಫ್ಯಾಮಿಲಿ ಮ್ಯಾನ್ʼ ನಿರ್ದೇಶಕ ರಾಜ್ ನಿಡಿಮೋರು ಮತ್ತು ಸಮಂತಾ ಲವ್ ಮಾಡುತ್ತಿದ್ದಾರೆ, ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಎಂಬ ವದಂತಿ ಕೇಳಿಬಂದಿತ್ತು. ಅದೀಗ ನಿಜವಾಗಿದೆ.
-
Avinash GR
Dec 1, 2025 3:35 PM
1/6
ಆಗಾಗ ಗಾಸಿಪ್ ಕಾಲಂಗಳಲ್ಲಿ ರಾಜ್ ನಿಡಿಮೋರು ಮತ್ತು ಸಮಂತಾ ಮದುವೆ ಸುದ್ದಿಯು ಕೇಳಿಬರುತ್ತಿತ್ತು, ಆದರೆ ಈ ಜೋಡಿ ಮಾತ್ರ ಮೌನ ಮುರಿದಿರಲಿಲ್ಲ
2/6
ಸಮಂತಾ ಮತ್ತು ರಾಜ್ ನಿಡಿಮೋರು ಅವರಿಗೆ ಇದು ಎರಡನೇ ಮದುವೆ; ಇಬ್ಬರು ಕೂಡ ತಮ್ಮ ತಮ್ಮ ಮಾಜಿ ಸಂಗಾತಿಗಳಿಗೆ ವಿಚ್ಚೇದನ ನೀಡಿದ್ದಾರೆ
3/6
ಕೊಯಮತ್ತೂರಿನ ಇಶಾ ಯೋಗ ಫೌಂಡೇಶನ್ನಲ್ಲಿ ಇರುವ ಲಿಂಗ ಭೈರವಿ ದೇವಿ ದೇವಸ್ಥಾನದಲ್ಲಿ ರಾಜ್ ನಿಡಿಮೋರು ಮತ್ತು ಸಮಂತಾ ಅವರ ಮದುವೆ ನಡೆದಿದೆ
4/6
ರಾಜ್ ನಿಡಿಮೋರು ಮತ್ತು ಸಮಂತಾ ಅವರು ಕಳೆದ ಎರಡ್ಮೂರು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು
5/6
ಸಮಂತಾ ಮತ್ತು ರಾಜ್ ನಿಡಿಮೋರು ಅವರ ಮದುವೆಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.
6/6
ಸಮಂತಾ ಅವರು ಮದುವೆ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಕ್ಯಾಪ್ಷನ್ ಬಾಕ್ಸ್ನಲ್ಲಿ ಇಂದಿನ (01.12.2025) ದಿನಾಂಕವನ್ನು ಮೆನ್ಷನ್ ಮಾಡಿದ್ದಾರೆ.