Aisha Sharma: ಸೆಕ್ಸಿ ಡ್ರೆಸ್ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ಬಾಲಿವುಡ್ ನಟಿ! ಇಲ್ಲಿದೆ ಹಾಟ್ ಫೋಟೋಸ್
Aisha Sharma Bold Look: ಚಲನಚಿತ್ರ ಹಾಗೂ ಮಾಡಲಿಂಗ್ನಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದ ನಟಿ ಆಯಿಷಾ ಶರ್ಮಾ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. 2018ರಲ್ಲಿ ತೆರೆಕಂಡ ಸತ್ಯಮೇವ ಜಯತೆ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಇವರು ವೆಬ್ ಸರಣಿ ಹಾಗೂ ಆಲ್ಬಂ ಸಾಂಗ್ನಿಂದ ಕೂಡ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ.

-


ನಟಿ ಆಯಿಷಾ ಶರ್ಮಾ ಅವರು ಆಗಸ್ಟ್ ತಿಂಗಳಲ್ಲಿ ಬೇರೆ ಬೇರೆ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ್ದು, ಅದರ ಕೆಲವು ಫೋಟೊವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅದರೊಂದಿಗೆ ವಿಶೇಷ ಕ್ಯಾಪ್ಶನ್ ಅನ್ನು ಕೂಡ ಅವರು ಬರೆದಿದ್ದಾರೆ. ಆಗಸ್ಟ್ ತಿಂಗಳ ರೀಕ್ಯಾಪ್ ನಾನು ನಾನಾಗಿರಲು ಸದಾ ಇಷ್ಟಪಡುತ್ತೇನೆ ಎಂದು ಕ್ಯಾಪ್ಶನ್ ಅನ್ನು ಅವರು ಬರೆದಿದ್ದಾರೆ.

ವೈರಲ್ ಆದ ಫೋಟೊದಲ್ಲಿ ನಟಿ ಆಯಿಷಾ ಅವರು ವೈಟ್ ಕಲರ್ ಬ್ಯಾಂಡೆಡ್ ಟಾಪ್ ಧರಿಸಿದ್ದು ಅದಕ್ಕೆ ಹೊಂದುವಂತಹ ಶಾರ್ಟ್ಸ್ ಅನ್ನು ಕೂಡ ಧರಿಸಿ ಪ್ರಿಟಿಯಾಗಿ ಕಂಡಿದ್ದಾರೆ. ಡ್ರೆಸ್ ಗೆ ಮ್ಯಾಚ್ ಆಗುವ ಚೈನ್ ತೊಟ್ಟಿದ್ದ ಕಾರಣ ಸ್ಟೈಲಿಶ್ ಆಗಿ ಕಂಡಿದ್ದಾರೆ. ಮೇಕಪ್ ಇಲ್ಲದೆ ನ್ಯಾಚುರಲ್ ಆಗಿ ಫ್ರೀ ಹೇರ್ ಸ್ಟೈಲ್ ನಲ್ಲಿ ಫೋಟೊಗೆ ಪೋಸ್ ನೀಡಿದ್ದು ಬೋಲ್ಡ್ ಲುಕ್ ನಿಂದ ಹೆಚ್ಚು ಸೆಕ್ಸಿಯಾಗಿ ಕಂಡಿದ್ದಾರೆ.

ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಟಿ ಆಯಿಷಾ ಅವರು ಕ್ರೀಮ್ ಕಲರ್ ಬ್ಯಾಡೆಂಡ್ ಟಾಪ್ ಜೊತೆಗೆ ಲೈಟ್ ಕ್ರೀಮ್ ಕಲರ್ ಮಾಡರ್ನ್ ಕ್ರಾಪ್ ಸ್ಕರ್ಟ್ ಧರಿಸಿದ್ದಾರೆ. ಸ್ಟೋನ್ ಚೈನ್ ಧರಿಸಿದ್ದು ಹೆಚ್ಚು ಸ್ಟೈಲಿಶ್ ಆಗಿ ಇವರು ಕಂಡಿದ್ದಾರೆ. ಸಿಂಪಲ್ ಮೇಕಪ್ ನಲ್ಲಿ ಕರ್ಲಿ ಹೇರ್ ಫ್ರೀ ಸ್ಟೈಲ್ ಲುಕ್ ನಲ್ಲಿ ನೆಟ್ಟಿಗರ ಗಮನ ಸೆಳೆದಿದ್ದಾರೆ..

ನಟಿ ಆಯಿಷಾ ಅವರು ದೇಹದ ಆರೋಗ್ಯಕ್ಕೆ ಫಿಟ್ನೆಸ್ ಗೂ ಕೂಡ ಅಧಿಕ ಪ್ರಾಮುಖ್ಯತೆ ನೀಡುತ್ತಾರೆ. ಹೀಗಾಗಿ ವರ್ಕೌಟ್, ಯೋಗ, ಜಾಗಿಂಗ್ ನಂತಹ ಅನೇಕ ಫಿಟ್ನೆಸ್ ವಿಧಾನ ಕೂಡ ಅನುಸರಿಸುತ್ತಾರೆ. ಅಂತೆಯೇ ಆಗಸ್ಟ್ ನಲ್ಲಿ ಫಿಟ್ನೆಸ್ ನೊಂದಿಗೆ ದಿನಚರಿ ಆರಂಭ ಆಗುತ್ತದೆ ಎಂಬಂದರ್ಥದಲ್ಲಿ ಫೋಟೊ ತೆಗೆಸಿ ಕೊಂಡಿದ್ದಾರೆ. ಬ್ಲ್ಯಾಕ್ ಕಲರ್ ಫಿಟ್ನೆಸ್ ವೇರ್ ನಲ್ಲಿ ಕ್ಯೂಟ್ ಲುಕ್ ನಿಂದ ಹೆಚ್ಚು ಗಮನ ಸೆಳೆದಿದ್ದಾರೆ.

ವೈರಲ್ ಆದ ಇನ್ನೊಂದು ಫೋಟೊದಲ್ಲಿ ಕೂಡ ನಟಿ ಆಯಿಷಾ ಅವರು ಜಿಮ್ ಒಂದರಲ್ಲಿ ವರ್ಕೌಟ್ ಮಾಡುತ್ತಿರುವುದನ್ನು ಕಾಣಬಹುದು. ಸ್ಪೋರ್ಟ್ಸ್ ಟಾಪ್ ಹಾಗೂ ಬ್ಲ್ಯಾಕ್ ಕಲರ್ ಸ್ಪೋರ್ಟ್ಸ್ ಲೆಗಿನ್ಸ್ ಪ್ಯಾಂಟ್ ನಲ್ಲಿ ಹೆಚ್ಚು ಹಾಟ್ ಆಗಿ ಕಂಡಿದ್ದಾರೆ. ಇಯರ್ ಫೋನ್, ಸ್ಪೋರ್ಟ್ಸ್ ವಾಚ್ ಎಲ್ಲ ಧರಿಸಿದ್ದು ವರ್ಕೌಟ್ ನಲ್ಲಿ ಮಾಡೆಲ್ ಸ್ಟಾರ್ ನಂತೆ ಇವರು ಕಂಡಿದ್ದಾರೆ.