Anusha Rai: ಹಾಫ್ ಸಾರಿಯಲ್ಲಿ ಗೊಂಬೆಯಂತೆ ಕಂಗೊಳಿಸಿದ ಬಿಗ್ ಬಾಸ್ ಅನುಷಾ
ಇತ್ತೀಚೆಗಷ್ಟೆ ಬಿಗ್ ಬಾಸ್ ರಂಜಿತ್- ಮಾನಸ ಅವರ ಮದುವೆಯಲ್ಲಿ ಮುದ್ದಾಗಿ ಅನುಷಾ ಕಾಣಿಸಿಕೊಂಡಿದ್ದರು. ಇದೀಗ ಅನುಷಾ ರೈ ಹೊಸ ಫೋಟೋ ಶೂಟ್ ಒಂದು ಮಾಡಿಸಿಕೊಂಡಿದ್ದು, ಇದು ಸಖತ್ ವೈರಲ್ ಆಗುತ್ತಿದೆ. ಹಾಫ್ ಸಾರಿಯಲ್ಲಿ ಅನುಷಾ ಕ್ಯೂಟ್ ಆಗಿ ಮಿಂಚಿದ್ದಾರೆ.

Anusha Rai


ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ಬಳಿಕ ಬಹುತೇಕ ಹೆಚ್ಚಿನ ಸ್ಪರ್ಧಿಗಳು ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಹೆಚ್ಚಿನವರು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಆದರೆ ಅನುಷಾ ರೈ ಮಾತ್ರ ಹೆಚ್ಚೇನು ಕಾಣಿಸಿಕೊಂಡಿಲ್ಲ. ಒಮ್ಮೆ ಮಹಾಕುಂಭ ಮೇಳಕ್ಕೆ ತೆರಳಿ, ರಾಮ ಜನ್ಮ ಭೂಮಿ ಅಯೋಧ್ಯೆಗೆ ತೆರಳಿ, ರಾಮಲಲ್ಲಾ ದರ್ಶನ ಪಡೆದು ಬಂದಿದ್ದರು.

ಇತ್ತೀಚೆಗಷ್ಟೆ ಬಿಗ್ ಬಾಸ್ ರಂಜಿತ್- ಮಾನಸ ಅವರ ಮದುವೆಯಲ್ಲಿ ಮುದ್ದಾಗಿ ಅನುಷಾ ಕಾಣಿಸಿಕೊಂಡಿದ್ದರು. ಇದೀಗ ಅನುಷಾ ರೈ ಹೊಸ ಫೋಟೋ ಶೂಟ್ ಒಂದು ಮಾಡಿಸಿಕೊಂಡಿದ್ದು, ಇದು ಸಖತ್ ವೈರಲ್ ಆಗುತ್ತಿದೆ. ಹಾಫ್ ಸಾರಿಯಲ್ಲಿ ಅನುಷಾ ಕ್ಯೂಟ್ ಆಗಿ ಮಿಂಚಿದ್ದಾರೆ.

ಇತ್ತೀಚೆಗಷ್ಟೆ ಮಾಧ್ಯಮದವರು "ನಿಮ್ಮದು ಯಾವಾಗ ಮದುವೆ" ಎಂದು ಅನುಷಾ ರೈ ಬಳಿ ಪ್ರಶ್ನೆ ಕೇಳಿದ್ದರು. ಇದಕ್ಕೆ "ನನ್ನ ಮದುವೆ ನೋಡೋದಕ್ಕೆ ಅಷ್ಟೊಂದು ಆಸೆನಾ ನಿಮಗೆಲ್ಲಾ...? ಮೊದಲು ಹುಡುಗನ್ನು ಹುಡುಕಿ. ನಾನು ಮದುವೆ ಆಗುವ ಹುಡುಗ ನಮ್ ಡಿ ಬಾಸ್ ಥರ ಇದ್ರೆ ಸಾಕು. ಸಿಕ್ತಾರ ಆ ಥರ ಹುಡುಗ. ಕರ್ಕೊಂಡು ಬನ್ನಿ ಆ ಥರ ಹುಡುಗನ್ನ ಆಮೇಲೆ ಮದುವೆ ಆಗ್ತೀನಿ" ಎಂದು ಹೇಳಿದ್ದರು.

ಕಿರುತೆರೆ ಮತ್ತು ಬೆಳ್ಳಿತೆರೆಗಳಲ್ಲಿ ಗುರುತಿಸಿಕೊಂಡಿರುವ ಅನುಷಾ ರೈ, ಸರಯೂ, ರಾಜಕುಮಾರಿ ಸೇರಿದಂತೆ ಹಲವು ಸೀರಿಯಲ್ಗಳಲ್ಲಿ ಅಭಿನಯಿಸಿದ್ದಾರೆ. 2017ರಲ್ಲಿ ಬಿಡುಗಡೆಯಾದ ಮಹಾನುಭಾವರು ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟರು. ಆ ಬಳಿಕ ಗೋಸಿ ಗ್ಯಾಂಗ್, ಬಿಎಂಡಬ್ಲ್ಯೂ, ದಮಯಂತಿ, ರೈಡರ್, ಖಡಕ್, ಪೆಂಟಗನ್, ಧೈರ್ಯಂ ಸರ್ವತ್ರ ಸಾಧನಂ, ಅಬ್ಬಬ್ಬ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಸದ್ಯ ಅನುಷಾ ರೈ ಅವರು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೋಮಲ್ ಕುಮಾರ್ ಮತ್ತು ಮೇಘನಾ ರಾಜ್ ಜೊತೆಗೆ ಅನುಷಾ ರೈ, ಸಿರಿ ಸಂಗೀತ ಬಾರ್ ಆಂಡ್ ರೆಸ್ಟೋರೆಂಟ್ ಅನ್ನೋ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇದು ಈ ವರ್ಷದಲ್ಲಿ ಅವರ ಮೊದಲ ಸಿನಿಮಾ ಅಂತೆ.