Gen G Hairstyle 2026: ಜೆನ್ ಜಿ ಹುಡುಗಿಯರಿಗೆ ಪ್ರಿಯವಾದ ಹನ್ ಹೇರ್ಸ್ಟೈಲ್
ಈ ಸೀಸನ್ನಲ್ಲಿ ಹನ್ ಹೇರ್ ಸ್ಟೈಲ್ ಮರಳಿದ್ದು ವಿಶೇಷವಾಗಿ ಸ್ಟ್ರೀಟ್ ಲುಕ್ ಬಯಸುವ ಜೆನ್ ಜಿ ಹುಡುಗಿಯರನ್ನು ಸವಾರಿ ಮಾಡತೊಡಗಿದೆ. ಈ ಬಾರಿಯ ಫ್ಯಾಷನ್ನಲ್ಲಿ ಹನ್ ಹೇರ್ಸ್ಟೈಲ್ಗಳು ಜೆನ್ ಜಿ ಹುಡುಗಿಯರನ್ನು ಮಾತ್ರವಲ್ಲ, ಯಂಗ್ ಲುಕ್ ಬಯಸುವ ಫ್ಯಾಷನ್ ಪ್ರಿಯರನ್ನು ಸೆಳೆದಿದೆ. ಅಲ್ಲದೇ, ಸಿನಿ ಸೆಲೆಬ್ರೆಟಿಗಳ ಫಂಕಿ ಹೇರ್ಸ್ಟೈಲ್ ಸ್ಟೇಟ್ಮೆಂಟ್ಗೂ ಸೇರಿದೆ. ಇದ್ಯಾವ ಬಗೆಯ ಹೇರ್ಸ್ಟೈಲ್? ಇಲ್ಲಿದೆ ವಿವರ.
ಚಿತ್ರಗಳು: ಮೀನಾಕ್ಷಿ ದೀಕ್ಷಿತ್, ನಟಿ -
ಹನ್ ಹೇರ್ಸ್ಟೈಲ್ ಮರಳಿದ್ದು, ಈ ಸೀಸನ್ನಲ್ಲಿ ಜೆನ್ ಜಿ ಹುಡುಗಿಯರನ್ನು ಸವಾರಿ ಮಾಡತೊಡಗಿದೆ.
ಫಂಕಿ ಹೇರ್ಸ್ಟೈಲ್
ಹೌದು, ಈ ಬಾರಿಯ ಫ್ಯಾಷನ್ನಲ್ಲಿ ಹನ್ ಹೇರ್ಸ್ಟೈಲ್ಗಳು ಜೆನ್ ಜಿ ಹುಡುಗಿಯರನ್ನು ಮಾತ್ರವಲ್ಲ, ಯಂಗ್ ಲುಕ್ ಬಯಸುವ ಫ್ಯಾಷನ್ ಪ್ರಿಯರನ್ನು ಸೆಳೆದಿದೆ. ಅಲ್ಲದೇ, ಸಿನಿ ಸೆಲೆಬ್ರೆಟಿಗಳ ಫಂಕಿ ಹೇರ್ಸ್ಟೈಲ್ ಸ್ಟೇಟ್ಮೆಂಟ್ಗೂ ಸೇರಿದೆ.
ಹನ್ ಹೇರ್ಸ್ಟೈಲ್
ಇದನ್ನು ಸಿಂಪಲ್ ಆಗಿ ವಿವರಿಸುವುದಾದಲ್ಲಿ, ಈ ಹೇರ್ಸ್ಟೈಲ್ ಇತ್ತ ಕಂಪ್ಲೀಟ್ ಬನ್ ಹೇರ್ಸ್ಟೈಲ್ಗೂ ಅಲ್ಲ, ಅತ್ತ ಕಂಪ್ಲೀಟ್ ಪೋನಿಟೇಲೂ ಅಲ್ಲ. ಅರ್ಧಂಬರ್ಧ ಮಿಕ್ಸ್ ಕಾಂಬಿನೇಷನ್ನ ಹೇರ್ಸ್ಟೈಲ್ ಇದು ಎನ್ನಬಹುದು. ಮುಂಭಾಗದ ತಲೆಯ ಥೇಟ್ ಕೂದಲನ್ನು ಕೃಷ್ಣನ ಜುಟ್ಟಿನಂತೆ ಬನ್ ಮಾಡಿ ಎತ್ತಿ ಕಟ್ಟುವ ವಿನ್ಯಾಸವಿದು. ಇನ್ನರ್ಧ ಕೂದಲನ್ನು ಫ್ರೀ ಹೇರ್ಸ್ಟೈಲ್ನಂತೆ ಬಿಡುವುದೇ ಈ ಸ್ಟೈಲ್ನ ವಿಶೇಷತೆ ಎನ್ನುತ್ತಾರೆ ಹೇರ್ ಸ್ಟೈಲಿಸ್ಟ್ ಜಾನ್.
ಯಂಗ್ ಲುಕ್ ನೀಡುವ ಹನ್ ಹೇರ್ಸ್ಟೈಲ್
ಫ್ಯಾಷನ್ ಲೋಕದ ಹನ್ ಹೇರ್ಸ್ಟೈಲ್ ಪ್ರಯೋಗಾತ್ಮಕ ಕೇಶವಿನ್ಯಾಸವಾಗಿದ್ದು, ಎಂತಹವರಿಗೂ ಯಂಗ್ ಲುಕ್ ನೀಡುತ್ತದೆ. ಮೊದಲು ಹಾಲಿವುಡ್ನಲ್ಲಿ ಪ್ರಚಲಿತದಲ್ಲಿದ್ದ ಈ ಹೇರ್ಸ್ಟೈಲ್ ಇದೀಗ ಅಲ್ಟ್ರಾ ಮಾಡರ್ನ್ ಲುಕ್ ಬಯಸುವ ಬಾಲಿವುಡ್ ಸೆಲೆಬ್ರೆಟಿಗಳನ್ನು ಸವಾರಿ ಮಾಡತೊಡಗಿದೆ ಎನ್ನುತ್ತಾರೆ ನಟಿ ಛಾಯಾ.
ಬಿಂದಾಸ್ ಲುಕ್ ನೀಡುವ ಹೇರ್ಸ್ಟೈಲ್
ಈ ಕೇಶ ವಿನ್ಯಾಸ ತಾರೆಯರ ಔಟಿಂಗ್ ಇಲ್ಲವೇ ಹಾಲಿಡೇ ಅಥವಾ ಬಿಂದಾಸ್ ಹೇರ್ಸ್ಟೈಲ್ ಲಿಸ್ಟ್ಗೂ ಸೇರಿದೆ. ಅದರಲ್ಲೂ ಸ್ಟ್ರೀಟ್ ಸ್ಟೈಲ್ ಬಯಸುವವರನ್ನು ಇದು ಅಲಂಕರಿಸುತ್ತಿದೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ.
ಹನ್ ಹೇರ್ಸ್ಟೈಲ್ ಪ್ರಿಯರಿಗೆ ಸಿಂಪಲ್ ಸಲಹೆ
- ವಿಭಿನ್ನ ಲುಕ್ ಬೇಕೆಂದಲ್ಲಿ ಈ ಹೇರ್ಸ್ಟೈಲ್ ಟ್ರೈ ಮಾಡಿ ನೋಡಿ.
- ಹನ್ ಹೇರ್ಸ್ಟೈಲ್ಗೆ ತಕ್ಕಂತೆ ಔಟ್ಫಿಟ್ ಧರಿಸಿ.
- ಫಂಕಿ ಲುಕ್ ಆದಲ್ಲಿ ವೆಸ್ಟನ್ವೇರ್ ಧರಿಸುವುದು ಅವಶ್ಯ.
- ಹೇರ್ ಕಲರಿಂಗ್ ಹಾಗೂ ಸ್ಟ್ರೀಕ್ಸ್ ಮಾಡಿಸಿದಲ್ಲಿ ಡಿಫರೆಂಟ್ ಲುಕ್ ನಿಮ್ಮದಾಗುವುದು.
- ಕರ್ಲಿ, ಸ್ಪ್ರೇಟ್ ಹೇರ್ಗೆ ಭಿನ್ನವಾಗಿ ಕಾಣುವುದು.
- ವೆಸ್ಟರ್ನ್ ಲುಕ್ಗೆ ಮಾತ್ರ ಈ ಹೇರ್ಸ್ಟೈಲ್ ಮ್ಯಾಚ್ ಆಗುತ್ತದೆ.
- ಸಿಂಪಲ್ ಮೇಕೋವರ್ ಸಾಕು!
- ಮಾಡರ್ನ್ ಲುಕ್ ನೀಡುತ್ತದೆ.