ʼʼಈಗ ಉಳಿದಿರುವುದು ಮಗಳ ಹುಟ್ಟುಹಬ್ಬದ ಬಲೂನ್ ಮಾತ್ರʼʼ; ಆಸ್ಸಾಂ ಪ್ರವಾಹದಲ್ಲಿ ಎಲ್ಲವನ್ನೂ ಕಳೆದುಕೊಂಡ ಮಹಿಳೆಯ ಕಣ್ಣೀರು
Viral News: ಅಸ್ಸಾಂನಲ್ಲಿ ಸಂಭವಿಸಿದ ಭೀಕರ ಪ್ರವಾಹವು ಲಕ್ಷಾಂತರ ಜನರ ಜೀವನವನ್ನು ನರಕವನ್ನಾಗಿಸಿದೆ. ಈ ಪೈಕಿ ರಿನಿ ಬರುವಾ ಎಂಬ ಮಹಿಳೆಯ ಕಣ್ಣೀರ ಕಥೆ ಎಂತಹವರ ಕಣ್ಣಂಚೂ ಒದ್ದೆಯಾಗುವಂತಿದೆ. ನಾಗಾಲ್ಯಾಂಡ್ ಕಡೆಯಿಂದ ಹಠಾತ್ತನೆ ನುಗ್ಗಿ ಬಂದ ಪ್ರವಾಹ ಕೆಲವೇ ನಿಮಿಷಗಳಲ್ಲಿ ತನ್ನ ಮನೆಯನ್ನು ಆಕ್ರಮಿಸಿಕೊಂಡ ರೀತಿಯನ್ನು ಅವರು ನೆನಪಿಸಿಕೊಂಡಿದ್ದಾರೆ. ಇದದರಿಂದ ಅವರ ಎಲ್ಲವನ್ನೂ ಕಳೆದುಕೊಳ್ಳಬೇಕಾಯಿತು.
ಭೀಕರ ಪ್ರವಾಹಕ್ಕೆ ಎಲ್ಲವನ್ನೂ ಕಳೆದುಕೊಂಡ ಆಸ್ಸಾಂ ಮಹಿಳೆಯ ಕಣ್ಣೀರು -
ದಿಸ್‌ಪುರ, ಜು. 28: ಇತ್ತೀಚೆಗೆ ಅಸ್ಸಾಂನಲ್ಲಿ ಸಂಭವಿಸಿದ ಭೀಕರ ಪ್ರವಾಹವು (Assam Floods) ಲಕ್ಷಾಂತರ ಜನರ ಜೀವನವನ್ನು ನರಕವನ್ನಾಗಿಸಿದೆ. ಒಂದೊಂಡೆ ಮನೆ-ಮಠ ಕಳೆದುಕೊಂಡು ಬೀದಿಪಾಲಾದ ಕುಟುಂಬಗಳಿದ್ದರೆ ಇನ್ನೊಂದೆಡೆ ತನ್ನವರನ್ನು ಕಳೆದುಕೊಂಡ ದುಃಖಿಸುವವರಿದ್ದಾರೆ. ಇನ್ನೂ ಸಂಕಷ್ಟದ ಪರಿಸ್ಥಿತಿಯಲ್ಲೇ ಇಲ್ಲಿನ ಜನ ದಿನ ದೂಡುವಂತಾಗಿದೆ. ಈ ಪೈಕಿ ರಿನಿ ಬರುವಾ ಎಂಬ ಮಹಿಳೆಯ ಕಥೆ ಅತ್ಯಂತ ಹೃದಯ ವಿದ್ರಾವಕವಾಗಿದೆ. ನಾಗಾಲ್ಯಾಂಡ್ ಕಡೆಯಿಂದ ಹಠಾತ್ತನೆ ನುಗ್ಗಿ ಬಂದ ಪ್ರವಾಹದಿಂದ ಕೆಲವೇ ನಿಮಿಷಗಳಲ್ಲಿ ತನ್ನ ಮನೆ ನಾಶವಾಗಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ.
ಜುಲೈ 19ರಂದು ಇವರ ಮಗಳ ಹುಟ್ಟುಹಬ್ಬದ ಆಚರಣೆಗಾಗಿ ಸಿದ್ಧತೆ ನಡೆಯುತ್ತಿದ್ದಾಗ ದುರಂತ ಸಂಭವಿಸಿತ್ತು. ʼʼಎಲ್ಲರೂ ಸಂಭ್ರಮಾಚರಣೆಯಿಂದ ಪಾಲ್ಗೊಂಡಿದ್ದೆವು. ಆಗ ನಮ್ಮ ಮನೆಯ ಮುಂದಿನ ರಸ್ತೆಯಲ್ಲಿದ್ದ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ನಾಗಾಲ್ಯಾಂಡ್‌ನಲ್ಲಿ ಪ್ರವಾಹ ಸಂಭವಿಸಿದ್ದು ಯಾವುದೇ ಕ್ಷಣದಲ್ಲಿ ನೀರು ನುಗ್ಗಬಹುದು ಎಂದು ಎಚ್ಚರಿಸಿದರು. ಚೇತರಿಸಿಕೊಳ್ಳಲೂ ಅವಕಾಶ ನೀಡದರೆ ಪ್ರವಾಹ ಕೆಲವೇ ನಿಮಿಷಗಳಲ್ಲಿ ಇಡೀ ಮನೆಯನ್ನು ಆವರಿಸಿಕೊಂಡಿತು. ನಾವು ಅಲ್ಲಿಂದ ಸ್ಥಳಾಂತರಗೊಂಡರೂ ಎಲ್ಲವೂ ನಿಮಿಷಗಳಲ್ಲಿ ಕೊಚ್ಚಿ ಹೋಯಿತುʼʼ ಎಂದು ಹೇಳಿದ್ದಾರೆ.
ಬ್ಲಿಂಕ್‌ಇಟ್ ಉಚಿತ ಆಂಬ್ಯುಲೆನ್ಸ್ ಸೇವೆಯಿಂದ ಉಳಿಯಿತು ವೃದ್ಧೆಯ ಪ್ರಾಣ
ʼʼಇಂದು ನನ್ನ ಮನೆಯಲ್ಲಿ ಏನೂ ಉಳಿದಿಲ್ಲ. ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಈ ಪ್ರವಾಹವು ನಮ್ಮನ್ನು ಹತಾಶರನ್ನಾಗಿ ಮಾಡಿದೆ. ಪ್ರವಾಹದ ನೀರು ಮನೆಯ ಕಿಟಕಿಗಳವರೆಗೆ ಆವರಿಸಿಕೊಂಡಿದ್ದು ಮಗಳ ಹುಟ್ಟುಹಬ್ಬಕ್ಕೆ ತಯಾರಿಸಿದ ಬಲೂನ್, ಡೆಕೋರೆಷನ್ ಮಾತ್ರ ಉಳಿದಿದೆ. ನಾವು ವರ್ಷಗಳ ಹಿಂದೆ ಶ್ರಮ ಪಟ್ಟಿದ್ದು ವ್ಯರ್ಥವಾಗಿದೆʼʼ ಎಂದಿದ್ದಾರೆ.
ಅವರ ದಿವಂಗತ ಮಾವ ದಶಕಗಳಿಂದ ನಿರ್ಮಿಸಿದ ಕುಟುಂಬದ ಅಮೂಲ್ಯ ಗ್ರಂಥಾಲಯವೂ ನಾಸವಾಗಿದೆ. ಗ್ರಂಥಾಲಯದಲ್ಲಿರುವ ಪ್ರತಿಯೊಂದು ಪುಸ್ತಕವೂ ಕೊಚ್ಚಿ ಹೋಗಿದೆ. ಮಾವನವರೇ ಬರೆದಿದ್ದ ಪುಸ್ತಕಗಳು ನಾಶವಾಗಿವೆ ಎಂದಿದ್ದಾರೆ. “ದೇವರು ಮತ್ತೆ ಯಾರಿಗೂ ಈ ರೀತಿಯ ದುಃಖವನ್ನುಂಟು ಮಾಡದಿರಲಿ" ಎಂದು ಬೇಡಿಕೊಂಡಿದ್ದಾರೆ.