ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಪ್ಲೀಸ್.. ಇನ್ಮುಂದೆ ಎಲ್ಲರೂ ನನ್ನನ್ನು ಅನ್ನಾ ಕೊಣಿದೇಲ ಅಂತಲೇ ಕರೆಯಿರಿ’; ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್ ಪತ್ನಿಯ ಮನವಿ!

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಕೊಣಿದೇಲ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೆಸರು ಮತ್ತು ಮನೆತನದ ಸರ್‌ನೇಮ್ ಕುರಿತು ಖಡಕ್ ಸ್ಪಷ್ಟನೆ ನೀಡಿದ್ದಾರೆ. ತಮ್ಮನ್ನು 'ಅನ್ನಾ ಲೆಜ್ನೆವಾ' ಬದಲು 'ಅನ್ನಾ ಕೊಣಿದೇಲ' ಎಂದೇ ಕರೆಯಬೇಕೆಂದು ವಿನಂತಿಸಿದ್ದಾರೆ.

ಎಲ್ಲರಿಗೂ ತಮ್ಮ ಹೆಸರಿನ ಬಗ್ಗೆ ಕ್ಲಾರಿಟಿ ಕೊಟ್ಟ DCM ಪವನ್ ಕಲ್ಯಾಣ್ ಪತ್ನಿ

-

Avinash GR
Avinash GR Jul 28, 2026 8:34 PM

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಕೊಣಿದೇಲ ಅವರು ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಮ್ ಖಾತೆ ತೆರೆಯುವ ಮೂಲಕ ಸೋಶಿಯಲ್ ಮೀಡಿಯಾಕ್ಕೆ ಕಾಲಿಟ್ಟಿದ್ದಾರೆ. ಖಾತೆಯಲ್ಲಿ ಸತತವಾಗಿ ಪೋಸ್ಟ್‌ಗಳನ್ನು ಹಾಕುತ್ತಾ ಸಕ್ರಿಯರಾಗಿರುವ ಅವರು, ಪತಿಯೊಂದಿಗೆ ತೆಗೆಸಿಕೊಂಡ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ ಮನೆತನದ ಹೆಸರಿನ ಕುರಿತು ನೆಟ್ಟಿಗರಿಗೆ ಒಂದು ಸಣ್ಣ ವಿನಂತಿ ಮಾಡಿಕೊಂಡಿದ್ದು, ಇನ್ಮುಂದೆ ತಮ್ಮನ್ನು ಯಾವ ಹೆಸರಿನಿಂದ ಕರೆಯಬೇಕು ಎಂಬುದರ ಕುರಿತು ಸ್ಪಷ್ಟತೆ ನೀಡಿದ್ದಾರೆ.

ಮದುವೆಯ ನಂತರ ತಾವು ಪತಿಯ ಮನೆತನದ ಹೆಸರನ್ನೇ ಸ್ವೀಕರಿಸಿ 'ಅನ್ನಾ ಕೊಣಿದೇಲ' ಆಗಿ ಬದಲಾಗಿರುವುದಾಗಿ ಅವರು ತಿಳಿಸಿದ್ದಾರೆ. ಆದ್ದರಿಂದ ಇನ್ಮುಂದೆ ತಮ್ಮನ್ನು 'ಅನ್ನಾ ಲೆಜ್ನೆವಾ' ಎಂದು ಕರೆಯುವ ಬದಲು 'ಅನ್ನಾ ಕೊಣಿದೇಲ' ಎಂದಷ್ಟೇ ಕರೆಯಬೇಕಾಗಿ ವಿನಂತಿಸಿದ್ದಾರೆ.

ಸರಿಯಾದ ಮಾರ್ಗ ನನಗೆ ಸಿಕ್ಕಿರಲಿಲ್ಲ

"ನನ್ನ ಹೆಸರಿನ ಬಗ್ಗೆ ಒಂದು ಸಣ್ಣ ವಿನಂತಿ. ಹೆಸರು ಎಂಬುದು ಅತ್ಯಂತ ವೈಯಕ್ತಿಕವಾದ ವಿಷಯ. ನನ್ನ ಹುಟ್ಟುಹಬ್ಬ ಹತ್ತಿರವಾಗುತ್ತಿರುವ ಈ ಸಮಯದಲ್ಲಿ, ಇದರ ಬಗ್ಗೆ ಬರೆಯಲು ಇದೇ ಸರಿಯಾದ ಸಮಯ ಎಂದು ನನಗೆ ಅನಿಸಿತು. ಈ ಇನ್‌ಸ್ಟಾಗ್ರಾಮ್ ಖಾತೆ ಪ್ರಾರಂಭಿಸಿದಾಗಿನಿಂದಲೂ ನಾನು ಇದರ ಬಗ್ಗೆ ಪೋಸ್ಟ್ ಮಾಡಬೇಕು ಎಂದುಕೊಳ್ಳುತ್ತಿದ್ದೆ. ಬರೆದು ಡಿಲೀಟ್ ಮಾಡುವುದು, ಮತ್ತೆ ಬರೆಯಲು ಪ್ರಯತ್ನಿಸುವುದು... ಹೀಗೆ ಹಲವು ಬಾರಿ ಆಯಿತು. ಆದರೆ ಇದನ್ನು ಹೇಗೆ ಹೇಳಬೇಕು ಎಂಬುದಕ್ಕೆ ಸರಿಯಾದ ಮಾರ್ಗ ನನಗೆ ಸಿಕ್ಕಿರಲಿಲ್ಲ" ಎಂದು ಅವರು ಬರೆದುಕೊಂಡಿದ್ದಾರೆ.

Pawan Kalyan Udupi Visit: ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪವನ್‌ ಕಲ್ಯಾಣ್‌; ಪುತ್ತಿಗೆ ಶ್ರೀಗಳಿಂದ ʼಅಭಿನವ ಕೃಷ್ಣದೇವರಾಯʼ ಬಿರುದು ನೀಡಿ ಗೌರವ

ನನ್ನನ್ನು 'ಅನ್ನಾ ಕೊಣಿದೇಲ' ಎಂದೇ ಕರೆಯಿರಿ

"ಹಲವರಿಗೆ ನಾನು ಮೊದಲು 'ಅನ್ನಾ ಲೆಜ್ನೆವಾ' (Anna Lezhneva) ಎಂದೇ ಪರಿಚಯವಾದೆ. ಏಕೆಂದರೆ ನಮ್ಮ ಮದುವೆಯ ಬಗ್ಗೆ ಸುದ್ದಿಗಳು ಬಂದಾಗ ಆ ಹೆಸರೇ ಹೆಚ್ಚಾಗಿ ಕೇಳಿಬಂದಿತ್ತು. ವಿಚಿತ್ರವೆಂದರೆ, ಆ ಮನೆತನದ ಹೆಸರು ಕಾಣಿಸುವ ಕೊನೆಯ ಅಧಿಕೃತ ದಾಖಲೆ ಎಂದರೆ ನಮ್ಮ ಮ್ಯಾರೇಜ್ ಸರ್ಟಿಫಿಕೇಟ್ ಮಾತ್ರ. ಆ ದಿನವೇ ನಾನು ನನ್ನ ಪತಿಯ ಮನೆತನದ ಹೆಸರನ್ನು ಸ್ವೀಕರಿಸಿ 'ಅನ್ನಾ ಕೊಣಿದೇಲ' (Anna Konidala) ಆಗಿ ಬದಲಾದೆ. ಹಾಗಾಗಿ, ನನ್ನದೊಂದು ಸಣ್ಣ ಮನವಿ. ದಯವಿಟ್ಟು ನನ್ನನ್ನು 'ಅನ್ನಾ ಕೊಣಿದೇಲ' ಎಂದೇ ಕರೆಯಿರಿ. ಅದೇ ನನ್ನ ಹೆಸರು, ಆ ಹೆಸರಿನಲ್ಲೇ ನಾನು ನಿಜವಾದ 'ನಾನು' ಎಂದು ಭಾವಿಸುತ್ತೇನೆ. ಅರ್ಥ ಮಾಡಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಇದು ನನಗೆ ತುಂಬಾ ಮುಖ್ಯವಾದ ವಿಷಯ" ಎಂದು ಅನ್ನಾ ಕೊಣಿದೇಲ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Pawan Kalyan: ಒಟಿಟಿಗೆ ಲಗ್ಗೆ ಇಟ್ಟ ನಟ ಪವನ್ ಕಲ್ಯಾಣ್ ಅಭಿನಯದ ಒಜಿ ಸಿನಿಮಾ- ಸ್ಟ್ರೀಮಿಂಗ್ ಯಾವಾಗ?

ಪವನ್‌ ಪತ್ನಿ ಹಂಚಿಕೊಂಡ ಪೋಸ್ಟ್‌

ಅಪರೂಪದ ಫೋಟೋ ಶೇರ್‌ ಮಾಡಿದ ಅನ್ನಾ

ಇದೇ ಸಂದರ್ಭದಲ್ಲಿ ತಮ್ಮ ಪತಿ ಪವನ್ ಕಲ್ಯಾಣ್ ಅವರೊಂದಿಗೆ ತೆಗೆಸಿಕೊಂಡ ಅಪರೂಪದ ಫೋಟೋ ಒಂದನ್ನು ಅನ್ನಾ ಕೊಣಿದೇಲ ಹಂಚಿಕೊಂಡಿದ್ದಾರೆ. ಇದು ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ಗೆ ತಾವಿಬ್ಬರೂ ಒಟ್ಟಿಗೆ ಹೋದ ಮೊದಲ ಪ್ರವಾಸದಲ್ಲಿ ತೆಗೆದ ಫೋಟೋ ಎಂದು ಅವರು ಉಲ್ಲೇಖಿಸಿದ್ದಾರೆ.