ʻಬಿಗ್ ಬಾಸ್ ಕನ್ನಡ 12ʼ ಶೋನಲ್ಲಿ ಗೆದ್ದ ಗಿಲ್ಲಿ ನಟನಿಗೆ ಸಿಕ್ತು ಸಿಎಂ ಸಿದ್ದರಾಮಯ್ಯ ಆಶೀರ್ವಾದ; ಇಲ್ಲಿವೆ ನೋಡಿ ಫೋಟೋಗಳು
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮಹತ್ವದ ಗೆಲುವು ದಾಖಲಿಸಿರುವ ಗಿಲ್ಲಿ ನಟ ಅವರು ಇಂದು (ಜ.22) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಗೃಹ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಗಿಲ್ಲಿ ನಟ ಆಶೀರ್ವಾದ ಪಡೆದುಕೊಂಡಿದ್ದಾರೆ. ಗಿಲ್ಲಿ ಜನಪ್ರಿಯತೆಯ ಬಗ್ಗೆ ಸಿದ್ದರಾಮಯ್ಯ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಗಿಲ್ಲಿ ನಟನ ಪೋಷಕರ ಬಗ್ಗೆ ವಿಚಾರಿಸಿದ್ದಾರೆ.
-
Avinash GR
Jan 22, 2026 4:32 PM
1/5
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗೆದ್ದಿರುವ ಗಿಲ್ಲಿ ನಟ ಅವರು ಸಿಎಂ ಭೇಟಿಯಾಗಿದ್ದಾರೆ
2/5
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಗಿಲ್ಲಿ ನಟ
3/5
ಗಿಲ್ಲಿ ನಟನ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿ, ಖುಷಿ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ
4/5
ಸಚಿವ ಬೈರತಿ ಸುರೇಶ್ ಕೂಡ ಗಿಲ್ಲಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ನಮ್ಮ ಮನೆಯಲ್ಲೂ ಗಿಲ್ಲಿಗಾಗಿ ಬಿಗ್ ಬಾಸ್ ನೋಡ್ತಾ ಇದ್ದರು ಎಂದು ಹೇಳಿದ್ದಾರೆ
5/5
ಜನವರಿ 21ರಂದು ಸುದೀಪ್ ಮತ್ತು ಶಿವರಾಜ್ಕುಮಾರ್ ಅವರನ್ನು ಭೇಟಿಯಾಗಿದ್ದ ಗಿಲ್ಲಿ ನಟ