ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Photos: ಹೃಷಿಕೇಶದಲ್ಲಿ ಸಪ್ತಪದಿ ತುಳಿದ ʻಮನದ ಕಡಲುʼ ಸಿನಿಮಾ ನಟ ಸುಮುಖ; ಏಳು ವರ್ಷದ ಪ್ರೀತಿಗೆ ಮದುವೆ ಮುದ್ರೆ

ಯೋಗರಾಜ್‌ ಭಟ್‌ ನಿರ್ದೇಶನದ ʻಮನದ ಕಡಲುʼ ಸಿನಿಮಾದಲ್ಲಿ ನಟಿಸಿ ಫೇಮಸ್‌ ಆಗಿದ್ದ ಸುಮುಖ ಈಗ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಯಾವುದೇ ಅಬ್ಬರವಿಲ್ಲದೆ, ಕೇವಲ ಆಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ. ರಿಷಿಕೇಶದ ಶಾಂತಿಯುತ ಪರಿಸರದಲ್ಲಿ ವಿವಾಹದಲ್ಲಿ ಬಹುಕಾಲದ ಗೆಳತಿ ಮೈತ್ರಿ ಉಕಾ ಜೊತೆಗೆ ಸುಮುಖ ಸಪ್ತಪದಿ ತುಳಿದಿದ್ದು, ಮದುವೆಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗುತ್ತಿವೆ. ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿ, ಯಾನ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಸುಮುಖ, ʻಮನದ ಕಡಲುʼ ಚಿತ್ರದಿಂದ ಹೆಚ್ಚು ಜನಪ್ರಿಯರಾಗಿದ್ದರು. ಸುಮುಖ ಮತ್ತು ಮೈತ್ರಿ ಮದುವೆಯ ಸುಂದರ ಫೋಟೋಗಳು ಇಲ್ಲಿವೆ.

Photos: ಹೃಷಿಕೇಶದ ಗಂಗಾತೀರದಲ್ಲಿ ಸಪ್ತಪದಿ ತುಳಿದ ʻಮನದ ಕಡಲುʼ ನಟ ಸುಮುಖ

-

Avinash GR
Avinash GR Apr 5, 2026 12:24 PM