Sobhita Dhulipala: ಪೋಷಕರಾಗಿ ಬಡ್ತಿ ಪಡೆಯುತ್ತಿದ್ದಾರಾ ನಾಗ ಚೈತನ್ಯ-ಶೋಭಿತಾ? ಈ ಸುದ್ದಿಯ ಅಸಲಿಯತ್ತೇನು?
ಅಕ್ಕಿನೇನಿ ನಾಗ ಚೈತನ್ಯ ಪತ್ನಿ ಶೋಭಿತಾ ಧೂಳಿಪಾಲ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ. ಅಕ್ಕಿನೇನಿ ಕುಟುಂಬಕ್ಕೆ ಶೀಘ್ರದಲ್ಲೇ ಮಗು ಬರಲಿದೆ ಎಂದು ಅಭಿಮಾನಿಗಳು ದಂಪತಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಆದರೆ ನಿಜವಾಗಿಯೂ ನಾಗ ಚೈತನ್ಯ ದಂಪತಿಗಳು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ?



ನಾಗ ಚೈತನ್ಯ ದಂಪತಿಗಳು ಪೋಷಕರಾಗಲಿದ್ದಾರೆ ಎಂಬ ಸುದ್ದಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಇತ್ತೀಚಿಗೆ ನಟಿ ಮುಂಬೈನಲ್ಲಿ ನಡೆದ WAVES ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ನಟಿಯ ಸೀರೆ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿತ್ತು. ಈ ನಡುವೆ ನಟಿ ಗರ್ಭಿಣಿ ಎಂಬ ವದಂತಿ ಕೂಡ ಹಬ್ಬಿದೆ.

ನಾಗ ಚೈತನ್ಯ ಅವರನ್ನು ಮದುವೆಯಾದ 6 ತಿಂಗಳ ನಂತರ ಶೋಭಿತಾ ಧುಲಿಪಾಲ ಗರ್ಭಧಾರಣೆಯ ವದಂತಿಯನ್ನು ಹುಟ್ಟುಹಾಕಿದ್ದಾರೆ.ಮುಂಬೈನಲ್ಲಿ ನಡೆದ WAVES 2025 ರಲ್ಲಿ ಶೋಭಿತಾ ಧರಿಸಿದ್ದ ಸೀರೆಯು ಬೇಬಿ ಬಂಪ್ ಮುಚ್ಚಿದಂತೆ ಕಂಡುಬಂದಿತ್ತು. ಹಾಗಾಗಿ ಅವರ ಈ ಲುಕ್ ನೋಡಿದ ಅವರ ಅಭಿಮಾನಿಗಳು ನಟಿ ತಾಯಿಯಾಗಲಿದ್ದಾರೆ ಎಂದು ಊಹಿಸಲು ಪ್ರಾರಂಭಿಸಿದ್ದಾರೆ

ನಟಿಯ WAVES ಲುಕ್ ವೈರಲ್ ಆಗುತ್ತಿದ್ದಂತೆ ನಟಿ ಗರ್ಭಿಣಿ ಎಂಬ ಗಾಸಿಪ್ ಹರಿದಾಡುತ್ತಿದೆ. ನಟಿ ಇದ್ದಕ್ಕಿದ್ದಂತೆ ಇತ್ತೀಚೆಗೆ ಸಡಿಲ ಬಟ್ಟೆಯಲ್ಲಿ ಕಾಣಿಸಿಕೊಳ್ಳತೊಡಗಿದ್ದಾರೆ. ಅಷ್ಟೇ ಅಲ್ಲದೆ ನಟಿ ವೇವ್ಸ್ ನಲ್ಲಿ ಬೇಬಿ ಬಂಪ್ಸ್ ಹೈಡ್ ಮಾಡಲು ಹೆಚ್ಚು ವಿನ್ಯಾಸ ಇರುವ ಸೀರೆ ಧರಿಸಿದ್ದರು ಎನ್ನಲಾಗಿತ್ತು.

ನಟಿ ಇತ್ತೀಚೆಗೆ ತುಂಬಾ ಅಗಲವಾದ ಸಡಿಲ ಬಟ್ಟೆ ಧರಿಸಿಸುತ್ತಿದ್ದಾರೆ. ಆಕೆಯ ವೇವ್ಸ್ ಲುಕ್ ಕೂಡ ಶೋಭಿತಾ ಗರ್ಭಿಣಿಯೇ ಎಂಬ ಅನುಮಾನ ಬರುವಂತೆ ಮಾಡಿದೆ. ಸಾಮಾನ್ಯವಾಗಿ ನಟಿಯರು ಅದನ್ನು ಹೈಡ್ ಮಾಡಲು ಗರ್ಭಿಣಿಯಾದಾಗ ಲೂಸ್ ಬಟ್ಟೆ ಧರಿಸಿ ಓಡಾಡುತ್ತಾರೆ. ಹಾಗಾಗಿ ಹೆಚ್ಚಿನವರು ನಟಿ ಕೆಲವರು ಗರ್ಭಿಣಿಯಾಗಿರುವ ಸಂದೇಹ ಹೊರಹಾಕಿದ್ದಾರೆ.

ಆದಾಗ್ಯೂ, ಕುಟುಂಬದ ಸದಸ್ಯರೊಬ್ಬರು ಈ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ. ಅವಳು ಮ್ಯಾಟರ್ನಿಟಿ ಡ್ರೆಸ್ ಧರಿಸಿಲ್ಲ, ಬದಲಾಗಿ ಆಂಟಿ-ಫಿಟ್ ಡ್ರೆಸ್ ಅನ್ನು ಧರಿಸಿದ್ದಳು. ಬಟ್ಟೆಯ ಶೈಲಿ ಬದಲಾಗಿದೆಯೆಂದರೆ, ಹೊಸ ಕಥೆ ಹುಟ್ಟಿಬಿಡುತ್ತದೆ. ಈ ಸಂದರ್ಭಕ್ಕೆ ಈ ಗರ್ಭಿಣಿ ಎಂಬ ಮಾತು ಕೇವಲ ಗಾಸಿಪ್ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

ಆದರೆ, ಈ ಬಗ್ಗೆ ನಾಗ ಚೈತನ್ಯ ಅಥವಾ ಶೋಭಿತಾ ಅವರಿಂದ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅಕ್ಕಿನೇನಿ ಕುಟುಂಬದ ಆಪ್ತ ವಲಯಗಳಿಂದ ಬಂದಿರುವ ಮಾಹಿತಿಯ ಪ್ರಕಾರ, ಈ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ. ಶೋಭಿತಾ ಪ್ರಸ್ತುತ ಗರ್ಭಿಣಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಕಳೆದ ವರ್ಷ ಡಿಸೆಂಬರ್ 4 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸಮಂತಾ ಅವರಿಂದ ವಿಚ್ಛೇದನ ಪಡೆದ ನಂತರ, ನಾಗಚೈತನ್ಯ ಶೋಭಿತಾಳನ್ನು ಪ್ರೀತಿಸಿ ವಿವಾಹವಾದರು.