Lakshmi Nivasa Serial: ತೀರ್ಪು ಹೊರ ಬೀಳುವಾಗಲೇ ಅನಿರೀಕ್ಷಿತ ತಿರುವು ಕೊಟ್ಟಿದ್ದಾರೆ ಶ್ರೀಕಾಂತ!
Lakshmi Nivasa Kannada Serial: ಸಿದ್ದೇಗೌಡರಿಗೆ ಜೀವಾವಧಿ ಶಿಕ್ಷೆ ಕೊಡಬೇಕು ಅನ್ನೋಷ್ಟರಲ್ಲಿ ಮಾಸ್ ಎಂಟ್ರಿ ಕೊಟ್ಟಿದ್ದಾರೆ ಶ್ರೀಕಾಂತ್. ಇಷ್ಟು ದಿನಗಳ ಕಾಲ ಕಥೆಯಲ್ಲಿ ಅತಿ ದೊಡ್ಡ ನೋವಾಗಿದ್ದ ಶ್ರೀಕಾಂತ್ ಸಾವು ಈಗ ಸುಳ್ಳಾಗಿದ್ದು, ಆತ ಬದುಕಿ ಬಂದಿದ್ದಾನೆ. ಧಾರಾವಾಹಿ ಪ್ರಾರಂಭದಲ್ಲಿ ಶ್ರೀಕಾಂತ್ ಮತ್ತು ಭಾವನಾ ಜೋಡಿ ಇನ್ನೇನು ಮದುವೆಯಾಗುತ್ತಾರೆ ಅನ್ನುವಷ್ಟರಲ್ಲಿ ಶ್ರೀಕಾಂತ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದು ಧಾರಾವಾಹಿಯನ್ನು ಹೊಸ ದಿಕ್ಕಿನತ್ತ ಸಾಗುವಂತೆ ಮಾಡಿತು.
ಲಕ್ಷ್ಮೀ ನಿವಾಸ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಲಕ್ಷ್ಮೀ ನಿವಾಸದಲ್ಲಿ (lakshmi Nivasa Serial) ಅನಿರೀಕ್ಷಿತ ತಿರುವು ಕೊಟ್ಟಿದ್ದಾರೆ ಶ್ರೀಕಾಂತ. ಇನ್ನೇನು ಸಿದ್ದೇಗೌಡರಿಗೆ (Siddegowda) ಜೀವಾವಧಿ ಶಿಕ್ಷೆ ಕೊಡಬೇಕು ಅನ್ನೋಷ್ಟರಲ್ಲಿ ಮಾಸ್ ಎಂಟ್ರಿ ಕೊಟ್ಟಿದ್ದಾರೆ ಶ್ರೀಕಾಂತ್. ಇಷ್ಟು ದಿನಗಳ ಕಾಲ ಕಥೆಯಲ್ಲಿ ಅತಿ ದೊಡ್ಡ ನೋವಾಗಿದ್ದ ಶ್ರೀಕಾಂತ್ ಸಾವು ಈಗ ಸುಳ್ಳಾಗಿದ್ದು, ಆತ ಬದುಕಿ ಬಂದಿದ್ದಾನೆ. ಧಾರಾವಾಹಿ ಪ್ರಾರಂಭದಲ್ಲಿ ಶ್ರೀಕಾಂತ್ ಮತ್ತು ಭಾವನಾ (Bhavana) ಜೋಡಿ ಇನ್ನೇನು ಮದುವೆಯಾಗುತ್ತಾರೆ ಅನ್ನುವಷ್ಟರಲ್ಲಿ ಶ್ರೀಕಾಂತ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದು ಧಾರಾವಾಹಿಯನ್ನು ಹೊಸ ದಿಕ್ಕಿನತ್ತ ಸಾಗುವಂತೆ ಮಾಡಿತು. ಅದರೆ ಏಕಾಏಕಿ ಶ್ರೀಕಾಂತ್ ವಾಪಸ್ ಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ರವಿಶಂಕರ್‌ಗೆ ಶಿಕ್ಷೆ ಪ್ರಕಟವಾಗುತ್ತಾ?
ಶ್ರೀಕಾಂತ್ ಸಾವು ಆಕಸ್ಮಿಕವಲ್ಲ ಅದು ಕೊಲೆ ಎಂಬುವುದು ಗೊತ್ತಾಗಿದೆ. ಆದರೆ ಈ ಕಳಂಕ ಸಿದ್ದೇಗೌಡ್ರ ಮೇಲಿದ್ದು, ಜೈಲಿನಲ್ಲಿರೋ ಸಿದ್ದುನಾ ಬಿಡಿಸಲು ಭಾವನಾ ಎಲ್ಲಿಲ್ಲದ ಕಷ್ಟ ಪಟ್ಟಳು. ಶ್ರೀಕಾಂತ್ ತಂಗಿ ಗಂಡ ರವಿಶಂಕರ್ ಶ್ರೀಕಾಂತ್ ತನ್ನ ಮಗಳಿಗಾಗಿ ಮಾಡಿದ್ದ ಆಸ್ತಿ ಪಡೆಯಲು ಶ್ರೀಕಾಂತ್ ಮುಗಿಸಲು ನೋಡಿದ್ದ.
ಇದನ್ನೂ ಓದಿ: Muddu Sose Serial: ವಿದ್ಯಾ- ಭದ್ರನ ಸಂಸಾರ ಸಾವಿತ್ರಿಯ ಕುತಂತ್ರಕ್ಕೆ ಬಲಿ? ವಿಧಿ ಆಟದ ಮುಂದೆ `ಮುದ್ದು ಸೊಸೆʼ ಸೋಲುತ್ತಾಳಾ?
ಶ್ರೀಕಾಂತ್ ಬರೋದೇ ಇಲ್ಲ ಎಂದುಕೊಂಡಿದ್ದ ರವಿಶಂಕರ್‌ಗೆ ಬರಸಿಡಿಲು ಬಡಿದಂತಾಯ್ತು. ಆಕ್ಷಿಡೆಂಟ್ ರವಿಶಂಕರ್‌ಗೆ ಶಿಕ್ಷೆ ಪ್ರಕಟವಾಗುತ್ತಾ? ಮಾಡಿಸಿದ್ದು ತಾನೇ ಎಂದು ಗೊತ್ತಾಗೋದನ್ನು ತಪ್ಪಿಸಲು ರವಿಶಂಕರ್ ಶ್ರೀಕಾಂತ್‌ನನ್ನು ಸಂಚಿನಿಂದ ಕಿಡ್ನ್ಯಾಪ್ ಮಾಡುತ್ತಾನೆ. ಅಪಾಯದಲ್ಲಿರುವ ಶ್ರೀಕಾಂತ್‌ನನ್ನು ಕಾಪಾಡಲು ಜಯಂತ್ ಎಂಟ್ರಿ ಕೊಡುತ್ತಾನೆ.
ಜಯಂತ್, ಶ್ರೀಕಾಂತ್‌ನನ್ನು ಬಚಾವ್ ಮಾಡಿ ನ್ಯಾಯಾಲಕ್ಕೆ ಕರೆ ತರುತ್ತಾನೆ. ಇನ್ನೇನು ಸಿದ್ದೇಗೌಡರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸುವ ಹೊತ್ತಿನಲ್ಲಿ ಜಯಂತ್ ಬಂದಿದ್ದಾನೆ. ಶ್ರೀಕಾಂತ್ ಸತ್ತಿಲ್ಲ ಎಂದು ಹೇಳಿದೊಡನೆ ನ್ಯಾಯಾಲಯದಲ್ಲಿ ಪ್ರತ್ಯಕ್ಷವಾಗಿದ್ದಾನೆ. ಈಗ ರವಿಶಂಕರ್ ಮುಂದಿನ ಕಥೆ ಏನು? ಎಂಬುದು ವೀಕ್ಷಕರಲ್ಲಿ ಇರುವ ಕುತೂಹಲ.
ಸಿದ್ದೇಗೌಡ್ರನ್ನು ಜೈಲಿಗೆ ಕಳಿಸಿದ ಬಳಿಕ, ನಾನು ಶ್ರೀಕಾಂತ್ ಆಸ್ತಿಯನ್ನು ಅನುಭವಿಸಿಕೊಂಡು ಇರೋಣ ಅಂತಾ ರವಿಶಂಕರ್ ಪ್ಲಾನ್ ಮಾಡಿದ್ದ. ಆದ್ರೆ ಯಾರು ಊಹಿಸದ ತಿರುವು ಈಗ ಎದುರಿಗೆ ಬಂದಿದೆ.
ಶ್ರೀಕಾಂತ್ ಇಷ್ಟುದಿನ ಎಲ್ಲಿದ್ದ? ಅಂದು ಅಪಘಾತದಲ್ಲಿ ಏನಾಯ್ತು? ಶ್ರೀಕಾಂತ್ ಆಮೇಲೆ ಎಲ್ಲಿಗೆ ಹೋದ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಶ್ರೀಕಾಂತ್ ಬದುಕಿಬರುತ್ತಾನೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಇಷ್ಟು ದಿನ ಸಿದ್ದೇಗೌಡ್ ಕಾರ್ ಡಿಕ್ಕಿ ಹೊಡೆದಿದ್ದರಿಂದ ಶ್ರೀಕಾಂತ್ ಸಾವು ಆಗಿದೆ ಎಂದು ಎಲ್ಲರೂ ನಂಬಿಕೊಂಡಿದ್ದರು. ಮಗನನ್ನ ಜೈಲಿಗೆ ಹೋಗುವಂತೆ ಮಾಡಿರುವ ಜವರೇಗೌಡರಿಗೂ ಅಪಘಾತದ ಸತ್ಯ ಗೊತ್ತಿಲ್ಲ.