Monsoon Beauty Tips 2026: ಮಾನ್ಸೂನ್ಗೆ 7 ಸಿಂಪಲ್ ಬ್ಯೂಟಿ ಮಂತ್ರ
Monsoon Beauty Tips: ಮಾನ್ಸೂನ್ ಸೀಸನ್ನಲ್ಲಿ ನಿಮ್ಮ ವಧನವನ್ನು ಸುಂದರವಾಗಿಟ್ಟುಕೊಳ್ಳಲು ಒಂದಿಷ್ಟು ಬ್ಯೂಟಿ ಮಂತ್ರ ಫಾಲೋ ಮಾಡಿ ಎನ್ನುತ್ತಿದ್ದಾರೆ ಬ್ಯೂಟಿ ಎಕ್ಸ್ಪರ್ಟ್ ಮಂಗಲಾ. ಈ ಕುರಿತಂತೆ ಅವರು ಒಂದಿಷ್ಟು ಟಿಪ್ಸ್ ನೀಡಿದ್ದಾರೆ. ಡಿಟೇಲ್ಸ್ ಇಲ್ಲಿದೆ.
ಚಿತ್ರಕೃಪೆ: ಪಿಕ್ಸೆಲ್ -
ಮಳೆಗಾಲದಲ್ಲೂ ನಿಮ್ಮ ವಧನ ಅತ್ಯಾಕರ್ಷಕವಾಗಿ ಕಾಣಿಸಲು ಒಂದಿಷ್ಟು ಬ್ಯೂಟಿ ಮಂತ್ರಗಳನ್ನು ಫಾಲೋ ಮಾಡಿ ಎನ್ನುವ ಬ್ಯೂಟಿ ಎಕ್ಸ್ಪರ್ಟ್ ಮಂಗಲಾ, ಒಂದಿಷ್ಟು ಸಿಂಪಲ್ ಸಲಹೆಗಳನ್ನು ನೀಡಿದ್ದಾರೆ.
ವಾಟರ್ ಪ್ರೂಫ್ ಮೇಕಪ್ಗೆ ಆದ್ಯತೆ
ಹೊರಗಡೆ ನಡೆಯುವ ಕಾರ್ಯಕ್ರಮಗಳಿಗೆ ನೀವು ಆದಷ್ಟೂ ವಾಟರ್ ಪ್ರೂಫ್ ಮೇಕಪ್ಗೆ ಆದ್ಯತೆ ನೀಡುವುದು ಉತ್ತಮ. ಕಣ್ಣಿಗೆ ಐ ಶ್ಯಾಡೋ, ಐ ಪೆನ್ಸಿಲ್, ಮಸ್ಕರಾ, ಐ ಲೈನರ್, ತುಟಿಗೆ ಲಿಪ್ಸ್ಟಿಕ್ ಹೀಗೆ ಎಲ್ಲವೂ ಸ್ಮಡ್ಜ್ ಪ್ರೂಫ್ನದ್ದನ್ನೇ ಆಯ್ಕೆ ಮಾಡಿ, ಹಚ್ಚಿ.
ಕಡಿಮೆ ಮೇಕಪ್ ಅಥವಾ ಮಿನಿಮಲ್ ಮೇಕಪ್ ಮಾಡಿ
ಮಳೆಗಾಲದಲ್ಲಿ ಆದಷ್ಟೂ ಕಡಿಮೆ ಮೇಕಪ್ ಮಾಡಿ. ತ್ವಚೆಯು ಉಸಿರಾಡಲು ಅನುವು ಮಾಡಿಕೊಡಿ. ಮೇಕಪ್ ಮಾಡಿದ ನಂತರ ಯಾವುದೇ ಕಾರಣಕ್ಕೂ ಮಳೆಯಲ್ಲಿ ಮುಖವನ್ನು ಒಡ್ಡುವಂತಹ ಪರಿಸ್ಥಿತಿ ತಂದು ಕೊಳ್ಳಬೇಡಿ. ಇದು ತ್ವಚೆಯ ಸಮಸ್ಯೆ ಉಂಟು ಮಾಡಬಹುದು.
ಬ್ರಾಂಡೆಡ್ / ಉತ್ತಮ ಗುಣಮಟ್ಟದ ಕಾಸ್ಮೆಟಿಕ್ಸ್ ಬಳಸಿ
ಮುಖಕ್ಕೆ ಯಾವುದೇ ಕಾರಣಕ್ಕೂ ರಾಜಿ ಆಗಬೇಡಿ. ಕಳಪೆ ಹಾಗೂ ಸ್ಟ್ರೀಟ್ ಸೈಡ್ನಲ್ಲಿ ಕಡಿಮೆ ಬೆಲೆಗೆ ದೊರೆಯುವ ಕಾಸ್ಮೆಟಿಕ್ಸ್ ಬಳಸಬೇಡಿ. ಉತ್ತಮ ಗುಣಮಟ್ಟದ ಮೇಕಪ್ ಐಟಂಗಳನ್ನೇ ಬಳಸಿ.
ಮಳೆಗಾಲದಲ್ಲೂ ಮಾಯಿಶ್ಚರೈಸರ್ ಅಂಶ ಅಗತ್ಯ
ತ್ವಚೆಗೆ ಮಳೆಗಾಲದಲ್ಲೂ ಮಾಯಿಶ್ಚರೈಸರ್ ಅಂಶ ಅಗತ್ಯ. ಪ್ರತಿನಿತ್ಯ ತುಟಿಗೆ ಲಿಪ್ಬಾಮ್ ಹಚ್ಚಿಕೊಳ್ಳಿ. ಇದರಿಂದ ತುಟಿಗಳು ಮೃದುವಾಗಿರುತ್ತವೆ. ಮುಖಕ್ಕೂ ಮಾಯಿಶ್ಚರೈಸ್ ಲೇಪಿಸಿ.
ಮಲಗುವ ಮುನ್ನ ಮೇಕಪ್ ತೆಗೆಯಿರಿ
ಮಲಗುವ ಮುನ್ನ ಮೇಕಪ್ ತೆಗೆಯುವುದನ್ನು ಮರೆಯಬೇಡಿ. ಯಾಕೆಂದರೆ, ವಾಟರ್ ಪ್ರೂಫ್ ಸೌಂದರ್ಯವರ್ಧಕಗಳು ಲಾಂಗ್ಟೈಮ್ ಹಾಗೆಯೇ ಉಳಿಯುವುದರಿಂದ ತ್ವಚೆಗೆ ಹಾನಿ ಉಂಟಾಗುತ್ತದೆ. ಮೊಡವೆಗಳು ಮೂಡುತ್ತವೆ.
ಆದಷ್ಟೂ ವಧನವು ಅಲರ್ಜಿಗಳಿಂದ ಮುಕ್ತವಾಗಿರಲಿ
ಸೌಂದರ್ಯ ವರ್ಧಕಗಳ ಹೊಸ ಉತ್ಪನ್ನಗಳ ಪ್ರಯೋಗ ಮಾಡುವುದು ಬೇಡ! ಇದು ವಧನದ ಅಲರ್ಜಿಗೆ ನಾಂದಿಯಾಡಬಹುದು. ರ್ಯಾಶಸ್, ಸಣ್ಣ ಗುಳ್ಳೆಗಳು, ಚರ್ಮ ಕೆಂಪಾಗುವುದು ಸೇರಿದಂತೆ ಈ ಸೀಸನ್ನಲ್ಲಿ ಚರ್ಮ ಅತಿ ಬೇಗ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ಗೊಳಗಾಗುತ್ತದೆ.
ಹರ್ಬಲ್ ಫೇಸ್ ಪ್ಯಾಕ್ ಮಾಡಿ
ಮನೆಯಲ್ಲೆ ನಿಮ್ಮ ಮುಖಕ್ಕೆ ಹೊಂದುವಂತಹ ಹರ್ಬಲ್ ಫೇಸ್ ಪ್ಯಾಕ್ಗಳಿಂದ ಆರೈಕೆ ಮಾಡಿ.