ವಿದ್ಯಾರ್ಥಿಗಳಿಗೆ ಶಿಸ್ತಿನ ಜೀವನಶೈಲಿ ಅಗತ್ಯ: ಪ್ರಾಂಶುಪಾಲ ಕೆ.ವಿ.ವೆಂಕಟರೆಡ್ಡಿ
ಫೆ.24 ರಿಂದ 28ವರಗೆ 2ನೇ ಹಂತದ ಇಂಡಕ್ಷನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ವೇಳೆ ವಿದ್ಯಾರ್ಥಿಗಳಿಗೆ ಶಿಸ್ತಿನ ಜೀವನ ಶೈಲಿ ಮತ್ತು ಸಮಯದ ಸದುಪಯೋಗ ಅಗತ್ಯವಾಗಿದೆ ಹಾಗೂ ಹೊಸ ಅವಿಷ್ಕಾರಗಳನ್ನು ರೂಪಿಸುವ ಚಿಂತನೆ ಮತ್ತು ಸಮಾಜಕ್ಕೆ ಉಪಯುಕ್ತವಾಗುವ ತಂತ್ರಜ್ಞಾನವನ್ನು ಸೃಷ್ಟಿಸುವ ಜವಾಬ್ದಾರಿ ಇದೆ. ಜ್ಞಾನ, ವ್ಯಕ್ತಿತ್ವ ಮತ್ತು ನೈತಿಕ ಮೌಲ್ಯ ಗಳನ್ನು ಬೆಳೆಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು
ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕಾಲೇಜಿನ ವಾತಾವರಣ, ಶೈಕ್ಷಣಿಕ ಪದ್ಧತಿ, ನಿಯಮಾವಳಿ, ಪಠ್ಯಕ್ರಮ ಹಾಗೂ ವಿವಿಧ ಸೌಲಭ್ಯಗಳ ಕುರಿತು ಸಮಗ್ರ ಪರಿಚಯ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಚಿಂತಾಮಣಿ ಸರ್ಕಾರಿ ಪಾಲಿಟೆಕ್ವಿಕ್ ಕಾಲೇಜಿನ ಪ್ರಾಂಶುಪಾಲ ಕೆ.ವಿ ವೆಂಕಟರೆಡ್ಡಿ ತಿಳಿಸಿದರು. -
ಚಿಕ್ಕಬಳ್ಳಾಪುರ : ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕಾಲೇಜಿನ ವಾತಾವರಣ, ಶೈಕ್ಷಣಿಕ ಪದ್ಧತಿ, ನಿಯಮಾವಳಿ, ಪಠ್ಯಕ್ರಮ ಹಾಗೂ ವಿವಿಧ ಸೌಲಭ್ಯಗಳ ಕುರಿತು ಸಮಗ್ರ ಪರಿಚಯ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಚಿಂತಾಮಣಿ ಸರ್ಕಾರಿ ಪಾಲಿಟೆಕ್ವಿಕ್ ಕಾಲೇಜಿನ ಪ್ರಾಂಶುಪಾಲ ಕೆ.ವಿ.ವೆಂಕಟರೆಡ್ಡಿ ತಿಳಿಸಿದರು.
ಚಿಂತಾಮಣಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಘಟಕ ಕಾಲೇಜಿನಲ್ಲಿ 2025-26 ನೇ ಸಾಲಿನ ಎರಡನೇ ಸೆಮಿಸ್ಟರ್ ಬಿ.ಇ ಸಿ.ಎಸ್.ಇ, ಎ.ಐ.ಎಮ್.ಎಲ್, ಇ.ಸಿ.ಇ ಮತ್ತು ಇ.ಇ.ಇ ವಿಭಾಗದ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಇಂಡಕ್ಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಫೆ.24 ರಿಂದ 28ವರಗೆ 2ನೇ ಹಂತದ ಇಂಡಕ್ಷನ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ವೇಳೆ ವಿದ್ಯಾರ್ಥಿಗಳಿಗೆ ಶಿಸ್ತಿನ ಜೀವನ ಶೈಲಿ ಮತ್ತು ಸಮಯದ ಸದುಪಯೋಗ ಅಗತ್ಯ ವಾಗಿದೆ ಹಾಗೂ ಹೊಸ ಅವಿಷ್ಕಾರಗಳನ್ನು ರೂಪಿಸುವ ಚಿಂತನೆ ಮತ್ತು ಸಮಾಜಕ್ಕೆ ಉಪಯುಕ್ತ ವಾಗುವ ತಂತ್ರಜ್ಞಾನವನ್ನು ಸೃಷ್ಟಿಸುವ ಜವಾಬ್ದಾರಿ ಇದೆ. ಜ್ಞಾನ, ವ್ಯಕ್ತಿತ್ವ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದುಕಿವಿ ಮಾತು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಅನುಸೂಯ ಮಾತನಾಡಿ, ವಚನಗಳ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದರು ಹಾಗೂ ಹೆಣ್ಣಿನ ಸಮಾನತೆ ಮತ್ತು ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಜೆ ಪಿ ಅಕಾಡೆಮಿ ಪ್ರಾಂಶುಪಾಲ ಡಾ. ಬಸವರಾಜ್, ವಿದ್ಯಾರ್ಥಿ ಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.