Shidlaghatta News: ಹಿಂಸೆಗೆ ಒಳಗಾದವರ ಧ್ವನಿಯಾಗಿ ಜಾಂಭವ ಯುವ ಸೇನೆ
ಅನ್ಯಾಯ, ದೌರ್ಜನ್ಯ ಹಾಗೂ ಶೋಷಣೆಗೆ ಒಳಗಾಗುವವರಿಗೆ ಕಾನೂನು ಸಹಾಯ, ಸಾಮಾಜಿಕ ಬೆಂಬಲ ಮತ್ತು ಹೋರಾಟದ ಮೂಲಕ ನ್ಯಾಯ ದೊರಕಿಸುವುದು ಸಂಘಟನೆಯ ಮುಖ್ಯ ಉದ್ದೇಶವಾಗಿದೆ. ಯುವಕರು ಸಮಾಜದ ಸಮಸ್ಯೆಗಳ ಬಗ್ಗೆ ಜಾಗೃತರಾಗ ಬೇಕು ಹಾಗೂ ಮಾನವೀಯ ಮೌಲ್ಯಗಳನ್ನು ಕಾಪಾಡುವಲ್ಲಿ ಮುಂಚೂಣಿಯಲ್ಲಿ ಇರಬೇಕು
-
ಶಿಡ್ಲಘಟ್ಟ: ಸಮಾಜದಲ್ಲಿ ಎಲ್ಲಿ ನೊಂದವರು, ಹಿಂಸೆಗೆ ಒಳಗಾದವರು ಹಾಗೂ ಅನ್ಯಾ ಯಕ್ಕೆ ಗುರಿಯಾದವರು ಇರುತ್ತಾರೋ ಅಲ್ಲಿ ಜಾಂಭವ ಯುವ ಸೇನೆ ನಿಂತುಕೊಳ್ಳುತ್ತದೆ ಎಂದು ಜಾಂಭವ ಯುವ ಸೇನಾ ಸಂಸ್ಥಾಪಕ ಅಧ್ಯಕ್ಷ ಹಾಗೂ ರಾಜ್ಯಾಧ್ಯಕ್ಷ ಡಾ. ಎಸ್.ಎಂ. ರಮೇಶ್ ಚಕ್ರವರ್ತಿ ಹೇಳಿದರು.
ನಗರದ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂಭಾಗ ಆಯೋಜಿಸಿದ್ದ ಜಾಂಭವ ಯುವ ಸೇನಾ ನೂತನ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಮಹಿಳೆಯರಿಗೆ ಸೀರೆ ವಿತರಣೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಜಾಂಭವ ಯುವ ಸೇನೆ ಕೇವಲ ಒಂದು ಸಂಘಟನೆ ಅಲ್ಲ, ಅದು ನೋವು ಅನುಭವಿಸು ವವರ ಧ್ವನಿಯಾಗಿದೆ. ಜಾತಿ, ಧರ್ಮ, ವರ್ಗ ಭೇದವಿಲ್ಲದೆ ಸಮಾಜದ ಎಲ್ಲಾ ವರ್ಗಗಳ ಪರವಾಗಿ ಸಂಘಟನೆ ಕೆಲಸ ಮಾಡುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Shidlaghatta News: 75 ವರ್ಷಗಳ ಪರಂಪರೆಯ ದೇವಾಲಯದಲ್ಲಿ ಮಹಾಶಿವರಾತ್ರಿ ವೈಭವ...
ಅನ್ಯಾಯ, ದೌರ್ಜನ್ಯ ಹಾಗೂ ಶೋಷಣೆಗೆ ಒಳಗಾಗುವವರಿಗೆ ಕಾನೂನು ಸಹಾಯ, ಸಾಮಾಜಿಕ ಬೆಂಬಲ ಮತ್ತು ಹೋರಾಟದ ಮೂಲಕ ನ್ಯಾಯ ದೊರಕಿಸುವುದು ಸಂಘ ಟನೆಯ ಮುಖ್ಯ ಉದ್ದೇಶವಾಗಿದೆ. ಯುವಕರು ಸಮಾಜದ ಸಮಸ್ಯೆಗಳ ಬಗ್ಗೆ ಜಾಗೃತರಾಗ ಬೇಕು ಹಾಗೂ ಮಾನವೀಯ ಮೌಲ್ಯಗಳನ್ನು ಕಾಪಾಡುವಲ್ಲಿ ಮುಂಚೂಣಿಯಲ್ಲಿ ಇರಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಪ್ರಮೋದ್ ರೆಡ್ಡಿ, ನಗರಸಭೆ ಮಾಜಿ ಸದಸ್ಯ ಕೃಷ್ಣಮೂರ್ತಿ ನರಸಿಂಹಮೂರ್ತಿ (ಎನ್.ಟಿ.ಆರ್.), ಶ್ರೀನಿವಾಸ್ ಚಕ್ರವರ್ತಿ,ಕಟ್ಟಡ ಕಾರ್ಮಿಕರ ಅಧ್ಯಕ್ಷರಾದ ವಿ ದೇವಪ್ಪ, ಸಂದೀಪ್, ನರಸಿಂಹ, ಮಂಜುನಾಥ್, ಪ್ರಭು, ನರೇಂದ್ರ ಕುಮಾರ್, ನಾಗೇಶ್ ಶಿಟ್ಲಘಟ್ಟ ಕಾರ್ಮಿಕ ಇಲಾಖೆ ನಿರೀಕ್ಷಕರಾದ ವಿಜಯಲಕ್ಷ್ಮಿ, ರವಿಪ್ರಕಾಶ್, ಪ್ರದೀಪ್, ಸೇರಿದಂತೆ ಜಾಂಭವ ಯುವ ಸೇನಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.
“ಸಾಮಾಜಿಕ ನ್ಯಾಯದ ಹೆಸರಿನಲ್ಲಿ ವರ್ಷಗಳಿಂದ ನಡೆಯುತ್ತಿರುವ ಅನ್ಯಾಯವನ್ನು ಇನ್ನು ಸಹಿಸಲಾಗುವುದಿಲ್ಲ. ಒಳ ಮೀಸಲಾತಿ ಜಾರಿಗೆ ಸರ್ಕಾರ ತಕ್ಷಣ ಸ್ಪಷ್ಟ ನಿಲುವು ಕೈಗೊಳ್ಳಬೇಕು. ಮೀಸಲಾತಿ ಸೌಲಭ್ಯಗಳು ಕೆಲವರಿಗೆ ಮಾತ್ರ ಸೀಮಿತವಾಗಿರುವುದರಿಂದ ನಿಜವಾದ ಹಕ್ಕುದಾರರಿಗೆ ಅವಕಾಶ ದೊರಕುತ್ತಿಲ್ಲ. ರಾಜ್ಯ ಸರ್ಕಾರ ರಾಜಕೀಯ ಲಾಭ-ನಷ್ಟಗಳನ್ನು ಲೆಕ್ಕಿಸದೆ ಹಿಂದುಳಿದ ವರ್ಗಗಳ ನ್ಯಾಯಯುತ ಹಕ್ಕುಗಳನ್ನು ಕಾಪಾಡುವ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸ ಲಾಗುವುದು” ಎಂದು ಡಾ.ಎಸ್.ಎಂ.ರಮೇಶ್ ಚಕ್ರವರ್ತಿ ಎಚ್ಚರಿಸಿದರು.