Saree Retro Fashion 2026: ಹಳೆ ಸಿನಿಮಾದ ನಾಯಕಿಯಂತೆ ಬಿಂಬಿಸುವ ರೆಟ್ರೋ ಸೀರೆ ಸ್ಟೈಲಿಂಗ್
ಈ ಸೀಸನ್ನಲ್ಲಿ ರೆಟ್ರೋ ಸೀರೆ ಸ್ಟೈಲಿಂಗ್ ಟ್ರೆಂಡಿಯಾಗಿದೆ. ನೋಡಲು ಹಳೆಯ ಕಾಲದ ಹೀರೋಯಿನ್ಗಳಂತೆ ಬಿಂಬಿಸುವ ಸೀರೆ ಸ್ಟೈಲಿಂಗ್ ಸದ್ಯ ಸಖತ್ ಪಾಪುಲರ್ ಆಗಿದೆ. ಈ ಲುಕ್ ಪಡೆಯಲು ಯಾವ ಟಿಪ್ಸ್ ಅಥವಾ ರೂಲ್ಸ್ ಪಾಲಿಸಬೇಕು? ಈ ಬಗ್ಗೆ ಸ್ಟೈಲಿಸ್ಟ್ಗಳು ಹೇಳುವುದೇನು? ಇಲ್ಲಿದೆ ಡಿಟೇಲ್ಸ್.
ಚಿತ್ರಗಳು: ಕಯಾದು ಲೋಹರ್, ನಟಿ -
ರೆಟ್ರೋ ಸೀರೆ ಸ್ಟೈಲಿಂಗ್ ಈ ಸೀಸನ್ನಲ್ಲಿ ಹಿಟ್ ಆಗಿದೆ. ನೋಡಲು ಹಳೆಯ ಕಾಲದ ಹೀರೋಯಿನ್ಗಳಂತೆ ಬಿಂಬಿಸುವ ಸೀರೆ ಸ್ಟೈಲಿಂಗ್ ಸದ್ಯ ಸಖತ್ ಪಾಪುಲರ್ ಆಗಿದೆ. 80 ರ ದಶಕದ ನಾಯಕಿಯರಂತೆ ಕಾಣಿಸುವ ಈ ಲುಕ್ ಎಲ್ಲಾ ವಯಸ್ಸಿನ ನಾರಿಯರನ್ನು ಆವರಿಸಿಕೊಂಡಿದೆ.
ಇದಕ್ಕೆ ಪೂರಕ ಎಂಬಂತೆ, ಬ್ಯೂಟಿ ಎಕ್ಸ್ಪರ್ಟ್ಸ್ ಹಾಗೂ ಸ್ಟೈಲಿಸ್ಟ್ಗಳು ಕೂಡ ಒಂದಿಷ್ಟು ಐಡಿಯಾಗಳನ್ನು ಹಂಚಿಕೊಂಡಿದ್ದಾರೆ. ಸೀರೆಯಲ್ಲಿ ನಟಿ ಕಯಾದು ಕಾಣಿಸಿಕೊಂಡಿರುವ ಪಾಪುಲರ್ ರೆಟ್ರೋ ಲುಕ್ ಪಡೆಯಲು ನೀವು ಕೂಡ ಏನು ಮಾಡಬಹುದು? ಎಂಬುದನ್ನು ತಿಳಿಸಿದ್ದಾರೆ.
ರೆಟ್ರೋ ಲುಕ್ ನೀಡುವ ಸೀರೆಯ ಆಯ್ಕೆ
ಆದಷ್ಟೂ ರೆಟ್ರೋ ಅಥವಾ ವಿಂಟೇಜ್ ಲುಕ್ ನೀಡುವಂತಹ ಸೀರೆಯನ್ನೇ ಆಯ್ಕೆ ಮಾಡಿ, ಉಟ್ಟುಕೊಳ್ಳಿ. ಅದಕ್ಕಾಗಿ ಪ್ರಿಂಟೆಡ್ ಹಾಗೂ ಬುಟ್ಟಾ ಸೀರೆಗಳನ್ನು ಚೂಸ್ ಮಾಡಿ.
ಪ್ರಿಂಟೆಡ್ ಫ್ಲೋರಲ್ ಬ್ಲೌಸ್
ಸೀರೆ ಅದ್ಯಾ ವುದೇ ಇರಲಿ. ಇಡೀ ಸೀರೆಯ ಲುಕ್ಕನ್ನು ಬ್ಲೌಸ್ ನಿರ್ಧರಿಸುತ್ತದೆ. ಹಾಗಾಗಿ ಪ್ರಿಂಟೆಡ್ ಫ್ಲೋರಲ್ ಬ್ಲೌಸ್ಗೆ ಪಫ್ ಸ್ಲೀವ್ ಇಡಿಸಿ, ಬೇಕಿದ್ದಲ್ಲಿ ಫುಲ್ ಸ್ಲೀವ್ ವಿನ್ಯಾಸ ಮಾಡಿಸಿ. ಧರಿಸಿ. ರೆಟ್ರೋ ಲುಕ್ ಸಿಗುವುದು ಗ್ಯಾರಂಟಿ.
ಕರ್ಲಿ ಹೇರ್ಸ್ಟೈಲ್ ಮಾಡಿಕೊಳ್ಳಿ
ವಿಂಟೇಜ್ ಅಥವಾ ರೆಟ್ರೋ ಸೀರೆ ಲುಕ್ಗೆ ಆದಷ್ಟೂ ಕರ್ಲಿ ಹೇರ್ ಸೂಟ್ ಆಗುತ್ತದೆ. ಇಲ್ಲವಾದಲ್ಲಿ ಇದಕ್ಕಾಗಿ ಯಾವುದೇ ಹಳೆಯ ಸಿನಿಮಾ ಹೀರೋಯಿನ್ ಹೇರ್ಸ್ಟೈಲನ್ನು ಕೂಡ ಅನುಸರಿಸಬಹುದು.
ಮೇಕಪ್ ಕೂಡ ಮ್ಯಾಚ್ ಆಗುವುದು ಅಗತ್ಯ
ತಿದ್ದಿ ತೀಡಿದ ಐಬ್ರೋ, ಕಾಡಿಗೆ ಹಚ್ಚಿದ ಕಣ್ಣು, ಹಣೆಗೊಂದು ಬಿಂದಿ ಇವಿಷ್ಟನ್ನು ಮರೆಯದೇ ಮೇಕಪ್ನಲ್ಲಿ ಸೇರಿಸಿ. ಇವು ನೋಡಲು ಆಕರ್ಷಕವಾಗಿ ಬಿಂಬಿಸುತ್ತವೆ.
ಜ್ಯುವೆಲರಿಗಳ ಪಾತ್ರ
ಈ ರೆಟ್ರೋ ಲುಕ್ಗೆ ಮ್ಯಾಚ್ ಆಗುವಂತಹ ಆಭರಣಗಳ ಆಯ್ಕೆ ಮಾಡಿ, ಧರಿಸಿ. ಆದಷ್ಟೂ ನೇತಾಡುವಂತಹ ಇಯರಿಂಗ್ಸ್ ಧರಿಸಿ. ಕೈಗೆ ಕಡಗ ಅಥವಾ ವಾಚು ಹಾಕುವುದಾದಲ್ಲಿ ಈ ಲುಕ್ಗೆ ಹೊಂದಬೇಕು ಎಂಬುದನ್ನು ಮರೆಯದಿರಿ.