Season Fashion 2026: ಫ್ಯಾಷನ್ ಹಿಟ್ ಲಿಸ್ಟ್ಗೆ ಸೇರಿದ ಸ್ಲೀವ್ಲೆಸ್ ಕೋ ಆರ್ಡ್ ಸೂಟ್
Sleeveless Co-Ord Suit: ಬೇಸಿಗೆ ಸೀಸನ್ ಮುಗಿಯುತ್ತಾ ಬಂದಿದೆ. ಆದರೂ ಸ್ಲೀವ್ಲೆಸ್ ಕೋ ಆರ್ಡ್ ಸೂಟ್ಗಳು ಮಾತ್ರ ಇನ್ನೂ ಟಾಪ್ ಲಿಸ್ಟ್ನಲ್ಲಿಯೇ ಇವೆ. ಇದ್ಯಾವ ಬಗೆಯ ಔಟ್ಫಿಟ್? ಏನಿದರ ವಿಶೇಷತೆ? ಈ ಕುರಿತ ವಿವರ ಇಲ್ಲಿದೆ.
ಚಿತ್ರಗಳು: ಅಹನಾ ಕುಮ್ರಾ, ನಟಿ -
ಸ್ಲೀವ್ ಲೆಸ್ ಕೋ ಆರ್ಡ್ ಸೂಟ್ಗಳು ಈ ಸೀಸನ್ನ ಫ್ಯಾಷನ್ ಲಿಸ್ಟ್ನಿಂದ ಇನ್ನೂ ಹೊರಬಿದ್ದಿಲ್ಲ! ಬದಲಿಗೆ ಟಾಪ್ ಲಿಸ್ಟ್ನಲ್ಲಿವೆ. ಕಾರ್ಪೋರೇಟ್ ವರ್ಗದ ಮಾನಿನಿಯರನ್ನು ಸವಾರಿ ಮಾಡುತ್ತಲೇ ಇವೆ. ಆ ಮಟ್ಟಿಗೆ ಇವು ಟ್ರೆಂಡಿಯಾಗಿವೆ.
ಲೇಡಿಸ್ ಫಾರ್ಮಲ್ ಲುಕ್ನಲ್ಲಿ ಪ್ರಥಮ ಸ್ಥಾನ
ಎಲ್ಲರಿಗೂ ತಿಳಿದಿರುವಂತೆ, ಈಗಾಗಲೇ ಬೇಸಿಗೆ ಸೀಸನ್ ಮುಗಿಯುತ್ತಾ ಬಂದಿದೆ. ಆದರೂ ಮಾತ್ರ, ಸ್ಲೀವ್ಲೆಸ್ ಕೋ ಆರ್ಡ್ ಸೂಟ್ಗಳು ಮಾತ್ರ ಇನ್ನೂ ಟಾಪ್ ಲಿಸ್ಟ್ನಲ್ಲಿಯೇ ಇವೆ. ಅದರಲ್ಲೂ ಪಾಸ್ಟೆಲ್ ಶೇಡ್ನವು ಹಾಗೂ ಶ್ವೇತ ವರ್ಣದವು ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಫಾರ್ಮಲ್ ಲುಕ್ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ರಾಜ್.
ಅಹನಾ ಕುಮ್ರಾರ ವೈಟ್ ಸಮ್ಮರ್ ಸೂಟ್ ಕೋ ಆರ್ಡ್ ಸೆಟ್
ನಟಿ ಹಾಗೂ ಫ್ಯಾಷನ್ ಇನ್ಫ್ಲೂಯೆನ್ಸರ್ ಅಹನಾ ಕುಮ್ರಾ ಫ್ಯಾಷನ್ ಫೋಟೋಶೂಟ್ವೊಂದರಲ್ಲಿ ಧರಿಸಿದ್ಧ ವೈಟ್ ಸಮ್ಮರ್ ಸೂಟ್ ಕೋ ಆರ್ಡ್ ಸೆಟ್ ಅವರಿಗೆ ಎಲಿಗೆಂಟ್ ನೀಡುವುದರೊಂದಿಗೆ ಕಾರ್ಪೋರೇಟ್ ವರ್ಗದ ಮಹಿಳೆಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಅವರು ಸೋಷಿಯಲ್ ಮೀಡಿಯಾದಲ್ಲಿ ಈ ಔಟ್ಫಿಟ್ನೊಂದಿಗಿನ ಫೋಟೊ ಶೇರ್ ಮಾಡಿದ ನಂತರವಂತೂ ಮತ್ತಷ್ಟು ಪಾಪುಲರ್ ಆಗಿದೆ ಎನ್ನುತ್ತಾರೆ ಸ್ಟೈಲಿಸ್ಟ್.
ಸ್ಲೀವ್ಲೆಸ್ ಸಮ್ಮರ್ ಕೋ ಆರ್ಡ್ ಸೂಟ್ ಸ್ಪೆಷಾಲಿಟಿ
ಇವು ತ್ರೀ ಪೀಸ್ ಕೋ ಆರ್ಡ್ ಸೂಟ್ ಆಗಿದ್ದರೂ ಕೂಡ ಸೆಕೆಯಾಗುವುದಿಲ್ಲ. ಕಾರಣ ಇವುಗಳ ಲೈಟ್ವೈಟ್ ಫ್ಯಾಬ್ರಿಕ್. ಅವು ಕಾಟನ್, ಲೆನಿನ್, ಹ್ಯಾಂಡ್ಲೂಮ್ ಅಥವಾ ಇನ್ಯಾವುದೇ ಸಮ್ಮರ್ಗೆ ಆರಾಮ ಎಂದೆನಿಸುವ ಫ್ಯಾಬ್ರಿಕ್ನದ್ದಾಗಬಹುದು ಎನ್ನುವ ಫ್ಯಾಷನಿಸ್ಟಾ ದಿಶಾ ಪ್ರಕಾರ, ಸೆಕೆಯಾದಲ್ಲಿ ಕೇವಲ ಕ್ರಾಪ್ ಟಾಪ್ ಹಾಗೂ ಪ್ಯಾಂಟ್ ಧರಿಸಬಹುದು. ಮತ್ತಷ್ಟು ಸ್ಟೈಲಿಶ್ ಲುಕ್ ಬೇಕಿದ್ದಲ್ಲಿ ತ್ರೀ ಪೀಸ್ ಧರಿಸಬಹುದು ಎನ್ನುತ್ತಾರೆ.
ಸ್ಲೀವ್ಲೆಸ್ ಕೋ ಆರ್ಡ್ ಸೂಟ್ ಪ್ರಿಯರಿಗೆ ಟಿಪ್ಸ್
- ನಾನಾ ರೀತಿಯಲ್ಲಿ ಧರಿಸಬಹುದು.
- ಪ್ರೊಫೆಷನಲ್ ಲುಕ್ ನೀಡುತ್ತದೆ.
- ಹೆಚ್ಚು ಮೇಕಪ್ ಬೇಕಾಗಿಲ್ಲ!