ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜನಪ್ರತಿನಿಧಿಗಳೊಡನೆ ಉತ್ತಮ ಬಾಂಧವ್ಯ ಹೊಂದಿದ್ದರೆ ಮಾತ್ರ ಕಾಮಗಾರಿ: ಸಣ್ಣ ಗುತ್ತಿಗೆದಾರರ ಸಂಕಷ್ಟ ಆಲಿಸದ ‘ಕೈ’ ಸರ್ಕಾರ

ಸಣ್ಣ ಮತ್ತು ಸ್ಥಳೀಯ ಗುತ್ತಿಗೆದಾರರು ಬಿಲ್ ಬಾಕಿ ಪಾವತಿ ವಿಳಂಬ, ಕಮಿಷನ್ ಹಾವಳಿ ಮತ್ತು ಆರ್ಥಿಕ ಬಿಕ್ಕಟ್ಟಿನಿಂದಾಗಿ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇನ್ನೂ ಲೋಕಪಯೋಗಿ, ಪಿಡಬ್ಲೂಡಿ ಇಲಾಖೆಗಳಡಿ ಮಾಡಿದ ಕಾಮಗಾರಿ ಸಂಬಂಧ ಬಿಲ್ ಕೇಳಲು ಹೋದರೆ ಮೊದಲು ಲಂಚ ಕೊಡುವಂತೆ ಎಲ್ಲಾ ಹಂತದ ಅಧಿಕಾರಿಗಳು ಕೇಳುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

ಸಣ್ಣ ಗುತ್ತಿಗೆದಾರರ ಸಂಕಷ್ಟ ಆಲಿಸದ ‘ಕೈ’ ಸರ್ಕಾರ

-

Profile
Ashok Nayak Sep 21, 2026 10:21 AM

ಶಹಾಪುರ: ಇಡೀ ರಾಜ್ಯದ್ಯಂತ ಸ್ಥಳೀಯ ಶಾಸಕರು ಸಚಿವರೊಡನೆ ಉತ್ತಮ ಬಾಂಧವ್ಯ ಹೊಂದಿದ ದೊಡ್ಡ ಗುತ್ತಿಗೆದಾರರಿಗೆ ಮಾತ್ರ ಟೆಂಡರ್‌ನಲ್ಲಿ ಕೆಲಸಗಳು ಸಿಗುತ್ತಿದ್ದು, ಇದರಿಂದ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರು ಕೆಲಸವಿಲ್ಲದೆ ಮಾಡಿದ ಸಣ್ಣಪುಟ್ಟ ಕೆಲಸಕ್ಕೆ ಬಾಕಿ ಬಿಲ್ ಪಾವತಿ ಯಾಗದೇ ಸಾವಿನ ಮನೆ ಕಡೆ ಮುಖಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸಣ್ಣ ಮತ್ತು ಸ್ಥಳೀಯ ಗುತ್ತಿಗೆದಾರರು ಬಿಲ್ ಬಾಕಿ ಪಾವತಿ ವಿಳಂಬ, ಕಮಿಷನ್ ಹಾವಳಿ ಮತ್ತು ಆರ್ಥಿಕ ಬಿಕ್ಕಟ್ಟಿನಿಂದಾಗಿ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇನ್ನೂ ಲೋಕಪಯೋಗಿ, ಪಿಡಬ್ಲೂಡಿ ಇಲಾಖೆಗಳಡಿ ಮಾಡಿದ ಕಾಮಗಾರಿ ಸಂಬಂಧ ಬಿಲ್ ಕೇಳಲು ಹೋದರೆ ಮೊದಲು ಲಂಚ ಕೊಡುವಂತೆ ಎಲ್ಲಾ ಹಂತದ ಅಧಿಕಾರಿಗಳು ಕೇಳುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

ಕೇಲ ಮಧ್ಯವರ್ತಿಗಳು ಸರ್ಕಾರದ ಮಟ್ಟದಲ್ಲಿ ಟೆಂಡರ್ ಕೊಡಿಸುವ ಆಮಿಷ್ಯ ತೋರಿಸಿ ಸಣ್ಣ ಗುತ್ತಿಗೆದಾರರಿಂದ ಹಣ ಪಡೆದು ವಂಚಿಸುತ್ತಿದ್ದಾರೆ.

ಇದನ್ನೂ ಓದಿ: contract employees: ಹೊರಗುತ್ತಿಗೆ ನೌಕರರಿಗೆ ಶಾಕ್‌, ಅವಧಿ ಮುಗಿಯುತ್ತಿದ್ದಂತೆ ಬಿಡುಗಡೆ ಮಾಡಲು ಕಟ್ಟುನಿಟ್ಟಿನ ಆದೇಶ

ಇನ್ನೂ ಟೆಂಡರ್ ಹಾಕುವಾಗ ತಮಗೆ ಬೇಕಾದವರ ಹೆಸರಿನಲ್ಲಿ ಕೆಲಸ ಮಾಡಿಸಿ ಅವರ ಉದ್ದಾರ ಕ್ಕಾಗಿ ಜನಪ್ರತಿನೀಧಿಗಳು ಇದ್ದಾರೆ ಹೊರತು ಸಾಮಾನ್ಯ ಜನರ ಉದ್ದಾರಕ್ಕಲ್ಲ ಎಂದು ಆರೋಪಿಸಿದ್ದಾರೆ.

ಟೆಂಡರ್ ಕರೆದು ಬಿಲ್ ಕೊಡಲು ಹಣ ಕೊಟ್ಟರೆ ಮಾತ್ರ ಬಿಲ್ ಬರೆಯಲಾಗುತ್ತಿದೆ. ಈಗಾಗಲೇ ಅಲ್ಲಲ್ಲಿ ಲಂಚ ಸ್ವೀಕರಿಸುವ ವೇಳೆ ದಾಳಿಗಳು ನಡೆಯುತ್ತಿದ್ದು, ಇದು ಗುತ್ತಿಗೆದಾರರನ್ನು ಬಿಟ್ಟು ಬಿಡದೇ ಕಾಡುತ್ತಿದೆ. ಶೇ.95ರಷ್ಟು ಗುತ್ತಿಗೆದಾರರಿಗೆ ಇದರಿಂದ ಪೆಟ್ಟುಬೀಳುತ್ತಿದೆ. ಸಣ್ಣಪುಟ್ಟ್ ಕೆಲಸ ಮಾಡಿದರು ಸಹ ಅದರಲ್ಲಿ ಬಿಲ್ ಪಾಸ್ ಮಾಡಲು ಸೆಕ್ಷನ್ ಅಧಿಕಾರಿ, ಝೊನಲ್ ಅಧಿಕಾರಿ, ಕಾರ್ಯಕಾರಿ ಅಧಿಕಾರಿಗಳು ಸಹ ಹಣ ಕೇಳುವ ವ್ಯವಸ್ಥೆ ರೂಪಿಸಿಕೊಂಡಿದ್ದಾರೆ.

ಗುತ್ತಿಗೆದಾರರ ಯಾವುದೇ ತಪ್ಪು ಇಲ್ಲದಿದ್ದರೂ ಬೇರೆ ಸಮಸ್ಯೆಗಳಿಂದ ಕಾಮಗಾರಿ ನಿರ್ವಹಣೆ ಸಮಯ ಮೀರಿದರೂ ಗುತ್ತಿಗೆದಾರರಿಗೆ ದಂಡ ವಿಧಿಸುತ್ತಿದ್ದಾರೆ. ಇದರಿಂದ ಹಿಂಸೆ ಅತಿಯಾಗಿದೆ.

ಗುತ್ತಿಗೆದಾರರು ಸರ್ಕಾರದ ಕಾಮಗಾರಿಗಳನ್ನು ಗುತ್ತಿಗೆ ಪಡೆದು, ತಮ್ಮ ಸ್ವಂತ ಹಣ ಅಥವಾ ಸಾಲದ ಹಣವನ್ನು ಮುಂಗಡವಾಗಿ ತಂದು, ಕಾರ್ಮಿಕರಿಗೆ ವೇತನ ನೀಡಿ ಕಟ್ಟಡ ಸಾಮಗ್ರಿ, ಯಂತ್ರೋ ಪಕರಣ ಹಾಗೂ ಇತರೆ ವೆಚ್ಚಗಳನ್ನು ಭರಿಸಿ ಕಾಮಗಾರಿ ಪೂರ್ಣಗೊಳಿಸುತ್ತಾರೆ. ಕಾಮಗಾರಿಗೆ ಸಂಭAಧಿಸಿದ ನಿಯಾಮಾನುಸಾರ ತೆರಿಗೆ ಇಪಿಎಫ್, ಇಎಸ್‌ಐ, ಜಿಎಸ್‌ಟಿ ಹಾಗೂ ಐಟಿ ಸೇರಿದಂತೆ ಸರ್ಕಾರಕ್ಕೆ ಪಾವತಿಸಬೇಕಾದ ಮೊತ್ತಗಳನ್ನು ಕೂಡ ಸಮಯಕ್ಕೆ ಪಾವತಿಸುತ್ತಾರೆ. ಕಾಮಗಾರಿ ಪೂರ್ಣಗೊಳಿಸಿ ಅಗತ್ಯ ದಾಖಲೆಗಳೊಂದಿಗೆ ಬಿಲ್ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿದ ನಂತರವೂ ವರ್ಷಗಟ್ಟಲೆ ಬಿಲ್ ಪಾವತಿಯಾಗದೆ ಬಾಕಿ ಉಳಿಯುತ್ತಿದೆ.

ಇನ್ನೂ ಜಿಎಸ್‌ಟಿ ಅವರು ಈಗಾಗಲೇ ನೋಟಿಸ್ ಕಳುಹಿಸಿ 10 ಪಟ್ಟು ದಂಡ ವಿಧೀಸುತ್ತಿದ್ದಾರೆ, ಇದರಿಂದ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ.

ಸರ್ಕಾರಕ್ಕೆ ನಾವು ಪಾವತಿಸಬೇಕಾದ ಹಣವನ್ನು ಒಂದು ದಿನ ತಡ ಮಾಡಿದರೂ ಬಡ್ಡಿ ಮತ್ತು ದಂಡ ವಿಧಿಸುವ ಸರ್ಕಾರ ಗುತ್ತಿಗೆದಾರರು ತಮ್ಮ ಹಣವನ್ನು ಹಾಕಿ ಕಾಮಗಾರಿ ಪೂರ್ಣಗೊಳಿಸಿ ,ಬಿಲ್ ಸಲ್ಲಿಸಿದ ನಂತರ ಸರ್ಕಾರವು ವರ್ಷಗಟ್ಟಲೆ ಬಿಲ್ ಪಾವತಿಸುವುದನ್ನು ಏಕೆ ವಿಳಂಬ ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಗುತ್ತಿಗೆದಾರರ ಹಣವನ್ನು ಸರ್ಕಾರದ ಬಳಿ ವರ್ಷಗಟ್ಟಲೆ ಬಾಕಿ ಇಟ್ಟಿರುವಾಗ, ಬಾಕಿ ಮೊತ್ತಕ್ಕೆ ಗುತ್ತಿಗೆದಾರರಿಗೆ ಬಡ್ಡಿ ಸಮೇತ ಪಾವತಿ ಮಾಡುವ ವ್ಯವಸ್ಥೆ ಮಾಡಬೇಕು. ಸರ್ಕಾರಕ್ಕೆ ಪಾವತಿಸ ಬೇಕಾದ ತೆರಿಗೆ ಮತ್ತು ಬಿಲ್‌ಗಳಿಗೆ ಸಮಯದ ಮಿತಿ ಇದ್ದರೆ ಸರ್ಕಾರವು ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಿಲ್‌ಗಳಿಗೂ ಸಮಯದ ಮಿತಿ ಇರಬೇಕು.

ಗುತ್ತಿಗೆದಾರರು ಕಾಮಗಾರಿ ಮಾಡುವುದು ಸರ್ಕಾರದ ಅಭಿವೃದ್ಧಿಗಾಗಿ , ಆದರೆ ಬಿಲ್ ಪಾವತಿ ಯಾಗದೆ ವರ್ಷಗಟ್ಟಲೆ ಕಾಯುವಂತೆ ಮಾಡಿ ಸಾಲದ ಬಡ್ಡಿ ಮತ್ತು ಆರ್ಥಿಕ ಒತ್ತಡವನ್ನು ಗುತ್ತಿಗೆದಾರರ ಮೇಲೆ ಹಾಕುವುದು ನ್ಯಾಯಸಮ್ಮತವಲ್ಲ. ಸರ್ಕಾರಕ್ಕೆ ಪಾವತಿಗೆ ಸಮಯದ ಮಿತಿ ಇದ್ದರೆ ಗುತ್ತಿಗೆದಾರರ ಬಿಲ್ ಪಾವತಿಗೂ ಸಮಯದ ಮಿತಿ ಇರಬೇಕು ಎನ್ನುವುದು ಗುತ್ತಿಗೆದಾರರ ಆಗ್ರಹವಾಗಿದೆ.

image

17ರಂದು ಕಲ್ಬುರ್ಗಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರು ಗುತ್ತಿಗೆದಾರರ ಬಾಕಿ ಬಿಲ್ ಪಾವತಿಗೆ ಪಣ ತೊಡಬೇಕು. ಕಲ್ಬುರ್ಗಿ ಉಸ್ತುವಾರಿ ಸಚಿವರ ಬೇಜವಾಬ್ದಾರಿತನವೋ ಅಥವಾ ಗುತ್ತಿಗೆದಾರರ ಮೇಲೆ ಅಸಡ್ಡೆಯೇ ತಿಳಿಯುತ್ತಿಲ್ಲಾ. ಕೇವಲ ಭಾಷಣಕ್ಕೆ ಸೀಮಿತರಾಗಿ ಜನರನ್ನು ಮೆಚ್ಚಿಸುವ ಕೆಲಸ ಮಾಡದೇ ಬಿಲ್ ಪಾವತಿಗೆ ಮುಂದಾಗಬೇಕು. ತಾವು ಗುತ್ತಿಗೆದಾರರ ಮೇಲೆ ದಯೆ ತೋರಿ ಕಲ್ಬುರ್ಗಿ ಸೇರಿ ಕಲ್ಯಾಣ ಕರ್ನಾಟಕ ಭಾಗದ ಗುತ್ತಿಗೆದಾರರ ಸಮಸ್ಯೆ ಆಲಿಸಿ ಈಗಾಗಲೇ ಕಳೆದ ಎರಡು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಬಿಲ್ ಪಾವತಿ ಮಾಡಬೇಕು ಎನ್ನುವುದು ಗುತ್ತಿಗೆದಾರರ ಮನವಿಯಾಗಿದೆ.

ಶರಣು ಸಗರ. ಸಣ್ಣ ಗುತ್ತಿಗೆದಾರರು.