ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Krishi Thapanda: ಆಪ್ತ ಸ್ನೇಹಿತೆ ಅಗಲಿಕೆ; ನಟಿ ಕೃಷಿ ತಾಪಂಡ ಭಾವುಕ ಪೋಸ್ಟ್!

Krishi Thapanda: ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮೂರನೇ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದ ಮಲ್ಲಮ್ಮ , ತಮ್ಮ ಮುಗ್ಧತೆ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ಬಿಗ್ ಬಾಸ್ ವೇದಿಕೆ ಏರುವವರೆಗೆ ಪ್ರಮುಖ ಶಕ್ತಿಯಾಗಿ ನಿಂತಿದ್ದ ಪಲ್ಲವಿ (Pallavi) ಅವರ ಹಠಾತ್ ಅಗಲಿಕೆ ಕಿರುತೆರೆ ಲೋಕಕ್ಕೆ ತೀವ್ರ ಆಘಾತ ತಂದಿದೆ. ಪಲ್ಲವಿ ಅವರ ಅಗಲಿಕೆಯಿಂದ ತೀವ್ರವಾಗಿ ನೊಂದಿರುವ ನಟಿ ಕೃಷಿ ತಾಪಂಡ (krishi thapanda), ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಕಂಬನಿ ಮಿಡಿದ್ದಾರೆ.

ಆಪ್ತ ಸ್ನೇಹಿತೆ ಅಗಲಿಕೆ; ನಟಿ ಕೃಷಿ ತಾಪಂಡ ಭಾವುಕ ಪೋಸ್ಟ್!

ಕೃಷಿ ತಾಪಂಡ -

Yashaswi Devadiga
Yashaswi Devadiga Sep 21, 2026 10:38 AM

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss Kannada 12) ಮೂರನೇ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದ ಮಲ್ಲಮ್ಮ , ತಮ್ಮ ಮುಗ್ಧತೆ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ಬಿಗ್ ಬಾಸ್ ವೇದಿಕೆ ಏರುವವರೆಗೆ ಪ್ರಮುಖ ಶಕ್ತಿಯಾಗಿ ನಿಂತಿದ್ದ ಪಲ್ಲವಿ (Pallavi) ಅವರ ಹಠಾತ್ ಅಗಲಿಕೆ ಕಿರುತೆರೆ ಲೋಕಕ್ಕೆ ತೀವ್ರ ಆಘಾತ ತಂದಿದೆ. ಪಲ್ಲವಿ ಅವರ ಅಗಲಿಕೆಯಿಂದ ತೀವ್ರವಾಗಿ ನೊಂದಿರುವ ನಟಿ ಕೃಷಿ ತಾಪಂಡ (krishi thapanda), ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಕಂಬನಿ ಮಿಡಿದ್ದಾರೆ.

ಅಪ್ಪಿಕೊಳ್ಳಲು ಬಯಸುತ್ತೇನೆ

ಪಲ್ಲವಿ ಜತೆಗಿನ ಒಡನಾಟ ನೆನೆದು ಕಣ್ಣೀರಿಟ್ಟಿರುವ ಕೃಷಿ ತಾಪಂಡ, 'ಕಳೆದ ಒಂದು ವರ್ಷದಿಂದ ನೀನು ನನಗೆ ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ನಮ್ಮ ನಗು, ಮಾತುಗಳು ಮತ್ತು ನೆನಪುಗಳನ್ನು ನಾನು ಸದಾ ಸ್ಮರಿಸುತ್ತೇನೆ. ನೀನು ನನಗಾಗಿ ಡಿಸೈನ್ ಮಾಡಿದ ಪ್ರತಿಯೊಂದು ಉಡುಪೂ ನನಗೆ ಅತ್ಯಂತ ವಿಶೇಷ. ಪಲ್ಲು, ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಜತೆ ಮತ್ತೊಮ್ಮೆ ಮಾತನಾಡಲು, ನಗಲು ಹಾಗೂ ಅಪ್ಪಿಕೊಳ್ಳಲು ಬಯಸುತ್ತೇನೆ. ಕೆಲವು ವಿದಾಯಗಳು ಅಷ್ಟು ಬೇಗ ಬಂದುಬಿಡುತ್ತವೆ' ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Mallamma: ಬಿಗ್ ಬಾಸ್ ಮನೆಗೆ ಮಲ್ಲಮ್ಮ ಹೋಗಲು ಕಾರಣವಾಗಿದ್ದ ಫ್ಯಾಷನ್ ಡಿಸೈನರ್ ಪಲ್ಲವಿ ಇನ್ನಿಲ್ಲ

ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಮೂರನೇ ಸ್ಪರ್ಧಿಯಾಗಿ ಮನೆ ಪ್ರವೇಶಿಸಿ, ತಮ್ಮ ಮುಗ್ಧತೆಯಿಂದ ಇಡೀ ಕರ್ನಾಟಕದ ಜನರ ಮನಗೆದ್ದಿದ್ದ ಮಲ್ಲಮ್ಮ ಅವರ ಈ ಸಾಧನೆಯ ಹಿಂದೆ ಪಲ್ಲವಿ ಅವರ ಪಾತ್ರ ಬಹಳ ದೊಡ್ಡದಿತ್ತು. ಉತ್ತರ ಕರ್ನಾಟಕದಿಂದ ಬಂದ ಮಲ್ಲಮ್ಮ ಅವರಿಗೆ ಬೆಂಗಳೂರಿನಲ್ಲಿ ಆಶ್ರಯ ನೀಡಿ, ತಮ್ಮ ಫ್ಯಾಷನ್ ಬೋಟಿಕ್‌ನಲ್ಲೇ ಕೆಲಸ ನೀಡಿದ್ದರು.

ಇದನ್ನೂ ಓದಿ: Bigg Boss Kannada 13: ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ EMERGENCY EXIT! ಎಲ್ಲ ಸ್ಪರ್ಧಿಗಳು ನಾಮಿನೇಟ್‌

ಬಿಗ್ ಬಾಸ್‌ನಿಂದ ಹೊರಬಂದ ನಂತರ ನೀಡಿದ ಪ್ರತಿಯೊಂದು ಸಂದರ್ಶನದಲ್ಲೂ ಮಲ್ಲಮ್ಮ ತಮ್ಮ ಪಲ್ಲವಿ ಮೇಡಂ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿದ್ದರು. ಚಂದನವನದ ಹಲವು ನಟ-ನಟಿಯರು ಮತ್ತು ಸೆಲೆಬ್ರಿಟಿಗಳಿಗೆ ವಸ್ತ್ರ ವಿನ್ಯಾಸ ಮಾಡುತ್ತಿದ್ದ ಖ್ಯಾತ ಫ್ಯಾಷನ್ ಡಿಸೈನರ್ ಆಗಿದ್ದರು.