Star Saree Fashion 2025: ವೆಲ್ವೆಟ್ ಸೀರೆಯಲ್ಲಿ ಡಿಸೆಂಟಾಗಿ ಕಾಣಿಸಿಕೊಂಡ ಸಪ್ತಮಿಗೌಡ
Sapthami Gowda Saree look: ವಿಂಟರ್ನಲ್ಲಿ ಟ್ರೆಂಡಿಯಾಗಿರುವ ವೆಲ್ವೆಟ್ ಸೀರೆಯಲ್ಲಿ ನಟಿ ಸಪ್ತಮಿ ಗೌಡ ಡಿಸೆಂಟಾಗಿ ಕಾಣಿಸಿಕೊಂಡಿದ್ದಾರೆ. ಈ ಸೀರೆಗೆ ಗ್ಲಾಮರಸ್ ಟಚ್ ನೀಡಲು ಸ್ಲಿವ್ಲೆಸ್ ಬ್ಲೌಸ್ ಧರಿಸಿದ್ದಾರೆ. ಅವರ ಸೀರೆಯ ಲುಕ್ ಹೇಗಿದೆ? ಇಲ್ಲಿದೆ ಫ್ಯಾಷನ್ ರಿವ್ಯೂ.
ನಟಿ ಸಪ್ತಮಿ ಗೌಡ, (ಚಿತ್ರಕೃಪೆ: ಸ್ಟುಡಿಯೋ ಟು ಡೋರ್ ಎಲ್ಎಲ್ಸಿ) -
ಪಾರ್ಟಿವೇರ್ ವೆಲ್ವೆಟ್ ಸೀರೆಯಲ್ಲಿ ನಟಿ ಸಪ್ತಮಿ ಗೌಡ ಡಿಸೆಂಟಾಗಿ ಕಾಣಿಸಿಕೊಂಡಿದ್ದಾರೆ. ಹೌದು, ಈ ವಿಂಟರ್ ಸೀಸನ್ನಲ್ಲಿ ಟ್ರೆಂಡಿಯಾಗಿರುವ ವೆಲ್ವೆಟ್ ಸೀರೆಯಲ್ಲಿ ನಟಿ ಸಪ್ತಮಿ ಗೌಡ ತೀರಾ ಸಿಂಪಲ್ ಆಗಿ ಕಾಣಿಸಿಕೊಂಡಿದ್ದು, ಗ್ಲಾಮರಸ್ ಟಚ್ ನೀಡುವ ಸಲುವಾಗಿ ಇದಕ್ಕೆ ಸ್ಲಿವ್ಲೆಸ್ ಬ್ಲೌಸ್ ಧರಿಸಿದ್ದಾರೆ.
ಸಪ್ತಮಿ ಗೌಡ ಸೀರೆ ಲವ್
ಎಲ್ಲರಿಗೂ ಗೊತ್ತಿರುವಂತೆ, ಸಪ್ತಮಿ ಗೌಡ ಆಗಾಗ್ಗೆ ನಾನಾ ಬಗೆಯ ಸೀರೆಯುಟ್ಟು ಫ್ಯಾಷನ್ ಶೂಟ್ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ತಮ್ಮ ಫಾಲೋವರ್ಗಳನ್ನು ಸೀರೆ ಲುಕ್ನಲ್ಲೂ ಸೆಳೆಯುತ್ತಿರುತ್ತಾರೆ. ಉತ್ತಮ ಫ್ಯಾಷನ್ ಸೆನ್ಸ್ ಹೊಂದಿರುವ ನಟಿ ಕೂಡ ಇವರು ಎನ್ನಬಹುದು.
ಚಳಿಗಾಲದಲ್ಲಿ ಟ್ರೆಂಡಿಯಾಗುವ ವೆಲ್ವೆಟ್ ಸೀರೆ
ಪ್ರತಿ ಚಳಿಗಾಲದಲ್ಲೂ ದಪ್ಪನೆ ಫ್ಯಾಬ್ರಿಕ್ನ ವೆಲ್ವೆಟ್ ಸೀರೆಗಳು ಟ್ರೆಂಡಿಯಾಗುತ್ತವೆ. ವೆಲ್ವೆಟ್ನಲ್ಲೆ ನಾನಾ ಬಗೆಯ ಫ್ಯಾಬ್ರಿಕ್ಗಳು ಲಭ್ಯವಿದ್ದು, ಕೆಲವು ತಾರೆಯರು ಇವನ್ನು ಕಸ್ಟಮೈಸ್ಡ್ ಕೂಡ ಮಾಡಿಸಿ, ಡಿಸೈನ್ ಮಾಡಿಸಿ ಪಾರ್ಟಿವೇರ್ ಸೀರೆಗಳನ್ನಾಗಿ ಪರಿವರ್ತಿಸಿ ಉಡುತ್ತಾರೆ. ಇದೇ ಲಿಸ್ಟ್ಗೆ ಸಿತಾರಾ ಕುಡಿಗೆ ಬ್ರ್ಯಾಂಡ್ನ ಈ ಸೀರೆಯು ಕೂಡ ಸೇರುತ್ತದೆ.
ಗ್ಲಾಮರಸ್ ಟಚ್ ಗಾಗಿ ಸ್ಲಿವ್ಲೆಸ್ ಬ್ಲೌಸ್
ಇನ್ನು, ಈ ಚಳಿಗಾಲದಲ್ಲೂ ಸಪ್ತಮಿ ಗೌಡರ ಸೀರೆಯ ಲುಕ್ಗೆ ಕೊಂಚ ಗ್ಲಾಮರಸ್ ಟಚ್ ನೀಡಲಾಗಿದ್ದು, ಸಿಂಪಲ್ ಸ್ಲಿವ್ಲೆಸ್ ಬ್ಲೌಸ್ ಮ್ಯಾಚ್ ಮಾಡಲಾಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಸಪ್ತಮಿ ಸಿಂಪಲ್ ಲುಕ್
ಡಾರ್ಕ್ ಗ್ರೀನ್ ಕಲರ್ನ ಈ ಶೇಡ್ ಸಪ್ತಮಿ ಅವರಿಗೆ ಸಿಂಪಲ್ ಹಾಗೂ ಡಿಸೆಂಟ್ ಲುಕ್ ನೀಡಿದೆ. ಪಾರ್ಟಿವೇರ್ ಸೀರೆಯಾದರೂ ಅಷ್ಟಾಗಿ ಹೈಲೈಟ್ ಆಗಿಲ್ಲ! ಎಂಬುದು ಫ್ಯಾಷನ್ ವಿಮರ್ಶಕರ ಅಭಿಪ್ರಾಯವಾಗಿದೆ.