Styling Tips 2026: ಸೆಲೆಬ್ರೆಟಿ ಲುಕ್ ನೀಡುವ ಕಾರ್ಸೆಟ್ ಗೌನ್ ಸ್ಟೈಲಿಂಗ್ಗೆ 5 ಐಡಿಯಾ
ಕಾರ್ಸೆಟ್ ಗೌನ್ಗಳು ಈ ಜನರೇಷನ್ ಹುಡುಗಿಯರ ಗ್ಲಾಮರಸ್ ಔಟ್ಫಿಟ್ ಲಿಸ್ಟ್ಗೆ ಸೇರಿವೆ. ಸೆಲೆಬ್ರೆಟಿ ಲುಕ್ ನೀಡುವ ಈ ಉಡುಗೆಯ ಆಯ್ಕೆ ಹಾಗೂ ಸ್ಟೈಲಿಂಗ್ ಹೇಗೆಲ್ಲಾ ಮಾಡಿದರೇ ಆಕರ್ಷಕವಾಗಿ ಕಾಣಿಸಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್ಗಳು ಸಿಂಪಲ್ಲಾಗಿ ವಿವರಿಸಿದ್ದಾರೆ.
ಚಿತ್ರಗಳು: ಅಕಾಂಕ್ಷ ಚಮೋಲಾ, ನಟಿ -
ಕಾರ್ಸೆಟ್ ಗೌನ್ಗಳು ಜೆನ್ ಜಿ ಹುಡುಗಿಯರ ಗೌನ್ ಲಿಸ್ಟ್ನಲ್ಲಿ ಟಾಪ್ನಲ್ಲಿವೆ. ಹೌದು, ವೈವಿಧ್ಯಮಯ ಕಾರ್ಸೆಟ್ ಗೌನ್ಗಳು ಈ ಸೀಸನ್ನಲ್ಲಿ ಬಿಡುಗಡೆಗೊಂಡಿದ್ದು, ಅವುಗಳಲ್ಲಿ ಹಾಟ್ ಲುಕ್ ನೀಡುವ ಕಾರ್ಸೆಟ್ ಗೌನ್ಗಳು, ಈ ಜನರೇಷನ್ ಹುಡುಗಿಯರ ಗ್ಲಾಮರಸ್ ಔಟ್ಫಿಟ್ ಲಿಸ್ಟ್ಗೆ ಸೇರಿಕೊಂಡಿವೆ. ಆದರೆ, ಈ ಉಡುಗೆಯ ಆಯ್ಕೆ ಹೇಗೆ ಮಾಡಬೇಕು? ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು? ಸ್ಟೈಲಿಂಗ್ ಮಾಡುವುದು ಹೇಗೆ? ಎಂಬುದನ್ನು ಫ್ಯಾಷನಿಸ್ಟಾ ದಿಯಾ ವಿವರಿಸಿದ್ದಾರೆ.
ಪರ್ಸನಾಲಿಟಿಗೆ ತಕ್ಕಂತೆ ಕಾರ್ಸೆಟ್ ಗೌನ್
ಮೊದಲಿಗೆ ಕಾರ್ಸೆಟ್ ಗೌನ್ ಆಯ್ಕೆ ಮಾಡುವಾಗ ಈ ಉಡುಗೆ ನಿಮ್ಮ ಪರ್ಸನಾಲಿಟಿಗೆ ಅದು ಹೊಂದುತ್ತದೆಯೇ! ಎಂಬುದನ್ನು ಪರಿಶೀಲಿಸಬೇಕು. ಉಸಿರುಕಟ್ಟಿಸುವಂತಹ ಟೈಟ್ ಡಿಸೈನ್ ಹೊಂದಿದೆಯಾ? ಇಲ್ಲವೇ ದೊಗಲೆಯಾಗಿದೆಯಾ? ಎಂಬುದನ್ನು ನೋಡಿ, ಫಿಟ್ ಆಗಿ ಕೂರುವಂತದ್ದನ್ನು ಕೊಳ್ಳಿ.
ಸ್ಲಿಮ್ ಹುಡುಗಿಯರ ಆಯ್ಕೆ ಯಾಗಿರಲಿ
ಕಾರ್ಸೆಟ್ ಗೌನ್ಗಳು ದೇಹಕ್ಕೆ ಅಂಟಿಕೊಂಡಂತೆ ಕಾಣಿಸುವುದರಿಂದ ಪ್ಲಂಪಿಯಾಗಿರುವ ಹುಡುಗಿಯರಿಗೆ ಅಷ್ಟಾಗಿ ಅಂದವಾಗಿ ಕಾಣಿಸದು. ಇನ್ನು ಸ್ಲಿಮ್ ಹುಡುಗಿಯರಿಗೆ ಹಾಗೂ ಜಿಮ್ ಫ್ರೀಕ್ ಹುಡುಗಿಯರಿಗೆ ಹೇಳಿ ಮಾಡಿಸಿದ ಔಟ್ಫಿಟ್ ಎನ್ನಬಹುದು.
ಇಂಡೋ-ವೆಸ್ಟರ್ನ್ ಲುಕ್ಗೆ ಕಾರ್ಸೆಟ್ ಗೌನ್
ಕಾರ್ಸೆಟ್ ಡಿಸೈನ್ ಕಾನ್ಸೆಪ್ಟ್ ವೆಸ್ಟರ್ನ್ವೇರ್ಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇದೀಗ ನಮ್ಮಲ್ಲಿ ಇಂಡೋ-ವೆಸ್ಟರ್ನ್ ಡಿಸೈನ್ನಲ್ಲಿ ಬಂದಿವೆ. ಧರಿಸಿದಾಗ ಇವು ಮಿಕ್ಸ್ ಮ್ಯಾಚ್ ಲುಕ್ ನೀಡುತ್ತವೆ.
ಮೇಕೋವರ್ ಆಕರ್ಷಕವಾಗಿರಲಿ
ಆಯಾ ಕಾರ್ಸೆಟ್ ಗೌನ್ನ ಫ್ಯಾಬ್ರಿಕ್ ಹಾಗೂ ಕಲರ್ಗೆ ಅನುಗುಣವಾಗಿ ಮೇಕೋವರ್ ಮಾಡಿಕೊಳ್ಳುವುದು ಉತ್ತಮ.
ಸೆಲೆಬ್ರೆಟಿ ಲುಕ್ ನೀಡುವ ಕಾರ್ಸೆಟ್ ಗೌನ್
ಕಾರ್ಸೆಟ್ ಗೌನ್ಗಳು ಸೆಲೆಬ್ರೆಟಿ ಲುಕ್ ನೀಡುತ್ತವೆ. ಹಾಗಾಗಿ ಇವನ್ನು ಆಯ್ಕೆ ಮಾಡುವಾಗ ಟ್ರೆಂಡಿಯಾಗಿರುವ ಕಲರ್ ಹಾಗೂ ಡಿಸೈನ್ದ್ದನ್ನು ನೋಡಿ ಖರೀದಿಸಿ, ಧರಿಸುವುದು ಬೆಸ್ಟ್.