ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಎಸ್‌ಎನ್‌ಎಫ್ ಗುಣಮಟ್ಟದ ಆಧಾರದಲ್ಲಿ ದರ ನಿಗದಿಪಡಿಸುವುದನ್ನು ಕೈಬಿಡಿ; ಚಿಮುಲ್ ತಕ್ಷಣ ದರಪಟ್ಟಿ ಪ್ರಕಟಿಸಲಿ

ಸರ್ಕಾರ ಘೋಷಿಸಿರುವ ಹೆಚ್ಚುವರಿ ಬೆಂಬಲ ಬೆಲೆಯ ಪ್ರಯೋಜನವನ್ನು ರೈತರಿಗೆ ಸಂಪೂರ್ಣ ವಾಗಿ ತಲುಪಿಸಬೇಕು. ಎಸ್‌ಎನ್‌ಎಫ್ ಗುಣಮಟ್ಟದ ಆಧಾರದಲ್ಲಿ ದರ ನಿಗದಿಪಡಿಸುವ ಪ್ರಸ್ತಾವನೆ ಯನ್ನು ಕೈಬಿಟ್ಟು, ಹೆಚ್ಚುವರಿ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಬೇಕು. ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ಹೈನುಗಾರರಿಗೆ ತಕ್ಷಣ ಆರ್ಥಿಕ ನೆರವು ದೊರೆಯುವಂತೆ ಕ್ರಮ ಕೈಗೊಳ್ಳಬೇಕು

ಹೆಚ್ಚುವರಿ ಹಾಲಿನ ಬೆಂಬಲ ಬೆಲೆ ರೈತರ ಖಾತೆಗೆ ನೇರ ಪಾವತಿಸಿ: ರೈತಸಂಘ ಆಗ್ರಹ

-

Profile
Ashok Nayak Nov 2, 2026 11:51 PM

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ಘೋಷಿಸಿರುವ ಹೆಚ್ಚುವರಿ ಬೆಂಬಲ ಬೆಲೆಯನ್ನು ವಿಳಂಬ ಮಾಡದೆ ರೈತರ ಖಾತೆಗಳಿಗೆ ನೇರವಾಗಿ ಪಾವತಿಸಬೇಕು. ಎಸ್‌ಎನ್‌ಎಫ್ ಗುಣಮಟ್ಟದ ಆಧಾರದಲ್ಲಿ ಹೆಚ್ಚುವರಿ ಹಣ ನೀಡುವ ಬದಲಿಗೆ ಪ್ರತಿ ಲೀಟರ್‌ಗೆ ಘೋಷಿಸಿರುವ ಸಂಪೂರ್ಣ ಮೊತ್ತವನ್ನು ರೈತರಿಗೆ ತಲುಪಿಸಬೇಕು ಎಂದು ರಾಜ್ಯ ರೈತಸಂಘದ ಕೋಡಿಹಳ್ಳಿ ಬಣದ ಜಿಲ್ಲಾ ಘಟಕ ಒತ್ತಾಯಿಸಿದೆ.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ರಾಮಕಾಂತ್, ರಾಜ್ಯ ಸರ್ಕಾರ ಹಾಲಿನ ಖರೀದಿ ದರ ಹೆಚ್ಚಳವನ್ನು ನವೆಂಬರ್ 1ರಿಂದಲೇ ಜಾರಿಗೆ ತರುವುದಾಗಿ ಘೋಷಿಸಿದೆ. ರಾಜ್ಯದ ವಿವಿಧ ಹಾಲು ಒಕ್ಕೂಟಗಳು ಹೆಚ್ಚಳದ ದರವನ್ನು ಪ್ರಕಟಿಸಿ ಜಾರಿಗೆ ತಂದಿದ್ದರೂ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಚಿಮುಲ್) ಮಾತ್ರ ಈವರೆಗೆ ಪರಿಷ್ಕೃತ ದರಪಟ್ಟಿ ಪ್ರಕಟಿಸದಿರುವುದು ವಿಳಂಬ ಧೋರಣೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: Chinthamani News: ಶಿಕ್ಷಣ, ಆರ್ಥಿಕತೆ, ರಾಜಕೀಯ ಕ್ಷೇತ್ರಗಳಲ್ಲಿ ಸಮುದಾಯಕ್ಕೆ ನ್ಯಾಯಯುತ ಸ್ಥಾನಮಾನ ಕಲ್ಪಿಸುವ ಗುರಿ: ವಕೀಲ ಮುನೇಗೌಡ

ಸರ್ಕಾರ ಘೋಷಿಸಿರುವ ಹೆಚ್ಚುವರಿ ಬೆಂಬಲ ಬೆಲೆಯ ಪ್ರಯೋಜನವನ್ನು ರೈತರಿಗೆ ಸಂಪೂರ್ಣ ವಾಗಿ ತಲುಪಿಸಬೇಕು. ಎಸ್‌ಎನ್‌ಎಫ್ ಗುಣಮಟ್ಟದ ಆಧಾರದಲ್ಲಿ ದರ ನಿಗದಿಪಡಿಸುವ ಪ್ರಸ್ತಾವನೆ ಯನ್ನು ಕೈಬಿಟ್ಟು, ಹೆಚ್ಚುವರಿ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸ ಬೇಕು. ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ಹೈನುಗಾರರಿಗೆ ತಕ್ಷಣ ಆರ್ಥಿಕ ನೆರವು ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಲ್ಲದೆ ಪಶು ಆಹಾರದ ಬೆಲೆಗಳು ಹೆಚ್ಚಾಗಿರುವುದರಿಂದ ಹೈನುಗಾರರು ಸಂಕಷ್ಟ ಎದುರಿಸು ತ್ತಿದ್ದಾರೆ. ಪಶು ಆಹಾರಕ್ಕೆ ಸಬ್ಸಿಡಿ ಘೋಷಿಸಬೇಕು. ಕಳಪೆ ಗುಣಮಟ್ಟದ ಪಶು ಆಹಾರ ಉತ್ಪಾದಿ ಸುವ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸಾದಲಿ ಫುಡ್ ಪ್ರಾಡಕ್ಟ್ಸ್ ಘಟಕವನ್ನು ಕೆಎಂಎಫ್ ಸುಪರ್ದಿಯಿಂದ ಹಿಂಪಡೆದು ಚಿಮುಲ್ ಘಟಕಕ್ಕೆ ಒಪ್ಪಿಸಬೇಕು. ಈ ಮೂಲಕ ಸ್ಥಳೀಯ ಹಾಲು ಉತ್ಪಾದಕರು ಮತ್ತು ಹೈನುಗಾರರ ಹಿತಾಸಕ್ತಿ ಕಾಪಾಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ನೆಲಮಾಕನಹಳ್ಳಿ ಗೋಪಾಲ್, ಜಿಲ್ಲಾ ಜಂಟಿ ಕಾರ್ಯದರ್ಶಿ ಕುಪ್ಪಳ್ಳಿ ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷ ವೀರಪುರ ಮುನಿ ನಂಜಪ್ಪ, ಜಿಲ್ಲಾ ಸಂಚಾಲಕ ತಾಂದ್ರಮರದಹಳ್ಳಿ ಮಹೇಶ್, ಚಿಂತಾಮಣಿ ತಾಲೂಕು ಅಧ್ಯಕ್ಷ ಸಿಕಲ್ ರಮಣರೆಡ್ಡಿ, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ತಾಲೂಕು ಖಜಾಂಚಿ ತಾಳಹಳ್ಳಿ ನಾರಾಯಣಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.