Valentine’s Fashion 2026: ವ್ಯಾಲೆಂಟೈನ್ಸ್ ವೀಕ್ನಲ್ಲಿ ರೆಡ್ ಫ್ಯಾಷನ್ ಹವಾ!
Valentine’s week: ವ್ಯಾಲೆಂಟೈನ್ಸ್ ವೀಕ್ನಲ್ಲಿ ಶಾಪಿಂಗ್ ಮಾಲ್ಗಳಲ್ಲಿ ಎಲ್ಲಿ ನೋಡಿದರೂ ಬಗೆಬಗೆಯ ರೆಡ್ ಕಲರ್ನ ಫ್ಯಾಷನ್ವೇರ್ಗಳ ಹವಾ! ಒಂದಲ್ಲ ಎರಡಲ್ಲ! ಲೆಕ್ಕವಿಲ್ಲದಷ್ಟು ಡಿಸೈನ್ನಲ್ಲಿ ಮಿಕ್ಸ್ ಮ್ಯಾಚ್ ವಿನ್ಯಾಸದಲ್ಲಿ ರೆಡ್ ಶೇಡ್ನ ಫ್ಯಾಷನ್ವೇರ್ಗಳು ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿವೆ. ಯಾವ್ಯಾವ ಬಗೆಯವು ಈ ಸೀಸನ್ನಲ್ಲಿ ಟ್ರೆಂಡಿಯಾಗಿವೆ? ಈ ಎಲ್ಲದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವರದಿ.
ಚಿತ್ರಕೃಪೆ: ಪಿಕ್ಸೆಲ್ -
ವ್ಯಾಲೆಂಟೈನ್ಸ್ ವೀಕ್ನಲ್ಲಿ ಎಲ್ಲಿ ನೋಡಿದರೂ ರೆಡ್ ಶೇಡ್ನ ಫ್ಯಾಷನ್ವೇರ್ಗಳದ್ದೇ ಹವಾ! ಒಂದಲ್ಲ ಎರಡಲ್ಲ! ಲೆಕ್ಕವಿಲ್ಲದಷ್ಟು ಡಿಸೈನ್ನಲ್ಲಿ ಮಿಕ್ಸ್ ಮ್ಯಾಚ್ ವಿನ್ಯಾಸದಲ್ಲಿ ರೆಡ್ ಶೇಡ್ನ ಫ್ಯಾಷನ್ವೇರ್ಗಳು ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿವೆ.
ವ್ಯಾಲೆಂಟೈನ್ಸ್ ವೀಕ್ ಕಲರ್
ಅಂದಹಾಗೆ, ಇಡೀ ವರ್ಷದಲ್ಲಿಅತಿ ಹೆಚ್ಚು ರೆಡ್ ಶೇಡ್ ಡ್ರೆಸ್ಗಳ ಬಳಕೆಯಾಗುವುದು ಫೆಬ್ರವರಿಯಲ್ಲಿ, ಹಾಗಾಗಿ ಇದನ್ನು ವ್ಯಾಲೆಂಟೈನ್ಸ್ ವೀಕ್ ಕಲರ್ ಎನ್ನಬಹುದು ಎನ್ನುತ್ತಾರೆ ಫ್ಯಾಷನಿಸ್ಟಾ ಜಾನ್.
ಟ್ರೆಂಡಿಯಾಗಿರುವ ರೆಡ್ ಶೇಡ್ ಡಿಸೈನರ್ವೇರ್ಸ್
ಲೈಟ್, ಡಾರ್ಕ್, ವೈನ್ ರೆಡ್, ಬ್ಲಡ್ ರೆಡ್, ಕೋರಲ್, ಡೀಪ್ ರೆಡ್, ಮರ್ಸಲಾ ರೆಡ್, ಮರೂನ್ ಹೀಗೆ ನಾನಾ ಶೇಡ್ಗಳಲ್ಲಿ ಈ ರೆಡ್ ವರ್ಣದ ಫ್ಯಾಷನ್ವೇರ್ಸ್ಗಳು ಬಿಡುಗಡೆಗೊಂಡಿವೆ. ಜಾನ್ ಪ್ರಕಾರ, ಈ ಸೀಸನ್ನಲ್ಲಿ ಟೀನೇಜ್ ಹುಡುಗಿಯರಿಗೆ ನಯಾ ವಿನ್ಯಾಸದ ರೆಡ್ ಫ್ರಾಕ್ಸ್, ಮಿನಿ-ಶಾರ್ಟ್ಸ್, ಡಂಗ್ರೀಸ್, ಜಂಪ್ಸೂಟ್ಸ್, ಕ್ರಾಪ್ ಟಾಪ್ ಕೋ ಆರ್ಡ್ ಸೆಟ್ಸ್, ನಿಟ್ಟೆಡ್ ಕೋ ಆರ್ಡ್ ಸೆಟ್ಗಳು ಬಿಡುಗಡೆಗೊಂಡಿದ್ದರೆ, ಉದ್ಯೋಗಸ್ಥ ಯುವತಿಯರಿಗೆಂದೇ ಕೋ ಆರ್ಡ್ ಸಲ್ವಾರ್-ಕಮೀಝ್, ಗೌನ್, ಮ್ಯಾಕ್ಸಿ ಡ್ರೆಸ್ಗಳು ಆಗಮಿಸಿವೆ ಎನ್ನುತ್ತಾರೆ.
ರೆಡ್ ಫ್ಯಾಷನ್ವೇರ್ಸ್ ಪ್ರೇಮ
ರೆಡ್ ಡ್ರೆಸ್ಗಳನ್ನು ಕೇವಲ ಪ್ರೀತಿಸುವವರು ಮಾತ್ರ ಲವ್ ಮಾಡುತ್ತಾರೆಂದಲ್ಲ! ಬದಲಿಗೆ ಸಾಕಷ್ಟು ಮಂದಿ ಇಷ್ಟಪಟ್ಟು ರೆಡ್ ಕಲರ್ ಉಡುಗೆ ಧರಿಸುವವರಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಕಿ.
ರೆಡ್ ಶೇಡ್ ಡ್ರೆಸ್ ಧರಿಸುವವರಿಗೆ ಇಲ್ಲಿವೆ ಟಿಪ್ಸ್
- ಸೀಸನ್ನಲ್ಲಿ ಟ್ರೆಂಡಿಯಾಗಿರುವ ರೆಡ್ ಡ್ರೆಸ್ಗಳ ಆಯ್ಕೆ ಮಾಡಿ.
- ಮುಖಕ್ಕೆ ಎದ್ದು ರಾಚುವ ರೆಡ್ ಕಲರ್ ಬೇಡ!
- ಸಾದಾ ರೆಡ್ ಶೇಡ್ ಡ್ರೆಸ್ ಹಾಗೂ ಪ್ರಿಂಟೆಡ್ ರೆಡ್ ಡ್ರೆಸ್ ಈ ಎರಡೂ ವಿಭಿನ್ನ ಲುಕ್ ನೀಡುತ್ತವೆ.
- ಆಯಾ ಸಂದರ್ಭಕ್ಕೆ ಹಾಗೂ ವಾತಾವರಣಕ್ಕೆ ಹಾಗೂ ಪಾರ್ಟಿಗೆ ಹೊಂದುವಂತಹ ರೆಡ್ ಡ್ರೆಸ್ಗಳನ್ನು ಚೂಸ್ ಮಾಡಿ.
- ರೆಡ್ ಡ್ರೆಸ್ ಧರಿಸಿದಾಗ ಮೇಕೋವರ್ ನೋಡಲು ಚೆನ್ನಾಗಿರಲಿ.
- ರೆಡ್ ಶೇಡ್ ಔಟ್ಫಿಟ್ಗೆ ಮೇಕಪ್ ಹಿತಮಿತವಾಗಿರಲಿ.
- ವೆಸ್ಟರ್ನ್ ಲುಕ್ ನೀಡುವುದಾದಲ್ಲಿಆದಷ್ಟು ಫಂಕಿ ಜ್ಯುವೆಲರಿಗೆ ಪ್ರಾಮುಖ್ಯತೆ ನೀಡಿ.