ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

BBK 13: ʻಕಿಚ್ಚʼ ಸುದೀಪ್ ಕ್ಲಾಸ್ ತಗೊಂಡ್ರೂ ಬದಲಾಗದ ಮಂಜ; ಸೌಂದರ್ಯ ಬೆನ್ನಲ್ಲೇ ಈಗ ವೈಷ್ಣವಿ ಮೇಲೆ ಅಸಭ್ಯ ಪದಗಳ ದಾಳಿ, ʻಬಿಗ್ ಬಾಸ್ʼ ಮನೆಯಲ್ಲಿ ‘ಚಿಕನ್’ ರಂಪಾಟ!

ಕಿಚ್ಚ ಸುದೀಪ್ ಅವರ ತೀವ್ರ ತರಾಟೆಯ ನಂತರವೂ ಮಂಜ ಕಿಂಚಿತ್ತೂ ಬದಲಾಗದೆ ಮತ್ತೆ ಅಸಭ್ಯ ವರ್ತನೆ ಮುಂದುವರಿಸಿದ್ದಾರೆ. ಕಿಚ್ಚನ ಪಂಚಾಯಿತಿ ಮುಗಿದ ಬೆನ್ನಲ್ಲೇ ಊಟದಲ್ಲಿ ಕೇವಲ ಚಿಕನ್ ಸಿಗಲಿಲ್ಲ ಎಂಬ ಸಣ್ಣ ಕಾರಣಕ್ಕೆ ವೈಷ್ಣವಿ ಕೌಂಡಿನ್ಯ ವಿರುದ್ಧ ಅವಹೇಳನಕಾರಿ ಪದಬಳಕೆ ಮಾಡಿದ್ದಾರೆ.

ʻಕಿಚ್ಚನ ಪಂಚಾಯಿತಿʼ ಬೆನ್ನಲ್ಲೇ ಮಂಜನಿಂದ ಮತ್ತೆ ಉದ್ಧಟತನದ ಹೇಳಿಕೆ!

-

Avinash GR
Avinash GR Sep 21, 2026 2:10 PM

‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅಷ್ಟೆಲ್ಲಾ ಕಟುವಾಗಿ ಕ್ಲಾಸ್ ತೆಗೆದುಕೊಂಡು, ಮಹಾಮಂಗಳಾರತಿ ಮಾಡಿದ ನಂತರವೂ ಮಾಡರ್ನ್‌ ಮಹಾಕವಿ ಮಂಜ ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇಡೀ ವಾರ ತಮ್ಮ ಅಸಭ್ಯ ಮಾತುಗಳಿಂದಲೇ ಮನೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಮಂಜ, ಸುದೀಪ್ ಪಂಚಾಯಿತಿ ಮುಗಿದ ಕೆಲವೇ ಗಂಟೆಗಳಲ್ಲಿ ಮತ್ತೊಬ್ಬ ಮಹಿಳಾ ಸ್ಪರ್ಧಿ ವೈಷ್ಣವಿ ಕೌಂಡಿನ್ಯ ವಿರುದ್ಧ ಅತ್ಯಂತ ತುಚ್ಛ ಪದಗಳನ್ನು ಬಳಸಿ ಮತ್ತೆ ರಂಪಾಟ ಶುರುಮಾಡಿದ್ದಾರೆ.

ಮಂಜನಿಗೆ ಚಳಿ ಬಿಡಿಸಿದ್ದ ಕಿಚ್ಚ ಸುದೀಪ್

ಕಳೆದ ವಾರ ಸೌಂದರ್ಯ ಶೆಟ್ಟಿ ವಿರುದ್ಧ "ಲಟ ಲಟ ಅಂತ ಮುರಿದುಬಿಡ್ತೀನಿ", "ಎತ್ತಿ ಕುಕ್ಕಿಬಿಡ್ತೀನಿ", "ಕ್ಯಾರೆಕ್ಟರ್‌ಲೆಸ್" ಎಂದೆಲ್ಲಾ ಮಾತಾಡಿ ಮಂಜ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದರು. ವಾರಾಂತ್ಯದ ಎಪಿಸೋಡ್‌ನಲ್ಲಿ ಸುದೀಪ್ ಅವರು ಈ ಎಲ್ಲ ವಿಚಾರಗಳನ್ನು ಮುನ್ನೆಲೆಗೆ ತಂದು ಮಂಜನಿಗೆ ಸರಿಯಾಗಿಯೇ ಚಳಿ ಬಿಡಿಸಿದ್ದರು. ಆದರೆ ಪಂಚಾಯಿತಿ ಮುಗಿದು ಕಿಚ್ಚ ವೇದಿಕೆಯಿಂದ ನಿರ್ಗಮಿಸುತ್ತಿದ್ದಂತೆ, ಬಿಗ್ ಬಾಸ್ ಮನೆಯೊಳಗೆ ಕನಿಷ್ಠ ಸೌಜನ್ಯವೂ ಇಲ್ಲದೆ ಮತ್ತೆ ಜಗಳ ಆರಂಭವಾಗಿದೆ. ಈ ಬಾರಿ ಜಗಳಕ್ಕೆ ಕಾರಣವಾಗಿದ್ದು ಊಟದ ತಟ್ಟೆಯಲ್ಲಿದ್ದ ಕೇವಲ ಒಂದೆರಡು ‘ಚಿಕನ್ ಪೀಸ್’!

ಕನ್ ಸಿಗಲಿಲ್ಲ ಎಂಬ ಕಾರಣಕ್ಕೆ ಜಗಳ

ಸಂಚಿಕೆ ಮುಗಿದ ಬಳಿಕ ಬಿಗ್ ಬಾಸ್ ಸ್ಪರ್ಧಿಗಳಿಗೆ ವೆಜ್ ಮತ್ತು ನಾನ್-ವೆಜ್ ಊಟವನ್ನು ಕಳುಹಿಸಿದ್ದರು. ಮೊದಲು ಹೋದವರಿಗೆ ಊಟದಲ್ಲಿ ಚಿಕನ್ ಸಿಕ್ಕಿದ್ದು, ತಡವಾಗಿ ಬಂದ ಕಾರಣ ಮಂಜನಿಗೆ ಚಿಕನ್ ಪೀಸ್ ಸಿಕ್ಕಿರಲಿಲ್ಲ. ಊಟದಲ್ಲಿ ತಮಗೆ ಚಿಕನ್ ಸಿಗಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕೋಪೋದ್ರಿಕ್ತರಾದ ಮಂಜ, ಇಡೀ ಮನೆಯಲ್ಲೇ ಗದ್ದಲವೆಬ್ಬಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಸಹ-ಸ್ಪರ್ಧಿ ವೈಷ್ಣವಿ ಕೌಂಡಿನ್ಯ ಅವರ ಮೇಲೆ ಏಕಾಏಕಿ ಮಾತಿನ ದಾಳಿ ನಡೆಸಿದ್ದಾರೆ.

ತಿರುಗೇಟು ನೀಡಿದ ವೈಷ್ಣವಿ

ವೈಷ್ಣವಿ ಅವರನ್ನು ಗುರಿಯಾಗಿಸಿಕೊಂಡು, "ತಲೆಯಲ್ಲಿ ಬುದ್ಧಿ ಇದ್ಯಾ ಅಥವಾ ಲದ್ದಿ ಇದ್ಯಾ? ನೀನೊಬ್ಬ ವೇಸ್ಟ್ ಕ್ಯಾಂಡಿಡೇಟ್. ನಿನ್ನ ತಲೆಯಲ್ಲಿ ಮನುಷ್ಯರ ಲದ್ದಿ ತುಂಬಿದೆ, ನೀನು ಗುಳ್ಳೆ ನರಿ" ಎಂದು ಅತ್ಯಂತ ಕೀಳುಮಟ್ಟದ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, "ನೀನು ನೇರವಾಗಿ ನಾಮಿನೇಟ್ ಆಗಿರೋಳು" ಎಂದು ವೈಷ್ಣವಿಯನ್ನು ಕೆಣಕಿದ್ದಾರೆ. ಇದಕ್ಕೆ ತೀಕ್ಷ್ಣವಾಗಿಯೇ ತಿರುಗೇಟು ನೀಡಿದ ವೈಷ್ಣವಿ, "ಹೌದು, ನಾನು ನಿನ್ನ ಹಾಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲದೆ ನಾಮಿನೇಟ್ ಆಗಿಲ್ಲ" ಎಂದು ತಿವಿದಿದ್ದಾರೆ.

BBK 13: ಗಗನ್‌ ಚಿನ್ನಪ್ಪ, ತಾಂಡವ್‌ಗೆ‌ ಬಿಗ್ ಶಾಕ್‌ ನೀಡಿದ ಕಿರಣ್‌ ಶಾಸ್ತ್ರಿ; ಸ್ಪರ್ಧಿಗಳ ಲೆಕ್ಕಾಚಾರ ಉಲ್ಟಾ ಮಾಡಿದ 'ಬಿಗ್‌ ಬಾಸ್'!

ಮಾರ್ಕೆಟ್‌ನಲ್ಲಿ ಮಾರಿಬಿಡು ಎಂದ ಮಂಜ

ವೈಷ್ಣವಿ ಅವರ ಈ ಮಾತಿಗೆ ಮತ್ತಷ್ಟು ಕೆರಳಿದ ಮಂಜ, ಸಂಯಮದ ಎಲ್ಲ ಮಿತಿಗಳನ್ನೂ ಮೀರಿ, "ಹಾಗಾದರೆ ನಿನಗೆ ನಾಚಿಕೆ, ಮಾನ, ಮರ್ಯಾದೆ ತುಂಬಿ ತುಳುಕುತ್ತಿದೆ ಅಲ್ವಾ? ಹೋಗಿ ಮಾರ್ಕೆಟ್‌ನಲ್ಲಿ ನಿಂತುಕೊಂಡು ಅದನ್ನೆಲ್ಲ ಮಾರಿಬಿಟ್ಟು ಬಾ" ಎಂದು ಅಸಭ್ಯವಾಗಿ ಲೇವಡಿ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರ ಖಡಕ್ ಎಚ್ಚರಿಕೆಯ ಹೊರತಾಗಿಯೂ ಮಹಿಳಾ ಸ್ಪರ್ಧಿಗಳ ಮೇಲೆ ಇಂತಹ ಕೀಳುಮಟ್ಟದ ಪದಪ್ರಯೋಗ ಮುಂದುವರಿಸಿರುವ ಮಂಜನ ಧೋರಣೆಗೆ ಪ್ರೇಕ್ಷಕರಿಂದಲೂ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.