Valentines Week 2026: ವ್ಯಾಲೆಂಟೈನ್ಸ್ ವೀಕ್ನಲ್ಲಿ ಟ್ರೆಂಡಿಯಾಗಿರುವ 3 ಟೆಡ್ಡಿಬೇರ್ಸ್!
ವ್ಯಾಲೆಂಟೈನ್ಸ್ ವೀಕ್ನಲ್ಲಿ ನಾನಾ ಬಗೆಯ ಅತ್ಯಾಕರ್ಷಕ ಟೆಡ್ಡಿಬೇರ್ಸ್ ಆಗಮಿಸಿದ್ದು, ಅವುಗಳಲ್ಲಿ 3 ಶೈಲಿಯವು ಹೆಚ್ಚು ಟ್ರೆಂಡಿಯಾಗಿವೆ. ವ್ಯಾಲೆಂಟೈನ್ಸ್ ವೀಕ್ನಲ್ಲಿ ಟೆಡ್ಡಿಬೇರ್ ಡೇ ಕೂಡ ಒಂದು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ನಾನಾ ಬಗೆಯ ಟೆಡ್ಡಿಬೇರ್ಗಳು ಎಂಟ್ರಿ ನೀಡುತ್ತವೆ. ಅದರಂತೆ ಈ ಬಾರಿಯೂ ಅತ್ಯಾಕರ್ಷಕವಾದ ಸಾಕಷ್ಟು ಟೆಡ್ಡಿಬೇರ್ಗಳು ಪ್ರೇಮಿಗಳನ್ನು ಸೆಳೆದಿವೆ. ಈ ಕುರಿತಂತೆ ಇಲ್ಲಿದೆ ವರದಿ.
ಟೆಡ್ಡಿಬೇರ್ಸ್ (ಚಿತ್ರಕೃಪೆ: ಪಿಕ್ಸೆಲ್) -
ವ್ಯಾಲೆಂಟೈನ್ಸ್ ವೀಕ್ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಕ್ಯೂಟ್ ಟೆಡ್ಡಿಬೇರ್ಗಳು ಮಾರುಕಟ್ಟೆಗೆ ಆಗಮಿಸಿದ್ದು, ಅವುಗಳಲ್ಲಿ 3 ಬಗೆಯವು ಟ್ರೆಂಡಿಯಾಗಿವೆ. ಬೇಡಿಕೆ ಹೆಚ್ಚಿಸಿಕೊಂಡಿವೆ. ಹೌದು, ವ್ಯಾಲೆಂಟೈನ್ಸ್ ವೀಕ್ನಲ್ಲಿ ಟೆಡ್ಡಿಬೇರ್ ಡೇ ಕೂಡ ಒಂದು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ನಾನಾ ಬಗೆಯ ಟೆಡ್ಡಿಬೇರ್ಗಳು ಎಂಟ್ರಿ ನೀಡುತ್ತವೆ. ಅದರಂತೆ ಈ ಬಾರಿಯೂ ಅತ್ಯಾಕರ್ಷಕವಾದ ಸಾಕಷ್ಟು ಟೆಡ್ಡಿಬೇರ್ಗಳು ಪ್ರೇಮಿಗಳನ್ನು ಸೆಳೆದಿವೆ.
ಕ್ಯೂಟ್ ಪುಟಾಣಿ ಟೆಡ್ಡಿಬೇರ್ಸ್
ಕೈಗಳಲ್ಲಿ ಹಿಡಿಯಬಹುದಾದಂತಹ ಟೈನಿ ಹಾಗೂ ಪುಟಾಣಿ ಟೆಡ್ಡಿಬೇರ್ಗಳು ಈ ಬಾರಿ ಅತಿ ಹೆಚ್ಚು ಪ್ರೇಮಿಗಳನ್ನು ಸೆಳೆದಿವೆ. ಅವುಗಳಲ್ಲಿ ಕೈಚೈನ್ ಕ್ಯೂಟ್ ಟೆಡ್ಡಿಬೇರ್ಗಳೂ, ಕಾಲೇಜ್ ಬ್ಯಾಗ್ಗೆ ಹಾಕಬಹುದಾದಂತಹ ಟೆಡ್ಡಿಬೇರ್ಗಳು ಹಾಗೂ ವೆಹಿಕಲ್ಗಳಲ್ಲಿ ಶೋಪೀಸ್ನಂತೆ ಇರಿಸಬಹುದಾದಂತಹ ಟೆಡ್ಡಿಬೇರ್ಗಳು ಬಂದಿವೆ. ಹುಡುಗಿಯರ ಮನಸೆಳೆದಿವೆ ಎನ್ನುತ್ತಾರೆ ಆರ್ಚೀಸ್ ಶಾಪ್ನ ಮ್ಯಾನೇಜರ್ ರಾಘವ್.
ಅಪ್ಪಿಕೊಳ್ಳುವ ಬಿಗ್ ಟೆಡ್ಡಿಬೇರ್ಸ್
ಹುಡುಗಿಯರು ಪ್ರೇಮಿಯನ್ನು ನೆನಪಿಸಿಕೊಂಡಾಗ ಅಪ್ಪಿಕೊಳ್ಳಬಹುದಾದಂತಹ ಬಿಗ್ ಟೆಡ್ಡಿಬೇರ್ಸ್ಗಳು ಬಗೆಬಗೆಯ ಕಲರ್ಗಳಲ್ಲಿ ಎಂಟ್ರಿ ನೀಡಿವೆ. ವೈಬ್ರೆಂಟ್ ಕಲರ್ಸ್ನಿಂದಿಡಿದು ತಿಳಿ ಗುಲಾಬಿ, ಪಾಸ್ಟೆಲ್ ಶೇಡ್ನವು, ಕ್ರೀಮ್, ಲೈಟ್ ಬ್ರೌನ್ ಟೆಡ್ಡಿಗಳು ಹೆಚ್ಚು ಮಾರಾಟವಾಗುತ್ತಿವೆ ಎನ್ನುತ್ತಾರೆ ಶಾಪ್ವೊಂದರ ಮಾಲೀಕರು.
ಕಸ್ಟಮೈಸ್ಡ್ ಟೆಡ್ಡಿಬೇರ್ಸ್
ಆಯಾ ಪ್ರೇಮಿಗೆ ಇಷ್ಟವಾಗುವಂತಹ ಕಸ್ಟಮೈಸ್ಡ್ ಟೆಡ್ಡಿಬೇರ್ಗಳು ಕೂಡ ಇಂದು ಪ್ರಚಲಿತದಲ್ಲಿವೆ. ಇವುಗಳಲ್ಲಿ ಕೆಲವರು ಪ್ರೀತಿಯ ಸಂದೇಶ ಅಥವಾ ಫೋಟೋ ಇಲ್ಲವೇ ತಮಗೆ ಬೇಕಾದಂತೆ ಡಿಸೈನ್ ಮಾಡಿಸಿ ನೀಡುವುದು ಕಾಮನ್ ಆಗಿದೆ.
ಟೆಡ್ಡಿಬೇರ್ಸ್ ಪ್ರಿಯರಿಗೆ ಗೊತ್ತಿರಲಿ
- ನಿರ್ವಹಣೆ ಬಗ್ಗೆ ತಿಳಿದುಕೊಂಡಿರಿ.
- ಧೂಳು ಕೂರದಂತೆ ಕಾಪಾಡಿಕೊಳ್ಳಿ.
- ಕಸ್ಟಮೈಸ್ಡ್ ಟೆಡ್ಡಿ ಪ್ಲ್ಯಾನ್ ಮಾಡಿ ಮಾಡಿಸಿ.