Winter Fashion 2026: ಜೆನ್ ಜಿ ಹುಡುಗಿಯರನ್ನು ಸವಾರಿ ಮಾಡುತ್ತಿರುವ ಬೆಲ್ಟ್ ಡ್ರೆಸ್
Belt Dresses: ಈ ವಿಂಟರ್ ಸೀಸನ್ ಫ್ಯಾಷನ್ಗೆ ವೈವಿಧ್ಯಮಯ ಬೆಲ್ಟ್ ಡ್ರೆಸ್ಗಳು ಮರಳಿವೆ. ಲೆಕ್ಕವಿಲ್ಲದಷ್ಟು ಬಗೆಯ ಬೆಲ್ಟ್ ಔಟ್ಫಿಟ್ಗಳು ಮಾರುಕಟ್ಟೆಗೆ ಈಗಾಗಲೇ ಲಗ್ಗೆ ಇಟ್ಟಿವೆ. ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ? ಎಂಬುದರ ಬಗ್ಗೆ ಇಲ್ಲಿದೆ ವರದಿ.
ಬೆಲ್ಟ್ ಡ್ರೆಸ್ (ಚಿತ್ರಕೃಪೆ: ಪಿಕ್ಸೆಲ್) -
ವೈವಿಧ್ಯಮಯ ಬೆಲ್ಟ್ ಡ್ರೆಸ್ಗಳು ಯುವತಿಯರನ್ನು ಸವಾರಿ ಮಾಡತೊಡಗಿವೆ. ಇದಕ್ಕೆ ಪೂರಕ ಎಂಬಂತೆ, ಲೆಕ್ಕವಿಲ್ಲದಷ್ಟು ಬಗೆಯ ಬೆಲ್ಟ್ ಔಟ್ಫಿಟ್ಗಳು ಮಾರುಕಟ್ಟೆಗೆ ಈಗಾಗಲೇ ಲಗ್ಗೆ ಇಟ್ಟಿವೆ.
ಬೆಲ್ಟ್ ಹೊಂದಿದ ವೆಸ್ಟರ್ನ್ ಔಟ್ಫಿಟ್ಸ್
ಕಾಂಟ್ರಸ್ಟ್ ಶೇಡ್ಸ್ನ ಪೇಟೆಂಟ್ ಬೆಲ್ಟ್ ಡ್ರೆಸ್, ಬೂಟ್ ಕಟ್ ಜೀನ್ಸ್ಗೆ ಹೊಂದುವ ಆರ್ನಾಟ್ ಬಕ್ಕಲ್ಸ್ ಬೆಲ್ಟ್ ಡ್ರೆಸ್, ಹವರ್ ಗ್ಲಾಸ್ ಶೇಪ್ ನೀಡುವ ಡಬ್ಬಲ್ ಬಕ್ಕಲ್ ಡ್ರೆಸ್, ಸ್ಕಿನ್ನಿ ಬೆಲ್ಟ್ ಡ್ರೆಸ್, ಬ್ಲೇಜರ್ ಹಾಗೂ ಕೋಟ್ನಂತಹ ಉಡುಪುಗಳಲ್ಲಿನ ಇಕ್ವೆಟೇರಿಯನ್, ವ್ರಾಪ್, ಕ್ಲೊಶರ್, ಫ್ರಿಂಝ್, ಲೂಪ್ಲೆಯರ್, ಕೆವ್ ಬಕ್ಕಲ್ ಬೆಲ್ಟ್ ಡ್ರೆಸ್ಗಳು ಈ ಸೀಸನ್ನಲ್ಲಿ ದೊರೆಯುತ್ತಿವೆ.
ಇನ್ನು, ಮಾನೋ ಕ್ರೋಮ್ ವರ್ಣದವು ಉಡುಪಿನ ಜತೆಯಲ್ಲೆ ಅಟ್ಯಾಚ್ ಆಗಿರುವಂತಹ ಬೆಲ್ಟ್ ಡ್ರೆಸ್ಗಳು ಟೀನೇಜ್ ಹುಡುಗಿಯರನ್ನು ಸೆಳೆದರೇ, ಸ್ಟೇಟ್ಮೆಂಟ್ ಬೆಲ್ಟ್ ಡ್ರೆಸ್ಗಳು ಕಾರ್ಪೋರೇಟ್ ಕ್ಷೇತ್ರದ ಮಾನಿನಿಯರನ್ನು ಆಕರ್ಷಿಸುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಮಾನೋಕ್ರೋಮ್ ಬೆಲ್ಟ್ ಡ್ರೆಸ್
ಈ ಉಡುಪಿನಲ್ಲಿ ಅಟ್ಯಾಚ್ ಆಗಿರುವ ಬೆಲ್ಟ್ ಸೇಮ್ ಟು ಸೇಮ್ ಉಡುಪಿನ ಬಣ್ಣದ್ದಾಗಿರುತ್ತವೆ. ಒಂದೇ ಶೇಡ್ ಹೊಂದಿರುತ್ತವೆ. ಇವೇ ಮಾನೋಕ್ರೋಮ್ ಬೆಲ್ಟ್ ಡ್ರೆಸ್ಗಳು.
ಸ್ಟೇಟ್ಮೆಂಟ್ ಬೆಲ್ಟ್ ಡ್ರೆಸ್
ಇವು ಉಡುಪಿನ ಥೀಮ್ಗೆ ತಕ್ಕಂತೆ ವಿನ್ಯಾಸವನ್ನೊಳಗೊಂಡ ವಿಶೇಷ ರೀತಿಯ ಬೆಲ್ಟ್ಗಳು. ಡ್ರೆಸ್ನೊಂದಿಗೆ ಇವು ಕೂಡ ಬೋಲ್ಡ್ ಪ್ಯಾಟರ್ನ್ನಲ್ಲಿರುತ್ತವೆ. ಔಟ್ಫಿಟ್ ಜತೆ ಎದ್ದು ಕಾಣುತ್ತವೆ. ಇವುಗಳ ಬೆಲೆ ಕೊಂಚ ಹೆಚ್ಚು.
ಬಿಗ್ ಬಕಲ್ ಬೆಲ್ಟ್ ಡ್ರೆಸ್
ಟಮ್ಮಿಯ ಭಾಗವನ್ನು ಹೈಲೈಟ್ ಮಾಡುವ ಬಿಗ್ ಬಕಲ್ ಬೆಲ್ಟ್ ಡ್ರೆಸ್ಗಳು ರೆಟ್ರೋ ಲುಕ್ ನೀಡುತ್ತವೆ. ಬಿಗ್ ಬೆಲ್ಟ್ ಹಾಗೂ ದೊಡ್ಡ ಬಕಲ್ ಡ್ರೆಸ್ಗಳು ಮ್ಯಾಕ್ಸಿ ಶೈಲಿಯ ಡ್ರೆಸ್ಗಳಲ್ಲೂ ದೊರೆಯುತ್ತವೆ.
ಟೈಯಿಂಗ್ ಬೆಲ್ಟ್ ಡ್ರೆಸ್
ಫ್ಯಾಬ್ರಿಕ್ನಲ್ಲಿ ತಯಾರಿಸಿದ ಬೆಲ್ಟ್ ಇದಾಗಿದ್ದು, ಟೈಯಿಂಗ್ ಮಾಡುವ ಅಪ್ಷನ್ ಇರುತ್ತದೆ. ಸೈಡ್, ಸೆಂಟರ್ ಹಾಗೂ ಹಿಂದೆ ಟೈಯಿಂಗ್ ಮಾಡುವ ವಿಧಾನವನ್ನು ಈ ಡ್ರೆಸ್ನಲ್ಲಿ ಅಳವಡಿಸಲಾಗಿರುತ್ತದೆ. ಈ ಉಡುಪಿನಲ್ಲಿನ ಬೆಲ್ಟ್ ಮೃದುವಾದ ಫ್ಯಾಬ್ರಿಕ್ ಒಳಗೊಂಡಿರುತ್ತದೆ.
ಫಾರ್ಮಲ್ ಬೆಲ್ಟ್ ಡ್ರೆಸ್
ಸ್ಲಿಮ್ ಹಾಗೂ ಸರಳವಾದ ಬೆಲ್ಟ್ ಡ್ರೆಸ್ ಈ ವಿಭಾಗಕ್ಕೆ ಸೇರುತ್ತದೆ. ಯಾವುದೇ ಫ್ಯಾನ್ಸಿ ಡಿಸೈನ್ ಇಲ್ಲದ ಸರಳ ಬಕಲ್ಗಳನ್ನು ಹೊಂದಿದ ಗೋಲ್ಡನ್ ಹಾಗೂ ಸಿಲ್ವರ್ನವು ಈ ವಿನ್ಯಾಸದಲ್ಲಿ ಚಾಲ್ತಿಯಲ್ಲಿವೆ. ಈ ಬೆಲ್ಟ್ಗಳನ್ನು ತೆಗೆದು ಇತರೇ ಉಡುಪುಗಳೊಂದಿಗೂ ಧರಿಸಬಹುದು.